ಭಾರತ್ ಜೋಡೋ ಯಾತ್ರೆಯಲ್ಲಿ ದೇಶದ ಖ್ಯಾತ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರೊಂದಿಗೆ ಹೆಜ್ಜೆ ಹಾಕಿದ ರಾಹುಲ್ ಗಾಂಧಿ ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನರ್ಮದಾ ಅಣೆಕಟ್ಟು ಯೋಜನೆಯ ವಿರುದ್ಧ ಮೇಧಾ ಪಾಟ್ಕರ್ ಭಾರಿ ಹೋರಾಟ ಸಂಘಟಿಸಿದ್ದರು. ಈ ಯೋಜನೆಯನ್ನು ಪ್ರಧಾನಿ ಮೋದಿ ಗುಜರಾತ್‌ನ ಜೀವಸೆಲೆ ಎಂದು ಬಣ್ಣಿಸಿದ್ದಾರೆ.
ಗುಜರಾತ್ ಚುನಾವಣೆಗೆ ಮುಂಚಿತವಾಗಿ ರಾಜ್ಯದ ರಾಜ್‌ಕೋಟ್ ಜಿಲ್ಲೆಯಲ್ಲಿ ನಡೆದ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಮೂರು ದಶಕಗಳವರೆಗೆ ನರ್ಮದಾ ಅಣೆಕಟ್ಟು ಯೋಜನೆಯನ್ನು ಸ್ಥಗಿತಗೊಳಿಸಿದ ಮಹಿಳೆಯೊಂದಿಗೆ ಕಾಂಗ್ರೆಸ್ ಮುಖಂಡರೊಬ್ಬರು ಪಾದಯಾತ್ರೆ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ನರ್ಮದಾ ನದಿಯ ಮೇಲೆ ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು ಮೂರು ದಶಕಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ಕಾರಣ ಮೇಧಾ ಪಟ್ಕರ್ ಸೇರಿದಂತೆ ಇತರ ಹೋರಾಟಗಾರರು ಉಂಟು ಮಾಡಿದ ಕಾನೂನು ಅಡೆತಡೆಗಳಾಗಿವೆ” ಎಂದು ಪ್ರಧಾನಿ ಹೇಳಿದ್ದಾರೆ. ಇಷ್ಟೆ ಅಲ್ಲದೆ ಮೇಧಾ ಪಾಟ್ಕರ್ ಅವರು ಗುಜರಾತ್ ರಾಜ್ಯವನ್ನು ಅಪಖ್ಯಾತಿ ಗೋಳಿಸಿದ್ದಾರೆ ಎಂದು ಮೋದಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ವಿರಾಮ: ಗುಜರಾತ್ ಚುನಾವಣಾ ಪ್ರಚಾರಕ್ಕೆ ರಾಹುಲ್ ಗಾಂಧಿ
“ಕಾಂಗ್ರೆಸ್ ನಿಮ್ಮ ಬಳಿಗೆ ಮತಕ್ಕಾಗಿ ಬಂದಾಗ, ‘ನರ್ಮದಾ ಅಣೆಕಟ್ಟಿನ ವಿರುದ್ಧ ಇದ್ದವರ ಹೆಗಲ ಮೇಲೆ ಕೈ ಇಟ್ಟುಕೊಂಡು ನೀವು ಪಾದಯಾತ್ರೆಯನ್ನು ಮಾಡುತ್ತೀರಿ’ ಕೇಳಿ” ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಪ್ರಸ್ತುತ ಮಹಾರಾಷ್ಟ್ರದ ಮೂಲಕ ಹಾದುಹೋಗುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ವೇಳೆ ಈ ವಾರದ ಆರಂಭದಲ್ಲಿ ಮೇಧಾ ಪಟ್ಕರ್ ಸೇರಿಕೊಂಡಿದ್ದರು.
2017 ರಲ್ಲಿ ಉದ್ಘಾಟನೆಯಾದ ಗುಜರಾತ್‌ನ ‘ಸರ್ದಾರ್ ಸರೋವರ್ ಅಣೆಕಟ್ಟು’ ವಿರುದ್ಧ ಮೇಧಾ ಪಟ್ಕರ್ ಅವರು ‘ನರ್ಮದಾ ಬಚಾವೊ ಆಂದೋಲನ್’ ಎಂಬ ಬೃಹತ್ ಅಭಿಯಾನವನ್ನೆ ನಡೆಸಿದ್ದರು. ಈ ಅಣೆಕಟ್ಟಿನಿಂದಾಗಿ ಸಾವಿರಾರು ಬುಡಕಟ್ಟು ಕುಟುಂಬಗಳ ಜೀವನ ಕಷ್ಟಕ್ಕೆ ಒಳಗಾಗುತ್ತದೆ ಎಂದು ಅವರ ಪ್ರತಿಪಾದಿಸಿದ್ದರು. ಇದನ್ನು ಬಿಜೆಪಿ ನಿರಂತರವಾಗಿ ಟೀಕಿಸುತ್ತಿದೆ.
Congress and Rahul Gandhi have time and again shown their animosity towards Gujarat and Gujaratis. By giving Medha Patkar a central place in his Yatra, Rahul Gandhi shows that he stands with those elements who denied water to Gujaratis for decades. Gujarat will not tolerate this. https://t.co/94jJBz4spP
— Bhupendra Patel (@Bhupendrapbjp) November 18, 2022
“ಮೇಧಾ ಪಾಟ್ಕರ್ ಅವರು ನರ್ಮದಾ ವಿರೋಧಿ, ಗುಜರಾತ್ ವಿರೋಧಿ ಮತ್ತು ಸೌರಾಷ್ಟ್ರ ವಿರೋಧಿಯಾಗಿದ್ದಾರೆ. ಅವರು ನರ್ಮದಾ ಅಣೆಕಟ್ಟಿನ ನಿರ್ಮಾಣವನ್ನು ಸ್ಥಗಿತಗೊಳಿಸಲು ಪ್ರಯತ್ನಿಸಿದ್ದಲ್ಲದೆ, ಸೌರಾಷ್ಟ್ರದ ಜನರಿಗೆ ನೀರಿನ ಬಳಕೆಯನ್ನು ವಿರೋಧಿಸಿದರು” ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಶನಿವಾರ ಹೇಳಿದ್ದರು.
“ಇಂತಹ ಜನರು ರಾಹುಲ್ ಗಾಂಧಿ ಜೊತೆಗೆ ಸೇರಿದರೆ, ಅದು ಅವರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ನಡ್ಡಾ ಹೇಳಿದ್ದಾರೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ದ್ವೇಷ ರಾಜಕಾರಣಕ್ಕೆ ಎದುರಾಗಿ ಬಿರುಸಿನ ನಡಿಗೆ
ಗುಜರಾತಿಗಳಿಗೆ ನೀರನ್ನು ನಿರಾಕರಿಸಿದವರ ಜೊತೆಗೆ ಕಾಂಗ್ರೆಸ್ ಸಂಸದ ಕೈಜೋಡಿಸಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ರಾಹುಲ್ ಗಾಂಧಿಯವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
“ಮೇಧಾ ಪಟ್ಕರ್ ಅವರಿಗೆ ಯಾತ್ರೆಯಲ್ಲಿ ಮುಖ್ಯ ಸ್ಥಾನವನ್ನು ನೀಡುವ ಮೂಲಕ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಗುಜರಾತ್ ಮತ್ತು ಗುಜರಾತಿಗಳ ಬಗ್ಗೆ ಮತ್ತೆ ತಮ್ಮ ದ್ವೇಷವನ್ನು ತೋರಿಸಿದ್ದಾರೆ. ದಶಕಗಳ ಕಾಲ ಗುಜರಾತಿಗಳಿಗೆ ನೀರನ್ನು ನಿರಾಕರಿಸಿದ ಜನರೊಂದಿಗೆ ಅವರು ಕೈಜೋಡಿಸಿದ್ದಾರೆ. ಗುಜರಾತ್ ಇದನ್ನು ಸಹಿಸುವುದಿಲ್ಲ” ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಟ್ವೀಟ್ ಮಾಡಿದ್ದಾರೆ.
ಗುಜರಾತ್‌ನಲ್ಲಿ ಚುನಾವಣೆ ಘೋಷಣೆಯಾಗಿದ್ದು, ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ



2017 ನಲ್ಲಿ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿದರೆ ಎಲ್ಲಿ ಉದ್ಯೋಗ