Homeಕರ್ನಾಟಕಜನಸಾಮಾನ್ಯರಿಗೆ ಹೊರೆ: 15 ದಿನಗಳಲ್ಲೇ ಬೆಂಗಳೂರು-ಮೈಸೂರು ರಸ್ತೆ ಟೋಲ್ ದರ ಹೆಚ್ಚಳ

ಜನಸಾಮಾನ್ಯರಿಗೆ ಹೊರೆ: 15 ದಿನಗಳಲ್ಲೇ ಬೆಂಗಳೂರು-ಮೈಸೂರು ರಸ್ತೆ ಟೋಲ್ ದರ ಹೆಚ್ಚಳ

ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದ ಈ ರಸ್ತೆಗೆ ಕೇವಲ 15 ದಿನಗಳಲ್ಲಿಯೇ ಮತ್ತೆ ಟೋಲ್ ದರ ಹೆಚ್ಚಳ ಮಾಡಲಾಗಿದೆ.

- Advertisement -
- Advertisement -

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಧಿಕ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದು 15 ದಿನಗಳ ಹಿಂದಷ್ಟೇ ಬಹಳಷ್ಟು ಜನ ವಿರೋಧ ವ್ಯಕ್ತಪಡಿಸಿ ಭಾರೀ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಲೆಕ್ಕಿಸದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಏಪ್ರಿಲ್ 1ರಿಂದ ಮತ್ತಷ್ಟು ಟೋಲ್ ದರ ಏರಿಕೆ ಮಾಡಿದೆ.

ಕಾರ್, ವ್ಯಾನ್‌, ಜೀಪ್‌ಗಳ ಏಕಮುಖ ಸಂಚಾರ ಟೋಲ್ ದರವನ್ನು ₹135 ರಿಂದ ₹165ಕ್ಕೆ ಏರಿಸಲಾಗಿದೆ. ಆ ಮೂಲಕ ಏಕಾಏಕಿ 30 ರೂ ಹೆಚ್ಚಿಸಲಾಗಿದೆ. ದ್ವಿಮುಖ ಸಂಚಾರ ದರವು ₹205ರಿಂದ ₹250ಕ್ಕೆ ಏರಿಕೆಗೊಂಡಿದೆ (45 ರೂ ಹೆಚ್ಚಳವಾಗಿದೆ). ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್‌ ₹220ರಿಂದ ₹270ಕ್ಕೆ ಹಾಗೂ ದ್ವಿಮುಖ ಸಂಚಾರಕ್ಕೆ ₹405 (₹75 ಹೆಚ್ಚಳ) ನಿಗದಿ ಮಾಡಲಾಗಿದೆ.

ಟ್ರಕ್‌, ಬಸ್, ಎರಡು ಆಕ್ಸೆಲ್‌ ವಾಹನಗಳ ಏಕಮುಖ ಟೋಲ್‌ ಬರೋಬ್ಬರಿ ₹565ಕ್ಕೆ ಏರಿಕೆ ಆಗಿದೆ (₹105 ಹೆಚ್ಚಳ). ದ್ವಿಮುಖ ಸಂಚಾರಕ್ಕೆ ₹850 ನಿಗದಿಪಡಿಸಲಾಗಿದೆ (₹ 160 ಹೆಚ್ಚಳವಾಗಿದೆ).

ಅದೇ ರೀತಿಯಾಗಿ 3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ದರವು ₹615 (₹115 ಏರಿಕೆ) ಆಗಿದ್ದು,  ದ್ವಿಮುಖ ಸಂಚಾರ ದರ ₹925 ಕ್ಕೆ (₹225 ಹೆಚ್ಚಳ) ಏರಿದೆ. ಭಾರಿ ವಾಹನಗಳ ಏಕಮುಖ ಟೋಲ್‌ ₹885 (₹165 ಹೆಚ್ಚಳ), ದ್ವಿಮುಖ ಸಂಚಾರಕ್ಕೆ ₹1,330 (₹250 ಹೆಚ್ಚಳ) ನಿಗದಿ ಮಾಡಲಾಗಿದೆ.  7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನಗಳ ದರವು ₹1,080 (₹200 ಹೆಚ್ಚಳ) ಹಾಗೂ ದ್ವಿಮುಖ ಸಂಚಾರಕ್ಕೆ ₹1,620 (₹305 ಏರಿಕೆ) ನಿಗದಿ ಮಾಡಲಾಗಿದೆ.

ಟೋಲ್ ದರ ಹೆಚ್ಚಾಗಿರುವ ಬಗ್ಗೆ ಕೆಂಗೇರಿ ಬಳಿ ಹಾಕಲಾಗಿರುವ ಬ್ಯಾನರ್. ಚಿತ್ರಕೃಪೆ – ಪ್ರಜಾವಾಣಿ

ಸಮರ್ಪಕವಾಗಿ ಸರ್ವೀಸ್ ರಸ್ತೆ ಮಾಡಿಲ್ಲ. ರೈಲ್ವೆ ಹಳಿ, ಸೇತುವೆಗಳು ಇರುವಲ್ಲಿ ಸರ್ವೀಸ್ ರಸ್ತೆ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇದು ದಶಪಥ ಅಲ್ಲ ಬದಲಿಗೆ ಆರು ಪಥಗಳ ರಸ್ತೆ ಎಂಬ ಆರೋಪಗಳು ಹಿಂದೆ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ದುಬಾರಿ ಟೋಲ್ ವಸೂಲಿ ಮಾಡಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದರು. ಆದರೆ ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದ ಈ ರಸ್ತೆಗೆ ಕೇವಲ 15 ದಿನಗಳಲ್ಲಿಯೇ ಮತ್ತೆ ಟೋಲ್ ದರವನ್ನು ಹೆಚ್ಚಳ ಮಾಡಲಾಗಿದೆ. ಚುನಾವಣಾ ಸಮಯದಲ್ಲೂ ಟೋಲ್ ದರ ಹೆಚ್ಚಾಗಿರುವುದರ ಕುರಿತು ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಪೂರ್ಣಗೊಳ್ಳದೇ ಟೋಲ್ ಸಂಗ್ರಹ: ಹೆದ್ದಾರಿ ಪ್ರಾಧಿಕಾರಕ್ಕೆ ಬಿಸಿ ಮುಟ್ಟಿಸಿದ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...