Homeಮುಖಪುಟಬುಡಕಟ್ಟು ಸಮುದಾಯ ಎನ್ನುವ ಕಾರಣಕ್ಕೆ ಚಿತ್ರಮಂದಿರ ಪ್ರವೇಶ ನಿರಾಕರಣೆ: ಆರೋಪ

ಬುಡಕಟ್ಟು ಸಮುದಾಯ ಎನ್ನುವ ಕಾರಣಕ್ಕೆ ಚಿತ್ರಮಂದಿರ ಪ್ರವೇಶ ನಿರಾಕರಣೆ: ಆರೋಪ

- Advertisement -
- Advertisement -

ಬುಡಕಟ್ಟು ಸಮುದಾಯ ಸೇರಿದ ಕುಟುಂಬ ಎನ್ನುವ ಕಾರಣಕ್ಕೆ ಟಿಕೆಟ್‌ ಖರೀದಿ ಮಾಡಿದ್ದರೂ ಕೂಡ ಅವರಿಗೆ ಚಿತ್ರಮಂದಿರಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದೀಗ ವಿವಾದಕ್ಕೀಡಾಗಿದೆ. ಈ ಘಟನೆ ಚೆನೈನಲ್ಲಿ ನಡೆದಿದೆ.

ಈ ವಿಚಾರವಾಗಿ ಗುರುವಾರ ಚೆನೈನಲ್ಲಿ ಗಲಾಟೆ ಭುಗಿಲೆದ್ದಿತು, ಅಲ್ಲಿಯ ಜನ ಪ್ರಶ್ನೆ ಮಾಡಿದಾಗಲೂ ಚಿತ್ರಮಂದಿರದ ಆಡಳಿತ ಮಂಡಳಿಯು ಸೆನ್ಸಾರ್ ನಿಯಮಗಳಿಗೆ ಬದ್ಧವಾಗಿದೆ ಎಂದು ಹೇಳಿತು.

ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ಟ್ವಿಟ್ಟರ್‌ನಲ್ಲಿ ಅನೇಕರು ಚಿತ್ರಮಂದಿರದ ವಿರುದ್ಧ ಟ್ವೀಟ್ ಮಾಡಿ ಪ್ರಶ್ನೆ ಮಾಡಿದರು. ”ಆ ಕುಟುಂಬ ನಿರ್ದಿಷ್ಟ ನರಿಕುರವರ್ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಅವರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆಯೇ?” ಎಂದು ಅನೇಕರು ಕೇಳಿದರು. ಸಾಮಾಜಿಕ ಮಾಧ್ಯಮದಲ್ಲಿ ಈ ಚಿತ್ರಮಂದಿರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.

ಆ ನಂತರ ಥಿಯೇಟರ್ ಆಡಳಿತವು ಸಿಲ್ಮಬರಸನ್ ನಟಿಸಿದ ಹೊಸದಾಗಿ ಬಿಡುಗಡೆಯಾದ ತಮಿಳು ಚಿತ್ರ ”ಪಾತು ಥಾಲಾ”ವನ್ನು ವೀಕ್ಷಿಸಲು ಎಲ್ಲರಿಗೂ ಅವಕಾಶ ಮಾಡಿಕೊಟ್ಟಿತು.

ಆ ಕುಟುಂಬಕ್ಕೆ ಚಿತ್ರಮಂದಿರ ಪ್ರವೇಶಕ್ಕೆ ಅವಕಾಶ ನೀಡಲು ಅಲ್ಲಿನ ಸಿಬ್ಬಂದಿ ನಿರಾಕರಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಎಲ್ಲೆಡೆ ಆಕ್ರೋಶಕ್ಕೆ ವ್ಯಕ್ತವಾಗುತ್ತಿದೆ. ಆ ವಿಡಿಯೋದಲ್ಲಿ ಕೆಲವರು, ಆ ಕುಟುಂಬ ಸದಸ್ಯರನ್ನು ಒಳ ಹೋಗಲು ಅನುಮತಿಸಿ ಎಂದು ಸಿಬ್ಬಂದಿಗೆ ಹೇಳುತ್ತಿರುವುದು ಕೇಳಿಸುತ್ತದೆ.

ಆ ಬಳಿಕ ಘಟನೆ ಕುರಿತು ರೋಹಿಣಿ ಸಿಲ್ವರ್‌ ಸ್ಕ್ರೀನ್ಸ್‌ ಥಿಯೇಟರ್ ಸ್ಪಷ್ಟಣೆ ನೀಡಿದ್ದು, ”ಈ ಘಟನೆ ಪರಾಮರ್ಶಿಸಲಾಗುತ್ತಿದೆ. ಈ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಕಾನೂನಿನ ಅನುಸಾರ 12 ವರ್ಷ ಕೆಳಗಿನ ಮಕ್ಕಳಿಗೆ ಈ ಚಿತ್ರ ವೀಕ್ಷಿಸಲು ಅನುಮತಿಸಲು ಸಾಧ್ಯವಿಲ್ಲ. ಈ ನಿರ್ದಿಷ್ಟ ಕುಟುಂಬದವರು ತನ್ನ 2, 6, 8 ಹಾಗೂ 10 ವರ್ಷದ ಮಕ್ಕಳೊಂದಿಗೆ ಬಂದಿದ್ದರು. ಆದರೆ ಅಲ್ಲಿದ್ದ ಜನರು ಆಕ್ರೋಶ ವ್ಯಕ್ತಪಡಿಸಿ ಇದಕ್ಕೆ ಬೇರೆಯೇ ಅರ್ಥ ಕಲ್ಪಿಸಿದ್ದರಿಂದ ಸಮಸ್ಯೆ ತಪ್ಪಿಸಲು ಇಡೀ ಕುಟುಂಬಕ್ಕೆ ಚಿತ್ರ ವೀಕ್ಷಿಸಲು ಅನುಮತಿಸಲಾಯಿತು” ಎಂದು ಚಿತ್ರಮಂದಿರದ ಆಡಳಿತ ಹೇಳಿದೆ.

ಆ ನಂತರ ಥಿಯೇಟರ್ ಮ್ಯಾನೇಜ್‌ಮೆಂಟ್, ಕುಟುಂಬವು ಚಲನಚಿತ್ರವನ್ನು ಆನಂದದಿಂದ ವೀಕ್ಷಿಸುವ ವೀಡಿಯೋವನ್ನೂ ಬಿಡುಗಡೆ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...