ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ತ್ರಿವರ್ಣ ಧ್ವಜದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬರೆದುಕೊಂಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ಹಿಪಾಕ್ರಸಿ ಜಿಂದಾಬಾದ್(ಬೂಟಾಟಿಕೆಗೆ ಜಯವಾಗಲಿ)’ ಎಂದು ವ್ಯಂಗ್ಯವಾಡಿದೆ.
ಆಗಸ್ಟ್ 13-15 ರ ನಡುವೆ ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಅಥವಾ ಪ್ರದರ್ಶಿಸಲು ಭಾರತದ ಜನರಿಗೆ ಪ್ರಧಾನಿ ಮನವಿ ಮಾಡಿದ್ದಾರೆ. ಜವಾಹರಲಾಲ್ ನೆಹರು ಅವರು ಹಾರಿಸಿದ ಮೊದಲ ತ್ರಿವರ್ಣ ಧ್ವಜದ ಚಿತ್ರ ಮತ್ತು ತ್ರಿವರ್ಣವನ್ನು ರಾಷ್ಟ್ರಧ್ವಜವಾಗಿ ಅಳವಡಿಸಿಕೊಳ್ಳಲು ಕಾರಣವಾದ ಅಧಿಕೃತ ಸಂವಹನಗಳ ವಿವರಗಳನ್ನು ಪ್ರಧಾನಿ ಮೋದಿ ಬರೆದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಇಂದು ಜುಲೈ 22 ಆಗಿದ್ದು, ನಮ್ಮ ಇತಿಹಾಸದಲ್ಲಿ ವಿಶೇಷ ಪ್ರಸ್ತುತತೆಯನ್ನು ಹೊಂದಿದೆ. 1947 ರ ಈ ದಿನ ನಮ್ಮ ರಾಷ್ಟ್ರಧ್ವಜವನ್ನು ಅಳವಡಿಸಲಾಯಿತು. ನಮ್ಮ ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದ ಸಮಿತಿಯ ವಿವರಗಳು ಮತ್ತು ಪಂಡಿತ್ ನೆಹರು ಅವರು ಹಾರಿಸಿದ ಮೊದಲ ತ್ರಿವರ್ಣ ಧ್ವಜ ಸೇರಿದಂತೆ ಇತಿಹಾಸದಿಂದ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ” ಎಂದು ಪ್ರಧಾನಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
“ನಾವು ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಡುತ್ತಿರುವಾಗ ಸ್ವತಂತ್ರ ಭಾರತಕ್ಕಾಗಿ ಧ್ವಜದ ಕನಸು ಕಂಡವರೆಲ್ಲರ ಅನುಸ್ಮರಣೀಯ ಧೈರ್ಯ ಮತ್ತು ಪ್ರಯತ್ನಗಳನ್ನು ಇಂದು ನಾವು ನೆನಪಿಸಿಕೊಳ್ಳುತ್ತೇವೆ. ಅವರ ಆಶಯಗಳನ್ನು ಈಡೇರಿಸಲು ಮತ್ತು ಅವರ ಕನಸುಗಳ ಭಾರತವನ್ನು ನಿರ್ಮಿಸಲು ನಾವು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ” ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ ಕೆಲವೆ ದಿನಗಳಲ್ಲಿ ಕುಸಿದ 15,000 ಕೋಟಿ ವೆಚ್ಚದ ಎಕ್ಸ್‌ಪ್ರೆಸ್ ವೇ!
ಪ್ರಧಾನಿ ಮೋದಿ ಅವರ ಸರಣಿ ಟ್ವೀಟ್‌ಗಳಿಗೆ ಕಾಂಗ್ರೆಸ್‌ನ ಹಿರಿಯ ನಾಯಕ, ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಅವರು ಕಟುವಾದ ಪ್ರತಿಕ್ರಿಯೆಯನ್ನು ನೀಡಿದ್ದು, “ಬೂಟಾಟಿಕೆ ಜಿಂದಾಬಾದ್!” ಎಂದು ಹೇಳಿದ್ದಾರೆ.
“ನಾಗ್ಪುರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು 52 ವರ್ಷಗಳನ್ನು ತೆಗೆದುಕೊಂಡ ಸಂಘಟನೆಯಲ್ಲಿ ಪ್ರಚಾರಕರಾಗಿದ್ದವರು, ನೆಹರೂ ಅವರು ‘ಭಾರತದ ಸ್ವಾತಂತ್ರ್ಯದ ಉಡುಗೆ’ ಎಂದು ಬಣ್ಣಿಸಿದ ಖಾದಿಯಿಂದ ರಾಷ್ಟ್ರಧ್ವಜವನ್ನು ತಯಾರಿಸಿದವರ ಜೀವನೋಪಾಯವನ್ನು ನಾಶಪಡಿಸುತ್ತಿದ್ದಾರೆ” ಎಂದು ಜೈರಾಮ್ ರಮೇಶ್ ಟ್ವೀಟ್‌ನಲ್ಲಿ ಹೇಳಿದ್ದಾರೆ.
हिपोक्रेसी जिंदाबाद!
ये खादी से राष्ट्रीय ध्वज बनाने वालों की आजीविका को नष्ट कर रहे हैं, जिसे नेहरू जी ने भारत की आजादी का पोशाक बताया था।
ये उस संगठन के प्रचारक रहे हैं जिसे नागपुर में राष्ट्रीय ध्वज फहराने में 52 साल लगे। https://t.co/2aajcZAfN5
— Jairam Ramesh (@Jairam_Ramesh) July 22, 2022
ಭಾರತದ ಧ್ವಜ ಸಂಹಿತೆ-2002 ಅನ್ನು ಡಿಸೆಂಬರ್ 2021 ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಪಾಲಿಯೆಸ್ಟರ್ ಮತ್ತು ಯಂತ್ರ ನಿರ್ಮಿತ ಧ್ವಜಗಳನ್ನು ತಯಾರಿಸಲು ಮತ್ತು ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬಿಜೆಪಿಗೆ ಸ್ವಾತಂತ್ರ್ಯ ಹೋರಾಟ ಮತ್ತು ಅದರ ಚಿಹ್ನೆಗಳ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ ಎಂದು ಆರೋಪಿಸಿ ಕಾಂಗ್ರೆಸ್ ತಿದ್ದುಪಡಿಯನ್ನು ಹಿಂಪಡೆಯಲು ಒತ್ತಾಯಿಸುತ್ತಿದೆ.
ಇದನ್ನೂ ಓದಿ: ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ ಪ್ರಧಾನಿ ಮೋದಿ ಆಪ್ತ ಉದ್ಯಮಿ ಗೌತಮ್ ಅದಾನಿ
“ಯಂತ್ರ ನಿರ್ಮಿತ ಮತ್ತು ಆಮದುದಿನ ಪಾಲಿಯೆಸ್ಟರ್ ಧ್ವಜಗಳ ಆಮದು ಮಾಡಿಕೊಳ್ಳಲು ಅನುಮತಿ ನೀಡುವ ಮೂಲಕ ಪ್ರಧಾನಿ ಮೋದಿ ಅವರು ‘ಖಾದಿ’ಯ ಮೂಲತತ್ವ ಮತ್ತು ಮಹಾತ್ಮ ಗಾಂಧಿಯವರ ಪರಂಪರೆಯ ಮೇಲೆ ದಾಳಿ ಮಾಡಿದ್ದಾರೆ” ಎಂದು ಕಾಂಗ್ರೆಸ್ ವಕ್ತಾರ ಅಜಯ್ ಕುಮಾರ್ ಈ ತಿಂಗಳ ಆರಂಭದಲ್ಲಿ ಮೋದಿ ವಿರುದ್ಧ ಕಿಡಿ ಕಾರಿದ್ದರು.


