Homeಕರ್ನಾಟಕಉಡುಪಿ ಸರ್ಕಾರಿ ಪಿಯು ಬಾಲಕಿಯರ ಕಾಲೇಜಿನಲ್ಲಿ ಸ್ಕಾರ್ಫ್ ಹಾಕದಂತೆ ನಿರ್ಬಂಧ; ವಿದ್ಯಾರ್ಥಿನಿಯರ ಪ್ರತಿಭಟನೆ

ಉಡುಪಿ ಸರ್ಕಾರಿ ಪಿಯು ಬಾಲಕಿಯರ ಕಾಲೇಜಿನಲ್ಲಿ ಸ್ಕಾರ್ಫ್ ಹಾಕದಂತೆ ನಿರ್ಬಂಧ; ವಿದ್ಯಾರ್ಥಿನಿಯರ ಪ್ರತಿಭಟನೆ

- Advertisement -
- Advertisement -

ಉಡುಪಿ ಜಿಲ್ಲೆಯ ಸರಕಾರಿ ಪಿಯು ಬಾಲಕಿಯರ ಕಾಲೇಜಿನಲ್ಲಿ ತಲೆಗೆ ಸ್ಕಾರ್ಫ್ ಹಾಕದಂತೆ ನಿರ್ಬಂಧ ಹೇರಿರುವುದರ ವಿರುದ್ಧ ಆರು ವಿದ್ಯಾರ್ಥಿನಿಯರು ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಲೇಜಿನಲ್ಲಿ ತಮ್ಮ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದರೆ.

ಈ ಬಗ್ಗೆ ವಿಡಿಯೊವೊಂದರಲ್ಲಿ ಮಾತನಾಡಿರುವ ಪ್ರತಿಭಟನಾ ನಿರತ ವಿದ್ಯಾರ್ಥಿನಿಯೊಬ್ಬರು, “ಕಳೆದ ವರ್ಷ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು ತಲೆಗೆ ಸ್ಕಾರ್ಫ್ ಹಾಕಿಕೊಂಡು ಬರುತ್ತಿದ್ದರು. ಆದರೆ ನಮಗೆ ಅವಕಾಶ ನೀಡುತ್ತಿಲ್ಲ. ನಮ್ಮ ಮೇಲೆ ತುಂಬಾ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅದರ ಬಗ್ಗೆ ಹೇಳಲು ತುಂಬಾ ಇದೆ. ಆದರೆ ನಮಗೆ ನಮ್ಮ ಹಕ್ಕುಗಳು ಬೇಕು. ತಲೆಗೆ ಸ್ಕಾರ್ಫ್ ಹಾಕಲು ಅವಕಾಶ ನೀಡಿದರೆ ಸಾಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ:ಲಿಂಗ ಸಮಾನತೆಯತ್ತ ಹೆಜ್ಜೆ: ಕೇರಳದ ಶಾಲೆಯಲ್ಲಿ ಹೆಣ್ಣು-ಗಂಡು ಮಕ್ಕಳೆಲ್ಲರಿಗೂ ಒಂದೇ ಥರದ ಸಮವಸ್ತ್ರ

“ಕಳೆದ ಮೂರು ದಿನದಿಂದ ಹಿಜಾಬ್ ಹಾಕಿ ಬರುತ್ತಿದ್ದೇವೆ. ನಮಗೆ ಹಾಜರಾತಿ ನೀಡುತ್ತಿಲ್ಲ ಮತ್ತು ತರಗತಿಗೆ ಪ್ರವೇಶ ಕೊಡುತ್ತಿಲ್ಲ. ಹಾಗಾಗಿ ಇಲ್ಲೇ ಮೂರು ದಿನದಿಂದ ಕೂತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಮತ್ತೊಬ್ಬ ವಿದ್ಯಾರ್ಥಿನಿ, “ಹೆತ್ತವರನ್ನು ಕರೆದುಕೊಂಡು ಬನ್ನಿ ಎಂದು ಹೇಳುತ್ತಿದ್ದಾರೆ. ಆದರೆ ಹೆತ್ತವರು ಕಳೆದ ಮೂರು ದಿನದಿಂದ ಬರುತ್ತಿದ್ದರೂ, ಅವರೊಂದಿಗೆ ಮಾತನಾಡುತ್ತಿಲ್ಲ. ನಮ್ಮ ಹೆತ್ತವರು ತಮ್ಮ ಕೆಲಸವನ್ನು ಬಿಟ್ಟು ಇಲ್ಲಿಗೆ ಬರುತ್ತಿದ್ದರೂ, ಅವರೊಂದಿಗೆ ಮಾತನಾಡುತ್ತಿಲ್ಲ” ಎಂದು ದೂರಿದ್ದಾರೆ.

“ನಾವು ಬುರ್ಖಾವನ್ನು ಕ್ಯಾಂಪಸ್‌ನೊಳಗೆ ಬಿಡುತ್ತೇವೆ. ಆದರೆ ತರಗತಿಗೆ ಹಾಜರಾಗಲು ಅವರು ಸ್ಕಾರ್ಫ್‌ ಅನ್ನು ತೆಗೆದುಹಾಕಬೇಕಾಗುತ್ತದೆ” ಎಂದು ಪ್ರಾಂಶುಪಾಲ ರುದ್ರೇಗೌಡ ಹೇಳಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ:ಬಿಹಾರ: ಯುವ ಪತ್ರಕರ್ತನ ಅಪಹರಿಸಿ-ಕೊಲೆ; ಮಹಿಳೆ ಸೇರಿ 6 ಜನರ ಬಂಧನ

ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ ಅವರನ್ನು ನಾನುಗೌರಿ.ಕಾಂ ಸಂಪರ್ಕಿಸಿತ್ತಾದರೂ, ಅವರು ಸಭೆಯಲ್ಲಿ ಇರುವುದಾಗಿ ತಿಳಿಸಿದ್ದಾರೆ. ಅವರು ಮತ್ತೇ ಸಂಪರ್ಕಕ್ಕೆ ಸಿಕ್ಕಿದ ಕೂಡಲೆ ಅವರ ಹೇಳಿಕೆಯನ್ನು ನಾವು ಅಪ್‌‌ಲೋಡ್‌ ಮಾಡುತ್ತೇವೆ.

ವಿವಾದದ ಬಗ್ಗೆ ಬಗ್ಗೆ ನಾನುಗೌರಿ.ಕಾಂ ಜೊತೆ ಸಾಮಾಜಿಕ ಕಾರ್ಯಕರ್ತರೊಬ್ಬರು, “ವಿದ್ಯಾರ್ಥಿನಿಯರು ತಲೆಗೆ ಶಾಲು ಸುತ್ತಿಕೊಳ್ಳುವುದರ ಬಗ್ಗೆ ಕೇಳುತ್ತಿದ್ದಾರೆ. ಅದು ಅವರ ಧಾರ್ಮಿಕ ಆಚರಣೆ, ಅದರಲ್ಲಿ ತಪ್ಪೇನಿದೆ. ಸಂವಿಧಾನದಲ್ಲಿ ಧಾರ್ಮಿಕ ಆಚರಣೆಯನ್ನು ಮೂಲಭೂತ ಹಕ್ಕಾಗಿ ನೀಡಲಾಗಿದೆ” ಎಂದು ಹೇಳಿದ್ದಾರೆ.

“ಈ ಹಿಂದೆ ಯಾವುದೇ ವಿದ್ಯಾರ್ಥಿನಿಯರು ತಲೆಗೆ ಸ್ಕಾರ್ಫ್ ಹಾಕಿ ಬರುತ್ತಿರಲಿಲ್ಲ ಎಂಬ ವಾದವಿದೆ. ಆದರೆ ಅವರು ಧರಿಸುತ್ತಿರಲಿಲ್ಲ ಎಂದರೆ, ಈಗಿರುವ ವಿದ್ಯಾರ್ಥಿನಿಯರು ತಮ್ಮ ಧಾರ್ಮಿಕ ಆಚರಣೆಯ ಹಕ್ಕುಗಳನ್ನು ಕೇಳಬಾರದೇ? ಹೀಗೆಯೆ ಬೇರೆ ವಿದ್ಯಾರ್ಥಿನಿಯರು ಅವರ ಧಾರ್ಮಿಕ ಆಚರಣೆಗಳಾದ ಕೈಗೆ ಬಳೆ ಧರಿಸುವುದು, ಹಣೆಗೆ ಕುಂಕುಮ ಹಚ್ಚುವುದು, ತಲೆಗೆ ಹೂವು ಮುಡಿದುಕೊಳ್ಳುವುದನ್ನು ನಿರಾಕರಿಸಲು ಆಗುತ್ತದೆಯೆ? ಅಥವಾ ಅವರು ಹೊಸದಾಗಿ ಈ ಆಚರಣೆಯನ್ನು ಶುರು ಮಾಡಿದರೆ ತಪ್ಪು ಎನ್ನಲು ಸಾಧ್ಯವೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಎಲೆಮರೆಯಿಂದ: ಬ್ಯಾರಿ ಮಹಿಳಾ ಶಿಕ್ಷಣ ಸಾಗಿ ಬಂದ ಕವಲುದಾರಿ..!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...