Homeಮುಖಪುಟಗಾಂಧೀಜಿಗೆ ನಿಂದಿಸಿದ ಕಾಳಿಚರಣ್‌‌ ಬಿಡುಗಡೆಗಾಗಿ ಪ್ರತಿಭಟನೆ

ಗಾಂಧೀಜಿಗೆ ನಿಂದಿಸಿದ ಕಾಳಿಚರಣ್‌‌ ಬಿಡುಗಡೆಗಾಗಿ ಪ್ರತಿಭಟನೆ

- Advertisement -
- Advertisement -

ಚತ್ತೀಸ್‌ಘಡದ ರಾಯ್‌ಪುರದಲ್ಲಿ ಕಳೆದ ವಾರ ನಡೆದ ಎರಡು ದಿನಗಳ ‘ಧರಮ್ ಸಂಸದ್’ನಲ್ಲಿ, ಮಹಾತ್ಮ ಗಾಂಧಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ಹೊಗಳಿದ ಬಲಪಂಥೀಯ ಸ್ವಾಮಿ ಕಾಳಿಚರಣ್‌ ಮಹಾರಾಜನನ್ನು ಬಂಧಿಸಲಾಗಿದ್ದು, ಆರೋಪಿಯ ಪರವಾಗಿ ಪ್ರತಿಭಟನೆ ನಡೆಸಲಾಗಿದೆ.

ಗುರುಗ್ರಾಮ್‌ನಲ್ಲಿ ಬಲಪಂಥೀಯ ಗುಂಪುಗಳು ಆರೋಪಿ ಕಾಳಿಚರಣ್‌ ಬಂಧನವನ್ನು ವಿರೋಧಿಸಿ ಪ್ರತಿಭಟಿಸಿದ್ದಾರೆ. ಆರೋಪಿಯನ್ನು ರಾಯ್‌ಪುರ ಪೊಲೀಸರು ಗುರುವಾರ ಬಂಧಿಸಿದ್ದಾರೆ. ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸುವಂತೆ ಭಾಷಣ ಮಾಡಿದ್ದರಿಂದ ಕಾಳಿಚರಣ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬಲಪಂಥೀಯ ಗುಂಪಿನ ಕಾರ್ಯಕರ್ತರು ಕಾಳಿಚರಣ್‌ನನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. “ನಾಥುರಾಮ್ ಗೋಡ್ಸೆ ಅಮರ್ ರಹೇ” (ಗೋಡ್ಸೆ ಚುರಾಯುವಾಗಲಿ), “ದೇಶ್ ಕೆ ಗದ್ದಾರೋ ಕೋ ಗೋಲಿ ಮಾರೋ ಸಾಲೋ ಕೋ” (ದೇಶದ್ರೋಹಿಗಳಿಗೆ ಗುಂಡು ಹೊಡೆಯಿರಿ) ಎಂಬ ಘೋಷಣೆಗಳನ್ನು ಕೂಗಿದ್ದಾರೆ.

ಡಿಸೆಂಬರ್ 26ರಂದು ಕಾಳಿಚರಣ್ ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದು ವಿವಾದಕ್ಕೆ ಕಾರಣವಾಗಿತ್ತು. ರಾಷ್ಟ್ರಪಿತನನ್ನು ಕೊಂದ ನಾಥುರಾಮ್ ಗೋಡ್ಸೆಯನ್ನು ಶ್ಲಾಘಿಸಲಾಗಿತ್ತು. ಹೀಗಾಗಿ ರಾಯ್‌ಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ರಾಯ್‌ಪುರದ ಮಾಜಿ ಮೇಯರ್ ಪ್ರಮೋದ್ ದುಬೆ ಅವರ ದೂರಿನ ಮೇರೆಗೆ ರಾಯ್‌ಪುರದ ತಿಕ್ರಪಾರಾ ಪೊಲೀಸ್ ಠಾಣೆಯಲ್ಲಿ ಕಾಳಿಚರಣ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಕಾಳಿಚರಣ್‌‌ ಪರ ನಿಂತಿರುವ ಗುಂಪು ಗುರ್ಗಾಂವ್‌ನ ಬಯಲು ಜಾಗಗಳಲ್ಲಿ ನಮಾಜ್ ಮಾಡದಂತೆ ಪ್ರತಿಭಟನೆಗಳನ್ನು ನಡೆಸುತ್ತಿದೆ. “ನಾಥೂರಾಂ ಗೋಡ್ಸೆ ಅಮರ್ ರಹೇ” ಘೋಷಣೆಗಳನ್ನು ಕೂಗುತ್ತಿದೆ.

ಹಿಂದುತ್ವ ಮುಖಂಡ ಕಾಳಿಚರಣ್ ಬಿಡುಗಡೆಗೆ ಒತ್ತಾಯಿಸಿ ಜ್ಞಾಪಕ ಪತ್ರ ಸಲ್ಲಿಸಲು ಗುಂಪು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದೆ. ಸಂಸದ ಅಸಾದುದ್ದೀನ್ ಓವೈಸಿ ಮಾತನಾಡಿದಾಗ ಬಂಧಿಸುವ ಯಾವುದೇ ಪೊಲೀಸ್ ಅಧಿಕಾರಿಗೆ 22 ಲಕ್ಷ ರೂ. ಬಹುಮಾನವನ್ನು ನೀಡಲಾಗುವುದು ಎಂದು ಗುಂಪು ಘೋಷಿಸಿದೆ.

ಕಾಳಿಚರಣ್ ಪ್ರಚೋದನಕಾರಿ ಭಾಷಣ ಮಾಡುತ್ತಿರುವುದು ಇದೇ ಮೊದಲಲ್ಲ. ಡಿಸೆಂಬರ್ 19ರಂದು ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನು.


ಇದನ್ನೂ ಓದಿರಿ: ‘ಪಶ್ಚಾತ್ತಾಪವಿಲ್ಲ’: ಮಹಾತ್ಮ ಗಾಂಧಿ ಬಗ್ಗೆ ನೀಡಿದ್ದ ಅವಹೇಳನಕಾರಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಾಳಿಚರಣ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇವರಿಗೆ ಸರಕಾರದ ಸಂಪೂರ್ಣ ಬೆಂಬಲ ಇದೆ ಎಂಬುದು ಸ್ಪಷ್ಟ. ಯೋಗೀ ಯ ವಿರೋಧ ಬರೆದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಸೂಚನೆ ಇರುವಾಗ ಇವರ ವಿರುದ್ಧ ಕ್ರಮ ಇಲ್ಲವೇ?

LEAVE A REPLY

Please enter your comment!
Please enter your name here

- Advertisment -

Must Read

ಸೊರೇನ್ ಜಾಮೀನು ಅರ್ಜಿಗೆ ಉತ್ತರಿಸಲು ಇಡಿಗೆ ಕಾಲಾವಕಾಶ ನೀಡಿದ ಕೋರ್ಟ್‌

0
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಜಾಮೀನು ಅರ್ಜಿಗೆ ಉತ್ತರಿಸಲು ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇನ್ನೂ ಒಂದು ವಾರ ಕಾಲಾವಕಾಶ ನೀಡಿದೆ. ನ್ಯಾಯಾಲಯವು ಪ್ರಕರಣದ ಮುಂದಿನ...