ಪಂಜಾಬ್‌‌ನ ನೂತನ ಮುಖ್ಯಮಂತ್ರಿಯಾಗಿರುವ ಚರಣ್‌‌ಜಿತ್‌‌ ಸಿಂಗ್ ಚನ್ನಿ ಅವರು ಮತಾಂತರವಾಗುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ಹರಿದಾಡುತ್ತಿದೆ. ವೈರಲ್‌ ವಿಡಿಯೊದಲ್ಲಿ ಸಿಖ್‌ ವ್ಯಕ್ತಿಯಂತೆ ಕಾಣುತ್ತಿರುವ ವ್ಯಕ್ತಿಯೊಬ್ಬರು ಕ್ರೈಸ್ತ ಪಾದ್ರಿಯಿಂದ ಬ್ಯಾಪ್ಟಿಸಂ(ದೀಕ್ಷಾಸ್ನಾನ) ಆಗುತ್ತಿರುವುದನ್ನು ನೋಡಬಹುದಾಗಿದೆ.

ವೀಡಿಯೊದಲ್ಲಿರುವ ವ್ಯಕ್ತಿಯು ಪಂಜಾಬ್‌ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರೊಂದಿಗೆ ಯಾವುದೇ ಹೋಲಿಕೆಯನ್ನು ಹೊಂದಿಲ್ಲ. ವೈರಲ್ ವೀಡಿಯೋದಲ್ಲಿರುವ ವ್ಯಕ್ತಿಯ ಚಿತ್ರದೊಂದಿಗೆ ಚರಣಜಿತ್ ಸಿಂಗ್ ಚನ್ನಿಯ ಚಿತ್ರವನ್ನು ಜೋಡಿಸಿ ನೋಡಿದಾಗ ಕೂಡಾ ನಮಗೆ ಯಾವುದೇ ಹೋಲಿಕೆಗಳನ್ನು ಕಂಡುಹಿಡಿಯಲಾಗಲಿಲ್ಲ.

ವೀಡಿಯೊದ 0:30 ಸಮಯದ ಸ್ಟಾಂಪ್‌ನಲ್ಲಿ, ಪಾದ್ರಿ ಅವರು ‘ಸಿಮ್ರಂಜೀತ್ ಸಿಂಗ್’ ಎಂದು ಉಚ್ಚರಿಸುವುದನ್ನು ನಾವು ಸ್ಪಷ್ಟವಾಗಿ ಕೇಳಬಹುದು. ಅವರ ಈ ಹೇಳಿಕೆ, ದೀಕ್ಷಾಸ್ನಾನ ಪಡೆಯುತ್ತಿರುವ ವ್ಯಕ್ತಿ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿಯಲ್ಲ ಎಂದು ಸ್ಪಷ್ಟಪಡಿಸುತ್ತದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಮಹಿಳೆಯರನ್ನು ಅವಮಾನಿಸಿಲ್ಲ, ಅರ್ಧ ಭಾಷಣ ಹಂಚಿಕೊಳ್ಳಲಾಗುತ್ತಿದೆ

ಚರಣ್‌ಜಿತ್ ಸಿಂಗ್ ಚನ್ನಿ ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ, ಅವರ ಧಾರ್ಮಿಕತೆಯನ್ನು ಪ್ರಶ್ನಿಸುವ ವೀಡಿಯೊಗಳು ಮತ್ತು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಹಿಂದೆ, “ಚನ್ನಿ ಅವರು ವಿಡಿಯೊವೊಂದರಲ್ಲಿ ಹಲ್ಲೆಲುಯಾ ಎಂದು ಹೇಳುತ್ತಿದ್ದಾರೆ, ಅವರು ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಏಸುಗೆ ಧನ್ಯವಾದ ಹೇಳಿದರು’ ಎಂದು ಪ್ರತಿಪಾದಿಸಿ ವಿಡಿಯೊ ಹಂಚಿಕೊಳ್ಳಲಾಗಿತ್ತು.

ಆದರೆ, ಆ ವಿಡಿಯೊ ಚನ್ನಿ ಅವರು ಪಂಜಾಬ್‌ನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಚರ್ಚ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ್ದಾಗಿದೆ. ಆ ವೀಡಿಯೋ ಬಗ್ಗೆ ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್‌ ಫ್ಯಾಕ್ಟ್‌ಚೆಕ್‌ ಮಾಡಿದೆ. ಅದನ್ನು ಇಲ್ಲಿ ಓದಬಹುದು.

ಇದನ್ನೂ ಓದಿ: ಕಿಸಾನ್ ಮಹಾಪಂಚಾಯತ್‌ನಲ್ಲಿ ಮದ್ಯಕ್ಕಾಗಿ ರೈತರ ಕಿತ್ತಾಟವೆಂದು ತಪ್ಪು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ

ಲಭ್ಯವಿರುವ ಮಾಹಿತಿಯ ಪ್ರಕಾರ, ಚನ್ನಿ ಸಿಖ್ ಧರ್ಮಿಯರಾಗಿದ್ದಾರೆ. ಒಂದು ವೇಳೆ ಚರಣಜಿತ್ ಸಿಂಗ್ ಚನ್ನಿ ಅವರು ದೀಕ್ಷಾಸ್ನಾನ ಪಡೆದಿದ್ದರೆ, ಮಾಧ್ಯಮಗಳು ಇದನ್ನು ವ್ಯಾಪಕವಾಗಿ ವರದಿ ಮಾಡುತ್ತಿದ್ದವು. ಆದರೆ, ಅಂತಹ ಯಾವುದೇ ವರದಿಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಈ ವೀಡಿಯೋದಲ್ಲಿ ದೀಕ್ಷಾಸ್ನಾನ ಪಡೆಯುತ್ತಿರುವ ವ್ಯಕ್ತಿ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿಯಲ್ಲ.

ಪ್ರತಿಪಾದನೆ: ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಕ್ರೈಸ್ತರ ದೀಕ್ಷಾಸ್ನಾನ ಪಡೆಯುವ ವಿಡಿಯೋ.
ವಾಸ್ತವ: ವೈರಲ್ ಆಗಿರುವ ವೀಡಿಯೋದಲ್ಲಿರುವ ವ್ಯಕ್ತಿ ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಅವರೊಂದಿಗೆ ಯಾವುದೇ ಸಾಮ್ಯತೆಯನ್ನು ಹೊಂದಿಲ್ಲ. ವಿಡಿಯೋದಲ್ಲಿ ಇರುವ ಪಾದ್ರಿಯು, ದೀಕ್ಷಾಸ್ನಾನ ಪಡೆಯುತ್ತಿರುವ ವ್ಯಕ್ತಿಯ ಹೆಸರು ‘ಸಿಮ್ರಂಜೀತ್ ಸಿಂಗ್’ ಎಂದು ಹೇಳುವುದನ್ನು ಸ್ಪಷ್ಟವಾಗಿ ಕೇಳಬಹುದು. ಒಂದು ವೇಳೆ ಚರಣಜಿತ್ ಸಿಂಗ್ ಚನ್ನಿ ದೀಕ್ಷಾಸ್ನಾನ ಪಡೆದಿದ್ದರೆ, ಮಾಧ್ಯಮಗಳು ಇದನ್ನು ವ್ಯಾಪಕವಾಗಿ ವರದಿ ಮಾಡುತ್ತಿದ್ದವು. ಆದರೆ, ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ. ಆದುದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಮೋದಿ ಕೊನೆಯ ಭರವಸೆಯೆಂದು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿಲ್ಲ, ಇದು ಎಡಿಟ್ ಫೋಟೊ

LEAVE A REPLY

Please enter your comment!
Please enter your name here