Homeಮುಖಪುಟಪಂಜಾಬ್‌: ಸುಖ್ಜಿಂದರ್‌‌ ರಾಂಧ್ವಾ ಮುಂದಿನ ಮುಖ್ಯಮಂತ್ರಿ?

ಪಂಜಾಬ್‌: ಸುಖ್ಜಿಂದರ್‌‌ ರಾಂಧ್ವಾ ಮುಂದಿನ ಮುಖ್ಯಮಂತ್ರಿ?

- Advertisement -
- Advertisement -

ಪಂಜಾಬ್‌ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಸುಖ್ಜಿಂದರ್‌ ಸಿಂಗ್‌ ರಾಂಧ್ವಾ ಅವರು ಅಧಿಕಾರ ಹಿಡಿಯಬಹುದು ಎನ್ನಲಾಗಿದೆ. ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ರಾಜೀನಾಮೆ ಬಳಿಕ ಸಿಎಂ ಯಾರಾಗಬಹುದು ಎಂಬ ಕುತೂಹಲ ಮೂಡಿದೆ. ರಾಂಧ್ವಾ ಅವರು ಮುಖ್ಯಮಂತ್ರಿಯಾಗಬಹುದು ಹಾಗೂ ಇಬ್ಬರನ್ನು ಉಪಮುಖ್ಯಮಂತ್ರಿ ಮಾಡಲಾಗುವುದು ಎಂದು ಮೂಲಗಳು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಗುರುದಾಸ್‌ಪುರ ಜಿಲ್ಲೆಯ ರಾಂಧ್ವಾ ಅವರು ಮೂರು ಬಾರಿ ಶಾಸಕರಾಗಿ, ಕಾರಾಗೃಹ ಹಾಗೂ ಸಹಕಾರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇವರ ತಂದೆ ಸಂತೋಖ್‌‌ ಸಿಂಗ್‌ ಅವರು ಎರಡು ಭಾರಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು.

“ಕ್ಯಾಪ್ಟನ್‌ (ಅಮರಿಂದರ್‌ ಸಿಂಗ್‌) ಸಾಬ್‌ ನಮ್ಮೆಲ್ಲರಿಗೂ ಹಿರಿಯರು, ನನ್ನನ್ನು ಅವರು ತಮ್ಮ ಮಗನಂತೆ ಕಾಣುತ್ತಾರೆ. ನಾನು ಅವರನ್ನು ತಂದೆಯಂತೆ ಕಾಣುತ್ತೇನೆ. ನನ್ನೊಂದಿಗೆ ಅವರು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಯಾವತ್ತೂ ನಕಾರಾತ್ಮಕವಾಗಿ ಮಾತನಾಡಿಲ್ಲ…” ಎಂದು ರಾಂಧ್ವಾ ಎಎನ್‌‌ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.


ಇದನ್ನೂ ಓದಿ: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್ ರಾಜೀನಾಮೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪುಲ್ವಾಮದಲ್ಲಿ ಹತರಾದ ಯೋಧರ ಪತ್ನಿಯರ ಮಂಗಳಸೂತ್ರ ಕಸಿದವರು ಯಾರು? : ಡಿಂಪಲ್ ಯಾದವ್

0
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ತಾಯಂದಿರು, ಸಹೋದರಿಯರ 'ಮಂಗಳಸೂತ್ರ' ಕಿತ್ತುಕೊಳ್ಳಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ತಿರುಗೇಟು ನೀಡಿದ್ದು, "ಪುಲ್ವಾಮ ದಾಳಿಯಲ್ಲಿ ಹತರಾದ ಸೈನಿಕರ...