Homeಮುಖಪುಟಪ್ರತಾಪ್ ಸಿಂಹ ಒಬ್ಬ ಬ್ಲೂ ಫಿಲ್ಮ್ ಹೀರೋ: ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆರೋಪ

ಪ್ರತಾಪ್ ಸಿಂಹ ಒಬ್ಬ ಬ್ಲೂ ಫಿಲ್ಮ್ ಹೀರೋ: ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆರೋಪ

ಈ ನನ್ನ ಆರೋಪಗಳು ಸುಳ್ಳು ಎನ್ನುವುದಾದರೆ ಪ್ರತಾಪ್ ಸಿಂಹರವರೆ ಕೋರ್ಟ್‌ಗೆ ಹೋಗಲಿ. ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಿ. ನಾನು ಕೋರ್ಟಿನಲ್ಲಿ ದಾಖಲೆ ಇಟ್ಟು ಹೋರಾಡುತ್ತೇನೆ ಎಂದು ಲಕ್ಷ್ಮಣ್ ಹೇಳಿದ್ದಾರೆ.

- Advertisement -

ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹರವರ ಭ್ರಷ್ಟಚಾರ, ವೈಯುಕ್ತಿಕ ಜೀವನದ ಬಗ್ಗೆ ನನಗೆ ಮಾಹಿತಿ ಇದೆ. ಅವರೊಬ್ಬ ಸಂಸರಾಗುವುದಕ್ಕಿಂತ ಒಬ್ಬ ಬ್ಲೂ ಫಿಲಂ ಹೀರೋ ಆಗಿದ್ದರೆ ಸರಿಯಿರುತ್ತಿತ್ತು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೊಬ್ಬ ರೋಲ್‍ಕಾಲ್ ಗಿರಾಕಿ, ಬ್ಲಾಕ್‍ಮೇಲರ್ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಹಾಗೇನಾದರೂ ನಾನು ಯಾರಿಗಾದ್ರು ಬ್ಲಾಕ್‍ಮೇಲ್ ಮಾಡಿದ್ರೆ ದಯವಿಟ್ಟು ಸಾಬೀತು ಮಾಡಿ. ಒಂದು ವೇಳೆ ನಾನು ಮಾಡಿರುವುದು ಸಾಬೀತಾದರೆ ರಾಷ್ಟ್ರಪತಿಗಳಿಗೆ ಪತ್ರಬರೆದು ಬಹಿರಂಗವಾಗಿ ಮೈಸೂರಿನ ಕಲಾಮಂದಿರದ ಮುಂದೆ ನಾನೇ ನೇಣಿಗೆ ಶರಣಾಗ್ತಿನಿ ಎಂದು ಲಕ್ಷ್ಮಣ್ ಸವಾಲು ಹಾಕಿದ್ದಾರೆ.

ಕೆಲದಿನಗಳ ಹಿಂದೆ ಕೊರೊನಾ ಹೆಸರಿನಲ್ಲಿ ರಾಜ್ಯಸರ್ಕಾರ 5000 ಕೋಟಿ ರೂ ಭ್ರಷ್ಟಾಚಾರವೆಸಗಿದೆ ಮತ್ತು ಸಿಎಂ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಲಕ್ಷ್ಮಣ್ ಆರೋಪಿಸಿದ್ದರು. ಅದಕ್ಕೆ ಪ್ರತಿಯಾಗಿ ಸಂಸದ ಪ್ರತಾಪ್ ಸಿಂಹ, ‘ಅವರೊಬ್ಬ ರೋಲ್‍ಕಾಲ್ ಗಿರಾಕಿ, ಬ್ಲಾಕ್‍ಮೆಲರ್’ ಎಂದು ಟೀಕಿಸಿದ್ದರು.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಲಕ್ಷ್ಮಣ್, ‘ನನ್ನ ಮೇಲೆ ತನಿಖೆ ನಡೆಸಿ ಆರೋಪ ಸಾಬೀತುಪಡಿಸಿದರೆ ನಾನು ನೇಣಿಗೆ ಶರಣಾಗುತ್ತೇನೆ. ಆದರೆ ನಾನು ಮಾಡುವ ಆರೋಪಗಳು ಸಾಬೀತಾದರೆ ಪ್ರತಾಪ್ ಸಿಂಹ ತನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವರೇ’ ಎಂದು ಸವಾಲು ಹಾಕಿದ್ದಾರೆ.

“ಪ್ರತಾಪ್ ಸಿಂಹ ಒಬ್ಬ ಕಚ್ಚೆಹರುಕ, ಬಾಯಿ ಹರುಕ. ನೀವು ಸೈಟಿಗಾಗಿ ಮಡದಿಯನ್ನ ತಂಗಿ ಅಂತ ಹೇಳಿದ್ದೀರಿ. ಚುನಾವಣೆ ಸಂದರ್ಭದಲ್ಲಿ ನಿಮ್ಮ ಒಂದು ಆಡಿಯೋ ವೈರಲ್ ಆಗಿತ್ತು. ಅಂತಹ ನಾಲ್ಕು ಆಡಿಯೋ ನನ್ನ ಬಳಿ ಇದೆ. ನೀನು ಎಷ್ಟು ಹೆಣ್ಣುಮಕ್ಕಳನ್ನು ಹಾಳು ಮಾಡಿದ್ದೀಯಾ ಅಂತ ಗೊತ್ತಿದೆ. ಈಗಲೇ ನಿನ್ನ ಯೋಗ್ಯತೆ ಏನು ಅಂತ ಸಾಬೀತು ಮಾಡ್ತಿನಿ. ನಾನು ದಾಖಲೆಗಳನ್ನು ಕೋರ್ಟ್‍ಗೆ ನೀಡುತ್ತೇನೆ” ಎಂದು ಲಕ್ಷ್ಮಣ್ ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದಿದ್ದಾರೆ.

“ಅವರು 10%ಗೆ ತಮ್ಮ ಎಂಪಿ ಅನುದಾನ ಮಾರಿಕೊಂಡಿದ್ದಾರೆ. ಇದಕ್ಕೂ ನನ್ನ ಬಳಿ ದಾಖಲೆಗಳು ಇದೆ. ಅವರೊಬ್ಬ ಸಂಸದನಾಗುವುದಕ್ಕಿಂತ ಬ್ಲೂ ಫಿಲ್ಮ್ ಹೀರೋ ಆಗಬೇಕಿತ್ತು” ಎಂದು ಅವರು ದಾಳಿ ನಡೆಸಿದ್ದಾರೆ.

ಈ ನನ್ನ ಆರೋಪಗಳು ಸುಳ್ಳು ಎನ್ನುವುದಾದರೆ ಪ್ರತಾಪ್ ಸಿಂಹರವರೆ ಕೋರ್ಟ್‌ಗೆ ಹೋಗಲಿ. ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಿ. ನಾನು ಕೋರ್ಟಿನಲ್ಲಿ ದಾಖಲೆ ಇಟ್ಟು ಹೋರಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ಹಿಂದೆ ಪ್ರಕಾಶ್ ರೈ, ಪ್ರತಾಪ್ ಸಿಂಹ ವಿರುದ್ದ 1 ರೂ ಕೇಸ್ ಹಾಕಿದ್ದರು. ಕೇಸಿನಲ್ಲಿ ಸೋಲುತ್ತೇನೆ ಎಂದು ಗೊತ್ತಾದ ಕೂಡಲೇ ಓಡಿಹೋಗಿ ಅವರ ಕೈಕಾಲು ಹಿಡಿದು ಕೇಸ್ ವಾಪಸ್ ತೆಗೆಸಿದರು. ಅದೇ ರೀತಿ ನನ್ನ ಮೇಲೆಯೂ ಒತ್ತಡ ಹಾಕಬಹುದು. ಆದರೆ ನಾನು ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೋರ್ಟ್ ಛೀಮಾರಿ ಹಾಕಿದ ಬಳಿಕ ಪ್ರಕಾಶ್ ರೈ ಬಳಿ ಕ್ಷಮೆ ಕೇಳಿದ ಸಂಸದ ಪ್ರತಾಪ್ ಸಿಂಹ

ಚುನಾವಣಾ ಸಂದರ್ಭದ ಆ ಹುಡುಗಿ ಎಲ್ಲೋದ್ಲು? ಕೊಲೆ ಏನಾದ್ರು ಮಾಡಿಸಿಬಿಟ್ರಾ? ಎಂದು ಲಕ್ಷ್ಮಣ್ ಪ್ರತಾಪ್ ಸಿಂಹರವರಿಗೆ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಪ್ರತಾಪ್ ಸಿಂಹ ಏನು ಮಾಡುತ್ತಾರೆ ಕಾದು ನೋಡಬೇಕಿದೆ.

ಇನ್ನು ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, “482 ಕೆಪಿಎಸ್‌ಸಿ ಹುದ್ದೆಗಳನ್ನು ವಿಜಯೇಂದ್ರ ಮಾರಾಟ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಲ್ಲಿ 218 ಕೋಟಿ ರೂ ಅವ್ಯವಹಾರ ನಡೆದಿದೆ” ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: ಶಿವಾಜಿ ಮಾತ್ರ ರಾಷ್ಟ್ರನಾಯಕರೆ, ಸಂಗೊಳ್ಳಿ ರಾಯಣ್ಣ ರಾಷ್ಟ್ರನಾಯಕರಲ್ಲವೇ?: ಕನ್ನಡಿಗರ ಆಕ್ರೋಶ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಪ್ರದೇಶ ಚುನಾವಣೆ: ಬಿಜೆಪಿ ಶಾಸಕರನ್ನು ಬೆನ್ನಟ್ಟಿ ಸ್ವಕ್ಷೇತ್ರದಿಂದ ಓಡಿಸಿದ ಜನತೆ

0
ಮುಂಬರುವ ಉತ್ತರ ಪ್ರದೇಶದ ಚುನಾವಣಾ ಕಣ ದಿನ ದಿನಕ್ಕೂ ರಂಗೇರುತ್ತಿದ್ದು, ಪಕ್ಷದ ಪರ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ಶಾಸಕರನ್ನು ಅವರ ಸ್ವಂತ ಕ್ಷೇತ್ರ ಮುಜಾಫರ್‌ನಗರದ ಗ್ರಾಮಸ್ಥರು ಓಡಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್...
Wordpress Social Share Plugin powered by Ultimatelysocial