Homeಅಂಕಣಗಳುಸಾಹಿತಿಯ ವೈಯಕ್ತಿಕ ಅನುಭವಗಳನ್ನು ಸಾರ್ವತ್ರಿಕಗೊಳಿಸಿ ಪ್ರತಿಪಾದಿಸುವ ಅಪಾಯ

ಸಾಹಿತಿಯ ವೈಯಕ್ತಿಕ ಅನುಭವಗಳನ್ನು ಸಾರ್ವತ್ರಿಕಗೊಳಿಸಿ ಪ್ರತಿಪಾದಿಸುವ ಅಪಾಯ

- Advertisement -
- Advertisement -

ಹಲವು ದೇಶಗಳಲ್ಲಿ ಸರ್ವಾಧಿಕಾರಿ ಧೋರಣೆಯ ಸರ್ಕಾರಗಳು ತಲೆಎತ್ತುತ್ತಿರುವ ಹಿನ್ನೆಲೆಯಲ್ಲಿ, ಮತ್ತೆ ಹೊಸ ಓದುಗರನ್ನು ಕಂಡುಕೊಂಡು ಹೆಚ್ಚೆಚ್ಚು ಓದಲ್ಪಡುತ್ತಿರುವ ಲೇಖಕ ಜಾರ್ಜ್ ಆರ್ವೆಲ್. ಅವರ ಒಂದು ಪ್ರಖ್ಯಾತ ಪ್ರಬಂಧ ’ನಾನೇಕೆ ಬರೆಯುತ್ತೇನೆ’ವಿನಲ್ಲಿ ಬರಹಗಾರನ/ಬರೆವಣಿಗೆಯಲ್ಲಿ ಅಡಕವಾಗಿರುವ ರಾಜಕೀಯ ಉದ್ದೇಶದ ಬಗ್ಗೆ ಹೀಗೆ ಬರೆಯುತ್ತಾರೆ – “ರಾಜಕೀಯ ಉದ್ದೇಶ: ’ರಾಜಕೀಯ’ ಎನ್ನುವ ಪದವನ್ನು ಕಲ್ಪನೆಗೆ ಎಷ್ಟು ದೊಡ್ಡ ಮಟ್ಟದ ಅವಕಾಶ ಇದೆಯೋ ಆ ಅರ್ಥದಲ್ಲಿ ಬಳಸುತ್ತಿರುವುದು. ಜಗತ್ತನ್ನು ಒಂದು ನಿರ್ದಿಷ್ಟ ದಿಕ್ಕಿನೆಡೆಗೆ ಹೋಗವಂತೆ ಮಾಡುವ ಬಯಕೆ, ತಾವು ಯಾವ ರೀತಿಯ ಸಮಾಜವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೋ ಅದರೆಡೆಗೆ ಜನರ ಚಿಂತನೆಯನ್ನು ಬದಲಿಸುವಂತೆ ಮಾಡವುದು. ಮತ್ತೆ ಹೇಳುವುದಾದರೆ, ಯಾವ ಪುಸ್ತಕವೂ ರಾಜಕೀಯ ಪಕ್ಷಪಾತದಿಂದ ಮುಕ್ತಿ ಹೊಂದಿರುವುದಿಲ್ಲ. ಕಲೆಗೂ ರಾಜಕೀಯಕ್ಕೂ ಸುತರಾಂ ಸಂಬಂಧವಿಲ್ಲ ಎನ್ನುವ ಅಭಿಪ್ರಾಯವೇ ಒಂದು ರಾಜಕೀಯ ಧೋರಣೆ”.

ಹಲವು ಸಂದರ್ಭಗಳಲ್ಲಿ ನಡೆಯುವ ಘಟನೆಗಳಿಗೆ ನಿರ್ದಿಷ್ಟ ಜ್ಞಾನಶಾಖೆಗಳ ಚಿಂತಕರ ಪ್ರತಿಕ್ರಿಯೆ ಪಡೆಯುವ ಜೊತೆಗೆ ಆ ವಿದ್ಯಮಾನಗಳ ಬಗ್ಗೆ ಸಾಹಿತಿಗಳ ಅಭಿಪ್ರಾಯಗಳನ್ನೂ ಗುರುತಿಸಿ ಚರ್ಚಿಸುವುದು ಲೋಕಾರೂಢಿಯಾಗಿ ಬೆಳೆದುಬಂದಿದೆ. ಕರ್ನಾಟಕದ ಮಟ್ಟಿಗೆ ಈ ಲೋಕಾರೂಢಿಗೆ ಹೆಚ್ಚೇ ಮಹತ್ವ ಇದೆ. ಯಾವುದೇ ಸಾಮಾಜಿಕ ಮತ್ತು ರಾಜಕೀಯ ಬಿಕ್ಕಟ್ಟುಗಳ ಸಮಯದಲ್ಲಿ ಸಾಹಿತಿಗಳು ಪ್ರತಿಕ್ರಿಯಿಸಿರುವ, ಆ ಬಿಕ್ಕಟ್ಟುಗಳಿಗೆ ತಮ್ಮ ಅಧ್ಯಯನದ ಮಿತಿಯಲ್ಲಿ ಪರಿಹಾರ ನೀಡಲು ಪ್ರಯತ್ನಿಸಿರುವ ಹಲವು ಉದಾಹರಣೆಗಳನ್ನು ನೀಡಬಹುದು. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು, ಕರ್ನಾಟಕ ಏಕೀಕರಣ, ಗೋಕಾಕ್ ಚಳವಳಿ, ಕೋಮು ಸೌಹಾರ್ದ ಚಳವಳಿಗಳು, ದೇಶದೆಲ್ಲೆಡೆ ಹೆಚ್ಚುತ್ತಿರುವ ಬಹುತ್ವ ವಿರೋಧಿ ಸಂಘಟನೆಗಳ ವಿರುದ್ಧ ತಿಳಿವಳಿಕೆ – ಹೀಗೆ ಹಲವು ಸನ್ನಿವೇಶಗಳಲ್ಲಿ ಸಾಹಿತಿಗಳು ರಚನಾತ್ಮಕವಾಗಿ ಕೆಲಸ ಮಾಡಿರುವ ಉದಾಹರಣೆಗಳಿವೆ.

ಎಸ್ ಎಲ್ ಭೈರಪ್ಪ

ರಾಜಕೀಯ ಬಿಕ್ಕಟ್ಟುಗಳಷ್ಟೇ ಅಲ್ಲ, ಜಾತಿ ವ್ಯವಸ್ಥೆಯಂತಹ ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಪ್ರತಿರೋಧದ ಧ್ವನಿ ಎತ್ತಿದ, ಸೃಜನಾತ್ಮಕವಾಗಿ ಆ ಸಮಸ್ಯೆಗಳ ಬಗ್ಗೆ ಬರೆವಣಿಗೆ ಮಾಡಿರುವ ಹಲವು ಸಾಹಿತಿಗಳು ಇದ್ದಾರೆ. ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗಳ ಜೊತೆಗೆ ರಾಜಿ ಮಾಡಿಕೊಂಡು, ಪ್ರಭುತ್ವದ ಪ್ರಪೊಗಾಂಡಾಗಳ ಭಾಗವಾಗಿ ಸಾಹಿತ್ಯ ರಚಿಸುವ ಕವಿಪುಂಗವರೂ ಸಾಹಿತ್ಯ ಹುಟ್ಟಿದಾಗಿಲಿಂದಲೂ ಇದ್ದಾರೆ. ಈಗಲೂ ಮುಂದುವರೆದಿದ್ದಾರೆ. ಬರಹಗಾರ/ಬರೆವಣಿಗೆ ಈ ಕೆಲವು ಸ್ಥಾನಗಳನ್ನಷ್ಟೇ ಅಲ್ಲದೆ ಬೇರೆ ಸ್ಥಾನಗಳನ್ನೂ ಅಲಂಕರಿಸಿರಬಹುದು. ಒಟ್ಟಿನಲ್ಲಿ, ಹಲವು ಮಾಧ್ಯಮಗಳ ನಡುವೆ ಸಾಹಿತ್ಯ ಮತ್ತು ಸಾಹಿತಿಗಳು ಇಂದಿಗೂ ಪ್ರಭಾವಿಗಳಾಗಿ ಮುಂದುವರೆದಿರುವುದು, ಅವರ ಪ್ರತಿಕ್ರಿಯೆಗಳನ್ನು ಗಂಭೀರವಾಗಿ ಪರಿಗಣಿಸಿ ಚರ್ಚಿಸುವುದು ಮುಂದುವರೆದಿದೆ. ಸಾಹಿತ್ಯದ ರಾಜಕೀಯಕ್ಕೆ ಒಂದು ಮಟ್ಟದ ಪ್ರಭಾವ ಇದ್ದೇಇದೆ. ಈ ನಿಟ್ಟಿನಲ್ಲಿಯೇ ಕಳೆದ ವಾರ ಇಬ್ಬರು ಬರಹಗಾರರ ಟಿಪ್ಪಣಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾದವು.

ತಮ್ಮ ರೋಚಕ ಕಥನ ನಿರೂಪಣೆಯ ಕಾರಣಕ್ಕೆ ದೊಡ್ಡ ಪ್ರಮಾಣದ ಓದುಗರನ್ನು ದೊರಕಿಸಿಕೊಂಡಿರುವ ಕನ್ನಡದ ಜನಪ್ರಿಯ ಸಾಹಿತಿ ಎಸ್ ಎಲ್ ಭೈರಪ್ಪನವರ ಸಂದರ್ಶನದ ಒಂದು ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ’ಕೊರೊನಾ ಬಂದು ಒಳ್ಳೆಯದಾಯಿತು, ಕೆಲವರ ದರ್ಪ ಕಡಿಮೆಯಾಗಿದೆ- ಇನ್ನೂ ಕೆಲವರು ಇದು ಶಾಪ ಅನ್ನುವವರಿದ್ದಾರೆ, ನಿಮಗೆ ಏನನ್ನಿಸುತ್ತದೆ’ ಅನ್ನುವ ಪ್ರಶ್ನೆಗೆ, ಭೈರಪ್ಪನವರು ’ಹೂವು ತರಕಾರಿ ಬೆಲೆ ಏರಿಸಿ ನಮಗೆ ಮಾರುತ್ತಾರೆ. ಕೂಲಿ ಜಾಸ್ತಿ ಮಾಡಿರುವುದರಿಂದ ಮನೆಯಲ್ಲಿ ನಲ್ಲಿ ರಿಪೇರಿ ಮಾಡಿಸುವುದಕ್ಕೆ ಆಗ್ತಾ ಇಲ್ಲ. ಜನರ ಅಹಂಕಾರ ಇಳಿದಿದೆ ಅಂತೀರೋ ಹೆಚ್ಚಿದೆ ಅಂತೀರೋ’ (ಅವರ ಮಾತುಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ಬರೆಯಲಾಗಿದೆ) ಎನ್ನುವ ಬಹಳ ಅಸೂಕ್ಷ್ಮದ ಉತ್ತರ ಓದಿದವರಿಗೆ, ಭೈರಪ್ಪನವರ ಕೆಲವಾದರೂ ಪುಸ್ತಕಗಳನ್ನು ಓದಿಕೊಂಡಿರುವ ಮತ್ತು ಅವುಗಳಲ್ಲಿನ ’ರಾಜಕೀಯ ಅಜೆಂಡಾದ’ ಬಗ್ಗೆ ಸ್ವಲ್ಪ ಅರಿವಿದ್ದರೆ ಅಚ್ಚರಿ ಅಥವಾ ಅಘಾತ ತಂದಿರಲಾರದು.

ಅದು ಪ್ರಸ್ತುತ ಪ್ರಭುತ್ವದ ಅಸಮರ್ಥತೆಯನ್ನು ಮುಚ್ಚಿಹಾಕಲು ಅದರ ಸಮರ್ಥಕನೊಬ್ಬನ ರಾಜಕೀಯ ಎಂದು ತಟ್ಟನೆ ಹೊಳೆಯುತ್ತದೆ ಕೂಡ. ತಮ್ಮ ಕೆಲವು ವೈಯಕ್ತಿಕ ಸಮಸ್ಯೆಗಳನ್ನು ಸಾರ್ವತ್ರಿಕಗೊಳಿಸಿ ಬಡವರನ್ನು ಹಂಗಿಸುವ ಇಂತಹ ಮಾತುಗಳು ಅವರನ್ನು ಇಷ್ಟಪಟ್ಟು ಓದುವವರಲ್ಲಿ ಕೆಲವರಿಗಾದರೂ ಚಿಂತನೆಗೆ ಹಚ್ಚೀತೇ? ಕೊರೊನಾ ಪಿಡುಗಿನಿಂದ ಮತ್ತು ಆಡಳಿತ ವ್ಯವಸ್ಥೆಯ ಅಸಮರ್ಥತೆಯಿಂದ ಮೂರಾಬಟ್ಟೆಯಾಗಿರುವ ಬಡವರ ಬದುಕಿನ ಬಗ್ಗೆ ಒಂದು ಸಣ್ಣ ಮಟ್ಟದ ಸಂವೇದನೆ ಹೊಂದಿರದ ಬರಹಗಾರನೊಬ್ಬ ಇನ್ನೆಂತಹ ಒಳ್ಳೆಯ ಸಾಹಿತ್ಯ ರಚಿಸಿಯಾನು ಎಂಬ ಪ್ರಶ್ನೆ ಅವರ ನೆಚ್ಚಿನ ಓದುಗರಿಗೆ ಮೂಡಬಹುದೇ? ಬಹುಸಂಖ್ಯಾತ ಧಾರ್ಮಿಕವಾದದ ಸಾಮಾಜಿಕ ವ್ಯವಸ್ಥೆ ಮತ್ತು ’ಬಲಪಂಥೀಯ’ ರಾಜಕೀಯ ವ್ಯವಸ್ಥೆಯ ವಕ್ತಾರನಂತೆ ಸೃಷ್ಟಿಸಿರುವ ಅವರ ಸಾಹಿತ್ಯ, ಸಮ ಸಮಾಜವನ್ನು ಗೇಲಿ ಮಾಡುವ, ಪುರುಷಾಧಿಪತ್ಯವನ್ನು ವಿಜೃಂಭಿಸುವ ನಿಟ್ಟಿನಲ್ಲಿ ಇರುವುದರಿಂದ ಅದು ಸಮಾಜಕ್ಕೆ ಮಾರಕ ಎಂಬ ಅಂಶ ಗೊತ್ತಾಗಲು ಅವರ ಈ ಮೇಲಿನ ಮಾತುಗಳು ಪ್ರಚೋದಿಸಲಿವೆಯೇ? ಇಂತಹ ಪ್ರಶ್ನೆಗಳಿಗೆ, ನಿರೀಕ್ಷೆಗಳಿಗೆ ಉತ್ತರ ಸುಲಭವಲ್ಲ. ಸಾಹಿತಿಯು ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ಮತ್ತು ಜನಸಾಮಾನ್ಯರ ಒಳಿತಿನ ’ಒಟ್ಟಾರೆ’ ಪ್ರತಿನಿಧಿಯಾಗಬೇಕು ಎಂಬ ಅಪೇಕ್ಷೆ ಬರಹಗಾರರ ಬರೆಹಗಳಲ್ಲಿ ಪ್ರತಿಫಲಿಸದಿದ್ದರೆ ಓದುಗರು ಎಚ್ಚರಗೊಳ್ಳಬೇಕಾಗಿರುವುದಂತೂ ಅತ್ಯಗತ್ಯ.

ಲವ್ ಜಿಹಾದ್: ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆಯಡಿ ಮೊದಲ ಬಂಧನ

ಇದರ ಜೊತೆಗೆ, ಕನ್ನಡ ಕಥಾ ಸಾಹಿತ್ಯ ಪರಂಪರೆಯಲ್ಲಿ ಗುರುತಿಸಿಕೊಂಡಿರುವ ಅಬ್ದುಲ ರಶೀದ್ ಅವರ ಟಿಪ್ಪಣಿ ಕೂಡ ದೊಡ್ಡಮಟ್ಟದ ಚರ್ಚೆಗೆ ಕಾರಣವಾಯಿತು. ಲೇಖಕರೇ ಬರೆದುಕೊಂಡಂತೆ ಅವರು ಅಫ್ಘಾನಿಸ್ತಾನದ ಮತಾಂಧ ತಾಲಿಬಾನಿಗಳನ್ನು ಕ್ರಿಟಿಸೈಸ್ ಮಾಡಿ ಬರೆದಾಗ, ಕೆಲವರು ಈ ದೇಶದ ಬಹುಸಂಖ್ಯಾತರ ಕೋಮುವಾದದ ಬಗ್ಗೆ ಬರೆಯುವುದಕ್ಕೆ ಆಗ್ರಹಿಸಿರುವುದು ಅವರಿಗೆ ಕಿರಿಕಿರಿಯುಂಟುಮಾಡಿದೆ. ಮೊದಲೇ ಚರ್ಚಿಸಿದಂತೆ, ಸಾಹಿತಿಗಳಿಂದ ಜನರಿಗೆ ನಿರೀಕ್ಷೆ ಹೆಚ್ಚು. ಅವರು ಒಂದು ಮಟ್ಟದ ಪ್ರಭಾವಿಗಳಾಗಿರುವುದರಿಂದ ಸಮಸ್ಯೆಗಳಿಗೆ ಅವರು ನೀಡುವ ಪರಿಹಾರಗಳು ಹೆಚ್ಚು ಪ್ರಚಾರ ಪಡೆಯಬಲ್ಲವು ಎಂಬ ನಿರೀಕ್ಷೆಯೂ ಸೇರಿರುತ್ತದೆ.

ಮುಂದುವರೆದು ಲೇಖಕರು, ಯಾವುದೇ ಮತಧರ್ಮದ ಕೋಮುವಾದವನ್ನು ಸಮರ್ಥಿಸಿಕೊಳ್ಳದೆ ಹೋದರೂ, ಧರ್ಮದ ಕಾರಣಕ್ಕಾಗಲೀ ಅಥವಾ ಇನ್ಯಾವುದೇ ಕಾರಣಕ್ಕಾಗಲೀ ತಾವು ಹೆಚ್ಚು ತಾರತಮ್ಯ ಅನುಭವಿಸದೇ ಇರುವ ತಮ್ಮ ವೈಯಕ್ತಿಕ ಅನುಭವವನ್ನು ಸಾರ್ವತ್ರೀಕರಿಸುವ ಟೋನ್ ತಳೆಯುತ್ತಾರೆ. ಮುಲ್ಲಾಗಳನ್ನು ನಿರಾಕರಿಸಿ ಬದುಕಿದರೆ ಬದುಕೆಲ್ಲವೂ ಸುಂದರ ಎಂಬಂತಹ ನಿಲುವನ್ನು ಪ್ರಕಟಿಸುತ್ತಾರೆ. ಭಾರತದಲ್ಲಿ ಕೋಮುವಾದ ಮತ್ತು ಬಹುಧರ್ಮೀಯ ನ್ಯಾಶನಲಿಸಂ ಸೃಷ್ಟಿಸುತ್ತಿರುವ ಸಮಸ್ಯೆಯ ಬಗ್ಗೆ ಕುರುಡಾಗುತ್ತಾರೆ.

ಈ ದಿನಕ್ಕೂ ಹೆಸರು, ಬಣ್ಣ, ಜಾತಿ, ಲಿಂಗ ಮುಂತಾದ ಕಾರಣಗಳಿಗಾಗಿ ತಾರತಮ್ಯ ಅನುಭವಿಸಿಕೊಂಡು ಬರುತ್ತಿರುವವರಿಗೆ ರಶೀದ್ ಅವರ ಟಿಪ್ಪಣಿಯ ಮಾತುಗಳು ಸಾಂತ್ವನ ಹೇಳುವುದಿಲ್ಲ. ರಶೀದ್ ಅವರ ವೈಯಕ್ತಿಕ ಅನುಭವಗಳನ್ನು ಸಾರ್ವತ್ರಿಕಗೊಳಿಸಿರುವುದರ ವಿರುದ್ಧದ ಉದಾಹರಣೆಗಳನ್ನು ಹಲವು ನಿವೇದಿಸಿಕೊಂಡಿದ್ದಾರೆ ಕೂಡ. ಆದರೆ ಧಾರ್ಮಿಕತೆಯನ್ನು ಬಿಟ್ಟರೆ ಎಲ್ಲವೂ ಸುಲಲಿತ ಎನ್ನುವಂತೆ ಧ್ವನಿಸುವ ರಶೀದ್ ಅವರ ವಾದ, ಇಂದು ದೇಶದಾದ್ಯಂತ ಬೆಳೆಯುತ್ತಿರುವ ಏಕಮುಖದ ನ್ಯಾಷನಲಿಸಂಅನ್ನು ಮತ್ತು ಅದು ತಂದೊಡ್ಡುತ್ತಿರುವ ಅಪಾಯಗಳನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಆಗದಿರುವ ಕಥೆಯನ್ನು ಕೂಡ ಹೇಳುತ್ತಿದೆ. ಇವತ್ತು ಬಹುಸಂಖ್ಯಾತ ಧಾರ್ಮಿಕ ಪಂಗಡಕ್ಕೆ ಸೇರಿದ ಆದರೆ ಬೇರೆ ಹಲವು ಕಾರಣಗಳಿಗೆ ನಾಸ್ತಿಕರಾಗಿರುವವರು ಮತ್ತು ಧರ್ಮವನ್ನು-ಅದರ ಸುತ್ತಲಿನ ಆಚರಣೆಗಳನ್ನು ತ್ಯಜಿಸಿ ಆಧುನಿಕ ಪೋಷಾಕಿನಲ್ಲಿ ಬದುಕುತ್ತಿರುವವರು ಕೂಡ ಇಂದಿನ ಭಾರತದ ಬಲಪಂಥೀಯ ಹೈಪರ್ ನ್ಯಾಷಲಿಸಂ ಜೊತೆಗೆ ಗುರುತಿಸಿಕೊಳ್ಳುತ್ತಿದ್ದಾರೆ.

ನಮ್ಮ ವಿವೇಕ, ಧಾರ್ಮಿಕತೆಯನ್ನು ತೊರೆಯುವುದರಿಂದ ಇವತ್ತಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ಊಹೆಯನ್ನು ದಾಟಿ ಎಷ್ಟೋ ಮುಂದಕ್ಕೆ ಹೋಗಿದೆ. ಧಾರ್ಮಿಕತೆಯನ್ನು ನಿರಾಕರಿಸುವುದೊಂದೇ, ಹಲವು ಅಸ್ಮಿತೆಗಳನ್ನು ಹೊಂದಿರುವ ಜನರನ್ನು ಪ್ರೀತಿಯಿಂದ ಕಾಣಬೇಕಾದ, ಬಹುತ್ವವನ್ನು ಆಚರಿಸಬೇಕಾದ, ತಮಗಿಂತಲೂ ಕಡಿಮೆ ಸವಲತ್ತು ಉಳ್ಳವರ ಬಗ್ಗೆ ಸಂವೇದನೆ-ಆದರಗಳನ್ನು ಬೆಳೆಸಿಕೊಳ್ಳಬೇಕಾದ ಪಾಠಗಳನ್ನು ಕಲಿಸುವುದಿಲ್ಲ. ಬಹುತ್ವವನ್ನು ನಾಶಪಡಿಸುವುದರೊಂದಿಗೆ, ಈ ನೆಲಕ್ಕೆ ಒಂದು ಧರ್ಮದ ಮೂಲವನ್ನು ಆರೋಪಿಸಿ ಉಳಿದವರನ್ನು ಶತ್ರುಗಳಂತೆ ಕಲ್ಪಿಸಿ ಕಾಣುವಂತೆ ಪ್ರೇರೇಪಿಸುತ್ತಿರುವ ವಿದ್ಯಮಾನ ರಶೀದ್
ಅವರಿಗೆ ಏಕೆ ಕಾಣದೆ ಹೋಗಿದೆ ತಿಳಿಯುತ್ತಿಲ್ಲ. ಯಾವುದೇ ವ್ಯಕ್ತಿ ತನ್ನ ಧರ್ಮವನ್ನು ಆಚರಿಸಿಕೊಳ್ಳುವುದಕ್ಕೆ ಸಂವಿಧಾನ ಅವಕಾಶ ನೀಡಿರುವುದು ಇಲ್ಲಿ ಮುಖ್ಯವಾಗಬೇಕಲ್ಲವೇ? ಇಂತಹ ಸಮಯದಲ್ಲಿ ಲೇಖಕನ ಜವಾಬ್ದಾರಿ ಸಮಸ್ಯೆಯ ಮೂಲವನ್ನು ತಿಳಿದು ಅದಕ್ಕೆ ಸೃಜನಶೀಲ ಅಥವಾ ಸಂಶೋಧನಾತ್ಮಕ ಪರಿಹಾರಗಳನ್ನು ನೀಡುವುದಾಗಿರಬೇಕೇ ಹೊರತು ತನ್ನ ಅನುಭವಗಳೆ ಸತ್ಯ ಮತ್ತು ಅಂತಿಮ ಎಂಬ ನಂಬಿಕೆಯನ್ನು ಪ್ರತಿಪಾದಿಸುವುದಲ್ಲ. ತನ್ನ ಟಿಪ್ಪಣಿಯಲ್ಲಿ ಹಾಗೆ ಪ್ರತಿಪಾದಿಸಿಲ್ಲ ಎಂದು ಹೇಳಿಕೊಂಡರೂ, ಲೇಖಕನ ಮಾತುಗಳಿಗೆ ಹೆಚ್ಚಿನ ಜವಾಬ್ದಾರಿ ಇರಬೇಕಾಗುತ್ತದೆ.

ಅಬ್ದುಲ್ ರಶೀದ್

ತಾವು ಲಕ್ಷದ್ವೀಪದಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡಿರುವ ರಶೀದ್ ಅವರು, ಸದ್ಯ ಆ ದ್ವೀಪದಲ್ಲಿ ಉದ್ಭವಿಸಿರುವ ಸಮಸ್ಯೆಗೆ, ಕೆಲವು ಮಾಧ್ಯಮಗಳ ಮೇಲೆ ತಪ್ಪು ಹೊರಿಸಿ, ಎರಡೂ ಕಡೆಯ ತಾಲಿಬಾನಿಗಳಿಂದ ಸಮಸ್ಯೆ ಸೃಷ್ಟಿಯಾಗಿದೆಯೆಂದೂ, ಉಳಿದಂತೆ ದ್ವೀಪದಲ್ಲಿ ಎಲ್ಲವೂ ಸರಿಯಿದೆ ಎಂದು ಬಿಂಬಿಸಿಕೊಂಡಿರುವುದು ಕೂಡ, ವೈಯಕ್ತಿಕ ನೆಲೆಯಲ್ಲಿ ತಮಗಿರುವ ಸೌಖ್ಯವನ್ನು ಸಾರ್ವತ್ರಿಕಗೊಳಿಸುವ ಪ್ರಯತ್ನ ಅಲ್ಲವೇ? ದ್ವೀಪದಲ್ಲಿ ಪ್ರಫುಲ್ ಖೋಡಾ ಪಟೇಲ್ ಎಂಬ ಆಡಳಿತಾಧಿಕಾರಿ ಸೃಷ್ಟಿಸಿರುವ ಭೀತಿಗೆ ಅರ್ಥವೇ ಇಲ್ಲ ಎಂದು ಷರಾ ಬರೆದುಬಿಟ್ಟರೆ ಹಾಗಾದರೆ? ಈ ಹಿಂದೆ ಡಿಯು-ದಮನ್ ಮತ್ತು ದಾದ್ರಾ ಹವೇಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಅಶಾಂತಿಗೆ ಕಾರಣವಾಗಿದ್ದ ಪ್ರಫುಲ್ ಖೋಡಾ ಪಟೇಲ್ ತಾವು ಆಡಳಿತಾಧಿಕಾರಿಯಾಗಿ ಲಕ್ಷದ್ವೀಪಕ್ಕೆ ಬಂದ ತಕ್ಷಣವೇ ತೆಗೆದುಕೊಂಡ ನಿರ್ಧಾರಗಳು ಅಲ್ಲಿ ವಾಸಿಸುತ್ತಿದ್ದ ಜನರಿಗೆ ಮಾರಕವಾಗಿದ್ದವು ಎಂಬ ಅಂಶ ರಶೀದ್ ಅವರಿಗೆ ಗೊತ್ತಾಗದೇ ಹೋಯಿತೇ? ಮುಸ್ಲಿಂ ಬಹುಸಂಖ್ಯಾತ ದ್ವೀಪದಲ್ಲಿ ಹಿಂದುತ್ವ ಅಜೆಂಡಾವನ್ನು ಮೊಳಗಿಸುವ ಸಲುವಾಗಿ ಮಕ್ಕಳ ಬಿಸಿಯೂಟದಲ್ಲಿ ಮಾಂಸಾಹಾರವನ್ನು ತಡೆಯುವ ಆಡಳಿತ ವ್ಯವಸ್ಥೆಯ ಆದೇಶದಲ್ಲಿ ಇದ್ದ ಸಮಸ್ಯೆ, ಭಾರತದಲ್ಲಿ ಇದು ವ್ಯಾಪಕವಾಗಿರುವ ಸಮಸ್ಯೆಯ ಒಂದು ಭಾಗ ಎಂಬುದು ಲೇಖಕರಿಗೆ ತಿಳಿಯಲಿಲ್ಲವೇ? ಈಗ ಹೈಕೋರ್ಟ್ ಆ ಆದೇಶಕ್ಕೆ ತಡೆ ನೀಡಿದೆ. ಲಕ್ಷದ್ವೀಪದಲ್ಲಿ ಹಲವು ವರ್ಷಗಳಿಂದ ಬದುಕುತ್ತಿರುವ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇಂತಹ ಏಕಪಕ್ಷೀಯ ಮಾರಕ ನಿರ್ಧಾರಗಳ ಹಿಂದೆ ಇರುವ ಮನಸ್ಥಿತಿ ಇಂದು ದೇಶದಾದ್ಯಂತ ಇರುವ ಅಸಹನೆಯನ್ನು ಬಿಂಬಿಸುತ್ತಿದೆ ಎಂಬುದನ್ನು ಕಥೆಗಾರ ರಶೀದ್ ಹೇಗೆ ಗಮನಿಸದೆ ಹೋದರು?

ಇನ್ನು ಬೀಫ್ ಬಗ್ಗೆ ಇಡೀ ದೇಶದಲ್ಲಿ ಆಗುತ್ತಿರುವ ಗಲಾಟೆಗಳು, ಜೈಶ್ರೀರಾಮ್ ಘೋಷಣೆ ಹೇಳುವಂತೆ ಕೊಡುವ ಕಿರುಕುಳಗಳು, ಕರ್ನಾಟಕದಲ್ಲೇ ಹಲವೆಡೆ ’ಲವ್ ಜಿಹಾದ್’ ಎಂಬ ಕಪೋಲಕಲ್ಪಿತ ರಾಜಕೀಯ ಸಾಧನವನ್ನು ಬಳಸಿ ಎರಡು ಕೋಮಿನ ಪ್ರೇಮಿಗಳು ಇದ್ದ ಕಡೆಯೆಲ್ಲ ಮಾರಲ್ ಪೊಲೀಸಿಂಗ್ ಮಾಡುವವರು – ಹೀಗೆ ಅನಿಷ್ಟದ ಪಟ್ಟಿ ಹೇಳುತ್ತಾ ಹೋಗಬಹುದು. ಈ ಅನಿಷ್ಟಗಳಿಗೆ ಒಬ್ಬ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿ ಪ್ರತಿಕ್ರಿಯಿಸಬೇಕು ಎಂದು ಬಹುಸಂಖ್ಯಾತ ಕೋಮಿನವರು ನಿರೀಕ್ಷಿಸುವುದು ಕೂಡ ಸರಿಯಾದುದಲ್ಲ.
ಆದರೆ ತಮ್ಮ ಜೀವನ ಸುಗಮವಾಗಿರುವುದರಿಂದ, ತಮ್ಮ ರೀತಿಯಲ್ಲಿ ಬದುಕಿಬಿಟ್ಟರೆ ಎಲ್ಲವೂ ಸುಂದರ-ರಮಣೀಯ ಎಂಬಂತೆ ಜಗತ್ತನ್ನು ಅರ್ಥೈಸುವುದನ್ನ ಒಳ್ಳೆಯ ಬರಹಗಾರರಿಂದ ನಿರೀಕ್ಷಿಸುವುದಕ್ಕೆ ಕಷ್ಟವಾಗುತ್ತದೆ.

ಕೋಟಗಾನಹಳ್ಳಿ ರಾಮಯ್ಯನವರು ಮುಖ್ಯ ಸಂಪಾದಕರಾಗಿ ಕೆಲಸ ಮಾಡಿರುವ ’ತಲಪರಿಗೆ’ (ಜೀವನದಿಯ ಜಾಡು ಹಿಡಿದು – ಅಸ್ಪೃಶ್ಯಲೋಕದಲ್ಲೊಂದು ಪಯಣ) ಪುಸ್ತಕದಲ್ಲಿ, ಜಮ್ಮು ಮತ್ತು ಕಾಶ್ಮೀರ ಉಚ್ಚನ್ಯಾಯಾಲಯದಲ್ಲಿ ಮುಖ್ಯನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಜಸ್ಟಿಸ್ ಎಂ ರಾಮಕೃಷ್ಣ ಅವರ ಸಂದರ್ಶನವೊಂದಿದೆ. ತಾವು ನ್ಯಾಯಾಧೀಶರಾಗಿ ಕೆಲಸ ಮಾಡಿದ್ದರೂ ಮೈಸೂರಿನಲ್ಲಿ ತಮಗೆ ಬಾಡಿಗೆ ಮನೆ ಸಿಗದ ಬಗ್ಗೆ ಅವರು ಆ ಸಂದರ್ಶನದಲ್ಲಿ ಹೇಳಿಕೊಳ್ಳುತ್ತಾರೆ. ನ್ಯಾಯಾಧೀಶರಾದ ಮೇಲೆ ಒಂದು ಮಟ್ಟದ ಪ್ರಿವಿಲೆಜ್ ಇದ್ದೇ ಇರತ್ತೆ. ಹಾಗಿದ್ದರೂ ದಲಿತರೆಂಬ ಕಾರಣಕ್ಕೆ ಮನೆ ಸಿಗುವುದು ಅವರಿಗೆ ಕಷ್ಟವಾಗಿದ್ದರೆ, ಅಂತಹ ಯಾವುದೇ ಪ್ರಿವಿಲೆಜ್ ಇಲ್ಲದ ಜನರಿಗೆ ದಿನನಿತ್ಯ ಜೀವನದಲ್ಲಿ ಉಂಟಾಗುವ ತಾರತಮ್ಯಗಳನ್ನು ಅಂದಾಜು ಮಾಡುವುದಕ್ಕೆ ಕಷ್ಟವಾಗಬಾರದು. ಅದು ಈ ದಿನಕ್ಕೂ ಅವ್ಯಾಹತವಾಗಿ ಮುಂದುವರೆದಿರುವುದರಲ್ಲಿ ಕೂಡ ಮುಚ್ಚುಮರೆಯೇನಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಪ್ರಿವಿಲೆಜ್ ಬದುಕಿನಿಂದ ಸಿಕ್ಕಿರುವ ಸೌಲಭ್ಯ ಮತ್ತು ಶೋಷಣೆರಹಿತ ಬದುಕನ್ನು ಸಾರ್ವತ್ರಿಕಗೊಳಿಸುವುದು ಎಷ್ಟು ದೊಡ್ಡ ಸಮಸ್ಯೆಯಾದೀತಲ್ಲವೇ? ಎಲ್ಲರಿಗೂ ತಮ್ಮ ತಿಳಿವಳಿಕೆಗಾಗಿ ಹಲವು ಮಾರ್ಗಗಳು ಇದ್ದೇ ಇರುತ್ತವೆ. ಆದರೆ ಶೋಷಣೆಯ ಪಿರಮಿಡ್‌ನಲ್ಲಿ ತಮಗಿಂತಲೂ ಕೆಳಗಿರುವ ವ್ಯಕ್ತಿಗಳ ಅನುಭವಗಳನ್ನು ಅಲ್ಲಗಳಯುವ, ಅವರ ಸಮಸ್ಯೆಗಳನ್ನು ನಿರಾಕರಿಸುವ, ಅಧಿಕಾರ ಕೇಂದ್ರಗಳ ಪ್ರತಿಪಾದನೆಯನ್ನು ಪ್ರತಿಫಲಿಸುವ ಓದು ಬರಹ ಸಾಮಾಜಿಕವಾಗಿ ಒಳಿತಿನ ಫಲ ನೀಡುವುದಿಲ್ಲ.


ಇದನ್ನೂ ಓದಿ: ಇತಿಹಾಸ ಮತ್ತು ಪ್ರಸ್ತುತದ ಹಲವು ’ಹಾರರ್‌’ಗಳ ನಡುವೆ ಬದುಕುತ್ತಿರುವ ನಾವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...