ಅಪರೂಪದ ಇರುವೆಗಳನ್ನು ಪತ್ತೆ ಮಾಡಿದ ಏಟ್ರಿ: ಕುರುಡು ಇರುವೆಗೆ ಬರಹಗಾರ ಗಣೇಶಯ್ಯ ಹೆಸರು

“ಅಶೋಕ ಟ್ರಸ್ಟ್ ಫಾರ್‌ ರೀಸರ್ಚ್‌ ಇನ್‌ ಇಕಾಲಜಿ ಆ್ಯಂಡ್‌ ಎನ್ವಿರಾನ್‌ಮೆಂಟ್‌” (ATREE ) ಎಂಬ ಬೆಂಗಳೂರಿನ ಸಂಶೋಧನ ಕೇಂದ್ರದ ಕೀಟಶಾಸ್ತ್ರಜ್ಞರು ಎರಡು ಹೊಸ ಅಪರೂಪದ ಇರುವೆಗಳನ್ನು Eaglenest wild life santuary (EWS) ಎಂಬ ವನ್ಯಜೀವಿ ಅಭಯಾರಣ್ಯದಿಂದ ಕಂಡುಹಿಡಿದ್ದಾರೆ.

ಏಟ್ರಿ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು ಹಾಗೂ ATREE ಸಂಶೋಧನ ಕೇಂದ್ರದಲ್ಲಿ ಕೀಟವರ್ಗಿಕರಣ ಮತ್ತು ಸಂರಕ್ಷಣ (Insect taxonomy and conservation) ಪ್ರಯೋಗಲಾಯ ತೆರೆಯುವುದರಲ್ಲಿ ಮುಖ್ಯ ಕಾರಣಕರ್ತರಾದ ಪ್ರೊ. ಕೆ. ಎನ್.ಗಣೇಶಯ್ಯರವರ ಹೆಸರನ್ನು ಒಂದು ಇರುವೆಗೆ ಇಡಲಾಗಿದೆ.

ಎರಡು ಹೊಸ ಇರುವೆಯಲ್ಲಿ ಒಂದು ಇರುವೆಗೆ “ಪ್ಯಾರಸಿಸ್ಸಿಯ ಗಣೇಶಯ್ಯಯಿ” ಎಂದು ಇಡಲಾಗಿದೆ. ಮತ್ತೊಂದು ಇರುವೆಯು ಭಾರತ ದೇಶದಲ್ಲಿ ಮೊದಲು ದಾಖಲಾಗಿರುವ ಕಾರಣ ಭಾರತದೇಶವನ್ನು ಉಲ್ಲೇಖಿಸಿ “ಸಿಸ್ಸಿಯ ಇಂಡಿಕ’ ಎಂದು ಹೆಸರಿಸಲಾಗಿದೆ.

ಈಗಾಗಲೇ ಅಂಡಮಾನ್‌ಲ್ಲಿನ ಒಂದು ಸಸ್ಯಕ್ಕೆ centotheca ganeshaiahiana ಎಂದು ಆಂಧ್ರ ಪ್ರದೇಶದ ಒಂದು ಸಸ್ಯಕ್ಕೆ Tripogan umaganeshii ಎಂದು ಹೆಸರಾದ ಕೃಷಿ ವಿಜ್ಞಾನಿ ಹಾಗೂ ಸಸ್ಯ ಪ್ರಪಂಚದಲ್ಲಿ ಅಪಾರ ಸಂಶೋಧನೆ ನಡೆಸಿರುವ ಅಂತರರಾಷ್ಟ್ರೀಯ ಮಟ್ಟದ ಪರಿಸರ ವಿಜ್ಞಾನಿ, ಚಿಂತಕ ಮತ್ತು ಬರಹಗಾರರು ಗಣೇಶಯ್ಯ.

ಇದನ್ನೂ ಓದಿ: ದಲಿತರಿಗೆ ವಸತಿ ಮಂಜೂರು ಮತ್ತು ಆತ್ಮವಿಶ್ವಾಸ ತುಂಬುತ್ತಿದ್ದ ಗಣಪಯ್ಯನವರ ಕುಟುಂಬ

ಅರುಣಾಚಲಪ್ರದೇಶದ ವೆಸ್ಟ್ ಕಾಮೆಂಗ್ ಜಿಲ್ಲೆಯ ಹಿಮಾಚಲದ ತಪ್ಪಲಿನಲ್ಲಿ ಪಕ್ಕೆ ಟೈಗರ್ ರಿಸರ್ವ್ ಮತ್ತು ಟೆಂಗ್ ಆರ್ಮಿ ಕಂಟೋನ್ಮೆಂಟ್ ಪ್ರದೇಶಗಳ ಮರೆಯಲ್ಲಿರುವ ಈಗಲ್‍ನೆಸ್ಟ್ ವನ್ಯಜೀವಿ ಅಭಯಾರಣ್ಯವು ಪರಿಸರ ವಿಜ್ಞಾನಿಗಳಿಗೆ ಮತ್ತು ಪ್ರಕೃತಿ ಉತ್ಸಾಹಿಗಳಿಗೆ ಸ್ವರ್ಗವಾಸಿಯಾಗಿದೆ. 218 ಚದರ ಕಿಲೋಮೀಟರ್‍ಗಳಷ್ಟು ವ್ಯಾಪಿಸಿರುವ ಅರಣ್ಯಪ್ರದೇಶವು ಸಮುದ್ರಮಟ್ಟದಿಂದ 500 ಮೀ ನಿಂದ 3250 ಮೀ ಎತ್ತರದ ನಡುವೆ ಅನೇಕ ಅಚ್ಚರಿಗಳನ್ನು ಒಳಗೊಂಡಿದೆ.

ಅಶೋಕ ಸಂಶೋಧನ ಕೇಂದ್ರದ ಕೀಟಶಾಸ್ರಜ್ಞರು ಈಗಲ್‍ನೆಸ್ಟ್ ಅಭಯಾರಣ್ಯದಿಂದ 200 ಕ್ಕೂ ಹೆಚ್ಚು ಜಾತಿಯ (Species) ಇರುವೆಗಳು ಒಟ್ಟಾರೆ ಭಾರತದ ಇರುವೆಗಳ ಸರಾಸರಿ 25% ರಷ್ಟು ಇರುವೆಗಳನ್ನು ಸಂಗ್ರಹಿಸಿದ್ದಾರೆ.  ಸಂಶೋಧಕರ ತಂಡ ಡಾ. ಪ್ರಿಯದರ್ಶನನ್ ಧರ್ಮರಾಜನ್ (Senior fellow ) ಅಸ್ವಜ್ ಪುನ್ನಥ್ ಸಹನಶ್ರೀ (ATREE Bangalore ) ಹಾಗೂ ಡಾ. ಅನಿರುದ್ದ ಮರಾತೆ (IISC Bangalore) ಅವರುಗಳು ಆಸಕ್ತಿದಾಯಕ ಇರುವೆಗಳನ್ನು ಸಂಗ್ರಹಿಸಿದ್ದಾರೆ.

“ಪ್ಯಾರಸಿಸ್ಸಿಯ ಗಣೇಶಯ್ಯಯಿ” ಇರುವೆಯು ಹಳದಿ ಮಿಶ್ರಿತ ಕಂದು ಬಣ್ಣದ ಸಣ್ಣ ಗಾತ್ರದ ಇರುವೆ ಮತ್ತು ಮೇಲ್ಮೈ ಭಾಗವು ಮೈಕ್ರೂಪಂಕ್ಚರ್ಸ್‍ಗಳಿಂದ ಕೂಡಿರುವ ಈ ಇರುವೆಯು ತನ್ನ ಗೂಡನ್ನು ಕೊಳೆತ ದಿಂಬಿಗಳಲ್ಲಿ ಅಥವಾ ಕಲ್ಲುಗಳ ಅಡಿಯಲ್ಲಿ ನಿರ್ಮಿಸುತ್ತದೆ. ಇದನ್ನು ದಟ್ಟ ಅರಣ್ಯದ ಜನನಿಬಿಡ ಪ್ರದೇಶದಲ್ಲಿ ಸಮುದ್ರಮಟ್ಟದಿಂದ 1400ಮೀ ಎತ್ತರದಲ್ಲಿ ಸಂಗ್ರಹಿಸಲಾಗಿದೆ. ಭಾರತದಲ್ಲಿ ಒಟ್ಟು ಏಳು ಪ್ಯಾರಸಿಸ್ಸಿಯ ಇರುವೆಗಳಿದ್ದು ಅದರಲ್ಲಿ ಆರು ಇರುವೆಗಳು ಸ್ಥಳೀಯ (Endemic ) ಎಂದು ಗುರುತಿಸಲಾಗಿದೆ.

ಸಿಸ್ಸಿಯ ಜೀನಸ್ ಇರುವೆಗಳು ಕೂಡ ಅಪರೂಪದ ಇರುವೆಗಳು ಎಲೆಯ ತರಗು (leaf litter ) ಕೊಳೆತಮರ ಹಾಗೂ ಮಣ್ಣಿನಲ್ಲಿ ವಾಸಿಸುವ ಇರುವೆಗಳಾಗಿವೆ ಈ ಮೊದಲು ಚೀನಾ, ಜಪಾನ್ ಶ್ರೀಲಂಕ ಹಾಗೂ ಥೈಲಾಂಡ್ ದೇಶಗಳಲ್ಲಿ ದಾಖಲೆಗೊಂಡಿದ್ದು ಭಾರತದಲ್ಲಿ ಸೂಕ್ತವಾದ ದಾಖಲೆಯ ಕೊರತೆಯಿಂದ ಪ್ರಸ್ತುತ ದಾಖಲೆಯನ್ನು ಭಾರತಕ್ಕೆ ಮೊದಲ ದಾಖಲೆಯಾಗಿ ಪರಿಗಣಿಸಲಾಗಿದೆ.

“ಸಿಸ್ಸಿಯ ಇಂಡಿಕ” ಇರುವೆಯು ಕೆಂಪುಮಿಶ್ರಿತ ಕಂದು ಬಣ್ಣಹೊಂದಿದ್ದು ಮೇಲ್ಮೈ ಭಾಗವು ಚಿಕ್ಕ ಚಿಕ್ಕ ಪಂಕ್ಚರ್ಸ್ ಇದ್ದು ಕುರುಡು ಇರುವೆಯಾಗಿದೆ ಈ ಇರುವೆಯನ್ನು ಅರಣ್ಯದ ಒಳಭಾಗದಲ್ಲಿ ಸಮುದ್ರ ಮಟ್ಟದಿಂದ 1600 ಮೀ ಎತ್ತರದಲ್ಲಿ ಸಂಗ್ರಹಿಸಲಾಗಿದೆ.

ಬಹಸಂಖ್ಯಾ ಇರುವೆಗಳು ಕ್ರಿಪ್ಟೋ ಬಯೋಟಿಕ್ ಜೀವನ ಶೈಲಿಯನ್ನು ಒಳಗೂಡಿಸಿಕೊಂಡು ದಟ್ಟಅರಣ್ಯದಲ್ಲಿ ಉದುರಿರುವ ಎಲೆಗಳಲ್ಲಿ ಮಣ್ಣಿನ ಅಡಿಯಲ್ಲಿ ಮರೆಯಾಗಿ ಜೀವಿಸುತ್ತಿರುತ್ತವೆ. ಇದರಲ್ಲಿ ಬಹಳಷ್ಟು ವಿಜ್ಞಾನಕ್ಕೆ ಅಪರಿಚತವಾಗಿರುವ ಇರುವೆಗಳಿದ್ದಾವೆ ಹೊಸ ದಾಖಲೆಯಾದ ಪ್ಯಾರಸಿಸ್ಸಿಯ ಹಾಗೂ ಸಿಸ್ಸಿಯ ಇರುವೆಗಳು ಕೂಡ ಬಹುಅಪರೂಪದ ಸುಲಭವಾಗಿ ದೊರಕದ ಇರುವೆಗಳಾಗಿದೆ ಆದ್ದರಿಂದ ಈ ರೀತಿಯ ಇರುವೆಗಳನ್ನು ಸಂಗ್ರಹಿಸಲು Non-conventional ವಿಧಾನವಾದ Winkler extraction ಅನ್ನು ಬಳಸಲಾಗುತ್ತದೆ. ಮುಂಬರುವ ಸಂಶೋಧನೆಯಲ್ಲಿ ಈಸ್ಟ್ರನ್ ಹಿಮಾಲಯದ ಪ್ರದೇಶಗಳನ್ನು ವ್ಯಾಪಕವಾಗಿ ಅನ್ವೇಷಿಸಿದರೆ ಅದರಲ್ಲೂ Non-conventional ವಿಧಾನಗಳ ಕೀಟ ಸಂಗ್ರಹಣ ಬಳಕೆಯಿಂದ ಇನ್ನು ಅಪರೂಪವಾದ ವಿಭಿನ್ನವಾದ ಹೊಸ ಹೊಸ ಇರುವೆಗಳು ದೊರೆಯಬಹುದು ಎಂದು ತಿಳಿಸಿದೆ.

ಈ ಸಂಶೋಧನೆಯನ್ನು Department of biotechnology (DBT Government of India) and National Mission on Himalayan Studies (MOEF & CC, Government of India) and the John D and Catherine T.Mac Arthur ಫೌಂಡೆಶನ್ ಬೆಂಬಲಿಸಿದ್ದಾರೆ.

* ಚಿದಾನಂದ್, ಯುವ ಸಂಚಲನ


ಇದನ್ನೂ ಓದಿ: ಬಹುಜನ ಭಾರತ; ಫಿರೋಜ್ ಗಾಂಧೀ ಎಂಬ ನೆಹರೂ ಅಳಿಯ ಹೀಗಿದ್ದರು…

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಚಿದಾನಂದ್

LEAVE A REPLY

Please enter your comment!
Please enter your name here