Homeಕರ್ನಾಟಕಮಂಗಳೂರು: ಬಿಜೆಪಿ ವಿರುದ್ದ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಸಾಮಾಜಿಕ ಕಾರ್ಯಕರ್ತೆಗೆ ಗ್ಯಾಂಗ್‌ರೇಪ್‌ ಬೆದರಿಕೆ

ಮಂಗಳೂರು: ಬಿಜೆಪಿ ವಿರುದ್ದ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಸಾಮಾಜಿಕ ಕಾರ್ಯಕರ್ತೆಗೆ ಗ್ಯಾಂಗ್‌ರೇಪ್‌ ಬೆದರಿಕೆ

- Advertisement -
- Advertisement -

ಬಿಜೆಪಿಯ ರಾಜಕೀಯ ನಡೆಯನ್ನು ವಿರೋಧಿಸಿ ಫೇಸ್‌‌ಬುಕ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತೆ ಪ್ರಮೀಳಾ ಎಂಬವರಿಗೆ ಗ್ಯಾಂಗ್‌ರೇಪ್ ಬೆದರಿಕೆಯನ್ನು ಹಾಕಿದ್ದು, ಈ ಕುರಿತು ಮಂಗಳೂರಿನ ಸೈಬರ್‌ ಕ್ರೈಂ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪ್ರಮೀಳಾ ಅವರು ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ಗ್ರಾಮ ಪಂಚಾಯತ್ ಚುನಾವಣೆ‌ ಕುರಿತಂತೆ ತಮ್ಮ ಅಭಿಪ್ರಾಯವೊಂದನ್ನು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಾಬುರಾವ್ ಸರ್ದೇಸಾಯಿ ಎಂಬ ಹೆಸರಲ್ಲಿರುವ ವ್ಯಕ್ತಿಯೊಬ್ಬ, “ಇಂತವರನ್ನು ಗ್ಯಾಂಗ್‌ ರೇಪ್ ಮಾಡಬೇಕು. ಎಲ್ಲಾ ಹಿಂದೂ ಅಭಿಮಾನಿಗಳದ್ದು ತಪ್ಪು ಅಭಿಪ್ರಾಯ, ತನ್ನ ಅಭಿಪ್ರಾಯ  ಮಾತ್ರ ನಿಜ ಎಂದು ಮಾತನಾಡುತ್ತಾಳೆ” ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.

ಇದನ್ನೂ ಓದಿ: ಮಧ್ಯ ಪ್ರದೇಶ: ಮಸೀದಿ ಮೇಲೆ ಕೇಸರಿ ಧ್ವಜ ನೆಟ್ಟು ಹಿಂಸಾಚಾರ ನಡೆಸಿದ ಸಂಘ ಪರಿವಾರದ ಬೆಂಬಲಿಗರು

ಮಹಿಳೆಯೊಬ್ಬರನ್ನು ಅವಾಚ್ಯವಾಗಿ ನಿಂದಿಸಿ ಅತ್ಯಾಚಾರ ಬೆದರಿಕೆ ಹಾಕಿರವುದಕ್ಕೆ ಫೇಸ್‌ಬುಕ್‌ನಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಶುಕ್ರವಾರ ಮಂಗಳೂರಿನ ಸೈಬರ್‌ ಕ್ರೈಂ ಠಾಣೆಯಲ್ಲಿ ಮಹಿಳಾ ನ್ಯಾಯವಾದಿಯೊಬ್ಬರ ನೇತೃತ್ವದಲ್ಲಿ, ಮಂಗಳೂರಿನ ವಿವಿಧ ಚಳವಳಿಗಳ ಮಹಿಳಾ ತಂಡದೊಂದಿಗೆ ಪ್ರಮೀಳಾ ಅವರು ದೂರು ನೀಡಿದ್ದಾರೆ.


ಇದನ್ನೂ ಓದಿ: ಇತಿಹಾಸ ಪುರುಷರ ಬಗ್ಗೆ ಸಂಘ ಪರಿವಾರ ಮಾಡಿದ ಚಾರಿತ್ಯವಧೆಯ ಇತಿಹಾಸ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...