ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಿನ್ನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರುವ ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾತ್ರಿ 8 ಗಂಟೆಗೆ ಮತ್ತೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇಂದಿನ ಭಾಷಣದಲ್ಲಿ ಭಾರತದಲ್ಲಿ ಮೇ 17ರ ನಂತರವೂ ಲಾಕ್‌ಡೌನ್ ಮುಂದುವರೆಯುತ್ತದೆ ಆದರೆ ಕಡಿಮೆ ನಿರ್ಬಂಧಗಳಿರುತ್ತವೆ ಎಂದು ಹೇಳಲಾಗುತ್ತಿದೆ.
ಇದು ಲಾಕ್‌ಡೌನ್ ಘೋಷಿಸಿದಾಗಿನಿಂದ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿರುವ ಮೂರನೇ ಭಾಷಣವಾಗಿದೆ.
ಮೊದಲ ಹಂತದ ಲಾಕ್‌ಡೌನ್‌ಗೆ ಅಗತ್ಯವಾದ ಕ್ರಮಗಳು ಎರಡನೇ ಹಂತದಲ್ಲಿ ಅಗತ್ಯವಿಲ್ಲ ಮತ್ತು ಅದೇ ರೀತಿ ಮೂರನೇ ಹಂತದಲ್ಲಿ ಅಗತ್ಯವಿರುವ ಕ್ರಮಗಳು ನಾಲ್ಕನೆಯದರಲ್ಲಿ ಅಗತ್ಯವಿಲ್ಲ ಎಂದು ನಾನು ದೃಢವಾಗಿ ಭಾವಿಸುತ್ತೇನೆ ಎಂದು ನಿನ್ನೆ ಸಭೆಯ ನಂತರ ಪ್ರಧಾನಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಸಾಂಕ್ರಾಮಿಕ ರೋಗದ ಹರಡುವಿಕೆಗೆ ಸಂಬಂಧಿಸಿದಂತೆ ನಾವು ಈಗ ಸಮಂಜಸವಾಗಿ ಸ್ಪಷ್ಟ ಸೂಚನೆಯನ್ನು ಹೊಂದಿದ್ದೇವೆ. ಇದಲ್ಲದೆ, ಕಳೆದ ಕೆಲವು ವಾರಗಳಲ್ಲಿ, ಅಧಿಕಾರಿಗಳು ಜಿಲ್ಲಾ ಹಂತದವರೆಗೆ ಆಪರೇಟಿಂಗ್ ಕಾರ್ಯವಿಧಾನಗಳನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಮೋದಿ ಹೇಳಿದ್ದರು.
COVID-19 ನಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ರಾತ್ರಿ ಕರ್ಫ್ಯೂ ಮತ್ತು ಸೀಮಿತ ಸಾರ್ವಜನಿಕ ಸಾರಿಗೆಯಂತಹ ನಿರ್ಬಂಧಗಳು ಮುಂದುವರಿಯಬಹುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಉದ್ಯಮಿಗಳ ಲಾಬಿಗೆ ಸರ್ಕಾರ ಮಣಿದಿದೆ: ಮಣಿವಣ್ಣನ್ ವರ್ಗಾವಣೆಗೆ ತೀವ್ರ ವಿರೋಧ


