Homeರಾಷ್ಟ್ರೀಯಆಸ್ಪತ್ರೆ ಐಸಿಯುವಿನಲ್ಲಿ ಅಡ್ಡಾಡಿದ ದನ! - ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ಅಘಾತಕಾರಿ ಘಟನೆ

ಆಸ್ಪತ್ರೆ ಐಸಿಯುವಿನಲ್ಲಿ ಅಡ್ಡಾಡಿದ ದನ! – ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ಅಘಾತಕಾರಿ ಘಟನೆ

- Advertisement -
- Advertisement -

ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ರಾಜ್‌‌ಗಡ್‌‌‌ ಜಿಲ್ಲೆಯ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು) ದಲ್ಲಿ ದನವೊಂದು ಮುಕ್ತವಾಗಿ ಅಡ್ಡಾಡುತ್ತಿರುವ ಅಘಾತಕಾರಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ದನವು ಆಸ್ಪತ್ರೆಯ ಆವರಣದಲ್ಲಿರುವ ವೈದ್ಯಕೀಯ ತ್ಯಾಜ್ಯವಿರುವ ತೊಟ್ಟಿಗಳಿಂದ ತಿನ್ನುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಸ್ಪತ್ರೆಯ ಆಡಳಿತವು ಸೆಕ್ಯುರಿಟಿ ಗಾರ್ಡ್ ಮತ್ತು ಇತರ ಇಬ್ಬರು ಸಿಬ್ಬಂದಿಗಳನ್ನು ಅವರ ಸೇವೆಯಿಂದ ತೆಗೆದುಹಾಕಲಾಗಿದೆ. ದಿನವಿಡೀ ಭದ್ರತಾ ಸಿಬ್ಬಂದಿಯನ್ನು ಕರ್ತವ್ಯದಲ್ಲಿ ನಿಯೋಜಿಸಲಾಗಿದ್ದರೂ ಹಸು ಆಸ್ಪತ್ರೆಯಿಂದ ದೂರ ಕಳುಹಿಸಲು ಯಾರೂ ಇರಲಿಲ್ಲ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಆಸ್ಪತ್ರೆಯ ಹಳೆಯ ಕೋವಿಡ್ ವಾರ್ಡ್‌ನೊಳಗೆ ಒಂದು ಹಸು ಮುಕ್ತವಾಗಿ ತಿರುಗಾಡುತ್ತಿದೆ ಎಂಬ ಮಾಹಿತಿ ನನಗೆ ಬಂದಿದೆ. ಈ ಅಜಾಗರೂಕತೆಗೆ ಕಾರಣವಾದ ಗಾರ್ಡ್ ಅನ್ನು ನಾವು ಅಮಾನತುಗೊಳಿಸಿದ್ದೇವೆ. ಅವರ ಅಜಾಗರೂಕತೆಗೆ ಕಾರಣವಾದ ಉಸ್ತುವಾರಿ ಮತ್ತು ಕಾವಲುಗಾರರನ್ನು ನಾವು ಅಮಾನತುಗೊಳಿಸಿದ್ದೇವೆ ಮತ್ತು ಭದ್ರತಾ ಏಜೆನ್ಸಿಗೆ ನೋಟಿಸ್ ನೀಡಿದ್ದೇವೆ” ಎಂದು ಜಿಲ್ಲಾ ಆಸ್ಪತ್ರೆಯ ಸಿವಿಲ್‌ ಸರ್ಜನ್ ಡಾ. ರಾಜೇಂದ್ರ ಕಟಾರಿಯಾ ಹೇಳಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಆಸ್ಪತ್ರೆಯು ಇಬ್ಬರು ಹಸು ಹಿಡಿಯುವವರನ್ನು ಕೂಡಾ ನೇಮಿಸಿಕೊಂಡಿತ್ತು. ಆದರೂ ಈ ಘಟನೆ ನಡೆದಾಗ ಅವರೂ ಕೂಡಾ ಹಾಜರಿರಲಿಲ್ಲ ಎಂದು ಎನ್‌ಡಿಟಿವಿ ವರದಿ ಹೇಳಿದೆ.

ಮಧ್ಯಪ್ರದೇಶದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಪ್ರಭುರಾಮ್‌ ಚೌಧರಿ ಇಂತಹ ಯಾವುದೇ ಘಟನೆಯ ಬಗ್ಗೆ ನನಗೆ ತಿಳಿದು ಬಂದಿಲ್ಲ ಎಂದು ಎಂದು ಆರಂಭದಲ್ಲಿ ಹೇಳಿದ್ದರು. ಆದರೆ ವೀಡಿಯೊ ವೈರಲ್ ಆದ ನಂತರ, ಮೂರು ಜನರನ್ನು ವಜಾ ಮಾಡಲಾಗಿದೆ.

ಇದನ್ನೂ ಓದಿ: ಕರ್ನಾಟಕದ ಆರ್ಥಿಕ ಚಿಂತನೆಯ ಕೊಡುಗೆ ಮತ್ತು ಸಾರ್ವಜನಿಕ ವಲಯ

ಇದೇ ರೀತಿಯ ಘಟನೆಯೊಂದು ಕಳೆದ ವರ್ಷ ಉತ್ತರ ಪ್ರದೇಶದ ಮೊರಾಡಾಬಾದ್‌ನ ಜಿಲ್ಲಾ ಆಸ್ಪತ್ರೆ ನಡೆದಿ‌ತ್ತು. ಭದ್ರತಾ ಸಿಬ್ಬಂದಿಗಳು ಗಮನ ದ್ವಾರಗಳಲ್ಲಿ ಕುಳಿತಿದ್ದಾಗೂ ಆಸ್ಪತ್ರೆಗೆ ನಾಯಿ ಪ್ರವೇಶಿಸಿತ್ತು. ಅಂದು ವೈರಲ್ ಆಗಿದ್ದ ವಿಡಿಯೊದಲ್ಲಿ ನಾಯಿ ಮುಕ್ತವಾಗಿ ವಾರ್ಡ್‌ಗಳಿಗೆ ಪ್ರವೇಶಿಸುತ್ತಿರುವುದು ಕಂಡುಬಂದಿತ್ತು. ಇದರ ನಂತರ ಆಸ್ಪತ್ರೆಯ ಹಾಸಿಗೆಯ ಮೇಲೆ ನಾಯಿ ಕುಳಿತುಕೊಂಡಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...