Homeರಾಷ್ಟ್ರೀಯಪ್ರಧಾನಿ ಮೋದಿ ಬಾಲ್ಯದಲ್ಲಿ ‘ಭಾರಿ ಧೈರ್ಯವಂತ’ ಆಗಿದ್ದರು: 1ನೇ ತರಗತಿ ಪಠ್ಯಪುಸ್ತಕ ಸೇರಿದ ‘ಮೊಸಳೆ ಕತೆ’!

ಪ್ರಧಾನಿ ಮೋದಿ ಬಾಲ್ಯದಲ್ಲಿ ‘ಭಾರಿ ಧೈರ್ಯವಂತ’ ಆಗಿದ್ದರು: 1ನೇ ತರಗತಿ ಪಠ್ಯಪುಸ್ತಕ ಸೇರಿದ ‘ಮೊಸಳೆ ಕತೆ’!

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಬಾಲ್ಯದ ಸಮಯದಲ್ಲಿ ‘ಭಾರಿ ಧೈರ್ಯವಂತರಾಗಿದ್ದರು’ ಎಂದು ನಿರೂಪಿಸಲು ತಮಿಳುನಾಡಿನ ಖಾಸಗಿ ಶಾಲೆಯೊಂದು ಅವರ ‘ಮೊಸಳೆ ಕತೆ’ಯನ್ನು ತನ್ನ ಪಠ್ಯಪುಸ್ತಕದಲ್ಲಿ ಸೇರಿಸಿಕೊಂಡಿದೆ ಎಂದು ‘ಈಟಿವಿ ಭಾರತ್‌’ ವರದಿ ಮಾಡಿದೆ. ಪ್ರಧಾನಿಯ ‘ಮೊಸಳೆ ಕತೆ’ಯು 1ನೇ ತರಗತಿಯ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದಿದ್ದು, ಅದರ ಚಿತ್ರವೂ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

2019 ರಲ್ಲಿ ಡಿಸ್ಕವರಿ ಚಾನೆಲ್‌ನ ಜನಪ್ರಿಯ ಕಾರ್ಯಕ್ರಮ ‘ಮ್ಯಾನ್ ವರ್ಸಸ್ ವೈಲ್ಡ್’ ನಲ್ಲಿ ಪ್ರಧಾನಿ ಕಾಣಿಸಿಕೊಂಡಿದ್ದರು. ಈ ವೇಳೆ ಕಾರ್ಯಕ್ರಮ ನಡೆಸಿಕೊಡುವ ಬೇರ್‌ ಗ್ರಿಲ್ಸ್‌ ಜೊತೆಗೆ ಮಾತನಾಡುತ್ತಾ, ತಾನು ಚಿಕ್ಕ ಹುಡುಗನಾಗಿದ್ದಾಗ ಮೊಸಳೆ ಮರಿಯೊಂದನ್ನು ಮನೆಗೆ ತಂದಿದ್ದಾಗಿ ಹೇಳಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕೊಳದಲ್ಲಿ ಸ್ನಾನ ಮಾಡುತ್ತಿದ್ದಾಗ ಮೊಸಳೆ ಮರಿಯೊಂದನ್ನು ನೋಡಿ ಅದನ್ನು ಮನೆಗೆ ತಂದಿದ್ದೆ. ಆದರೆ ತಾಯಿ, “ಪಾಪ, ಅದನ್ನು ಮತ್ತೆ ಕೆರೆಗೆ ಹಾಕಬೇಕು” ಎಂದು ತನಗೆ ಬೈದಿದ್ದರು ಎಂದು ಪ್ರಧಾನಿ ಮೋದಿ ಅವರು ಬೇರ್‌‌ ಗ್ರಿಲ್ಸ್‌ಗೆ ಹೇಳಿದ್ದರು.

ಇದನ್ನೂ ಓದಿ: ‘ಮುಗ್ಧ ಜನರ ರಕ್ತವನ್ನು ಮೊಸಳೆ ಕಣ್ಣೀರಿನಿಂದ ಅಳಿಸಲಾಗುವುದಿಲ್ಲ’ – #CrocodileTears ಟ್ರೆಂಡ್‌!

ಪ್ರಧಾನಿ ಮೋದಿ ಅವರು ಹೇಳಿರುವ ಈ ಘಟನೆಯನ್ನು ತಮಿಳುನಾಡಿನ ಶಾಲೆಯು ಪಠ್ಯವನ್ನಾಗಿಸಿದೆ. ‘ಬಾರ್‍ರಿ ಓಬ್ರಿಯನ್’ ಮತ್ತು ‘ಫೈರ್‌ಫ್ಲೈ ಪ್ರಕಾಶನ’ಗಳ ‘ಮೌಲ್ಯ ಶಿಕ್ಷಣ’ದ 1 ನೇ ತರಗತಿಯ ಪುಸ್ತಕವು ಮೊಸಳೆಯ ಕತೆಯ ಭಾಗವನ್ನು ಅಳವಡಿಸಿ, ಪ್ರಧಾನಿ ಮೋದಿ ತನ್ನ ಬಾಲ್ಯದಲ್ಲಿ ಭಾರಿ ‘ಧೈರ್ಯ’ವಂತಾಗಿದ್ದರು ಎಂಬ ಬಗ್ಗೆ ಹೇಳಿದೆ.

ಶಾಲೆಯ ಪಠ್ಯಪುಸ್ತಕದಲ್ಲಿ,“ನರೇಂದ್ರ ದಾಮೋದರದಾಸ್ ಮೋದಿ ಅವರು ಭಾರತದ 14 ನೇ ಮತ್ತು ಈಗಿನ ಪ್ರಧಾನಿಯಾಗಿದ್ದಾರೆ. ಅವರು ತಮ್ಮ ಬಾಲ್ಯದಲ್ಲಿ ಎಷ್ಟು ಧೈರ್ಯಶಾಲಿಯಾಗಿದ್ದರು ಎಂದರೆ, ಒಮ್ಮೆ ಅವರು ಮೊಸಳೆಯನ್ನು ಹಿಡಿದು ಮನೆಗೆ ತಂದರು” ಎಂದು ಘಟನೆಯನ್ನು ಉಲ್ಲೇಖಿಸಿ ಬರೆಯಲಾಗಿದೆ. ಇಷ್ಟೆ ಅಲ್ಲದೆ, ಪುಸ್ತಕವು ‘ಮಾನಿಟರ್’ ಪದದ ಬಳಕೆಯನ್ನು ಕಲಿಸುತ್ತಾ, “ಪ್ರಧಾನಿ ಇಡೀ ದೇಶದ ‘ಮಾನಿಟರ್‌’ ಇದ್ದಂತೆ” ಎಂದು ಬರೆಯಲಾಗಿದೆ.

ಪ್ರಧಾನಿ ಮೋದಿಯ ಬಾಲ್ಯದ ಘಟನೆಗಳ ಕತೆಗಳನ್ನು ಹೇಳುವ ಹಲವು ಪುಸ್ತಕಗಳು ಈಗಾಗಲೇ ಪ್ರಕಟಗೊಂಡಿದೆ. ರಾನಡೆ ಪ್ರಕಾಶನ ಮತ್ತು ಬ್ಲೂ ಸ್ನೇಲ್ ಅನಿಮೇಷನ್‌ನ ‘ಬಾಲ್ ನರೇಂದ್ರ – ಚೈಲ್ಡ್‌ಹುಡ್ ಸ್ಟೋರೀಸ್ ಆಫ್ ನರೇಂದ್ರ ಮೋದಿ’ ಎಂಬ ಕಾಮಿಕ್ ಪುಸ್ತಕವು ಪ್ರಧಾನಿ ಮೋದಿ ಭಾರಿ ‘ಧೈರ್ಯವಂತ’ ಆಗಿದ್ದರು ಎಂಬುವುದನ್ನು ವಿವರಿಸುವ ಹಲವು ಕಥೆಗಳನ್ನು ಹೇಳುತ್ತದೆ.

ಇದನ್ನೂ ಓದಿ: ಅಗ್ನಿಪಥ ಯೋಜನೆ: ’ಮೋದಿ ಹಿಟ್ಲರ್‌ ಮಾರ್ಗವನ್ನು ಅನುಸರಿಸಿದರೆ ಹಿಟ್ಲರ್‌ನಂತೆ ಸಾಯುತ್ತಾರೆ’- ಕಾಂಗ್ರೆಸ್ ನಾಯಕ

ಇದೇ ಸರಣಿಯ ಒಂದು ಕಥೆಯು, “ಗುಜರಾತ್‌ನ ಮೊಸಳೆಗಳಿಂದ ತುಂಬಿರುವ ಸರೋವರದಲ್ಲಿ ಈಜುತ್ತಿದ್ದಾಗ ಮೊಸಳೆಯೊಂದು ಮೋದಿಯ ಮೇಲೆ ದಾಳಿ ಮಾಡಿತು. ಆಗ ಅವರು 8 ನೇ ತರಗತಿಯಲ್ಲಿದ್ದರು. ಈ ದಾಳಿಯಿಂದಾಗಿ ಅವರ ಕಾಲಿಗೆ ಒಂಬತ್ತು ಹೊಲಿಗೆಗಳನ್ನು ಹಾಕಲಾಗಿತ್ತು” ಎಂದು ಉಲ್ಲೇಖಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. 😂😂😂😂😂😂😂😂😂😂😂 ನನಗೆ ಯಾರಾದ್ರೂ ದಯವಿಟ್ಟು ಹೇಳುವಿರಾ ದೇಶದ ಯಾವ ಕೆರೆಯಲ್ಲಿ ಮೊಸಳೆಗಳು ಇರುತ್ತವೆ ಅಥವಾ ಇದ್ದವು ಅಂತ 🤦‍♂️🤦‍♂️🤦‍♂️ ಕರ್ಮ ಕರ್ಮ. ಇತ್ತೀಚಿನ ದಿನಗಳಲ್ಲಿ ಹಳ್ಳಿಯ ಕೆರೆಗಳಲ್ಲಿ ಮೀನು ಸಾಕಾಣಿಕೆ ನೋಡತಿದೀವಿ,ಇದೆ 20.,30 ವರ್ಷದ ಹಿಂದಿನ ದಿನಗಳಲ್ಲಿ ಕೆರೆಗಳಲ್ಲಿ ಬರಿ ದನಕರುಗಳಿಗೆ, ಮನುಷ್ಯನಿಗೆ ಸ್ನಾನ, ಬಟ್ಟೆ ತೊಳಿಯೋಕೆ ಅಷ್ಟೇ ಸೀಮಿತ ಕೆಲವು ಕಡೆ ಕುಡಿಯೋಕು ಉಪಯೋಗಿಸುತ್ತಿದ್ದು ಉದಾಹರಣೆ ಇದೆ… ಆದ್ರೆ ಇಲ್ಲಿ ಕೆರೆಯಲ್ಲಿ ಮೊಸಳೆ ಇತ್ತು ಅಂದ್ರೆ ಈ ಅಪ್ರತಿಮ ಎದೆಗಾರಿಕೆ ಮೆಚ್ಚುಲೇಬೇಕು ಅಲ್ವಾ ಸುಳ್ಳು (ಅ)ಸೂರರೇ 🤣🤣🤣🤣ದಯವಿಟ್ಟು ಕ್ಷಮಿಸಿ ನಂಗೆ ಬೇರೆ ಜಾಗದಿಂದ ನಗಬೇಕು ಅನಸ್ತಿದೆ 🙏🙏🙏

LEAVE A REPLY

Please enter your comment!
Please enter your name here

- Advertisment -

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...