Homeಅಂತರಾಷ್ಟ್ರೀಯವುಹಾನ್‌ನಲ್ಲಿ ಚೇತರಿಸಿಕೊಂಡ ಶೇ 90 ರಷ್ಟು ರೋಗಿಗಳಿಗೆ ಶ್ವಾಸಕೋಶದ ತೊಂದರೆ

ವುಹಾನ್‌ನಲ್ಲಿ ಚೇತರಿಸಿಕೊಂಡ ಶೇ 90 ರಷ್ಟು ರೋಗಿಗಳಿಗೆ ಶ್ವಾಸಕೋಶದ ತೊಂದರೆ

ಅಂದರೆ ಅವರ ಶ್ವಾಸಕೋಶದ ವಾತಾಯನ ಮತ್ತು ಅನಿಲ ವಿನಿಮಯ ಕಾರ್ಯಗಳು ಆರೋಗ್ಯವಂತ ಜನರ ಮಟ್ಟಕ್ಕೆ ಚೇತರಿಸಿಕೊಂಡಿಲ್ಲ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

- Advertisement -
- Advertisement -

ಸಾಂಕ್ರಾಮಿಕ ರೋಗ ಪತ್ತೆಯಾದ ಚೀನಾದ ವುಹಾನ್ ನಗರದ ಪ್ರಮುಖ ಆಸ್ಪತ್ರೆಯು, ಕೊರೊನಾ ವೈರಸ್-ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ತೊಂಬತ್ತು ಪ್ರತಿಶತದಷ್ಟು ಜನರು ಶ್ವಾಸಕೋಶದ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ವರದಿ ಮಾಡಿದೆ.

ಆಸ್ಪತ್ರೆಯ ತೀವ್ರ ನಿಗಾ ಘಟಕದ ನಿರ್ದೇಶಕ ಪೆಂಗ್ ಝಿಯಾಂಗ್ ನೇತೃತ್ವದ ವುಹಾನ್ ವಿಶ್ವವಿದ್ಯಾಲಯದ ಝೋಂಗ್ನಾನ್ ಆಸ್ಪತ್ರೆಯ ತಂಡವು, ಏಪ್ರಿಲ್‌ನಿಂದ ಚೇತರಿಸಿಕೊಂಡ 100 ರೋಗಿಗಳೊಂದಿಗೆ ಸಂಪರ್ಕದಲ್ಲಿದೆ. ಈ ಒಂದು ವರ್ಷದ ಅಧ್ಯಯನ ಕಾರ್ಯಕ್ರಮದ ಮೊದಲ ಹಂತ ಜುಲೈನಲ್ಲಿ ಮುಗಿದಿದೆ. ಅಧ್ಯಯನದಲ್ಲಿ ರೋಗಿಗಳ ಸರಾಸರಿ ವಯಸ್ಸು 59 ಆಗಿದೆ.

ಮೊದಲ ಹಂತದ ಫಲಿತಾಂಶಗಳ ಪ್ರಕಾರ, ಶೇಕಡಾ 90 ರಷ್ಟು ರೋಗಿಗಳ ಶ್ವಾಸಕೋಶಗಳು ಇನ್ನೂ ಹಾನಿಗೊಳಗಾದ ಸ್ಥಿತಿಯಲ್ಲಿವೆ.

ಅಂದರೆ ಅವರ ಶ್ವಾಸಕೋಶದ ವಾತಾಯನ ಮತ್ತು ಅನಿಲ ವಿನಿಮಯ ಕಾರ್ಯಗಳು ಆರೋಗ್ಯವಂತ ಜನರ ಮಟ್ಟಕ್ಕೆ ಚೇತರಿಸಿಕೊಂಡಿಲ್ಲ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಪೆಂಗ್‌ರ ತಂಡವು ರೋಗಿಗಳೊಂದಿಗೆ ಆರು ನಿಮಿಷಗಳ ವಾಕಿಂಗ್ ಪರೀಕ್ಷೆಯನ್ನು ನಡೆಸಿತು. ಚೇತರಿಸಿಕೊಂಡ ರೋಗಿಗಳು ಆರು ನಿಮಿಷಗಳಲ್ಲಿ 400 ಮೀಟರ್ ಮಾತ್ರ ನಡೆಯಬಲ್ಲರು. ಆದರೆ ಅವರ ಆರೋಗ್ಯವಂತ ಗೆಳೆಯರು ಅದೇ ಅವಧಿಯಲ್ಲಿ 500 ಮೀಟರ್ ನಡೆಯಬಹುದು ಎಂದು ಅಧ್ಯಯನ ತಿಳಿಸಿದೆ.

ಚೇತರಿಸಿಕೊಂಡ ಕೆಲವು ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೂರು ತಿಂಗಳ ನಂತರವೂ ಆಮ್ಲಜನಕ ಯಂತ್ರಗಳನ್ನು ಅವಲಂಬಿಸಬೇಕಾಗಿದೆ ಎಂದು ಬೀಜಿಂಗ್‌ನ ಚೈನೀಸ್ ಮೆಡಿಸಿನ್ ವಿಶ್ವವಿದ್ಯಾಲಯದ ಡಾಂಗ್ ಝೈಮೆನ್ ಆಸ್ಪತ್ರೆಯ ವೈದ್ಯ ಲಿಯಾಂಗ್ ಟೆಂಗ್ಸ್‌ ಕಿಯಾವೋ ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

65 ವರ್ಷಕ್ಕಿಂತ ಮೇಲ್ಪಟ್ಟ, ಚೇತರಿಸಿಕೊಂಡ ರೋಗಿಗಳೊಂದಿಗೆ ಲಿಯಾಂಗ್ ಅವರ ತಂಡವು ಸಂಪರ್ಕದಲ್ಲಿದೆ. 100 ರೋಗಿಗಳಲ್ಲಿ ಶೇಕಡಾ 10 ರಷ್ಟು‌ ಜನರಿಗೆ ಕೊರೊನಾ ವೈರಸ್ ವಿರುದ್ಧದ ಪ್ರತಿಕಾಯಗಳು ಕಣ್ಮರೆಯಾಗಿವೆ ಎಂದು ಫಲಿತಾಂಶಗಳು ತೋರಿಸಿಕೊಟ್ಟಿವೆ.

ಅವರಲ್ಲಿ ಐದು ಪ್ರತಿಶತದಷ್ಟು ಜನರು ಕೊರೊನಾ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಗಳಲ್ಲಿ‌ ನೆಗೆಟಿವ್ ಫಲಿತಾಂಶ ಬಂದಿದೆ. ಆದರೆ ಇಮ್ಯುನೊಗ್ಲಾಬ್ಯುಲಿನ್ M (IgM) ಪರೀಕ್ಷೆಗಳಲ್ಲಿ ಪಾಸಿಟಿವ್ ಎಂಬ ಫಲಿತಾಂಶ ಬಂದಿದೆ ಎಂದರು. ಆದ್ದರಿಂದ ಇದನ್ನು ಮತ್ತೆ ನಿರ್ಬಂಧಿಸಬೇಕಾಗಿದೆ ಎಂದು ವರದಿ ತಿಳಿಸಿದೆ.

ಐಜಿಎಂ ಸಾಮಾನ್ಯವಾಗಿ ವೈರಸ್ ದಾಳಿ ಮಾಡಿದಾಗ ಪ್ರತಿರಕ್ಷಣಾ ವ್ಯವಸ್ಥೆಯಿಂದ ಉತ್ಪತ್ತಿಯಾಗುವ ಮೊದಲ ಪ್ರತಿಕಾಯವಾಗಿದೆ. ಐಜಿಎಂ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶವು ಒಬ್ಬ ವ್ಯಕ್ತಿಯು ಸೋಂಕಿಗೆ ಒಳಗಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ.

ಆದರೆ ಈ ಜನರು ಮತ್ತೆ ಯಾಕೆ ಸೋಂಕಿಗೆ ಒಳಗಾಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 100 ರೋಗಿಗಳ ರೋಗನಿರೋಧಕ ವ್ಯವಸ್ಥೆಗಳು ಕಡಿಮೆ ಮಟ್ಟದ ಬಿ ಜೀವಕೋಶಗಳನ್ನು ತೋರಿಸಿದ ಕಾರಣ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.

ರೋಗಿಗಳ ಪ್ರತಿರಕ್ಷಣಾ ವ್ಯವಸ್ಥೆಗಳು ಇನ್ನೂ ಚೇತರಿಸಿಕೊಳ್ಳುತ್ತಿವೆ ಎಂದು ಫಲಿತಾಂಶಗಳು ಬಹಿರಂಗಪಡಿಸಿದವು ಎಂದು ಪೆಂಗ್ ಹೇಳಿದರು. ಚೇತರಿಸಿಕೊಂಡ ಹೆಚ್ಚಿನ ರೋಗಿಗಳು ತಮ್ಮ ಕುಟುಂಬಗಳೊಂದಿಗೆ ಒಂದೇ ಟೇಬಲ್‌ನಲ್ಲಿ ಊಟ ಮಾಡಲು ಸಿದ್ಧರಿಲ್ಲ ಎಂದು ತಂಡಕ್ಕೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

ಚೇತರಿಸಿಕೊಂಡ ರೋಗಿಗಳಲ್ಲಿ ಅರ್ಧಕ್ಕಿಂತ ಕಡಿಮೆ ಜನರು ಕೆಲಸಕ್ಕೆ ಮರಳಿದ್ದಾರೆ ಎಂದು ಅದು ಹೇಳಿದೆ.

ಕೊರೊನಾ ವೈರಸ್ ಮೊದಲು ವುಹಾನ್ ನಗರದಲ್ಲಿ ಕಂಡುಬಂದಿದ್ದರಿಂದ ಈ ಸಂಶೋಧನೆಗಳು ಗಮನಾರ್ಹವಾಗಿವೆ. ವುಹಾನ್ ಪ್ರಾಂತೀಯ ರಾಜಧಾನಿಯಾಗಿರುವ ಹುಬೈ ಪ್ರಾಂತ್ಯವು ಈವರೆಗೆ ಒಟ್ಟು 68,138 ದೃಢೀಕರಿಸಿದ ಕೊರೊನಾ ಪ್ರಕರಣಗಳನ್ನು ವರದಿ ಮಾಡಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಈ ರೋಗವು ಪ್ರಾಂತ್ಯದಲ್ಲಿ 4,512 ಜನರನ್ನು ಬಲಿ ತೆಗೆದುಕೊಂಡಿದೆ.

ಮಂಗಳವಾರದ ಹೊತ್ತಿಗೆ, ಚೀನಾದಲ್ಲಿ ದೃಢಪಡಿಸಿದ ಕೊರೊನಾ ಪ್ರಕರಣಗಳ ಸಂಖ್ಯೆ 88,328 ಕ್ಕೆ ತಲುಪಿದೆ. ಚೇತರಿಸಿಕೊಂಡ ನಂತರ ಒಟ್ಟಾರೆಯಾಗಿ 81,417 ಜನರನ್ನು ಬಿಡುಗಡೆ ಮಾಡಲಾಗಿದೆ, ಮತ್ತು 4,677 ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಎನ್ಎಚ್‌ ಸಿ ತಿಳಿಸಿದೆ.


ಇದನ್ನೂ ಓದಿ: ರೋಗನಿರೋಧಕ ಪ್ರತಿಕ್ರಿಯೆಯನ್ನು ಹೆಚ್ಚಿಸಿದ ನೊವಾವಾಕ್ಸ್ ಕೊರೊನಾ ಲಸಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...