Homeಕ್ರೀಡೆಕ್ರಿಕೆಟ್ಸೂರ್ಯಕುಮಾರ್ ಯಾದವ್ ಆಕರ್ಷಕ ಶತಕ: ನ್ಯೂಜಿಲೆಂಡ್ ಎದುರು ಭಾರತದ ಬೃಹತ್ ಮೊತ್ತ

ಸೂರ್ಯಕುಮಾರ್ ಯಾದವ್ ಆಕರ್ಷಕ ಶತಕ: ನ್ಯೂಜಿಲೆಂಡ್ ಎದುರು ಭಾರತದ ಬೃಹತ್ ಮೊತ್ತ

- Advertisement -
- Advertisement -

ಚೆಂಡನ್ನು ಅಂಗಳದ ಮೂಲೆ ಮೂಲೆಗು ಅಟ್ಟಿದ್ದಲ್ಲದೆ, ಭರ್ಜರಿ ಸಿಕ್ಸರ್‌ಗಳ ಮೂಲಕ ಆಕರ್ಷಕ ಆಟವಾಡಿದ 360ಡಿಗ್ರಿ ಬ್ಯಾಟರ್ ಸೂರ್ಯಕುಮಾರ್ ಶತಕ ದಾಖಲಿಸುವ ಮೂಲಕ ನ್ಯೂಜಿಲೆಂಡ್ ಎದುರು ಭಾರತ 191/6 ರನ್‌ಗಳ ಬೃಹತ್ ಮೊತ್ತ ದಾಖಲಿಸಲು ನೆರವಾದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಭಾರತ ಆರಂಭಿಕ ಆಘಾತಕ್ಕೀಡಾಯಿತು. ಆನಂತರ ಬಂದ ಸೂರ್ಯಕುಮಾರ್ ಯಾದವ್ ಕೇವಲ 51 ಎಸೆತಗಳಲ್ಲಿ 111 ರನ್ ಗಳಿಸಿದ ಅವರು ತಮ್ಮ ಅಂತರಾಷ್ಟ್ರೀಯ ಟಿ20ಯ ಎರಡನೇ ಶತಕ ಗಳಿಸಿದರು. ಅವರ ಇಂದಿನ ಆಟದಲ್ಲಿ 11 ಬೌಂಡರಿ ಮತ್ತು 7 ಸಿಕ್ಸರ್‌ಗಳು ಸೇರಿದ್ದವು.

ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ರಿಷಬ್ ಪಂತ್ ವಿಫಲವಾದರು. ಅವರು ಕೇವಲ 6 ರನ್ ಗಳಿಸಿ ಔಟಾದರೆ, ಶ್ರೇಯಸ್ ಅಯ್ಯರ್ ಸಹ ಹಿಟ್ ವಿಕೆಟ್ ಆದರು. ಮತ್ತೊಬ್ಬ ಆರಂಭಿಕ ಆಟಗಾರ ಇಶಾನ್ ಕಿಷನ್ ಮಾತ್ರ 36 ರನ್ ಗಳಿಸಿದರು.

ಕೊನೆಯ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್‌ರವರಿಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಟಿಮ್ ಸೌತಿ ಎಸೆದ ಮೊದಲ ಎರಡು ಎಸೆತಗಳಲ್ಲಿ ಹಾರ್ದಿಕ್ ಪಾಂಡ್ಯ ತಲಾ ಎರಡು ರನ್ ಗಳಿಸಿದರೆ ಮೂರನೇ ಎಸೆತದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ನಂತರ ಕ್ರೀಸ್‌ಗೆ ಬಂದ ದೀಪಕ್ ಹೂಡ ಸಹ ಕ್ಯಾಚ್ ಕೊಟ್ಟು ಔಟಾದರು. ವಾಷಿಂಗ್ಟನ್ ಸುಂದರ್ ಸಹ ಕ್ಯಾಚಿತ್ತರು. ಹಾಗಾಗಿ ಟಿಮ್ ಸೌತಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಕೊನೆಯ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಕೇವಲ ಒಂದು ರನ್ ಗಳಿಸಿದರು. ಹಾಗಾಗಿ ಕೊನೆಯ ಓವರ್‌ನಲ್ಲಿ ಭಾರತಕ್ಕೆ ಕೇವಲ 5 ರನ್‌ಗಳು ಸಿಕ್ಕವು.

ಇದನ್ನೂ ಓದಿ: 360 ಡಿಗ್ರಿ ಬ್ಯಾಟರ್ ಸೂರ್ಯಕುಮಾರ್ ಯಾದವ್‌: ಟಿ20ಯಲ್ಲಿ ಮತ್ತೆರೆಡು ದಾಖಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...