Homeಅಂಕಣಗಳುಎಲೆಮರೆಯಿಂದ: ಬ್ಯಾರಿ ಮಹಿಳಾ ಶಿಕ್ಷಣ ಸಾಗಿ ಬಂದ ಕವಲುದಾರಿ..

ಎಲೆಮರೆಯಿಂದ: ಬ್ಯಾರಿ ಮಹಿಳಾ ಶಿಕ್ಷಣ ಸಾಗಿ ಬಂದ ಕವಲುದಾರಿ..

- Advertisement -
- Advertisement -

ಇತ್ತೀಚೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ’ಮರಕೊಗಾವಾತೊ ಬ್ಯಾರಿಙ’ (ಮರೆಯಲಾಗದ ಬ್ಯಾರಿಗಳು) ಎಂಬ ಗ್ರಂಥವನ್ನು ಹೊರತರುವ ನಿಟ್ಟಿನಲ್ಲಿ ಗತಿಸಿದ ಬ್ಯಾರಿ ಸಾಧಕರ ಕುರಿತಾದ ಬರಹಗಳನ್ನು ಆಹ್ವಾನಿಸಿತ್ತು. ಅಗಲಿದ ಮಹನೀಯರ ಪೈಕಿ ಬ್ಯಾರಿ ಮಹಿಳಾ ಸಾಧಕಿಯರನ್ನು ಗುರುತಿಸುವುದು ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ. ಕಾರಣ ಅಂದು ಬ್ಯಾರಿ ಮಹಿಳೆಯರ ಪ್ರತಿಭೆ ನಾಲ್ಕು ಗೋಡೆಗಳ ಮಧ್ಯೆ ಬಚ್ಚಿಟ್ಟುಕೊಂಡು ಉರಿವ ಒಲೆಯ ಮುಂದೆ ಉರಿದು ಬೂದಿಯಾಗುತ್ತಿತ್ತು.

ಪಟ್ಟಿಗೆ ಪಟ್ಟಿ ಬೆಳೆಯುತ್ತಾ ಹೋದ ಬ್ಯಾರಿ ಪುರುಷರ ಮಧ್ಯೆ ಬೆರಳೆಣಿಕೆಯ ಬ್ಯಾರಿ ಮಹಿಳೆಯರ ಹೆಸರು ಮಾತ್ರ ಸೇರಿಕೊಂಡಿತ್ತು. ಅದರಲ್ಲಿದ್ದವರು ನಾಟಿ ವೈದ್ಯೆ ಮತ್ತು ಸೂಲಗಿತ್ತಿಯರು ಮಾತ್ರ. ಎಲ್ಲಾದರೂ ಅಪರೂಪದ ಮಹಿಳಾ ಸಾಧಕಿಯರು ಸಿಗಬಹುದೇ ಎಂದು ಹಿರಿಯ ಬ್ಯಾರಿ ಸ್ತ್ರೀಯೊಬ್ಬರನ್ನು ಭೇಟಿಯಾಗಿ ಕೆದಕಿದೆ. ಹೌದೌದು, ಕಟ್ಟಿಗೆ ಒಲೆಯನ್ನು ಶ್ರಮ ಪಟ್ಟು ಉರಿಸಿ, ತುಂಬು ಕುಟುಂಬಕ್ಕೆ ಅನ್ನ ಬೇಯಿಸಿ ಹಾಕುವುದು, ಹೊಲ ಗದ್ದೆಗಳಲ್ಲಿ ದುಡಿಯುವುದು, ಮನೆಗೆಲಸ, ಮಕ್ಕಳು ಇವೇ ನಮ್ಮ ಜಗತ್ತಾಗಿತ್ತು. ಇನ್ನು ಮನೆ ಹಿರಿಯರ ಮುಂದೆ ನಮ್ಮ ಮಾತಿಗೆಲ್ಲಿ ಬೆಲೆಯಿತ್ತು. ಮಹಿಳೆಯರೆಂದರೆ ಮುಸುರೆ ತಿಕ್ಕಲು, ಚಾಕರಿ ಮಾಡಲಿಕ್ಕಿರುವವರೆಂಬ ಭಾವನೆ ಅವರಿಗಿತ್ತು. ಎರಡಕ್ಷರ ಕಲಿಯಬೇಕೆಂಬ ಆಸೆ ಮನಸ್ಸಿನಲ್ಲಿದ್ರೂ ಆಡುವ ವಯಸ್ಸಿನಲ್ಲಿ ನನ್ನಪ್ಪ ಆಡು ಮೇಯಿಸಲು ಕಳಿಸಿದ್ದರು. ಅವರಿಗೂ ವಿದ್ಯೆಯಿರಲಿಲ್ಲ.

ಹೆಣ್ಮಕ್ಕಳು ಶಾಲೆ ಕಲಿಯುವುದು ನಮ್ಮ ಧರ್ಮಕ್ಕೆ ವಿರುದ್ಧವಾದುದು ಎಂಬ ವಾದ ಅವರದಾಗಿತ್ತು. ಓಟಿನ ದಿನ ಮಾತ್ರ ನಾನು ಶಾಲೆಯ ಮೆಟ್ಟಿಲು ಹತ್ತುತ್ತಿದ್ದುದು ಎಂದು ಜೋರಾಗಿ ನಗುತ್ತಾ, ನಿನಗೆ ಸೂಲಗಿತ್ತಿಯರು, ನಾಟಿ ವೈದ್ಯೆಯರು ಬಿಟ್ಟರೆ ಬೇರೆ ಯಾರೂ ಸಿಗಲಿಕ್ಕಿಲ್ಲ ಮಗಾ ಎಂದರು. ಬ್ಯಾರಿ ಮುಸ್ಲಿಮ್ ಹೆಣ್ಮಕ್ಕಳ ಈಗಿನ ಶೈಕ್ಷಣಿಕ ಪ್ರಗತಿಯನ್ನೂ, ಸಾಧನೆಗಳನ್ನೂ ಗಮನಿಸುವಾಗ ಹೆಣ್ಮಕ್ಕಳ ಶಿಕ್ಷಣದ ಮಹತ್ವವನ್ನು ಬ್ಯಾರಿ ಸಮುದಾಯವು ತಡವಾಗಿಯಾದರೂ ಅರ್ಥೈಸಿಕೊಂಡಿತು ಎನ್ನುವುದೇ ಸಮಾಧಾನದ ಸಂಗತಿ.

ಬ್ಯಾರಿ ಗಂಡುಮಕ್ಕಳೇ ಶಾಲೆಯ ಹೊಸ್ತಿಲು ತುಳಿಯದಿದ್ದ ಕಾಲದಲ್ಲಿ ಮನೆಯೊಳಗೆ ಯಾವುದೇ ಸ್ಥಾನಮಾನ ದಕ್ಕದ ಹೆಣ್ಮಕ್ಕಳು ಮನೆಯಿಂದ ಹೊರಗಿಳಿದು ಶಿಕ್ಷಣ ಪಡೆಯುವುದು ಸುಲಭದ ಮಾತಾಗಿರಲಿಲ್ಲ. ಹೆಣ್ಮಕ್ಕಳು ಮನೆಯಿಂದ ಹೊರಗಿಳಿದರೆ ಹಾಳಾಗುತ್ತಾರೆ, ಕುಟುಂಬದ ಮಾನ ಮರ್ಯಾದೆ ಹೋಗುತ್ತದೆ ಎಂಬ ಭಯವೂ, ಅಜ್ಞಾನವೂ ಹಿರಿಯರಲ್ಲಿತ್ತು.

ಧಾರ್ಮಿಕ ಶಿಕ್ಷಣ ನೀಡಲು ಇಸ್ಲಾಮೀ ವಿದ್ವಾಂಸರು ಕೇರಳದಿಂದ ಮಂಗಳೂರಿಗೆ ಬರುತ್ತಿದ್ದುದರಿಂದ ಧಾರ್ಮಿಕವಾಗಿ ಕರ್ನಾಟಕದ ಇತರ ಭಾಗಗಳಿಗಿಂತ ಬ್ಯಾರಿ ಮುಸ್ಲಿಮರು ಮಲಬಾರ್‌ಗೆ ಹೆಚ್ಚು ನಿಕಟರಾಗಿದ್ದರು.

ಮಲಬಾರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮ್ ಉಲಮಾಗಳು ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದರು. ಗಾಂಧೀಜಿಯವರು ಬ್ರಿಟಿಷರನ್ನು ಬಹಿಷ್ಕರಿಸುವ ಸಲುವಾಗಿ ಉಪ್ಪಿನ ಸತ್ಯಾಗ್ರಹವನ್ನು ಕೈಗೊಂಡಂತೆ, ಖಾದಿಯನ್ನು ಉತ್ತೇಜಿಸಿದಂತೆ ಈ ಉಲಮಾಗಳೂ ಬ್ರಿಟಿಷರನ್ನು ಭಾರತದಿಂದ ಓಡಿಸುವ ಸಲುವಾಗಿ ಅವರನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂದು ಫತ್ವಾ ಹೊರಡಿಸಿದರು. ಇದು ಯಾವ ಮಟ್ಟಕ್ಕೆ ತಲುಪಿತೆಂದರೆ ಉಲಮಾಗಳನ್ನು ಅನುಸರಿಸುವವರೆಲ್ಲರೂ ಇಂಗ್ಲಿಷ್ ಭಾಷೆ ಹಾಗೂ ಅವರ ಶಿಕ್ಷಣ ನೀತಿಯನ್ನು ವಿರೋಧಿಸಿದರು.

ಬ್ಯಾರಿ ಮುಸ್ಲಿಮರು ಅಕ್ಷರ ವಂಚಿತರಾಗಲು ಇದೂ ಒಂದು ಕಾರಣವೆನ್ನಬಹುದು.

ಯಾವಾಗ ಇಲ್ಲಿನ ಮುಸ್ಲಿಮರಲ್ಲಿ ಗಲ್ಫ್ ಉದ್ಯೋಗಿಗಳ ಸಂಖ್ಯೆ ಏರತೊಡಗಿತೋ ಆಗ ಹೆಣ್ಮಕ್ಕಳಿಗೂ ನಾಲ್ಕಕ್ಷರ ತಿಳಿದಿರಬೇಕು ಎಂಬ ಪ್ರಜ್ಞೆ ಮನೆ ಹಿರಿಯರಲ್ಲಿ ಮೂಡತೊಡಗಿತು. ದೂರದೂರಿನ ಗಂಡನಿಗೆ ಪತ್ರ ಬರೆಯಲೋ, ಓದಲೋ ಅಂಚೆ ಪೇದೆಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾದಾಗ ಬ್ಯಾರಿ ಸಮುದಾಯವು ಮಹಿಳೆಯರಿಗೂ ಅಲ್ಪ ಸ್ವಲ್ಪ ಶಿಕ್ಷಣ ನೀಡಲು ಮುಂದೆ ಬಂತು. ಆದಾಗ್ಯೂ ಬೀಡಿಯ ಸೂಪು ಮಡಿಲಿಗೇರಿಸುವುದನ್ನು ತಪ್ಪಿಸಲು ಆ ದಿನಗಳಲ್ಲಿ ಮಹಿಳೆಯರಿಂದ ಸಾಧ್ಯವಾಗಲೇ ಇಲ್ಲ. ತಮಾಷೆಯ ವಿಚಾರವೇನೆಂದರೆ, ಮನೆ ಹಿರಿಯರು ವೈದ್ಯರು ಬರೆದುಕೊಟ್ಟ ಔಷಧಿ ಚೀಟಿಯನ್ನು ಮನೆ ಹೆಣ್ಮಕ್ಕಳಿಗೆ ತೋರಿಸಿ ಏನು ಮದ್ದು ಬರೆದಿರುವರೆಂದು ಓದಿ ಹೇಳಲು ಹೇಳುತ್ತಿದ್ದರಂತೆ. ಗೊತ್ತಿಲ್ಲವೆಂದರೆ ಮತ್ತೆ ಶಾಲೆಗೆ ಹೋಗಿ ಕಲಿತದ್ದಾದರೂ ಏನು ಎಂದು ಗದರಿಸುತ್ತಿದ್ದರಂತೆ. ಕೆಲವೊಂದು ವೈದ್ಯರು ಬರೆದ ಚೀಟಿಯನ್ನು ವಿದ್ಯಾವಂತರಿಂದಲೇ ಓದಲಾಗುವುದಿಲ್ಲ, ಇನ್ನು ಎರಡನೇ ತರಗತಿ ಹೆಚ್ಚೆಂದರೆ ಐದನೇ ತರಗತಿಯವರೆಗೆ ಓದಿದ ಅವರೆಲ್ಲಿ ಓದಬೇಕು!

ಹೀಗೆ ಒಮ್ಮೆ ತೆರೆದ ಅವಕಾಶದ ಬಾಗಿಲನ್ನು ಬ್ಯಾರಿ ಮಹಿಳೆಯರು ಸಮರ್ಪಕವಾಗಿ ಬಳಸಿಕೊಂಡರು. ಹಂತಹಂತವಾಗಿ ಪ್ರಗತಿ ಸಾಧಿಸಿದ ಶಿಕ್ಷಣವು ಏಳನೇ ತರಗತಿಯವರೆಗೆ ಬಂದು ನಿಂತಿತು. ಆ ಹೊತ್ತಿಗಾಗಲೇ ಬ್ಯಾರಿ ತಾಯಂದಿರು ನಮ್ಮ ಮಕ್ಕಳು ನಮ್ಮಂತಾಗಬಾರದು, ಅವರು ಶಿಕ್ಷಣದಿಂದ ವಂಚಿತರಾಗಬಾರದು. ಹೆಣ್ಮಕ್ಕಳು ಅಡುಗೆ ಕೋಣೆಯೊಳಗೆ ಬಂಧಿಯಾಗಬಾರದು ಎಂಬ ಗಟ್ಟಿ ನಿರ್ಧಾರ ತಾಳಿದ್ದರು.

1989ರಲ್ಲಿ ಸಮುದಾಯದ ಶೈಕ್ಷಣಿಕ ಅಭ್ಯುದಯಕ್ಕಾಗಿ ಮಂಗಳೂರಿನಲ್ಲಿ ಸ್ಥಾಪನೆಗೊಂಡ ’ಜಮಿಯ್ಯತುಲ್ ಫಲಾಹ್’ ಸಂಸ್ಥೆಯು ಸಮುದಾಯದ ಮನವೊಲಿಸಿ ಶಿಕ್ಷಣದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿತು. ಸುಮಾರು ಹತ್ತು ವರ್ಷಗಳ ಬಳಿಕ ಅದರ ಫಲ ದೊರಕತೊಡಗಿತು. 2005ರಲ್ಲಿ ಸ್ಥಾಪನೆಗೊಂಡ ಟಿ.ಆರ್.ಎಫ್ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮನೆಯಲ್ಲಿ ಕುಳಿತು ಬೀಡಿಕಟ್ಟುತ್ತಿದ್ದ ಹೆಣ್ಮಕ್ಕಳಲ್ಲಿ ಮತ್ತೆ ಹೊಸ ಕನಸನ್ನು ಬಿತ್ತಿ ಅವರಿಗೆ ನೇರ ಎಸ್‌ಎಸ್‌ಎಲ್‌ಸಿ/ ಪಿಯುಸಿ ತರಬೇತಿಯನ್ನು ನೀಡುವ ಸಲುವಾಗಿ ಮರಳಿ ಬಾ ಶಾಲೆಗೆ ಯೋಜನೆಯನ್ನು ಹಾಕಿ ಯಶಸ್ವಿಯಾಯಿತು.

ಉತ್ತಮ ಗುಣಮಟ್ಟದ ಶಿಕ್ಷಣವು ಹೆತ್ತವರು ತನ್ನ ಮಕ್ಕಳಿಗೆ ಕೊಡುವ ಅತ್ಯಮೂಲ್ಯ ಉಡುಗೊರೆಯಾಗಿದೆ ಎಂದಿದ್ದಾರೆ ಪ್ರವಾದಿ ಮುಹಮ್ಮದ್(ಸ.ಅ). ಕುರ್‌ಆನ್ ಅವತೀರ್ಣಗೊಂಡಾಗ ಬಂದ ಮೊದಲ ಪದವೇ ’ಇಖ್‌ರಅ’ (ಓದು) ಎಂಬುದಾಗಿದೆ. ಈ ವಚನದ ಅರ್ಥವನ್ನು ಸರಿಯಾಗಿ ಗ್ರಹಿಸಿ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಒಂದೊಮ್ಮೆ ಸೋತಿದ್ದ ಉಲಮಾ ವರ್ಗವೇ ಇಂದು ಮಹಿಳೆಯರಿಗಾಗಿ ಸಾಲು ಸಾಲಾಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ಕ್ರಾಂತಿಯ ದೀವಟಿಗೆ ಹಿಡಿದಿದೆ.

ಯಾವಾಗ ಬ್ಯಾರಿ ಹುಡುಗಿಯರು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯ ಉತ್ತುಂಗಕ್ಕೇರತೊಡಗಿದರೋ ಅದು ಮೇಲ್ಜಾತಿಯವರ ಕಣ್ಣಿಗೆ ಕುಕ್ಕತೊಡಗಿತು. ಸುಮಾರು ಹದಿನೆಂಟು ವರ್ಷಗಳ ಹಿಂದೆ ವಾರ್ತಾಭಾರತಿ ಪತ್ರಿಕೆಯ ರಂಗ ಪ್ರವೇಶ ಎಲೆಮರೆಯ ಪ್ರತಿಭಾನ್ವಿತ ಬ್ಯಾರಿ ಹೆಣ್ಮಕ್ಕಳನ್ನು, ರ್‍ಯಾಂಕ್ ವಿಜೇತರನ್ನು ಮುಖ್ಯವಾಹಿನಿಗೆ ಪರಿಚಯಿಸಿತು. ರ್‍ಯಾಂಕುಗಳೆಂದರೆ ಮೇಲ್ಜಾತಿಯ ಸ್ವತ್ತೆಂಬ ನಂಬಿಕೆಯನ್ನು ಬ್ಯಾರಿ ಹುಡುಗಿಯರು ಹುಸಿಗೊಳಿಸಿದರು. ತಮಗೆ ಪ್ರತಿಸ್ಪರ್ಧಿಗಳು ಹುಟ್ಟಿದ್ದನ್ನು ಕಂಡು ಅವರಿಗೆ ಸಹಿಸಲಾಗಲೇ ಇಲ್ಲ. ನಾನು ಪ್ರಾಥಮಿಕ ತರಗತಿಯಲ್ಲಿ ಕಲಿಯುತ್ತಿದ್ದಾಗ ನನಗೊಬ್ಬಳು ಬ್ರಾಹ್ಮಣ ಗೆಳತಿಯಿದ್ದಳು. ಪ್ರತೀ ಬಾರಿ ಪರೀಕ್ಷೆಯಲ್ಲಿ ಅವಳಿಗಿಂತ ಒಂದೆರಡು ಅಂಕಗಳ ಅಂತರದಲ್ಲಿ ನಾನು ತರಗತಿಗೆ ಮೊದಲಿಗಳಾಗುತ್ತಿದ್ದೆ. ಇದನ್ನು ಸಹಿಸದ ಬ್ರಾಹ್ಮಣ ಶಿಕ್ಷಕಿಯೊಬ್ಬರು ನಂತರದ ದಿನಗಳಲ್ಲಿ ಅವಳಿಗೆ ಪರೀಕ್ಷೆಯಲ್ಲಿ ಉತ್ತರಗಳನ್ನು ಹೇಳಿಕೊಟ್ಟು ತರಗತಿಗೆ ಮೊದಲಿಗಳನ್ನಾಗಿ ಮಾಡಿದ ಘಟನೆ ನನ್ನ ಮನಸ್ಸಿನಿಂದ ಮಾಸುವುದೇ ಇಲ್ಲ. ಇದು ನನ್ನ ವೈಯಕ್ತಿಕ ಅನುಭವ.

ಅಲ್ಲಿಯವರೆಗೆ ನಿಮ್ಮ ಹೆಣ್ಮಕ್ಕಳೇಕೆ ಶಾಲೆ ಕಲಿಯುತ್ತಿಲ್ಲ ಎಂದು ಕೇಳುತ್ತಿದ್ದವರಿಗೆ, ಆಧುನಿಕ ಶಿಕ್ಷಣ ರಂಗದಲ್ಲಿ ಆಕೆ ತನ್ನ ಹೆಜ್ಜೆ ಗುರುತು ಮೂಡಿಸತೊಡಗಿದಾಗ ಸ್ಕಾರ್ಫ್, ಬುರ್ಖಾ ಕಣ್ಣು ಕುಕ್ಕತೊಡಗಿತು. ಆ ಮೂಲಕ ಅವಳ ಮನೋಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನವೂ ನಡೆಯಿತು. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಅವಳಿಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಛಾಪು ಮೂಡಿಸತೊಡಗಿದ್ದಾಳೆ. ಈ ಎಲ್ಲಾ ಬೆಳವಣಿಗೆಯ ನಡುವೆಯೂ ಶೇ.50ರಷ್ಟು ಮಂದಿ ತಮ್ಮ ಹೆಣ್ಮಕ್ಕಳನ್ನು ಕಾಲೇಜುಗಳಿಗೆ ಕಳಿಸುವ ಉದ್ದೇಶ ಮದುವೆಗೆ ಉತ್ತಮ ಸಂಬಂಧ ಕೂಡಿ ಬರಲಿ ಎಂದಾಗಿದೆ. ಸಂಬಂಧ ಕೂಡಿಬರುವ ತನಕ ಹೆಣ್ಮಕ್ಕಳು ಕಲಿಯಲಿ ಎನ್ನುವವರೂ ಇದ್ದಾರೆ. ಈ ಕಾರಣದಿಂದಾಗಿ ಪರೀಕ್ಷೆ ಬರೆಯುವ ಮುನ್ನ ಅರ್ಧಕ್ಕೇ ಶಿಕ್ಷಣವನ್ನು ಮೊಟಕುಗೊಳಿಸಿ ವೈವಾಹಿಕ ಜೀವನಕ್ಕೆ ಕಾಲಿಡುವ ಹೆಣ್ಮಕ್ಕಳೂ ಇದ್ದಾರೆ. ಶಿಕ್ಷಣ ಪಡೆಯುವುದರ ಉದ್ದೇಶ ಇದೊಂದೇ ಆಗಿರಬಾರದು. ಕಲಿತು ಉದ್ಯೋಗ ಗಿಟ್ಟಿಸಿಕೊಂಡ ಹೆಣ್ಣು, ಮದುವೆಯ ನಂತರ ಕೆಲಸ ಬಿಟ್ಟರೆ ಅವಳನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡು ಹೆಣ್ಮಕ್ಕಳು ಎಷ್ಟು ಕಲಿತರೂ ಅಷ್ಟೇ, ಕೊನೆಗೂ ಒಲೆಯ ಮುಂದೆ ನಿಲ್ಲಲೇಬೇಕು ಎಂಬ ನಿಲುವು ತಾಳಿಬಿಡುತ್ತಾರೆ. ಹೊರಗಡೆ ದುಡಿಯುವುದು ಆಕೆಯ ಆಯ್ಕೆಯೇ ಹೊರತು ಅದು ಕಡ್ಡಾಯವೇನಲ್ಲ ಎಂಬುದನ್ನು ನಾವೆಲ್ಲರೂ ಮನಗಾಣಬೇಕಿದೆ.

ಈ ನಿಟ್ಟಿನಲ್ಲಿ ನಮ್ಮೊಳಗೆ ಇನ್ನಷ್ಟು ಬದಲಾವಣೆಯ ಅಗತ್ಯವಿದೆ.


ಇದನ್ನೂ ಓದಿ: ಎಲೆಮರೆಯಿಂದ: ತಳ ಮಟ್ಟದ ಆರ್ಥಿಕ ಸ್ವಾವಲಂಬನೆ ಮತ್ತು ಮಂಗಳೂರಿನ ಟಿ.ಆರ್.ಎಫ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...