‘ಕಾಂಗ್ರೆಸ್ ನೇತೃತ್ವದ ಯುಪಿಎ ಕಾಲದಲ್ಲಿ ದೇಶದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ’ ಎಂದು ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಇತ್ತೀಚೆಗೆ ಹೇಳಿದ್ದರು. ಆದರೆ ಇದೇ ಮೂರ್ತಿಯವರು 2009ರಲ್ಲಿ ಮನಮೋಹನ್ ಸಿಂಗ್ ಹಾಗೂ ದೇಶದ ಅಭಿವೃದ್ಧಿಯ ಕುರಿತು ಆಡಿರುವ ಮಾತುಗಳು ವೈರಲ್ ಆಗಿವೆ.
ಇತ್ತೀಚೆಗೆ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ – ಅಹಮದಾಬಾದ್ (ಐಐಎಂಎ)’ ನಲ್ಲಿ ನಡೆದ ಸಂವಾದದಲ್ಲಿ ಯುವ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಮೂರ್ತಿ ಮಾತನಾಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾಕ್ಕೆ ಭಾರತವನ್ನು ಪ್ರಬಲ ಪ್ರತಿಸ್ಪರ್ಧಿಯನ್ನಾಗಿ ಮಾಡುವ ಶಕ್ತಿ ಯುವ ಮನಸ್ಸುಗಳಲ್ಲಿದೆ. ನಾನು ಲಂಡನ್‌ನಲ್ಲಿ (2008 ಮತ್ತು 2012ರ ನಡುವೆ) ಎಚ್‌ಎಸ್‌ಬಿಸಿಯ ಮಂಡಳಿಯಲ್ಲಿದ್ದೆ. ಮೊದಲ ಕೆಲವು ವರ್ಷಗಳಲ್ಲಿ, ಮಂಡಳಿಯ ಸಭೆಯಲ್ಲಿ ಚೀನಾವನ್ನು ಎರಡರಿಂದ ಮೂರು ಬಾರಿ ಉಲ್ಲೇಖಿಸಲಾಗುತ್ತಿತ್ತು. ಭಾರತದ ಹೆಸರನ್ನು ಒಮ್ಮೊಮ್ಮೆ ಮಾತ್ರ ಹೇಳಲಾಗುತ್ತಿತ್ತು. ದುರದೃಷ್ಟವಶಾತ್, ನಂತರ (ಭಾರತಕ್ಕೆ) ಏನಾಯಿತು ಎಂದು ನನಗೆ ಗೊತ್ತಿಲ್ಲ ಎಂದಿದ್ದರು.
“ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಸಾಧಾರಣ ವ್ಯಕ್ತಿ ಮತ್ತು ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಭಾರತವು (ಯುಪಿಎ ಅವಧಿಯಲ್ಲಿ) ಸ್ಥಗಿತಗೊಂಡಿತ್ತು. ಸೂಕ್ತ ನಿರ್ಧಾರಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಲೇ ಇಲ್ಲ. ಎಲ್ಲವೂ ತಡವಾಗಿಹೋಯಿತು” ಎಂದು ಟೀಕಿಸಿದ್ದಾರೆ.
2009ರಲ್ಲಿ ನಾರಾಯಣಮೂರ್ತಿಯವರು ಹೇಳಿದ್ದೇನು?
2009ರಲ್ಲಿ ಔಟ್‌ಲುಕ್ ಪತ್ರಿಕೆಗೆ ನಾರಾಯಣಮೂರ್ತಿಯವರು ಸಂದರ್ಶನ ನೀಡಿದ್ದರು. ಪತ್ರಕರ್ತ ಸುನಿತ್ ಅರೋರ ಅವರು ನಡೆಸಿದ್ದ ಸಂದರ್ಶನ ಅಂದಿನ ಸಾಮಾನ್ಯ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಕಟವಾಗಿತ್ತು. ಅಂದು ನಾರಾಯಣಮೂರ್ತಿಯವರು ಆಡಿರುವ ಮಾತುಗಳನ್ನು ಇಂದು ಟ್ವಿಟರ್‌ನಲ್ಲಿ ಸುನಿತ್ ಹಂಚಿಕೊಂಡಿದ್ದಾರೆ. ಜೊತೆಗೆ ಔಟ್‌ಲುಕ್‌ನಲ್ಲಿ ಅಪಲೋಡ್ ಮಾಡಲಾಗಿರುವ ಸುದ್ದಿಲಿಂಕ್ ಕೂಡ ಹಂಚಿಕೊಂಡಿದ್ದಾರೆ.
I interviewed Infosys co-founder Narayana Murthy for Outlook magazine in 2009, on the eve of the general elections. In the context of his recent statements about Manmohan Singh's stewardship of the economy ("stagnated") , it's interesting to revisit his comments. #Thread
— Sunit Arora (@sunitarora) September 27, 2022
“2009ರಲ್ಲಿ ಸಮೀಪಿಸುತ್ತಿರುವ ಚುನಾವಣೆಯ ಮಹತ್ವದ ಬಗ್ಗೆ ನಾನು ಮೂರ್ತಿ ಅವರನ್ನು ಕೇಳಿದಾಗ ಅವರು, ಈ ಚುನಾವಣೆಯು ಬಹಳ ಮಹತ್ವದ್ದಾಗಿದೆ. ಏಕೆಂದರೆ ಇದು ದೇಶದಲ್ಲಿ ಹತ್ತು ವರ್ಷಗಳ ಅದ್ಭುತ ಆರ್ಥಿಕ ಬೆಳವಣಿಗೆಯ ನಂತರ ನಡೆಯುತ್ತಿದೆ” ಎಂದಿರುವುದಾಗಿ ಸುನಿತ್ ಟ್ವೀಟ್ ಮಾಡಿದ್ದಾರೆ.
ನಂತರ ಮೂರ್ತಿ ಅವರು ಮನಮೋಹನ್ ಸಿಂಗ್ ಅವರನ್ನು ಶ್ಲಾಘಿಸಿದ್ದಾರೆ. “ಮನಮೋಹನ್‌ಸಿಂಗ್ ಅವರು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಅಗತ್ಯವನ್ನು ಮುನ್ನೆಲೆಗೆ ತಂದಿದ್ದಾರೆ. ಆ ಅರ್ಥದಲ್ಲಿ ಇಂದು, ನಮ್ಮ ಅಸಾಮಾನ್ಯ ಆರ್ಥಿಕತೆಯ ಬೆಳವಣಿಗೆಯಿಂದ ದೇಶದ ಪ್ರತಿಯೊಬ್ಬರೂ ಪ್ರಯೋಜನ ಪಡೆದಿಲ್ಲ ಎಂಬ ಅಂಶದ ಬಗ್ಗೆ ಹೆಚ್ಚಿನ ಅರಿವು ಇದೆ” ಎಂದಿದ್ದಾರೆ.
ಮೂರ್ತಿಯವರು ಈ ವಿಷಯವನ್ನು ಪುನರುಚ್ಚರಿಸಿದ್ದಾರೆ. “ನನಗೆ ಅಪಾರವಾದ ಗೌರವವಿರುವ ನಮ್ಮ ದೇಶದ ಪ್ರಧಾನಿ ಮೊದಲ ಬಾರಿಗೆ ಸಮಗ್ರ ಬೆಳವಣಿಗೆಯನ್ನು ಸಾಧಿಸುವ ಅಗತ್ಯತೆಯ ಮೇಲೆ ದೇಶದ ಗಮನವನ್ನು ಕೇಂದ್ರೀಕರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ನನಗೆ ತಾಜಾ ವಿಷಯವಾಗಿದೆ” ಎಂದು ಬಣ್ಣಿಸಿದ್ದಾರೆ.
“ನಾವು ಇತ್ತೀಚಿನ ವರ್ಷಗಳಲ್ಲಿ ಇಬ್ಬರು ಅಸಾಧಾರಣ ಮಹನೀಯರನ್ನು ನಮ್ಮ ಪ್ರಧಾನ ಮಂತ್ರಿಗಳಾಗಿ ಆಯ್ಕೆ ಮಾಡಿದ್ದೇವೆ. ವಾಜಪೇಯಿ ಮತ್ತು ಮನಮೋಹನಸಿಂಗ್ ಆ ಮಹನೀಯರಾಗಿದ್ದಾರೆ. ಈ ಇಬ್ಬರನ್ನೂ ಪ್ರಾಮಾಣಿಕರು, ಬುದ್ಧಿವಂತರು, ಸಭ್ಯ ವ್ಯಕ್ತಿಗಳು ಎಂದು ಒಪ್ಪಿಕೊಳ್ಳಲಾಗಿದೆ” ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿರಿ: ವಿಶ್ಲೇಷಣೆ: ರಾಜ್ಯ ಕಾಂಗ್ರೆಸ್ ರಾಜಕೀಯ ತಂತ್ರಗಾರಿಕೆ ಬದಲಾಗಿದೆಯೇ?
“…ದೇಶದ ಒಳಿತನ್ನು ಮನಸ್ಸಿನಲ್ಲಿಟ್ಟುಕೊಂಡಿರುವ ಜನರು, ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ಉತ್ತರದಾಯಿತ್ವದಲ್ಲಿ ನಂಬಿಕೆಯುಳ್ಳ ಜನರು… ಇಂತಹ ಇನ್ನೂ ಅನೇಕ ನಾಯಕರು ನಮ್ಮಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ” ಎಂದು ನಾರಾಯಣಮೂರ್ತಿ ತಿಳಿಸಿದ್ದಾರೆ.
“ನಮಗೆ ಸುಧಾರಣೆಗಳು ಬೇಕು, ಆದರೆ ನಮಗೆ ಉತ್ತಮ ನಿಯಂತ್ರಣವೂ ಬೇಕು. ಸರ್ಕಾರದ ಕಾರಿಡಾರ್‌ಗಳಲ್ಲಿ ಕಾಯುವ ಬದಲು ನಮ್ಮ ಬೋರ್ಡ್‌ರೂಮ್‌ಗಳಿಂದ ನಮ್ಮ ವ್ಯವಹಾರಗಳನ್ನು ನಡೆಸಲು ನಾವು ಮುಕ್ತರಾಗಿರಬೇಕು. ಆದಾಗ್ಯೂ, ನಮಗೆ ಉತ್ತಮ ನಿಯಂತ್ರಣದ ಅಗತ್ಯವಿದೆ” ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಪೂರ್ಣ ಸಂದರ್ಶನವನ್ನು ‘ಇಲ್ಲಿ’ ಓದಬಹುದು.



Moorthy is a lier. Then he for his personal benefits with the Congress government and now he has made an u turn like selfish politician.