Homeರಂಜನೆಕ್ರೀಡೆಪ್ರೊ.ಕಬಡ್ಡಿ: ಬೆಂಗಳೂರು ವಿರುದ್ಧ ಸೇಡು ತೀರಿಸಿಕೊಂಡ ಗುಜರಾತ್ ಫಾರ್ಚೂನ್ ಜೈಂಟ್ಸ್

ಪ್ರೊ.ಕಬಡ್ಡಿ: ಬೆಂಗಳೂರು ವಿರುದ್ಧ ಸೇಡು ತೀರಿಸಿಕೊಂಡ ಗುಜರಾತ್ ಫಾರ್ಚೂನ್ ಜೈಂಟ್ಸ್

- Advertisement -
- Advertisement -

ಪ್ರೊ.ಕಬಡ್ಡಿ ಮೂರನೇ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ಆರಂಭದಿಂದಲೂ ರೈಡಿಂಗ್ ಮತ್ತು ಡಿಫೆಂಡಿಂಗ್ ಎರಡು ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡುವ ಬೆಂಗಳೂರು ಬುಲ್ಸ್ ವಿರುದ್ಧ ಮೂಲಕ ಭಾರೀ ಅಂತರದಿಂದ (42-24) ಗೆಲುವು ಸಾಧಿಸಿತು. ಆ ಮೂಲಕ ಕಳೆದ ಬಾರಿ ಫೈನಲ್ ನಲ್ಲಿ ಸೋಲು ಕಾಣುವ ಮೂಲಕ ಪ್ರಶಸ್ತಿ ವಂಚಿತರಾಗಿದ್ದ ಗುಜರಾತ್ 18 ಅಂಕಗಳಿಂದ ಜಯಸಾಧಿಸಿ ಆ ಸೇಡು ತೀರಿಸಿಕೊಂಡು ಗೆಲುವಿನ ಆರಂಭ ಮಾಡಿತು.

ಇದೇ ವರ್ಷ ಜನವರಿ 5ರಂದು ನಡೆದಿದ್ದ ಪ್ರೊ.ಕಬಡ್ಡಿ ಸೀಸನ್ 6ರ ಫೈನಲ್ ನಲ್ಲಿ ಗುಜರಾತ್ ವಿರುದ್ಧ ಬೆಂಗಳೂರು ಆಕರ್ಷಕ ಜಯಭೇರಿ ಭಾರಿಸಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿದಿತ್ತು. ಆ ಪಂದ್ಯದಲ್ಲಿ ಪವನ್ ಕುಮಾರ್ ಒಬ್ಬರೇ ಅದ್ಭುತ ಆಟವಾಡಿದ್ದರು. ಆ ಸೋಲಿನ ಸೇಡನ್ನು ಇಂದು ಗುಜರಾತ್ ತೀರಿಸಿಕೊಂಡಿತು. ಗುಜರಾತ್ ತಂಡದ ಕೋಚ್ ಅಗ್ರೆಸ್ಸಿವ್ ಆಗಿ ಸಂಭ್ರಮಿಸುತ್ತಿದ್ದರು.

ಗುಜರಾತ್ ಆರಂಭದಿಂದಲಲೂ ಮುನ್ನಡೆ ಕಾಯ್ದುಕೊಂಡಿತ್ತು. ಮೊದಲಾರ್ಧದಲ್ಲೇ ಬೆಂಗಳೂರು ತಂಡ ಎರಡು ಬಾರಿ ಆಲೌಟ್ ಆಗುವ ಮೂಲಕ ಕಳಪೆ ಪ್ರದರ್ಶನ ತೋರಿತು. ಪಂದ್ಯದ ಮೊದಲಾರ್ಧ ಮುಗಿದಾಗ ಗುಜರಾತ್ 11 (21-10) ಅಂಕಗಳ ಮುನ್ನಡೆ ಸಾಧಿಸುವ ಮೂಲಕ ಗೆಲುವಿನತ್ತ ನಡೆದಿತ್ತು.

ದ್ವಿತೀಯಾರ್ಧದಲ್ಲಿ ಸೂಪರ್ ರೈಡ್ ಮಾಡುವ ಮೂಲಕ ಪವನ್ ಕುಮಾರ್ ಕಮಾಲ್ ಮಾಡಿದರು. ಒಂದೇ ರೈಡ್ ನಲ್ಲಿ ಬೋನಸ್ ಸೇರಿ ನಾಲ್ಕು ಪಾಯಿಂಟ್ ಗಳಿಸಿ ಕಮ್ ಬ್ಯಾಕ್ ಮಾಡುವ ಆಸೆ ಹುಟ್ಟಿಸಿದರಾದರೂ ನಂತರ ಸತತ ಎರಡು ಬಾರಿ ಔಟಾದರು. ಇಂದು ಬೆಂಗಳೂರು ನಾಯಕ ರೋಹಿತ್ ಕುಮಾರ್ ನಿರೀಕ್ಷೆಗೆ ತಕ್ಕ ಆಟವಾಡಲಿಲ್ಲ.. ರೈಡಿಂಗ್ ನಲ್ಲಿ ಪದೇ ಪದೇ ವಿಫಲವಾದರು.

ಪಂದ್ಯದಲ್ಲಿ ಗುಜರಾತ್ ಪರ ಸಚಿನ್ ಕೂಡ ಗುಜರಾತ್ ಪರವಾಗಿ ಸೂಪರ್ ರೈಡ್ ಮಾಡುವ ಮೂಲಕ ಗುಜರಾತ್ ಗೆಲುವನ್ನು ಖಾತ್ರಿಗೊಳಿಸಿದರು. ಗುಜರಾತ್ ನ ಸುನೀಲ್ ಕುಮಾರ್ 6 ಟ್ಯಾಕಲ್ ಪಾಯಿಂಟ್ಸ್ ಗಳಿಸುವ ಮೂಲಕ ಉತ್ತಮ ಡೆಫೆಂಡರ್ ಎನಿಸಿದರು.

ಬೆಂಗಳೂರು ಪರ ಪವನ್ ಕುಮಾರ್ ಇಂದು ಕೇವಲ 13 ರೈಡ್ ಮಾಡಲಷ್ಟೇ ಸಾಧ್ಯವಾಯಿತು. ಅದರಲ್ಲಿ 8 ಪಾಯಿಂಟ್ ಗಳಿಸಿದರು.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...