- Advertisement -
- Advertisement -
ಪ್ರೊ.ಕಬಡ್ಡಿ ನಾಲ್ಕನೇ ಪಂದ್ಯದಲ್ಲಿ ತೆಲಗು ಟೈಟನ್ಸ್ ಮಣಿಸಿ ತಮಿಳು ತಲೈವಾಸ್ ಗೆಲುವಿನ ಅಭಿಯಾನ ಆರಂಭಿಸಿದರೆ ತೆಲಗು ಟೈಟನ್ಸ್ ಸತತ ಎರಡನೇ ಸೋಲು ಅನುಭವಿಸುವ ಮೂಲಕ ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸಿತು. 39-29 ಅಂಕಗಳಲ್ಲಿ 13 ಪಾಯಿಂಟ್ ಗಳಿಂದ ತಮಿಳು ತಲೈವಾಸ್ ಜಯಭೇರಿ ಬಾರಿಸಿತು.
ತಲೈವಾಸ್ ಪರವಾಗಿ ರಾಹುಲ್ ಚೌಧರಿ ರೈಡಿಂಗ್ ವಿಭಾಗದಲ್ಲಿ (10 ಪಾಯಿಂಟ್) ಮಿಂಚಿದರೆ ಮಂಜಿತ್ ಚಿಲ್ಲರ್ (06 ಟ್ಯಾಕಲ್ ಪಾಯಿಂಟ್) ಬಂಡೆಯಂತ ಡಿಫೆಂಡಿಂಗ್ ಮಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ ಮೊದಲಾರ್ಧದಲ್ಲಿಯೇ 20-10 ಅಂಕಗಳಲ್ಲಿ 10 ಪಾಯಿಂಟ್ಸ್ ಮುನ್ನಡೆ ಗಳಿಸಿದ್ದ ತಮಿಳು ತಲೈವಾಸ್ ಕೊನೆಯವರೆಗೂ ಪಂದ್ಯದ ಮೇಲೆ ಬಿಗಿ ಹಿಡಿತ ಹೊಂದಿತ್ತು.

ರಾಹುಲ್ ಚೌಧರಿ ಕಳೆದ ಸೀಸನ್ ನಲ್ಲಿ ತೆಲಗು ಟೈಟನ್ಸ್ ಪರ ಆಡಿದ್ದರು. ಈ ಬಾರಿ ತಮಿಳು ತಲೈವಾಸ್ ಪಾಲಾಗಿ ಉತ್ತಮ ಪ್ರದರ್ಶನ ತೋರಿದ್ದಾರೆ. ಇನ್ನು ಯು ಮುಂಬಾ ತಂಡದಿಂದ ತೆಲಗು ಟೈಟನ್ಸ್ ಗೆ ಬಂದಿದ್ದ ಬಹುಕೋಟಿ ಬೆಲೆಯ ಸಿದ್ಧಾರ್ಥ್ ದೇಸಾಯಿ ಇಂದು ಕೂಡ ವಿಫಲವಾದರು.


