Homeರಾಷ್ಟ್ರೀಯಅಪ್ರಾಪ್ತ ಮುಸ್ಲಿಂ ಹುಡುಗಿಯೊಂದಿಗಿನ ವಿವಾಹ ಕೂಡಾ ‘ಪೋಕ್ಸೋ’ ಅಡಿ ಅಪರಾಧ: ಕೇರಳ ಹೈಕೋರ್ಟ್

ಅಪ್ರಾಪ್ತ ಮುಸ್ಲಿಂ ಹುಡುಗಿಯೊಂದಿಗಿನ ವಿವಾಹ ಕೂಡಾ ‘ಪೋಕ್ಸೋ’ ಅಡಿ ಅಪರಾಧ: ಕೇರಳ ಹೈಕೋರ್ಟ್

- Advertisement -
- Advertisement -

ಮುಸ್ಲಿಂ ಸಮುದಾಯದ ಅಪ್ರಾಪ್ತ ವಯಸ್ಕರೊಂದಿಗಿನ ವಿವಾಹವನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗುವುದಿಲ್ಲ ಮತ್ತು ತನ್ನ ಅಪ್ರಾಪ್ತ ಹೆಂಡತಿಯೊಂದಿಗೆ ದೈಹಿಕ ಸಂಪರ್ಕ ಹೊಂದಿರುವ ಪತಿ ಈ ಕಾಯಿದೆಯ ಅಡಿಯಲ್ಲಿ ಹೊಣೆಗಾರನಾಗುತ್ತಾನೆ ಎಂದು ಕೇರಳ ಹೈಕೋರ್ಟ್ ಹೇಳಿದೆ.

ಪಶ್ಚಿಮ ಬಂಗಾಳದ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸುವಾಗ, ಕಕ್ಷಿದಾರರಲ್ಲಿ ಒಬ್ಬರು ಅಪ್ರಾಪ್ತರಾಗಿದ್ದರೆ ಪೋಕ್ಸೋ ಅಡಿಯ ಅಪರಾಧಗಳು ಅನ್ವಯಿಸುತ್ತವೆ ಎಂದು ನ್ಯಾಯಮೂರ್ತಿ ಬಚು ಕುರಿಯನ್ ಥಾಮಸ್ ಅವರ ಏಕ ಪೀಠ ಶುಕ್ರವಾರ ತೀರ್ಪು ನೀಡಿದೆ. ಆರೋಪಿಯು ನಂತರ ಬಾಲಕಿಯನ್ನು ಮದುವೆಯಾಗಿದ್ದನು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪ್ರಾಸಿಕ್ಯೂಷನ್ ಪ್ರಕಾರ, 31 ವರ್ಷದ ಆರೋಪಿಯು ಅಪ್ರಾಪ್ತೆಯನ್ನು ಅಪಹರಿಸಿ ಅವರೊಂದಿಗೆ ಹಲವಾರು ಬಾರಿ ಲೈಂಗಿಕ ಸಂಪರ್ಕದಲ್ಲಿ ಏರ್ಪಟ್ಟಿದ್ದನು. ನಂತರ ಆತ ಹುಡುಗಿಯನ್ನು ವಿವಾಹವಾಗಿದ್ದಾನೆ.

ತಾನು ಹುಡುಗಿಯನ್ನು ಕಾನೂನುಬದ್ಧವಾಗಿ ಮದುವೆಯಾಗಿದ್ದು, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಸಮುದಾಯದ ಹುಡುಗಿಯರು ಪ್ರೌಢಾವಸ್ಥೆಗೆ ಬಂದ ನಂತರ ಮದುವೆಗೆ ಅನುಮತಿ ನೀಡುತ್ತದೆ. ಹೀಗಾಗಿ ಪೋಕ್ಸೋ ಅಡಿಯಲ್ಲಿ ತನ್ನ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಆರೋಪಿಯು ವಾದಿಸಿದ್ದನು.

ಇದನ್ನೂ ಓದಿ: ಪೋಕ್ಸೊ ವಿಚಾರಣೆ ಉದ್ದೇಶಪೂರ್ವಕ ತಪ್ಪಿಸಿದ್ದಕ್ಕೆ ದೀಪಕ್ ಚೌರಾಸಿಯಾ ವಿರುದ್ಧ ಬಂಧನದ ವಾರಂಟ್

ಆರೋಪಿ ಮಾರ್ಚ್ 2021 ರಲ್ಲಿ ಹುಡುಗಿಯನ್ನು ಮದುವೆಯಾಗಿದ್ದು, ತಮಗೆ ಅನ್ವಯವಾಗುವ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಹುಡುಗಿಯು ತನ್ನ ಕಾನೂನು ಪಾಲುಗಾರ್ತಿಯನ್ನಾಗಿ ಮಾಡಿಕೊಂಡಿದ್ದಾಗಿ ವಾದಿಸಿದ್ದಾನೆ. ಹರ್ಯಾಣ, ದೆಹಲಿ ಮತ್ತು ಕರ್ನಾಟಕ ಹೈಕೋರ್ಟ್‌ಗಳ ಈ ಹಿಂದಿನ ತೀರ್ಪುಗಳನ್ನು ಆರೋಪಿ ತಮ್ಮ ಪ್ರತಿಪಾದನೆಯನ್ನು ಬಲಪಡಿಸಲು ಉಲ್ಲೇಖಿಸಿದ್ದಾನೆ. ಆದರೆ ನ್ಯಾಯಾಲಯವು ಈ ಪ್ರತಿಪಾದನೆಗಳನ್ನು ಒಪ್ಪಲು ನಿರಾಕರಿಸಿತು.

“ವಿವಾಹದ ಸಿಂಧುತ್ವವನ್ನು ಲೆಕ್ಕಿಸದೆ ಅಥವಾ ಇನ್ಯಾವುದೇ ರೀತಿಯಲ್ಲಿ ಕಕ್ಷಿದಾರರಲ್ಲಿ ಒಬ್ಬರು ಅಪ್ರಾಪ್ತರಾಗಿದ್ದರೆ, ಪೋಕ್ಸೋ ಕಾಯ್ದೆಯಡಿ ಅಪರಾಧಗಳು ಅನ್ವಯವಾಗುತ್ತದೆ. ಉಲ್ಲೇಖಿಸಲಾದ ಇತರ ನ್ಯಾಯಾಲಯಗಳನ್ನು ಗೌರವಿಸುತ್ತಲೆ, ಅಪ್ರಾಪ್ತ ವಯಸ್ಕರನ್ನು ಮದುವೆಯಾಗುವ ಮುಸ್ಲಿಂ ವಿರುದ್ಧ ಪೋಕ್ಸೋ ಅಡಿಯ ಅಪರಾಧ ಆಗುವುದಿಲ್ಲ ಎಂಬ ಆ ನಿರ್ಧಾರಗಳಲ್ಲಿ ಸೂಚಿಸಲಾದ ಪ್ರತಿಪಾದನೆಯನ್ನು ನಾನು ಒಪ್ಪಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಪೋಕ್ಸೋ ಕಾಯಿದೆಯು ವಿಶೇಷವಾದ ಕಾನೂನಾಗಿದೆ ಎಂದು ನ್ಯಾಯಾಲಯ ಹೇಳಿದೆ. ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನ್ಯಾಯಶಾಸ್ತ್ರದಿಂದ ಉದ್ಭವಿಸುವ ತತ್ವಗಳ ಆಧಾರದ ಮೇಲೆ ಈ ವಿಶೇಷ ಕಾನೂನನ್ನು ಜಾರಿಗೊಳಿಸಲಾಗಿದೆ. ಪೋಕ್ಸೋ ಕಾಯಿದೆಯ ಮೂಲಕ ಶಾಸಕಾಂಗದ ಉದ್ದೇಶ ಕೂಡಾ ಮದುವೆಯ ನೆಪದಲ್ಲಿ ಮಗುವಿನೊಂದಿಗೆ ದೈಹಿಕ ಸಂಬಂಧವನ್ನು ನಿಷೇಧಿಸುವುದಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಪೋಕ್ಸೊ ಮತ್ತು ಐಪಿಸಿ ‘ವೈಯಕ್ತಿಕ’ ಕಾನೂನನ್ನು ಮೀರಿ ಅನ್ವಯವಾಗುತ್ತದೆ: ಕರ್ನಾಟಕ ಹೈಕೋರ್ಟ್

“ಬಾಲ್ಯ ವಿವಾಹವು ಮಗುವಿನ ಬೆಳವಣಿಗೆಗೆ ಸಂಪೂರ್ಣವಾಗಿ ತಡೆ ನೀಡುತ್ತದೆ. ಇದು ಸಮಾಜದ ಕೇಡು” ಎಂದು ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಾಲಯವು ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇವಿಎಂ-ವಿವಿಪ್ಯಾಟ್ ಎಲ್ಲಾ ಮತಗಳ ಎಣಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

0
ಇವಿಎಂ ಮತ್ತು ವಿವಿಪ್ಯಾಟ್‌ಗಳ ಎಲ್ಲಾ (ಶೇ.100) ಮತಗಳನ್ನು ತಾಳೆ ಮಾಡಿ ನೋಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರಿಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ...