ಸಂಘ ಪರಿವಾರದ

ಶಸ್ತ್ರಸಜ್ಜಿತವಾದ ಸಂಘ ಪರಿವಾರದ ಬೆಂಬಲಿಗರು ಮಂಗಳವಾರ ಮಧ್ಯಪ್ರದೇಶದ ಮಾಲ್ವಾ ಜಿಲ್ಲೆಯ ದೊರಾನಾ ಗ್ರಾಮದಲ್ಲಿ ಹಿಂಸಾಚಾರ ಮಾಡಿ, ಮಸೀದಿ, ಮನೆಗಳು ಮತ್ತು ಇತರ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಮತ್ತು ಆಭರಣಗಳನ್ನು ಲೂಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಹಿಂಸಾಚಾರದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದ್ದು, ವೈರಲ್ ಆಗದೆ.

ಸಂಘ ಪರಿವಾರದ ಗುಂಪುಗಳು ನಡೆಸಿದ ಈ ಹಿಂಸಾಚಾರದಿಂದ ಭೀತಿಗೊಳಗಾಗಿರುವ ಗ್ರಾಮಸ್ಥರು ತಮ್ಮ ಮನೆ ಮತ್ತು ವ್ಯವಹಾರಗಳನ್ನು ಬಿಟ್ಟು ಓಡಿಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ಕ್ಲಾರಿಅನ್.ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: ಇತಿಹಾಸ ಪುರುಷರ ಬಗ್ಗೆ ಸಂಘ ಪರಿವಾರ ಮಾಡಿದ ಚಾರಿತ್ಯವಧೆಯ ಇತಿಹಾಸ 

“ನಮ್ಮ ಗ್ರಾಮಕ್ಕೆ ಮಧ್ಯಾಹ್ನ 2 ರ ಸುಮಾರಿಗೆ 5,000 ಮಂದಿ ಗುಂಪು ಬಂದಿತ್ತು. ಅವರು ಮೂರರಿಂದ ನಾಲ್ಕು ಗಂಟೆಗಳ ಕಾಲ ಹಿಂಸಾಚಾರ ನಡೆಸಿದ್ದಾರೆ. ಹಿಂಸಾಚಾರಕ್ಕೆ ಹೆದರಿ ಎಲ್ಲಾ ಮುಸ್ಲಿಮರು ಗ್ರಾಮವನ್ನು ತೊರೆದಿದ್ದರು. ಮುಸ್ಲಿಮರನ್ನು ಪ್ರಚೋದಿಸಲು ಅವರು ಮಸೀದಿಯ ಮುಂದೆ ಡಿಜೆ ಹಾಕಿ ಕುಣಿದಿದ್ದಾರೆ. ಆದರೆ ಅಲ್ಲಿ ಯಾರೂ ಇಲ್ಲದ ಕಾರಣ ಯಾರೂ ಈ ಬಗ್ಗೆ ಏನನ್ನೂ ಹೇಳಲಿಲ್ಲ. ನಂತರ, ಅವರು ಅಲ್ಲಿನ ಇಸ್ಲಾಮಿಕ್ ಧ್ವಜಗಳನ್ನು ತೆಗೆದು ಅಲ್ಲಿ ಕೇಸರಿ ಧ್ವಜಗಳನ್ನು ಹಾರಿಸಿದ್ದಾರೆ” ಎಂದು ಡೋರಾನಾ ನಿವಾಸಿ ಮುಹಮ್ಮದ್ ಹಕೀಮ್ ತಿಳಿಸಿದ್ದಾರೆಂದು ಕ್ಲಾರಿಅನ್ ಇಂಡಿಯಾ ಬರೆದಿದೆ.

ಕೇವಲ 80 ಮುಸ್ಲಿಮರ ಮನೆಗಳನ್ನು ಹೊಂದಿರುವ ನಾವು ಈ ಗ್ರಾಮದಿಂದ ಓಡಿಹೋಗುವುದನ್ನು ಬಿಟ್ಟು ಅಲ್ಪಸಂಖ್ಯಾತ ಸಮುದಾಯಕ್ಕೆ ಬೇರೆ ಯಾವುದೆ ದಾರಿಯಿರಲಿಲ್ಲ ಎಂದು ಅವರು ಹೇಳಿದ್ದಾರೆ.

“ಅವರು ಗ್ರಾಮಸ್ಥರಲ್ಲಿ ಭೀತಿ ತುಂಬಿ, ದೊಣ್ಣೆಗಳಿಂದ ಓಡಿಸಿದರು, ಹಾಗೂ ಅವರ ಮೇಲೆ ಗುಂಡು ಹಾರಿಸಿದರು. ಈ ಗಲಭೆಕೋರರು ಮುಖ್ಯವಾಗಿ ಏಳೆಂಟು ದೊಡ್ಡ ಮನೆಗಳನ್ನು ಗುರಿಯಾಗಿಸಿಕೊಂಡಿದ್ದರಲ್ಲದೆ, ಎರಡು ಅಂಗಡಿಗಳನ್ನೂ ಲೂಟಿ ಮಾಡಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಈ ವಿಧ್ವಂಸಕ ಹಿಂಸಾಚಾರವನ್ನು ನಡೆಸಲಾಯಿತು” ಎಂದು ಹಕೀಮ್ ಹೇಳಿದ್ದಾರೆ.

ಇದನ್ನೂ ಓದಿ: ಸಂಘ ಪರಿವಾರಕ್ಕೆ ಎಚ್.ಎಸ್.ದೊರೆಸ್ವಾಮಿಯವರೇ ಟಾರ್ಗೆಟ್‌ ಏಕೆ?

ಹಿಂಸಾಚಾರದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ವಿಡಿಯೋಗಳಲ್ಲಿ ಗಲಭೆಕೋರರು ಜೈಶ್ರೀರಾಮ್ ಎಂದು ಘೋಷಣೆ ಹಾಕುತ್ತಾ, ಮಸೀದಿ ಮೇಲಿನ ಇಸ್ಲಾಮಿಕ್ ಧ್ವಜವನ್ನು ಕಿತ್ತು ಹಾಕಿ, ಕೇಸರಿ ಧ್ವಜವನ್ನು ನೆಡುತ್ತಿರುವುದು ಕಾಣಬಹುದಾಗಿದೆ.

ಘಟನೆಯು ಭಾರಿ ಆಕ್ರೋಶವನ್ನು ಉಂಟು ಮಾಡಿದ್ದು, ಸಂಸದ ಅಸಾದುದ್ದೀನ್ ಓವೈಸಿ ಘಟನೆಗೆ ರಾಜ್ಯದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಹೊಣೆಗಾರರನ್ನಾಗಿಸಿದ್ದಾರೆ.

ಇದನ್ನೂ ಓದಿ: ಹತಾಶ ಸಂಘ ಪರಿವಾರದಿಂದ ಕೋಮು ಧ್ರುವೀಕರಣಕ್ಕೆ ಷಡ್ಯಂತ್ರ

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಹಣವನ್ನು ಸಂಗ್ರಹಿಸಲು ಆಯೋಜಿಸಿದ ರ್‍ಯಾಲಿಯ ಭಾಗವೇ ವಿಧ್ವಂಸಕ ಕೃತ್ಯ ಎನ್ನಲಾಗಿದೆ. ಬೆಳಿಗ್ಗೆ 11 ಗಂಟೆಗೆ ದೊರಾನ ಗ್ರಾಮದಲ್ಲಿ ನಡೆದ ಬೈಕ್ ರ್‍ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ದೊರಾನಗೆ ಆಗಮಿಸುವಂತೆ ಕೋರಿ ಮಂಡ್ಸೂರಿನ ವಿಶ್ವ ಹಿಂದೂ ಪರಿಷತ್‌, ಭಜರಂಗದಳ, ಶ್ರೀ ರಾಷ್ಟ್ರೀಯ ಶಿವಶಕ್ತಿ ಸಂಗಟನ್, ಶ್ರೀ ರಾಷ್ಟ್ರೀಯ ರಜಪೂತ್ ಕೆರ್ಣೀ ಸೇನಾ ಮುಂತಾದ ಸಂಘಟನೆಗಳ ಹೆಸರಿನಲ್ಲಿ ಕೋಮು ಸಂದೇಶವನ್ನು ಪ್ರಸಾರ ಮಾಡಲಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ, ಧಾರ್ಮಿಕ ಸ್ಥಳವನ್ನು ಅಪವಿತ್ರಗೊಳಿಸಿರುವುದು ಮತ್ತು ವಿಧ್ವಂಸಕ ಕೃತ್ಯ ನಡೆಸಿದ್ದಕ್ಕಾಗಿ ಪೊಲೀಸರು ನಾಲ್ಕು ಎಫ್‌ಐಆರ್ ದಾಖಲಿಸಿದ್ದಾರೆ. ಮುಸ್ಲಿಮರ ವಿರುದ್ಧ ಸಂಘ ಪರಿವಾರದ ಗುಂಪುಗಳು ಕೂಡಾ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಅವರನ್ನು ನಿಂದಿಸಲಾಗಿದೆ ಮತ್ತು ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಸಂಘಪರಿವಾರದ ಕಾರ್ಯಕರ್ತರಿಂದ ಗೋ ಕಳ್ಳತನಕ್ಕೆ ಯತ್ನ ಆರೋಪ: ಮೂವರು ವಶಕ್ಕೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

1 COMMENT

LEAVE A REPLY

Please enter your comment!
Please enter your name here