ಪಂಜಾಬ್‌ನ ಅಮೃತಸರದಲ್ಲಿ ಶಿವಸೇನೆ ಮುಖಂಡ ಸುಧೀರ್ ಸೂರಿ ಮೇಲೆ ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ಅವರು ಮೃತಪಟ್ಟಿದ್ದಾರೆ. ಅಮೃತಸರದ ದೇವಸ್ಥಾನದ ಹೊರಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ದೇವಾಲಯದ ಆವರಣದ ಹೊರಗೆ ಭಗ್ನಗೊಂಡ ವಿಗ್ರಹಗಳನ್ನು ಕಸದ ಬುಟ್ಟಿಗೆ ಎಸೆದಿರುವುದನ್ನು ಖಂಡಿಸಿ ಅಧಿಕಾರಿಗಳ ವಿರುದ್ಧ ಶಿವಸೇನೆ ಪ್ರತಿಭಟನೆ ಹಮ್ಮಿಕೊಂಡಿತ್ತು. ದೇವಾಲಯದ ಹೊರಗೆ ಶಿವಸೇನೆಯ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಗುಂಪಿನಿಂದ ಬಂದ ಅಪರಿಚತರು ಸುಧೀರ್ ಸೂರಿಗೆ ಗುಂಡು ಹಾರಿಸಿದ್ದಾರೆ ಎಂದು ಹಿಂದೂಸ್ತಾನ ಟೈಮ್ಸ್ ವರದಿ ಮಾಡಿದೆ.
ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡುವವನು ಸುಧೀರ್ ಮೇಲೆ 5-6 ಗುಂಡು ಹಾರಿಸಿದ್ದಾನೆ. ಆತನನ್ನು ಬಂಧಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಎರಡು ದಿನಗಳ ಹಿಂದೆಯೇ ದೇವಾಸ್ಥಾನದ ವಿಷಯಕ್ಕೆ ಸಂಬಂಧಿಸಿದಂತೆ ಸುಧೀರ್ ಮತ್ತು ಸ್ಥಳೀಯರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸುಧೀರ್‌ಗೆ ರಕ್ಷಣೆಗಾಗಿ ಗನ್ ಮ್ಯಾನ್‌ಗಳಿದ್ದರೂ ಸಹ ದಾಳಿಕೋರ ತನ್ನ ಕೊನೆಯ ಎರೆಡು ಗುಂಡುಗಳನ್ನು ಹಾರಿಸಲು ಸಫಲನಾಗಿದ್ದಾನೆ ಎನ್ನಲಾಗಿದೆ. ಸುಧೀರ್‌ರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಇದನ್ನೂ ಓದಿ; ವಿಜಯಪುರ: ಮತ ನೀಡಿಲ್ಲವೆಂದು ಬಿಜೆಪಿ ನಾಯಕನ ಬೆಂಬಲಿಗರಿಂದ ಹಲ್ಲೆ


