Homeಮುಖಪುಟಬಿಜೆಪಿ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ; ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಎಫ್ಐಆರ್

ಬಿಜೆಪಿ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ; ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಎಫ್ಐಆರ್

ಈ ಭಾಷಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಸಚಿವ ಜಮೀರ್ ಅಹಮದ್ ಬಳ್ಳಾರಿಗೆ ತೆರಳಿ ತಮ್ಮ ತಲೆ ಕಡಿಯುವಂತೆ ಸೋಮಶೇಖರ ರೆಡ್ಡಿಗೆ ಸವಾಲು ಹಾಕಿದ್ದರು. ಈ ಪ್ರಕರಣ ರಾಜ್ಯದಾದ್ಯಂತ ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗಿತ್ತು.

- Advertisement -
- Advertisement -

ರಾಯಚೂರು (ಜನವರಿ 27); ಸಿಎಎ ಪರವಾಗಿ ನಡೆಸಿದ್ದ ಬಿಜೆಪಿ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದ ಹಿನ್ನೆಲೆ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ರಾಯಚೂರಿನ ಸದರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಸರ್ಕಾರದ ವಿವಾದಾತ್ಮಕ ಸಿಎಎ ಕಾಯ್ದೆಯನ್ನು ಬೆಂಬಲಿಸಿ ಬಿಜೆಪಿ ನಾಯಕರು ಜನವರಿ 3 ರಂದು ಬಳ್ಳಾರಿಯಲ್ಲಿ ಸಮಾವೇಶ ನಡೆಸಿದ್ದರು. ಈ ಸಮಾವೇಶದಲ್ಲಿ ರಾಜಾರೋಷವಾಗಿ ಮಾತನಾಡಿದ್ದ ಶಾಸಕ ಸೋಮಶೇಖರ ರೆಡ್ಡಿ,

“ನೀವು ಶೇ.17 ರಷ್ಟು ಇದ್ದೀರಿ, ನಾವು ಶೇ.80 ರಷ್ಟು ಇದ್ದೀವಿ. ಒಂದು ವೇಳೆ ನಾವು ಶಿವಾಜಿಯಂತೆ ಖಡ್ಗ ಹಿಡಿದರೆ ನೀವು ಉಳಿಯುವುದಿಲ್ಲ. ನಿಮ್ಮ ಕತೆ ಏನು? ಎಂದು ಒಮ್ಮೆ ಯೋಜಿಸಿ ಸೈಲೆಂಟಾಗಿ ಇಲ್ಲಿ ಇರೋದಾದ್ರೆ ಇರಿ. ನಕರ ಮಾಡಿದರೆ ಗೊತ್ತಲ್ಲ” ಎಂಬರ್ಥದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

ಈ ಭಾಷಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಸಚಿವ ಜಮೀರ್ ಅಹಮದ್ ಬಳ್ಳಾರಿಗೆ ತೆರಳಿ ತಮ್ಮ ತಲೆ ಕಡಿಯುವಂತೆ ಸೋಮಶೇಖರ ರೆಡ್ಡಿಗೆ ಸವಾಲು ಹಾಕಿದ್ದರು. ಈ ಪ್ರಕರಣ ರಾಜ್ಯದಾದ್ಯಂತ ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗಿತ್ತು.

ಇದೇ ಸಂದರ್ಭದಲ್ಲಿ ಸೋಮಶೇಖರ ರೆಡ್ಡಿ ಭಾಷಣದ ವಿರುದ್ಧ ರಾಯಚೂರಿನ ನಾಗರೀಕ ಸಂವಿಧಾನ ಹಕ್ಕುಗಳ ಸಮಿತಿ ಸಂಚಾಲಕ ಆರ್. ಮಾನಸಯ್ಯ ದೂರು ನೀಡಿದ್ದರು. ಈ ದೂರಿನ ಅನ್ವಯ ಸದರ ಬಜಾರ್ ಪೊಲೀಸರು ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಸಂವಿಧಾನದಡಿಯಲ್ಲಿ ಸಮಾಜದ ನಾಗರೀಕರ ಸಬಲೀಕರಣ ದ ಹಕ್ಕುಗಳಿಗೆ ರಕ್ಷಣೆ ಒದಗಿಸುವಲ್ಲಿ ಸರ್ಕಾರಿ ಹುದ್ದೆಯಲ್ಲಿರುವವರು ಸಂಪೂರ್ಣ ಜವಾಬ್ದಾರಿ ಅಕ್ರಮವಾಗಿ ಹಣ ಸಂಬಂಧನಿ ಡಿದವರಿಗೆ ಅಷ್ಟೇ ನ್ಯಾಯ
    ಹಣ ಕೊಡಲಿಲ್ಲವೆಂದರೆ ಅನ್ಯಾಯವನ್ನು ಮಾಯ ಮಾಡುವ ನೂರಕ್ಕೆ 99 ಪರ್ಸೆಂಟೇಜ್ ನೌಕರರಿದ್ದಾರೆ ಬಡಜೀವ ಗಳಂತೂ ಬಲಿದಾನಕ್ಕೆ ರೆಡಿ ಇರಬೇಕಷ್ಟೆ ಸರ್ಕಾರಿ ನೌಕರರು ಲಂಚ ಬಾಕ ರಾಗಿದ್ದಾರೆ ಹೊರೆತು ನ್ಯಾಯಕ್ಕೆ ಬದ್ಧರಾಗಿರುವ ರು ಅಪರೂಪದಲ್ಲಿ ಅಪರೂಪ

  2. ಈ ಸೋಮಶೇಖರ ರೆಡ್ಡಿ ಜನ ಬೆಂಬಲದಿ೦ದ ಗೆದ್ದು ಶಾಸಖನಾಗಿ ಈಗ ಅದೇ ಜನಗಳನ್ನೇ ಕೊಲ್ತೀನಿ ಅಂತಿದ್ದಾನೆ ಆದ್ರೆಜನರು ಮೌನವಾಗಿದ್ದಾರೆ . ಇದರ ಅರ್ಥಏನು?

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...