Homeಕರ್ನಾಟಕಸಹೋದರ ಸಂಬಂಧಿಗಳ ಪ್ರೇಮ ಪ್ರಕರಣಕ್ಕೆ ‘ಲವ್‌ ಜಿಹಾದ್’ ಪಟ್ಟ ಕಟ್ಟಿದ ಬಿಜೆಪಿ ಪರ ಸಂಘಟನೆ ಮತ್ತು...

ಸಹೋದರ ಸಂಬಂಧಿಗಳ ಪ್ರೇಮ ಪ್ರಕರಣಕ್ಕೆ ‘ಲವ್‌ ಜಿಹಾದ್’ ಪಟ್ಟ ಕಟ್ಟಿದ ಬಿಜೆಪಿ ಪರ ಸಂಘಟನೆ ಮತ್ತು ಮಾಧ್ಯಮಗಳು

- Advertisement -
- Advertisement -

ತನ್ನ ಅಣ್ಣನ ಮಗನೊಂದಿಗೆ ಪರಾರಿಯಾಗಿ ಗದಗದಲ್ಲಿ ರಿಜಿಸ್ಟರ್‌ ಮದುವೆಯಾಗಿದ್ದ ಯುವತಿಯ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಬಿಜೆಪಿ ಬೆಂಬಲಿತ ಸಂಘಟನೆಯ ನಾಯಕ ಶರಣ್‌ ಪಂಪ್‌ವೆಲ್‌ ಸೇರಿದಂತೆ ಬಿಜೆಪಿ ಪರ ಮಾಧ್ಯಮಗಳು ಇದನ್ನು ಲವ್‌ ಜಿಹಾದ್‌ ಪ್ರಕರಣ ಎಂದು ಆರೋಪಿಸಿದ್ದವು.

ಮೂಲತಃ ಗದಗಿನವರಾದ ರೇಷ್ಮಾ ಎಂಬ ಯುವತಿ ತನ್ನ ನಿಶ್ಚಿತಾರ್ಥ ನಡೆದ ನಂತರ ಚಿನ್ನಾಭರಣ ಮತ್ತು ನಗದಿನೊಂದಿಗೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಬಿಜೆಪಿ ಬೆಂಬಲಿತ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್‌ ನಾಯಕ ಶರಣ್‌ ಪಂ‌ಪ್‌ವೆಲ್‌ ಅವರು ಇದು ಲವ್‌ ಜಿಹಾದ್‌ ಎಂದು ಆರೋಪಿಸಿ, ಯುವಕನನ್ನು ಬಂಧಿಸುಂತೆ ಒತ್ತಾಯಿಸಿದ್ದರು.

ಇದನ್ನೂ ಓದಿ: ಮುಸ್ಲಿಮರ ವಿರುದ್ದ ಹಿಂಸಾಚಾರಕ್ಕೆ ಕರೆ ನೀಡಿದ ಸಂಘಪರಿವಾರದ ನಾಯಕ ಶರಣ್ ಪಂಪ್‌ವೆಲ್

ಇದೀಗ ಪೊಲೀಸರು ಯುವತಿಯನ್ನು ಪತ್ತೆಹಚ್ಚಿದ್ದು, ಪ್ರಕರಣವನ್ನು ಭೇದಿಸಿದ್ದಾರೆ. ಯುವತಿಯ ತಾಯಿ ಮೂಲತಃ ಮುಸ್ಲಿಂ ಧರ್ಮೀಯರಾಗಿದ್ದರು. ಅವರು ಸುಮಾರು 22 ವರ್ಷಗಳ ಹಿಂದೆ ವೀರೇಶ್‌ ಎಂಬವರನ್ನು ಪ್ರೀತಿಸಿ ಮದುವೆಯಾಗಿ ‘ಯಶೋಧ’ ಎಂದು ಹೆಸರು ಬದಲಾಯಿಸಿದ್ದರು. ಆದರೆ ಅವರು ತನ್ನ ಸಂಬಂಧಿಕರೊಂದಿಗೆ ಒಡನಾಟ ಮುಂದುವರೆಸಿದ್ದರು. ಈ ವೇಳೆ ಅವರ ಮಗಳಾದ ರೇಷ್ಮಾ ಮತ್ತು ಅವರ ಸಹೋದರಿಯ ಮಗ ಅಕ್ಬರ್‌ ಪರಸ್ಪರ ಪ್ರೀತಿಸುತ್ತಿದ್ದರು.

ಆದರೆ, ರೇಷ್ಮಾ ಅವರ ಹೆತ್ತವರು ಬೇರೆ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿದ್ದರಿಂದ ಅವರು ತನ್ನ ಮನೆಯಿಂದ ನಾಪತ್ತೆಯಾಗಿದ್ದಾರೆ. ಮಂಗಳೂರಿನಿಂದ ತೆರಳಿದ ರೇಷ್ಮಾ ಗದಗಿನಲ್ಲಿ ಅಕ್ಬರ್‌ ಅವರನ್ನು ರಿಜಿಸ್ಟರ್‌ ಮದುವೆಯಾಗಿದ್ದಾರೆ.

ಈ ಮಧ್ಯೆ ಕೆಲವು ಮಾಧ್ಯಮಗಳು ಪ್ರಕರಣವನ್ನು ಬಳಸಿಕೊಂಡು ದ್ವೇಷ ಅಭಿಯಾನದಲ್ಲಿ ತೊಡಗಿದೆ. ಮುಸ್ಲಿಂ ಕುಟುಂಬ 22 ವರ್ಷದ ಹಿಂದೆ ನಡೆದ ಘಟನೆಗೆ ಸೇಡು ತೀರಿಸಿಕೊಂಡಿದೆ ಎಂದು ವರದಿ ಮಾಡಿದೆ. ಅಷ್ಟೇ ಅಲ್ಲದೆ ಯಾವುದೆ ದಾಖಲೆ ಇಲ್ಲದೆ ಲವ್‌ ಜಿಹಾದ್ ಎಂಬುವುದು ನಡೆಯುತ್ತಿದೆ ಎಂದು ಬರೆದುಕೊಂಡಿದೆ.

ಇದನ್ನೂ ಓದಿ: ವಿವಾದಾತ್ಮಕ ವಿಡಿಯೋ: ಗಲಭೆಗಳಲ್ಲಿ ಭಾಗಿಯಾದ ಆರೋಪಿಗೆ ʼಎಲ್ಲಾ ಕೇಸು ತೆಗೆದು ಹಾಕುತ್ತೇವೆʼ ಎಂದ ಗೃಹ ಸಚಿವರು!

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, “ಹಾಜಿರಾ, ವೀರೇಶ್‌ನನ್ನು ಪ್ರೀತಿಸಿ ಓಡಿಹೋಗಿ ಮದುವೆಯಾಗಿ ಯಶೋಧ ಆದಳು. ಯಶೋಧ (ಹಾಜಿರಾ) ಮಗಳು ರೇಷ್ಮಾ ತನ್ನ ತಾಯಿಯ ಅಕ್ಕನ ಮಗ ಅಕ್ಬರ್ ನನ್ನು ಪ್ರೀತಿಸಿ (ಓಡಿ ಹೋಗಿ) ಮದುವೆಯಾಗಿ ಮುಸ್ಲಿಂ ಕುಟುಂಬವನ್ನು ಸೇರಿಕೊಂಡಲು. ವೀರಾವೇಶದಿಂದ ಪತ್ರಿಕಾಗೋಷ್ಟಿ ನಡೆಸಿದ ಶರಣ್ ಪಂಪ್ ವೆಲ್ ಇದು ಲವ್ ಜಿಹಾದ್ ಎಂದು ಆರ್ಭಟಿಸಿ ನಗೆ ಪಾಟಲಾದರು” ಎಂದು ಹೇಳಿದ್ದಾರೆ.

“ರೇಷ್ಮಾ ತನ್ನ ತಾಯಿಯ ಅಕ್ಕನ ಮಗ ಅಕ್ಬರ್‌ನನ್ನು ಪ್ರೀತಿಸಿ ಮದುವೆಯಾಗುವುದು ಲವ್ ಜಿಹಾದ್ ಆಗುವುದಾದರೆ, ರೇಷ್ಮಾಳ ತಾಯಿ ಹಾಜಿರಾ ಅಂದು ವಿರೇಶ್‌ನನ್ನು ಪ್ರೀತಿಸಿ ಮದುವೆಯಾದನ್ನು ಏನಂತ ಕರೆಯುತ್ತೀರಿ ? ನಿಮ್ಮದೆ ಮಾದರಿಯ ಕೆಲವು ಮುಸ್ಲಿಮ್ ರಕ್ಷಣೆಯ ಸೋಗಿನ ಸಂಘಟನೆಗಳು ಆರೋಪಿಸುವಂತೆ ಅದು ಲವ್ ಕೇಸರಿಯಾ ?” ಎಂದು ಮುನೀರ್‌ ಪ್ರಶ್ನಿಸಿದ್ದಾರೆ.

“ಪದೇ ಪದೆ ಈ ರೀತಿ ಮಾತಾಡಿ ಹಾಸ್ಯಾಸ್ಪದರಾಗಲು ನಾಚಿಕೆಯಾಗುವುದಿಲ್ಲವೆ ಶರಣ್ ಪಂಪ್ ವೆಲ್? ನಿಮ್ಮ ಇಂತಹ ಬಾಲಿಶ ನಡೆಗಳು ಸಾಮಾಜದ ಮೇಲೆ ಬೀರುವ ಪರಿಣಾಮದ ಅರಿವಿದೆಯೆ ನಿಮಗೆ ? ನಿಮ್ಮದೇ ಲಾಜಿಕ್ ಪ್ರಕಾರ ಹಿಂದು ಹೆಣ್ಣುಮಕ್ಕಳು ಮುಸ್ಲಿಂ ಯುವಕರ ಗೆಳೆತನ, ಮದುವೆ ಆಗುವುದು ಅಪರಾಧ ಅಂತಾದರೆ, ಮುಸ್ಲಿಂ ಹೆಣ್ಣು ಮಕ್ಕಳು ಹಿಂದು ಯುವಕರ ಗೆಳೆತನ ಹೊಂದುವುದು ಮದುವೆಯಾಗುವುದನ್ನು ನೀವು ಯಾವ ರೀತಿ ನೋಡುತ್ತೀರಿ? ಎರಡನ್ನೂ ವಿರೋಧಿಸುತ್ತೀರ ? ಅಕ್ಬರ್ ರೇಷ್ಮಾಳನ್ನು ಮುದುವೆಯಾಗುವುದು ಅಪರಾಧ ಆದರೆ, ಆಕೆಯ ತಾಯಿ ಹಾಜಿರಾ ವಿರೇಶ್‌ನನ್ನು ಮದುವೆಯಾಗಿದ್ದೂ ಅಪರಾಧ ಆಗಬೇಕಲ್ಲವೆ? ಈ ಕುರಿತು ಕ್ಲಬ್ ಹೌಸ್ ನಲ್ಲಾದರು ಸರಿ, ಚರ್ಚೆ ಮಾಡಲು ಸಿದ್ದರಿದ್ದೀರಾ?” ಎಂದು ಶರಣ್ ಪಂಪ್‌ವೆಲ್‌ ಅವರಿಗೆ ಮುನೀರ್‌ ಕಾಟಿಪಳ್ಳ ಸವಾಲು ಎಸೆದಿದ್ದಾರೆ.

ಇದನ್ನೂ ಓದಿ: ಮಂಗಳೂರು: ಬಿಜೆಪಿ ವಿರುದ್ದ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಸಾಮಾಜಿಕ ಕಾರ್ಯಕರ್ತೆಗೆ ಗ್ಯಾಂಗ್‌ರೇಪ್‌ ಬೆದರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸರ್ವಾಧಿಕಾರಿಗಳ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾನ ಮಾಡಿ: ಖರ್ಗೆ, ರಾಹುಲ್‌ ಗಾಂಧಿ ಆಗ್ರಹ

0
ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಸರ್ವಾಧಿಕಾರಿಗಳ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾರರು ಮನೆಯಿಂದ ಹೊರಗೆ ಬಂದು ಮತ ಚಲಾಯಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ. ಇದು ಸಾಮಾನ್ಯ...