Homeಕರ್ನಾಟಕಹಿಜಾಬ್ ಕುರಿತ ತಪ್ಪಾದ ವರದಿ ಬಗ್ಗೆ ಚರ್ಚೆಗೂ ತಯಾರಿಲ್ಲದ ಪಬ್ಲಿಕ್‌ ಟಿವಿ: ‘ಹೇಟ್‌ ಸ್ಪೀಚ್‌ ಬೇಡ’...

ಹಿಜಾಬ್ ಕುರಿತ ತಪ್ಪಾದ ವರದಿ ಬಗ್ಗೆ ಚರ್ಚೆಗೂ ತಯಾರಿಲ್ಲದ ಪಬ್ಲಿಕ್‌ ಟಿವಿ: ‘ಹೇಟ್‌ ಸ್ಪೀಚ್‌ ಬೇಡ’ ತಂಡ ಆಕ್ರೋಶ

- Advertisement -
- Advertisement -

ಹಿಜಾಬ್ ಕುರಿತು ಮಾಡಲಾಗುತ್ತಿರುವ ತಪ್ಪಾದ ವರದಿಗಳ ಬಗ್ಗೆ ಚರ್ಚಿಸಲು ಕನ್ನಡದ ಸುದ್ದಿ ಮಾಧ್ಯಮ ಪಬ್ಲಿಕ್ ಟಿವಿಯ ಕಚೇರಿಗೆ ತೆರಳಿದ್ದವರನ್ನು ಕಚೇರಿಯ ಹೊರಗೆ ಗಂಟೆಗಳ ಕಾಲ ಕಾಯಿಸಿ ಮಾತನಾಡಲು ನಿರಾಕರಿಸಿದ್ದಾರೆ ಎಂದು “ಹೇಟ್‌ ಸ್ಪೀಚ್‌‌ ಬೇಡ” ಅಭಿಯಾನದ ಸಂಘಟಕರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹೇಟ್‌ ಸ್ಪೀಚ್‌ ಬೇಡ ತಂಡವು, “ಪಬ್ಲಿಕ್ ಟಿವಿಗೆ ಪಬ್ಲಿಕ್ ಜೊತೆಗೆ ಮಾತನಾಡಲು ಏನು ಸಂಕಷ್ಟ, ಸಾರ್ವಜನಿಕರ ಜೊತೆಗೆ ಮಾತನಾಡಲು ಅವರಿಗೆ ನಿರ್ಬಂಧವಿದೆಯೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ‘ಹೇಟ್‌ ಸ್ಪೀಚ್‌ ಬೇಡ’ ಅಭಿಯಾನದ ತಂಡ, “Campaign Against Hate Speech ವತಿಯಿಂದ ಒಂದು ತಂಡವಾಗಿ ಪಬ್ಲಿಕ್‌‌ ಟಿವಿಯ ಸಂಪಾದಕರು ಮತ್ತು ಪತ್ರಕರ್ತರನ್ನು ಭೇಟಿ ಮಾಡಿ, ಚಾನೆಲ್ಲಿನ ಇತ್ತೀಚಿನ ಹಿಜಾಬ್ ವಿಷಯದ ವರದಿಗಾರಿಕೆಯ ಬಗ್ಗೆ ಚರ್ಚೆ ಮಾಡಲು ತೆರಳಿದ್ದವು. ಆದರೆ ಅಲ್ಲಿ ಸಾರ್ವಜನಿಕರಿಗೆ ಕೊರೊನಾ ನಿಯಮಾವಳಿಯ ಪ್ರಕಾರ ಪ್ರವೇಶವಿಲ್ಲವೆಂದು ನಮ್ಮನ್ನು ಹೊರಗೆ ನಿಲ್ಲಿಸಿದರು. ಸ್ವಲ್ಪ ಸಮಯ ಕಳೆದ ನಂತರ, ಒಬ್ಬೊಬ್ಬರಾಗಿ ಮೂರು ವರದಿಗಾರರು ಬಂದು ನಮ್ಮ ಪತ್ರವನ್ನು ಓದಿ ಹೋದರೇ ಹೊರತು ಸಂಪಾದಕರು ಅಥವಾ ಹಿರಿಯ ಸಂಪಾದಕರು ಚರ್ಚೆಗೆ ಬರಲು ನಮ್ಮ ಮನವಿಯನ್ನು ಒಪ್ಪಿಕೊಳ್ಳಲಿಲ್ಲ” ಎಂದು ಹೇಳಿದೆ.

“ಒಂದು ಘಂಟೆಯವರೆಗೂ ನಮ್ಮನ್ನು ಕಾಯಿಸಿದ್ದಾರೆ. ‘ಪತ್ರವನ್ನು ಸ್ವೀಕರಿಸಿದ್ದೇವೆ ಎಂದು ಅಂಗೀಕರಿಸಿ ಕೊಡಿ’ ಎನ್ನುವ ನಮ್ಮ ಮನವಿಯನ್ನು ಕೂಡ ಒಪ್ಪಲ್ಲಿಲ್ಲ. ಕಾನೂನಿನ ನೋಟಿಸ್ ಕಳುಹಿಸಿ ಅದಕ್ಕೆ ನಾವು ಉತ್ತರ ಕೊಡುತ್ತೇವೆ ಎಂದು ನಮ್ಮ ಚರ್ಚೆಯ ಮನವಿಯನ್ನು ಚಾನೆಲ್‌ ನಿರಾಕರಿಸಿದೆ” ಎಂದು ‘ಹೇಟ್‌ ಸ್ಪೀಟ್‌ ಬೇಡ’ ತಂಡ ಹೇಳಿದೆ.

ಚಾನೆಲ್‌ನ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ‘ಹೇಟ್‌ ಸ್ಪೀಟ್‌ ಬೇಡ’ ತಂಡ, “ಚಾನೆಲ್‌ನ ಈ ನಡೆಯಿಂದಾಗಿ ವೀಕ್ಷಕರಾದ ನಮಗೆ ತುಂಬಾ ಬೇಸರವಾಗಿದ್ದು, ಪಬ್ಲಿಕ್‌ ಟಿವಿಗೆ ಸಾರ್ವಜನಿಕರ ಜೊತೆಗೆ ಮಾತಾಡಲು ಏನು ಸಂಕಷ್ಟ? ಅವರಿಗೆ ಸಾರ್ವಜನಿಕರ ಜೊತೆ ಮಾತಾಡಲು ನಿರ್ಬಂಧವಿದೆಯೇ? ಕೇವಲ ಕಾನೂನಿನ ಮೂಲಕ ಚಾನೆಲ್‌ಗಳ ಜೊತೆ ಮಾತನಾಡ ಬೇಕೆ?” ಎಂದು ಪ್ರಶ್ನಿಸಿದೆ.

ಮಾಧ್ಯಮಗಳಲ್ಲಿ ನಡೆಸಲಾಗುವ ದ್ವೇಷದ ವರದಿಗಾರಿಕೆಯನ್ನು ವಿರೋಧಿಸಿ ‘ಹೇಟ್‌ ಸ್ಪೀಚ್‌ ಬೇಡ’ ಅಭಿಯಾನದ ತಂಡವು ನಿರಂತರವಾಗಿ ಹೋರಾಡುತ್ತಿದೆ. ಕೊರೊನಾ ಪ್ರಾರಂಭದ ಸಮಯದಲ್ಲಿ ‘ತಬ್ಲೀಘಿ ವೈರಸ್‌’ ಎಂದು ಒಂದು ಸಮುದಾಯದ ಮೇಲೆ ಪೂರ್ವಾಗ್ರಹದಿಂದ ವರದಿ ಮಾಡಿದ್ದ ‘ಟೈಮ್ಸ್‌ ನೌ’, ‘ಸುವರ್ಣ ನ್ಯೂಸ್‌’ ಮತ್ತು ‘ನ್ಯೂಸ್‌18ಕನ್ನಡ’ ಚಾನೆಲ್‌ಗಳ ವಿರುದ್ಧ ಹೋರಾಟ ನಡೆಸಿತ್ತು. ಈ ಹೋರಾಟದ ಪರಿಣಾಮವಾಗಿ ನ್ಯೂಸ್‌18ಕನ್ನಡ ಮತ್ತು ಸುವರ್ಣ ನ್ಯೂಸ್‌‌ಗಳಿಗೆ ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBSA) ಯು ಕ್ರಮವಾಗಿ 1 ಲಕ್ಷ ಮತ್ತು 50 ಸಾವಿರ ದಂಡವನ್ನು ವಿಧಿಸಿತ್ತು. ಜೊತೆಗೆ ಇದೇ ವಿಷಯಕ್ಕೆ ಇಂಗ್ಲಿಷ್ ನ್ಯೂಸ್ ಚಾನೆಲ್ ಟೈಮ್ಸ್ ನೌ ಅನ್ನು NBSA ಖಂಡಿಸಿತ್ತು.

ಇದನ್ನೂ ಓದಿ: ತಬ್ಲೀಘಿಗಳನ್ನು ಕೆಟ್ಟದಾಗಿ ಬಿಂಬಿಸಿದ್ದಕ್ಕೆ ಕ್ಷಮೆ ಕೇಳಿದ ‘ನ್ಯೂಸ್‌18 ಕನ್ನಡ’! 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

  1. “ನಾವು ಹೇಳಿದ್ದೇ ಸತ್ಯ. ನಾವು ಪ್ರಶ್ನಾತೀತರು” ಎಂಬುದು ಮನುವಾದಿ ಮಾಧ್ಯಮಗಳ ನಿಲುವು. ಇಂತವರ ಜೊತೆಗೆ ಚರ್ಚೆಗೆ ಹೋಗುವುದು ಸಮಯದ ವ್ಯರ್ಥ.

  2. ನನ್ನ ಪ್ರಕಾರ ಇದಂತೂ ಸಣ್ಣ ವಿಷಯ.ದೊಡ್ಡ ದೊಡ್ಡ ವಿಷಯಗಳನ್ನೇ ಚರ್ಚೆ ಮಾಡದೇ ಕೇವಲ ದ್ವೇಶದ ಆಧಾರದ ಮೇಲೆ ಸಂಘಿಗಳು ಚುನಾವಣಾ ವಿಷಯ ಮಾಡಿಕೊಂಡು,ಕೆಲವನ್ನ ಜಾರಿ ಕೂಡಾ ಮಾಡಿಲ್ಲವೆ?

    ಏಕರೂಪ ನಾಗರೀಕ ಸಂಹಿತೆ,ಆರ್ಟಿಕಲ್ ೩೭೦,
    ನೋಟಬಂದಿ,ಕೃಷಿ ಬಿಲ್ಲುಗಳು ಯಾವುದನ್ನ ಇವರು ಪಬ್ಲಿಕ್ಕಾಗಿ ಚರ್ಚಿಸಿದ್ದಾರೆ?

  3. ನಗರ ನಕ್ಸಲೀಯರ ಗುಂಪೆ, ತಮ್ಮ ಹಿಂದೂ ವಿರೋಧಿ ಮನಸ್ಥಿತಿ ತಿಳಿದಿರುವುದೇ, ನೀವು ನಂಬಿರುವುದೇ ನಿಜ, ನೀವೇ ಎಲ್ಲವನ್ನು ಕೆಂಪಾಗಿಸುವ ಆತುರದಲ್ಲಿ ಕೆಲವು ಬಣ್ಣಗಳನ್ನು ದ್ವೇಷಿಸುವುದು ಕೆಲವು ಬಣ್ಣಗಳನ್ನು ಸಮಜಾಯಿಸುವುದು ಪೂರ್ಣ ಸತ್ಯ

  4. ಅದೊಂದು ಬಿಜೆಪಿ ಪರವೆಂದು ಘಂಟಾಘೋಷವಾಗಿ ತೋರಿಸಿ ಕೊಳ್ಳುವ ಚಾನಲ್. ರಂಗನಾಥ ಅಂತೂ ಕೇಂದ್ರ ಸರ್ಕಾರವನ್ನು ಅಪ್ಪತಪ್ಪಿಯೂ ಟೀಕಿಸುವುದಿಲ್ಲ.‌ಅಂತಹವರ ಜೊತೆ ಮಾತೇ ವ್ಯರ್ಥ, ಆವಯ್ಯಂದು ಏನಿದ್ರೂ ಬಾಯಿ ಮಾತಿನ ಸತ್ಯ ನೇರ ಅಷ್ಟೇ. ಮಾಧ್ಯಮಗಳು ಸಮಾಜದ‌ ಸಾಮರಸ್ಯ ಕಾಪಾಡಬೇಕೇ‌ ಹೊರತು ಕದಡಬಾರದೆಂಬ ಸಾಮಾನ್ಯ ಜ್ಞಾನವೂ ಇಲ್ಲದ‌ಮಾಧ್ಯಮಗಳಿಂದ ದೇಶಕ್ಕೆ ಏನೂ ಪ್ರಯೋಜನವಿಲ್ಲ.

LEAVE A REPLY

Please enter your comment!
Please enter your name here

- Advertisment -

Must Read