ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಸೋಮವಾರ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ’ನಾನು ನಿವೃತ್ತಿ ಹೊಂದಿದ್ದೇನೆ’ ಎಂದು ಪ್ರಾರಂಭವಾಗುವ ಬರಹವೊಂದನ್ನು ಪೋಸ್ಟ್ ಮಾಡಿದ್ದು, ಅವರ ಅಭಿಮಾನಿಗಳಿಗೆ ’ಶಾಕ್’ ನೀಡಿದ್ದಾರೆ.
— Pvsindhu (@Pvsindhu1) November 2, 2020
ಇದನ್ನೂ ಓದಿ: ’ಆಟೋರಾಜ’ನ ನೆನಪಲ್ಲಿ… ಶಂಕರ್ ನಾಗ್ ನಮ್ಮನ್ನಗಲಿ ಇಂದಿಗೆ 30 ವರ್ಷ!
ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮತ್ತು ದಪ್ಪ ಅಕ್ಷರಗಳಲ್ಲಿ ಬರೆದ “ಐ ರಿಟೈರ್” ನೊಂದಿಗೆ ಪ್ರಾರಂಭವಾಗುವ ಬರಹವೂ “ಡೆನ್ಮಾರ್ಕ್ ಓಪನ್ ಕೊನೆಯದ್ದು, ನಾನು ನಿವೃತ್ತಿ ಹೊಂದಿದ್ದೇನೆ” ಎಂಬುವುದು ಅವರ ಸರಣಿ ಪೋಸ್ಟ್‌ನ ಮೊದಲ ಭಾಗವಾಗಿದೆ.
ಮುಂದುವರೆದ ಪೋಸ್ಟ್‌ನಲ್ಲಿ ಅವರು, ತನ್ನ ಭಾವನೆಗಳೊಂದಿಗೆ ತಾನು ಹೇಗೆ ಸ್ವಚ್ಛವಾಗಿ ಇರಬೇಕೆಂದು ಬಯಸುತ್ತಾರೆ ಎಂದು ಹೇಳಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕವು ಹೇಗೆ ಪ್ರಭಾವ ಬೀರಿದೆ ಎಂಬುದರ ಬಗ್ಗೆ ಅವರು ಬರೆದಿದ್ದಾರೆ.
ಆದಾಗ್ಯೂ ಅವರ ಪೋಸ್ಟ್‌ನ ಕೊನೆಯಲ್ಲಿ ಟ್ವಿಸ್ಟ್ ನೀಡಿದ್ದಾರೆ. “ಇಂದು ನಾನು ಈ ಅಶಾಂತಿ ಪ್ರಜ್ಞೆಯಿಂದ ನಿವೃತ್ತಿ ಹೊಂದಲು ಆಯ್ಕೆ ಮಾಡಿಕೊಂಡಿದ್ದೇನೆ. ಈ ನಕಾರಾತ್ಮಕತೆಯಿಂದ ನಾನು ನಿವೃತ್ತಿ ಹೊಂದಿದ್ದೇನೆ” ಎಂದು ಅವರು ಬರೆದಿದ್ದಾರೆ. ತನ್ನ ಬರಹವು ಅಭಿಮಾನಿಗಳಿಗೆ “ಮಿನಿ ಹೃದಯಾಘಾತ” ನೀಡಿರಬಹುದು ಎಂದಿರುವ ಅವರು, “ಅಭೂತಪೂರ್ವ ಸಮಯಕ್ಕೆ ಅಭೂತಪೂರ್ವ ಕ್ರಮಗಳು ಬೇಕಾಗುತ್ತವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಮೇಲೆ FIR!
ಅವರ ಪೋಸ್ಟ್‌ನ ಮೊದಲ ಭಾಗವನ್ನು ಓದಿದ್ದ ಹಲವಾರು ಜನರು ಆಶ್ಚರ್ಯ ವ್ಯಕ್ತಪಡಿಸಿದ್ದರೂ ನಂತರದ ಬರಹವನ್ನು ಓದಿ ಹಾರೈಸಿದ್ದಾರೆ. ಪಿ.ವಿ ಸಿಂಧು ಪ್ರಸ್ತುತ ಲಂಡನ್‌ನಲ್ಲಿದ್ದು, ಮುಂದಿನ ವರ್ಷದ ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟದ ಏಷ್ಯಾ ಹಂತಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
My reaction while reading this.
More power to you champion @Pvsindhu1. pic.twitter.com/hK7YlAsK1z— Durgansh Dixit (@DurganshDixit) November 2, 2020
ಇದನ್ನೂ ಓದಿ: ಮೋದಿ ಜಿಂದಾಬಾದ್, ಜೈ ಶ್ರೀ ರಾಮ್ ಎನ್ನಲು ನಿರಾಕರಿಸಿದ ಮುಸ್ಲಿಂ ಆಟೋ ಡ್ರೈವರ್ ಮೇಲೆ ಹಲ್ಲೆ


