ಸೂರ್ಯ ಕುಮಾರ್ ಯಾದವ್ ಕಟ್ಟಿದ ಅದ್ಭುತ ಇನ್ನಿಂಗ್ಸ್ ನಂತರ ಭಾರತದ ಬೌಲರ್‌ಗಳ ಸೊಗಸಾದ ದಾಳಿಯ ಮೂಲಕ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತವು 65 ರನ್‌ಗಳ ಭಾರೀ ಜಯ ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನೀಡಿದ 192 ರನ್ ಬೆನ್ನಟ್ಟಿದ ನ್ಯೂಜಿಲೆಂಡ್ ಕೇವಲ 126 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಶರಣಾಯಿತು.
ಭಾರತದ ಬೌಲಿಂಗ್ ವಿಭಾಗದಲ್ಲಿ ದೀಪಕ್ ಹೂಡ 4, ಯುಜುವೇಂದ್ರ ಚಹಲ್ 2, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರೆ ಭುವನೇಶ್ವರ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದು ಮಿಂಚಿದರು.
ನ್ಯೂಜಿಲೆಂಡ್ ಪರವಾಗಿ ನಾಯಕ ಕೇನ್ ವಿಲಿಯಂಸನ್ 52 ಎಸೆತಗಳಲ್ಲಿ 61 ರನ್ ಗಳಿಸಿ ಒಂದಷ್ಟು ಪ್ರತಿರೋಧ ತೋರಿದರು. ಆದರೆ ಉಳಿದ ಆಟಗಾರರು ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದರು.
ಅದಕ್ಕೂ ಮೊದಲು ತಮ್ಮ ಆಕರ್ಷಕ ಬ್ಯಾಟಿಂಗ್‌ನಿಂದ ಶತಕ ಗಳಿಸಿದ ಸೂರ್ಯಕುಮಾರ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು. ಕೇವಲ 51 ಎಸೆತಗಳಲ್ಲಿ 111 ರನ್ ಚಚ್ಚಿದ ಅವರು ತಮ್ಮ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನ ಎರಡನೇ ಶತಕ ದಾಖಲಿಸಿದರು.
ಚೆಂಡನ್ನು ಅಂಗಳದ ಮೂಲೆ ಮೂಲೆಗು ಅಟ್ಟಿದ್ದಲ್ಲದೆ, ಭರ್ಜರಿ ಸಿಕ್ಸರ್‌ಗಳ ಮೂಲಕ ಆಕರ್ಷಕ ಆಟವಾಡಿದ ಅವರು ತಾವೊಬ್ಬ ಪರಿಪೂರ್ಣ 360ಡಿಗ್ರಿ ಬ್ಯಾಟರ್ ಎಂಬುದನ್ನು ಸಾಬೀತುಪಡಿಸಿದರು.
ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ ಆಕರ್ಷಕ ಶತಕ: ನ್ಯೂಜಿಲೆಂಡ್ ಎದುರು ಭಾರತದ ಬೃಹತ್ ಮೊತ್ತ