HomeUncategorizedಕಲಾವಿಭಾಗದ ಟಾಪರುಗಳ ಭವಿಷ್ಯವೇನು?

ಕಲಾವಿಭಾಗದ ಟಾಪರುಗಳ ಭವಿಷ್ಯವೇನು?

ಕಲಾವಿಭಾಗದಲ್ಲಿ ಟಾಪರ್ ಗಳಾದ ನಮ್ಮೂರಿನ ಹುಡುಗಿಯರು ಇಂದು ಏನಾಗಿದ್ದಾರೆ ಗೊತ್ತೇ?

- Advertisement -
- Advertisement -

| ಡಾ.ಅರುಣ್ ಜೋಳದಕೂಡ್ಲಿಗಿ |

ಇಂದು ಶಿಕ್ಷಣ ಪಡೆಯುವುದೇ ಉದ್ಯೋಗಕ್ಕಾಗಿ ಎಂದಾಗಿರುವುದರಿಂದ ಎಸ್.ಎಸ್.ಎಲ್.ಸಿ ನಂತರರ ಓದಿನ ಆಯ್ಕೆಯಲ್ಲಿ ಕಲಾ ವಿಭಾಗಕ್ಕಿಂತ ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯದ ಆಯ್ಕೆಗಳು ಹೆಚ್ಚಾಗುತ್ತಿದೆ. ಅದರಲ್ಲೂ ಕಲಾ ವಿಭಾಗವನ್ನು ಆಯ್ದುಕೊಳ್ಳುವುದೆಂದರೆ ಬಡವರು, ಹಳ್ಳಿಗರು, ಕನ್ನಡ ಮೀಡಿಯಂ ಓದಿದವರು, ಕಡಿಮೆ ಖರ್ಚಿನ ಕೋರ್ಸು, ಓದಿದರೂ ಉದ್ಯೋಗ ಕಷ್ಟ ಎನ್ನುವ ಸಮೀಕರಣವಿದೆ. ಅದಕ್ಕೆ ವಿರುದ್ಧವಾಗಿ ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯದ ಆಯ್ಕೆಯು ಉಳ್ಳವರು, ಇಂಗ್ಲೀಷ್ ಕಲಿತವರು, ನಗರದವರು, ಓದಿನ ಖರ್ಚು ಹೆಚ್ಚು, ಓದಿಗೆ ಉದ್ಯೋಗವಿದೆ ಇತ್ಯಾದಿಗಳು ತಳಕು ಹಾಕಿವೆ. ಇದರಲ್ಲಿ ಕೆಲವು ಸಂಗತಿಗಳು ವಾಸ್ತವ ಕೂಡ. ವ್ಯವಸ್ಥೆಯೂ ಇದಕ್ಕೆ ಪೂರಕವಾಗಿದೆ.ಈ ನಡುವೆ ಕಳೆದ ಒಂದೆರಡು ದಶಕದಲ್ಲಿ ಕಲಾವಿಭಾಗದ ಆಯ್ಕೆಯ ಬದಲಿಗೆ ಇದೇ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗಕ್ಕೆ ಬದಲಾಗುತ್ತಿದ್ದಾರೆ.

ಕುಸುಮ

ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಪಿಯು ಕಾಲೇಜು ಸತತವಾಗಿ 5 ವರ್ಷ ಕಲಾವಿಭಾಗದಲ್ಲಿ ಮೊದಲ ಸ್ಥಾನ ಪಡೆಯುತ್ತಿದೆ. ಇದೊಂದು ರೀತಿಯಲ್ಲಿ ಖಾಸಗಿ ಕಾಲೇಜುಗಳು ವಿಜ್ಞಾನ ವಾಣಿಜ್ಯ ಕಂಪ್ಯೂಟರ್ ವಿಭಾಗವನ್ನು ಹೊತ್ತು ಮೆರೆಸುವಾಗ, ಈ ಕಾಲೇಜಿನ ಕಲಾ ವಿಭಾಗದ ಒಲವು ಮೆಚ್ಚುವಂತಹದ್ದು. ಈ ರ್ಯಾಂಕುಗಳ ಮೂಲಕ ಇಂದು ಕಾಲೇಜು ರಾಜ್ಯದ ಗಮನ ಸೆಳೆದಿದೆ. ಹೀಗಿರುವಾಗಲೂ ಬರೀ ರ್ಯಾಂಕ್‍ಗಳ ಮೂಲಕ ಕಲಾ ವಿಭಾಗದ ಮೌಲ್ಯವನ್ನು ಹೆಚ್ಚಿಸಬಹುದೇ? ಬಹುಶಃ ಸಾಧ್ಯವಿಲ್ಲ. ಬದಲಿಗೆ ರ್ಯಾಂಕಿನ ಅಥವ ಹೆಚ್ಚು ಅಂಕಗಳನ್ನು ಪಡೆದ ಕಲಾ ವಿಭಾಗದ ಪ್ರತಿಭೆಗಳಿಗೆ ತಕ್ಕುನಾದ ಉಜ್ವಲ ಭವಿಷ್ಯ ರೂಪುಗೊಂಡರೆ ಮಾತ್ರ ಕಲಾ ವಿಭಾಗದ ಬಗ್ಗೆ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಒಲವು ಮತ್ತು ಹುರುಪು ಹೆಚ್ಚಬಹುದು.

ಈ ಕಾರಣಕ್ಕೆ ಕೊಟ್ಟೂರಿನ ಇಂದು ಕಾಲೇಜಿನಲ್ಲಿ ಕಳೆದ ಐದು ವರ್ಷ ಮೊದಲ ಟಾಪರ್ ಹುಡುಗಿಯರನ್ನು ಮಾತನಾಡಿಸಿದೆ. ಐದೂ ಜನರೂ ಕೆಳಜಾತಿ ಮತ್ತು ಕೆಳವರ್ಗಕ್ಕೆ ಸೇರಿದವರು. ಇವರೆಲ್ಲಾ ಟಾಪರ್ ಆದಾಗ ಪ್ರತಿಕ್ರಿಯೆಯಾಗಿ ಕೆ.ಎ.ಎಸ್. ಐ.ಎ.ಎಸ್ ಮೊದಲಾದ ಉನ್ನತ ಹುದ್ದೆಗಳ ಕನಸು ಕಂಡಿದ್ದರು. ಆದರೆ ಹೆಚ್ಚುವರಿ ಅಂಕಗಳು ಅವರನ್ನು ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ತಡೆಯೊಡ್ಡಿತು. ಹಾಗಾಗಿ ಈ ವರ್ಷದ ಟಾಪರ್ ಕುಸುಮಾಳನ್ನು (2019 ಪಡೆದ ಅಂಕ 594) ಹೊರತುಪಡಿಸಿ ಉಳಿದ ನೇತ್ರಾವತಿ ಎಂ.ಬಿ (2015/579), ಅನಿತಾ ಪಿ (2016/585), ಚೈತ್ರ.ಬಿ (2017/589) ಸ್ವಾತಿ ಎಸ್. (2018/595) ಈ ನಾಲ್ವರು ವಿಲೇಜ್ ಅಕೌಂಟೆಂಟ್(ವಿ.ಎ) ಆಗಿದ್ದಾರೆ.

ಅನಿತಾ

ಸದ್ಯಕ್ಕೆ ಎಲ್ಲರೂ ದೂರಶಿಕ್ಷಣದಲ್ಲಿ ಬಿ.ಎ ಮಾಡುತ್ತಿದ್ದು ಮುಂದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೆ.ಎ.ಎಸ್ ಅಥವಾ ಐ.ಎ.ಎಸ್ ತೆಗೆದುಕೊಳ್ಳುವುದಾಗಿ ಚೂರು ಮೆಲ್ಲಗೆ ಹೇಳುತ್ತಾರೆ. ಟಾಪರ್ ಆದಾಗ ಪ್ರತಿಕ್ರಿಯಿಸಿದ ಆತ್ಮವಿಶ್ವಾಸ ಇದೀಗ ಕುಗ್ಗಿದೆ. ಇವರೆಲ್ಲಾ ಹೇಳುವ ಕಾರಣ ತಮ್ಮ ಮನೆಗಳ ಬಡತನದ್ದು. ಮುಂದೆ ಓದುವ ಕನಸಿದ್ದರೂ ಬಡತನದ ಕಾರಣ ಉದ್ಯೋಗದ ಮುಂದೆ ಬೇರೆ ಆಯ್ಕೆಯಿಲ್ಲ. ಆದರೆ ವಿಜ್ಞಾನ ತಂತ್ರಜ್ಞಾನ ವಾಣಿಜ್ಯದ ರ್ಯಾಂಕ್ ವಿದ್ಯಾರ್ಥಿಗಳು ಬಹುಪಾಲು ಮುಂದಿನ ವಿದ್ಯಾಭ್ಯಾಸದಲ್ಲಿ ತೊಡಗುವುದು ಹೆಚ್ಚು. ಇವರ ಓದಿಗೆ ಸಾಂಸ್ಥಿಕ ಸಹಾಯ ಸಿಗುವುದಲ್ಲದೆ, ಮುಂದೆ ಒಳ್ಳೆಯ ಸಂಬಳದ ಉದ್ಯೋಗ ಸಿಗುವ ಭರವಸೆ ಕೂಡಾ ಇರುತ್ತದೆ.

ಇಲ್ಲಿ ಮುಖ್ಯವಾಗಿ ಇಂದು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳು ಭಾಷೆಯ ಆಯ್ಕೆಯಲ್ಲಿ ಇಂಗ್ಲೀಷ್ ಬದಲಿಗೆ ಸಂಸ್ಕೃತವನ್ನೂ, ಉಳಿದಂತೆ ಶಿಕ್ಷಣ, ಕಡ್ಡಾಯ ಕನ್ನಡದ ಜತೆ ಐಚ್ಚಿಕ ಕನ್ನಡ, ಇತಿಹಾಸ, ರಾಜ್ಯಶಾಸ್ತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. `ಅತಿಹೆಚ್ಚು ಕಿರುಪರೀಕ್ಷೆಗಳನ್ನು ಆಯೋಜಿಸುವುದು, ನಿರಂತರವಾಗಿ ಹಳೆಯ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವ ತರಬೇತಿ ಕೊಡುವುದು ರ್ಯಾಂಕಿಗೆ ಕಾರಣ’ ಎಂದು ಇಂದು ಕಾಲೇಜಿನ ಪ್ರಾಂಶುಪಾಲರಾದ ಭದ್ರಿನಾಥ ಹೇಳುತ್ತಾರೆ. ಬಹುಶಃ ಈ ಬಗೆಯ ವಿಷಯದ ಆಯ್ಕೆಯೂ ಟಾಪರ್ ಆದವರಿಗೆ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂಗ್ಲೀಷ್ ಭಾಷೆ ತೊಡಕಾಗುವ ಭಯವಿರಬಹುದು. ಇದರಿಂದಾಗಿಯೂ ಪಿಯುನ ಹೆಚ್ಚಿನ ಅಂಕದ ಕಾರಣಕ್ಕೆ ಸಿಕ್ಕ ವಿ.ಎ ಹುದ್ದೆಯನ್ನು ತಿರಸ್ಕರಿಸಲು ಸಾಧ್ಯವಾಗಿಲ್ಲ.

ಚೈತ್ರ

ಇಂದು ಇಡೀ ದೇಶದಲ್ಲಿ ಮಾನವಿಕ ವಿಜ್ಞಾನಗಳು ನಿರುದ್ಯೋಗದ ಕೋರ್ಸ್‍ಗಳೆಂಬಂತೆ ಅಪಮೌಲ್ಯಕ್ಕೆ ಒಳಗಾಗಿವೆ. ಇಂದು ಬಹುಸಂಖ್ಯಾತ ಯುವಜನರು ಸಮಾಜದ ಬಗೆಗೆ ಅರಿವು ಮೂಡಿಸಿಕೊಳ್ಳದೆ, ವಿಜ್ಞಾನ ತಂತ್ರಜ್ಞಾನ ವಾಣಿಜ್ಯದ ಓದಿನ ಆಯ್ಕೆಗೆ ಒಳಗಾದ ಕಾರಣ ಮಕ್ಕಳಿಗೆ ತನ್ನದೇ ಸಮಾಜದ ಸೂಕ್ಷ್ಮ ತಿಳುವಳಿಕೆಯೂ ಇಲ್ಲದಾಗುತ್ತದೆ. ಇಂತಹ ಕಲೆಯೇತರ ಆಯ್ಕೆಗಳು ಹೆಚ್ಚಾದಂತೆ ಅರಾಜಕ ಯುವಜನರೂ ಹೆಚ್ಚುವ ಸಾಧ್ಯತೆಯಿದೆ. ಇದರಿಂದಾಗಿ ಯುವಜನರಲ್ಲಿ ಸಮಾಜದ ಜತೆಗಿನ ಸಾವಯವ ಸಂಬಂಧದ ನಡವಳಿಕೆ ಇಲ್ಲವಾಗಿ, ಉಡಾಫೆಯ ಭಾವವನ್ನು ಬೆಳಸಿಕೊಳ್ಳುವ ಸಾಧ್ಯತೆಯಿದೆ. ಅಂತೆಯೇ ಸಮಾಜದ ಸಮಗ್ರ ಬೆಳವಳಿಗೆಯ ಕಡೆಗಲ್ಲದೆ, ಅಸಮಾನ ಸಮಾಜದ ಬೆಳವಣಿಗೆಯ ಪಾಲುದಾರರಾಗುವ ಸಾಧ್ಯತೆ ಇದೆ.

ಮುಖ್ಯವಾಗಿ ಸರಕಾರಗಳು ಕಲಾವಿಭಾಗಕ್ಕೆ ಹಚ್ಚು ಮೌಲ್ಯ ಪ್ರಾಪ್ತವಾಗುವಂತೆ ಪಠ್ಯಕ್ರಮಗಳನ್ನು ಅಳವಡಿಸುವುದು, ವಿಜ್ಞಾನ ತಂತ್ರಜ್ಞಾನ ವಾಣಿಜ್ಯ ಕೋರ್ಸ್‍ಗಳಲ್ಲಿಯೂ ಕನಿಷ್ಠ ಎರಡು ಮೂರು ಮಾನವಿಕ ವಿಷಯಗಳನ್ನು ಕಡ್ಡಾಯವಾಗಿ ಓದಲೆಬೇಕೆನ್ನುವ ಕಟ್ಟುನಿಟ್ಟಿನ ನಿಯಮ ತರುವುದು. ಜ್ಞಾನ ಪರಂಪರೆಯಲ್ಲಿ ದೇಸಿ ಜ್ಞಾನವೆ ಮೂಲವಾದ ಕಾರಣ ಎಲ್ಲಾ ಕೋರ್ಸುಗಳಲ್ಲಿ ಕಡ್ಡಾಯವಾಗಿ ದೇಸಿಜ್ಞಾನದ ಪಠ್ಯವನ್ನು ಅಳವಡಿಸುವುದು, ಇದಕ್ಕೆ ವಿಶೇಷವಾಗಿ ಜಾನಪದ ಪದವಿ ಪಡೆದವರನ್ನು ಬೋಧಕರನ್ನಾಗಿ ಆಯ್ಕೆ ಮಾಡುವುದು, ಅದಕ್ಕೆ ಪೂರಕವಾದ ಉದ್ಯೋಗಗಳನ್ನು ಸೃಷ್ಠಿಸುವುದು, ಕಲಾವಿಭಾಗದಲ್ಲಿ ರ್ಯಾಂಕ್ ಪಡೆದವರಿಗೆ ವಿಶೇಷ ಕೋಟದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯವನ್ನೂ ಒಳಗೊಂಡಂತೆ ಕಲಾ ವಿಭಾಗವನ್ನು ಮೌಲ್ಯೀಕರಿಸುವ ಕೆಲವು ಕಟ್ಟುನಿಟ್ಟಾದ ಯೋಜನೆಗಳನ್ನು ರೂಪಿಸಿಸಬೇಕಿದೆ. ಹೀಗೆ ಕಲಾವಿಭಾಗಕ್ಕೆ ಉಜ್ಞಲ ಭವಿಷ್ಯದ ದಾರಿಗಳು ತೆರೆದರೆ, ಈ ವಿಭಾಗದ ರ್ಯಾಂಕ್ ವಿದ್ಯಾರ್ಥಿಗಳು ಸಹಜವಾಗಿ ಎತ್ತರದ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡು ಹಾರಲು ಸಜ್ಜಾಗುತ್ತಾರೆ.

(ಲೇಖಕರು ಪೋಸ್ಟ್ ಡಾಕ್ಟರಲ್ ಫೆಲೋ, ಕನ್ನಡ ವಿಶ್ವವಿದ್ಯಾಲಯ ಹಂಪಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...