Homeರಾಜಕೀಯಕುತ್ತಿಗೆಗೇ ಸುತ್ತಿಕೊಳ್ಳುತ್ತಿದೆ ರಫೇಲ್‌ಕುಣಿಕೆ!

ಕುತ್ತಿಗೆಗೇ ಸುತ್ತಿಕೊಳ್ಳುತ್ತಿದೆ ರಫೇಲ್‌ಕುಣಿಕೆ!

- Advertisement -
- Advertisement -

‘ರಫೇಲ್ ಅವ್ಯವಹಾರದ ಬಗ್ಗೆ ಸೀರಿಯಸ್ ತನಿಖೆ ನಡೆದಿದ್ದೆ ಆದಲ್ಲಿ ಪ್ರಧಾನಿ ಮೋದಿಯವರನ್ನ ಬಚಾವು ಮಾಡಲು ಯಾರಿಂದಲೂ ಸಾಧ್ಯವಿಲ್ಲ’. ಇದು ಮೊನ್ನೆ ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ ಮಾತಿನ ಸಾರಾಂಶ. ಎಷ್ಟೆÃ ಆಗಲಿ ರಾಹುಲ್ ಒಬ್ಬ ರಾಜಕಾರಣಿ. ಅದರಲ್ಲೂ ಮೋದಿಯವರ ಎದುರಾಳಿ ಪಕ್ಷದ ಪ್ರೆಸಿಡೆಂಟು. ಹಾಗಾಗಿ ರಾಹುಲ್ ಆರೋಪದಲ್ಲಿ ಒಂದಷ್ಟು ರಾಜಕಾರಣದ ಛಾಯೆಯನ್ನು ಕಾಣುವ ಸಂಭವ ಇದ್ದೆÃ ಇರುತ್ತೆ. ಆದರೆ ರಫೇಲ್ ಲಫಡಾವನ್ನು ಬಯಲಿಗೆಳೆದಿದ್ದು ಕಾಂಗ್ರೆಸ್ಸೂ ಅಲ್ಲ, ರಾಹುಲ್ಲೂ ಅಲ್ಲ. ತಮ್ಮ ವೃತ್ತಿ ಧರ್ಮದ ಬಗ್ಗೆ ನಿಷ್ಠೆ ಕಾಪಿಟ್ಟುಕೊಂಡಿರುವ ದಿ ವೈರ್, ಕ್ಯಾರಾವಾನ್, ನ್ಯೂಸ್ ಕ್ಲಿಕ್, ದಿ ಪ್ರಿಂಟ್‌ನಂತಹ ಮಾಧ್ಯಮಗಳು ಹಾಗೂ ಸ್ವತಃ ಈ ಒಟ್ಟಾರೆ ಹಗರಣದ ಜೋಡಿ ಪಾಲುದಾರ ಸಂಸ್ಥೆಗಳಾದ ಫ್ರಾನ್ಸಿನ ಡೆಸಾಲ್ಟ್ ಮತ್ತು ಭಾರತದ ಅನಿಲ್ ಅಂಬಾನಿಯ ರಿಲಾಯನ್ಸ್ ಏರೋಸ್ಟçಕ್ಚರ್ ಕಂಪನಿಗಳ ವಾರ್ಷಿಕ ಆಯವ್ಯಯದ ಲೆಕ್ಕಪತ್ರಗಳು! ಆನಂತರವೂ ಇದನ್ನು ಜನರ ಮುಂದೆ ಚರ್ಚೆಗಿಡುವ ಸಾಹಸ ಮಾಡಿದ್ದು ಸಹಾ ಯಾರೋ ಕಾಂಗ್ರೆಸ್‌ವಾಲಾಗಳಲ್ಲ, ಇದೇ ಬಿಜೆಪಿಯ ಯಶವಂತ್ ಸಿನ್ಹಾ, ಅರುಣ್ ಶೌರಿ, ಸ್ವರಾಜ್ ಇಂಡಿಯಾದ ಪ್ರಶಾಂತ್ ಭೂಷಣ್‌ರಂತವರು. ಸಿಬಿಐಗೆ ಕಂಪ್ಲೆಂಟ್ ಕೊಟ್ಟಿದ್ದೂ ಇವರೇ, ಸುಪ್ರಿÃಂ ಕೋರ್ಟ್ಗೆ ಪಿಐಎಲ್ ಸಲ್ಲಿಸಿರೋದೂ ಇವರೇ!!
ಇಷ್ಟೆಲ್ಲಾ ಇದ್ದರೂ, `ಸುಳ್ಳ’ನ್ನೆÃ ತಮ್ಮ `ಬೆಲೆ’ಯಾಗಿಸಿಕೊಂಡು ಮಾತಿನ ಚಕ್ರವರ್ತಿಯಂತೆ ಮಿಂಡ್ಳು ಮೆರೆಯುತ್ತಿರುವ ಕೆಲವರು ಇಡೀ ರಫೇಲ್ ಹಗರಣವನ್ನು ರಾಹುಲ್‌ಗಾಂಧಿ ಎಂಬ ಒಬ್ಬ ಕಾಂಗ್ರೆಸಿಗ ಕಂ ನೆಹರೂ ವಂಶಸ್ಥ, ಮೋದಿಯವರ ಮೇಲೆ ಮಾಡುತ್ತಿರುವ ಯಕಶ್ಚಿತ್ ರಾಜಕೀಯ ಆರೋಪದಂತೆ ಬಿಂಬಿಸಲು ಲೀಟರುಗಟ್ಟಲೆ ಸುಳ್ಳುಗಳನ್ನು ಸುರಿಸುತ್ತಾ ಮುಕ್ಕಾಲು ತಾಸುಗಳ ವೀಡಿಯೋ ಮಾಡಿಕೊಂಡು ಪರದಾಡುತ್ತಿರೋದನ್ನ ನೋಡಿದರೆ ನಗು ಬರುತ್ತೆ. ಅಂತವರ ಹೊಟ್ಟೆಪಾಡಿನ ವಿಚಾರ ಒತ್ತಟ್ಟಿಗಿರಲಿ, ಈಗ ಅಸಲೀ ಸಂಗತಿಗೆ ಬರೋಣ. ದಿನದಿಂದ ದಿನಕ್ಕೆ ರಫೇಲ್ ವ್ಯವಹಾರದಲ್ಲಿ ಹೊರಬರುತ್ತಿರುವ ಅಚ್ಚರಿ, ಆಘಾತಗಳನ್ನು ನೋಡಿದರೆ ಮೋದಿಯವರು ಈ ಕುಣಿಕೆಯಿಂದ ಬಚಾವಾಗುವ ಛಾನ್ಸು ಕ್ಷಿÃಣಿಸಿಂದತೆಯೇ ಭಾಸವಾಗುತ್ತಿದೆ. ಸಿಬಿಐ ಅಂಗಳದಲ್ಲಿ ರಫೇಲ್ ಕೇಸು ದರ್ಜಾಗುತ್ತಿದ್ದಂತೆಯೇ ಸಮಸ್ತ ಸಿಬಿಐ ಆಂತರ್ಯಕ್ಕೆÃ ಒಳಜಗಳದ ಬೆಂಕಿ ಹತ್ತಿಕೊಂಡು ಧಗಧಗಿಸುತ್ತಿರೋದು ತೀರಾ ಕಾಕತಾಳೀಯ ಅನ್ನಿಸದಿರೋದು ಸಹಾ ಇದೇ ಕಾರಣಕ್ಕೆ. ಹಿಂದಿನ ಸಂಚಿಕೆಯಲ್ಲಿ ನಮ್ಮ ತಂಡದ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರು ಈ ರಫೇಲ್ ಪ್ರೆÃರಿತ ಸಿಬಿಐ ಸಂಚಿನ ಬಗ್ಗೆ ವಿವರವಾಗಿ ಬಿಚ್ಚಿಟ್ಟಿರೋದ್ರಿಂದ ಇಲ್ಲಿ ನಾವು ರಫೇಲ್‌ನ ಹೊಸ ತಿರುವುಗಳತ್ತ ಗಮನ ಹರಿಸೋಣ.
ಸ್ವತಃ ಸುಪ್ರಿÃಂಕೋರ್ಟ್ ಮಧ್ಯಪ್ರವೇಶ ಮಾಡಿರೋದು, ಅದಕ್ಕಿಂತ ಮುಖ್ಯವಾಗಿ ಅದು ಮಧ್ಯಪ್ರವೇಶ ಮಾಡುವ ವೇಳೆಗೆ ಸರಿಯಾಗಿ ಅದರ ಚುಕ್ಕಾಣಿ ದೀಪಕ್ ಮಿಶ್ರಾರ ಕೈಯಿಂದ ಜಾರಿ ರಂಜನ್ ಗೊಗಾಯ್‌ರಂತಹ ರೆಬೆಲ್ ವ್ಯಕ್ತಿತ್ವದ ನ್ಯಾಯಾಧೀಶರ ಕೈಸೇರಿರೋದು ಈ ವ್ಯವಹಾರದಲ್ಲಿ ಭಾಗಿಯಾದವರ ಉಸಿರು ಬಿಗಿಹಿಡಿಯುವಂತೆ ಮಾಡಿದೆ. ಹಿಂದಿನ ಯುಪಿಎ ಸರ್ಕಾರ 126 ರಫೇಲ್ ವಿಮಾನಗಳನ್ನು ಟೆಕ್ನಾಲಜಿ ವರ್ಗಾವಣೆ ಸಹಿತ, ಎಚ್‌ಎಎಲ್ ಸಾರ್ವಜನಿಕ ಸಂಸ್ಥೆಯ ಸಹಭಾಗಿ ನಿರ್ಮಾಣದ ಒಪ್ಪಂದದೊಂದಿಗೆ ಫ್ರಾನ್ಸ್ನ ಡೆಸ್ಸಾಲ್ಟ್ ಕಂಪನಿಯಿಂದ ಖರೀದಿಸಲು ಮಾಡಿಕೊಂಡಿದ್ದ ಒಪ್ಪಂದವನ್ನು ಮೋದಿಯವರು ಏಕಾಏಕಿ ರದ್ದು ಮಾಡಿದಾಗಿನಿಂದಲೂ ಇಲ್ಲೊಂದು ಹಗರಣದ ದುರ್ನಾತ ವಾಸನೆಯಾಡುತ್ತಲೇ ಇತ್ತು. ಆದರೆ 18 ನವೆಂಬರ್ 2016ರಂದು ಪಾರ್ಲಿಮೆಂಟಿನಲ್ಲಿ ಕೇಳಲಾದ ಲಿಖಿತ ಪ್ರಶ್ನೆಯೊಂದಕ್ಕೆ ರಕ್ಷಣಾ ಇಲಾಖೆಯ ರಾಜ್ಯಖಾತೆ ಸಚಿವರಾದ ಸುಭಾಷ್ ಭಮ್ರೆಯವರೆ ಉತ್ತರ ಹೇಳುತ್ತಾ ಹೊಸ ಒಪ್ಪಂದದಲ್ಲಿ ಪ್ರತಿ ವಿಮಾನಕ್ಕೆ ಕೇವಲ 670 ಕೋಟಿ ರೂಪಾಯಿ ದರ ನಿಗದಿಯಾಗಿದೆ ಅಂತ ತಿಳಿಸಿದ ಮೇಲೆ ಎಲ್ಲರೂ ತಣ್ಣಗಾಗಿದ್ದರು. ಯಾಕೆಂದರೆ ಯುಪಿಎ ಸರ್ಕಾರದ ಒಪ್ಪಂದ ಪ್ರತಿ ವಿಮಾನಕ್ಕೆ ನಿಗದಿ ಮಾಡಿದ್ದು 610 ಕೋಟಿ ರೂಪಾಯಿ. ಹಳೆಯ ದರಕ್ಕೂ ಹೊಸ ದರಗಳಿಗೂ ಹೆಚ್ಚೆÃನು ವ್ಯತ್ಯಾಸ ಇಲ್ಲದೇ ಇದ್ದುದರಿಂದ ಹಗರಣ ನಡೆದಿಲ್ಲ ಎಂದು ನಂಬಲಾಗಿತ್ತು. ಅನುಭವಿ, ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ ಸಂಸ್ಥೆಯನ್ನು ಹೊರಗಿಟ್ಟು ಅನುಭವವೇ ಇಲ್ಲದ, ಹೊಸ ಒಪ್ಪಂದಕ್ಕೂ ಕೇವಲ ಹದಿಮೂರು ದಿನಗಳ ಹಿಂದಷ್ಟೆÃ ಹುಟ್ಟಿಕೊಂಡ ಅನಿಲ್ ಅಂಬಾನಿಯ ಖಾಸಗಿ ಕಂಪನಿಗೆ ಒಪ್ಪಂದ ವಹಿಸಿದ್ದೆÃಕೆ ಎಂಬ ಪ್ರಶ್ನೆ ಹಾಗೇ ಉಳಿದಿತ್ತಾದರು ಹಣದ ವಿಚಾರದಲ್ಲಿ ಲಫಡಾ ನಡೆದಿಲ್ಲ ಎಂಬ `ಜನಪ್ರಿಯ’ ನಂಬಿಕೆಯಿಂದಾಗಿ ರಫೇಲ್ ವ್ಯವಹಾರ, ಚರ್ಚೆಯಿಂದ ದೂರವೇ ಉಳಿದಿತ್ತು. ಆದರೆ ಯಾವಾಗ ಫ್ರಾನ್ಸ್ನ ಡೆಸ್ಸಾಲ್ಟ್ ಕಂಪನಿ ತನ್ನ ವಾರ್ಷಿಕ ಆಯವ್ಯಯದ ರಿಪೋರ್ಟಿನಲ್ಲಿ ರಫೇಲ್ ವ್ಯವಹಾರದ ಗಾತ್ರ ರೂ.59,000 ಕೋಟಿಯದ್ದು ಎಂದು ಬಹಿರಂಗಪಡಿಸಿತೊ ಆಗಲೇ ನೋಡಿ ಭಾರತೀಯರು ಹೌಹಾರಿದ್ದು. ಯಾಕೆಂದ್ರೆ ಮೋದಿಯವರ ಹೊಸ ಒಪ್ಪಂದದಲ್ಲಿ ಖರೀದಿಸಲಾಗುತ್ತಿರೋದು ಕೇವಲ 36 ವಿಮಾನಗಳನ್ನು, ಅದೂ ಟೆಕ್ನಾಲಜಿ ವರ್ಗಾವಣೆ ಇಲ್ಲದೆ. ಅಂದರೆ ಪ್ರತಿ ವಿಮಾನಕ್ಕೆ 1,660 ಕೋಟಿ ರೂಪಾಯಿಯನ್ನು ಭಾರತದ ಬೊಕ್ಕಸದಿಂದ ತೆರುತ್ತಿರೋದು ಇದರಿಂದ ಬಯಲಾಗಿತ್ತು. ಒಂದು ವಿಮಾನಕ್ಕೆ ರೂ.610 ಕೋಟಿ ಎಲ್ಲಿ, ಅದೇ ಒಂದು ವಿಮಾನಕ್ಕೆ ಅಜಮಾಸು ಮೂರು ಪಟ್ಟು ಹೆಚ್ಚು ಅಂದರೆ ರೂ.1,660 ಕೋಟಿ ಎಲ್ಲಿ!!
ಯಾವಾಗ ರಫೇಲ್ ಭಾನ್ಗಡಿ ಇಷ್ಟು ನೇರಾನೇರ ಬಯಲಾಯ್ತೊ ಆಗಲೇ ಸುಪ್ರಿÃಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರುಗಳು ದಾಖಲಾದವು. ಒಂದು ದೂರನ್ನು ಅರುಣ್‌ಶೌರಿ, ಪ್ರಶಾಂತ್ ಭೂಷಣ್ ಮತ್ತು ಯಶವಂತ್ ಸಿನ್ಹಾ ಜಂಟಿಯಾಗಿ ದಾಖಲಿಸಿದ್ದರೆ, ಇನ್ನೆರಡನ್ನು ಮನೋಹರ್ ಲಾಲ್ ಶರ್ಮಾ ಹಾಗೂ ವಿವೇಕ್ ದಂಡಾ ಎಂಬ ಅಡ್ವೊಕೇಟ್‌ಗಳು ಪ್ರತ್ಯೆÃಕವಾಗಿ ದಾಖಲಿಸಿದ್ದಾರೆ. ಇವಕ್ಕೂ ಮೊದಲು ಕಾಂಗ್ರೆಸ್ ನಾಯಕ ತೆಹಸೀನ್ ಎಸ್ ಪೋನಾವಾಲಾ ಕೂಡಾ ದೂರು ದಾಖಲಿಸಿದ್ದಾರೆ. ಆನಂತರ ಆಮ್ ಆದ್ಮಿ ಪಾರ್ಟಿಯ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಕೂಡಾ ಪಿಐಎಲ್ ದಾಖಲಿಸಿದ್ದಾರೆ. ಈ ದೂರುಗಳನ್ನು ಕೈಗೆತ್ತಿಕೊಂಡು ವಿಚಾರಣೆಗೆ ಮುಂದಾದಾಗಲೂ ಸರ್ಕಾರ ಈ ಮೊದಲು ಮಾಡಿದಂತೆ `ರಕ್ಷಣಾ ಗೌಪ್ಯತೆ’ಯನ್ನು ಮುಂದೆ ಮಾಡಿ ಬೆಲೆಗಳನ್ನು ಬಹಿರಂಗಪಡಿಸುವುದರಿಂದ ನುಣುಚಿಕೊಳ್ಳಲಿದೆ ಎಂದೇ ಅಂದಾಜಿಸಲಾಗಿತ್ತು.
ರಂಜನ್ ಗೊಗಾಯ್, ಎಸ್.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್‌ರ ತ್ರಿಸದಸ್ಯ ಪೀಠ ವಿಚಾರಣೆ ಶುರು ಮಾಡಿದಾಗಲೂ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅದೇ ಗೌಪ್ಯತೆ ವಾದವನ್ನೆÃ ಮುಂದಿಟ್ಟರು. ಆದರೆ ಸುಪ್ರಿÃಂಕೋರ್ಟ್ ಈ ವಿಚಾರದಲ್ಲಿ ತಾನು ಕೇಂದ್ರದ ತಾಳಕ್ಕೆ ಕುಣಿಯಲಾರೆ ಎಂಬ ಸಂದೇಶವನ್ನು ಬಲು ಜಾಣ್ಮೆಯಿಂದ ಹೊರಹಾಕಿದೆ. ಬೆಲೆಗಳನ್ನು ಬಹಿರಂಗ ಪಡಿಸಲಾಗದು ಎನ್ನುವುದಾದರೆ ಅದನ್ನು ಒಂದು ಅಫಿಡವಿಟ್‌ನ ಮೂಲಕ ತನಗೆ ಸಲ್ಲಿಸುವಂತೆ ಸರ್ಕಾರಕ್ಕೆ ತಿಳಿಸಿರೋದಲ್ಲದೆ, ವ್ಯವಹಾರದ ತಾಂತ್ರಿಕ ಗೌಪ್ಯತೆಗಳಿಗೆ ಲೋಪಬಾರದಂತೆ ಆಫ್‌ಸೆಟ್ ಪಾರ್ಟನರ್ ಆಯ್ಕೆಯ ಪ್ರಕ್ರಿಯೆ, ದರ ನಿಗದಿ ಮಾಡಿದ ಮಾನದಂಡ ಇತ್ಯಾದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ತನಗೆ ಸಲ್ಲಿಸುವಂತೆ ಮೌಖಿಕ ನಿರ್ದೇಶನ ನೀಡಿದೆ. ಗಮನಿಸಬೇಕಾದ ಸಂಗತಿಯೆಂದರೆ ತನ್ನಲ್ಲಿ ಸಲ್ಲಿಕೆಯಾಗಿರುವ ಪಿಐಎಲ್‌ಗಳು (ಎಂ.ಎಲ್.ಶರ್ಮಾ ಮತ್ತು ವಿವೇಕ್ ದಂಡಾ) ಹಲವು `ಅಸಮರ್ಪಕತೆ’ಗಳನ್ನು ಒಳಗೊಂಡಿವೆ ಎಂದು ಸ್ವತಃ ನ್ಯಾಯಾಲಯವೇ ಘೋಷಿಸಿಕೊಂಡಿದೆಯಲ್ಲದೆ, ತಾನು ಈಗ ಬಯಸಿರುವ ವಿವರಗಳು ಕೇವಲ ತನ್ನ ಬಯಕೆಗಳನ್ನು ತೃಪ್ತಿಪಡಿಸಿಕೊಳ್ಳಲಷ್ಟೆÃ ಎಂಬ ಸಡಿಲಿಕೆಯನ್ನೂ ನೀಡಿದೆ. ಸರ್ಕಾರದ ಜೊತೆ ಸಂಘರ್ಷಕ್ಕಿಳಿಯಲು ಅದು ಹೋಗಿಲ್ಲ. ಹಾಗೇನಾದರು ಆಗಿದ್ದಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಕದನವೇರ್ಪಟ್ಟು ಮೂಲ ವಿಷಯ ಮೂಲೆಗುಂಪಾಗುವ ಸಂಭವವಿತ್ತು. ಸರ್ಕಾರಕ್ಕೆ ನೋಟಿಸ್ ನೀಡುವ ಬದಲು ಮೌಖಿಕ ನಿರ್ದೇಶನ ನೀಡಿದ್ದೂ ಕೂಡಾ ಜಾಣ್ಮೆಯ ನಡೆ.
ಅಸಲಿಗೆ ಗೌಪ್ಯತೆಯ ನಿಯಮಗಳು ವಿಮಾನದ ತಾಂತ್ರಿಕ ಸಂಗತಿಗಳು ಹಾಗೂ ಅದರ ಕಾರ್ಯವೈಖರಿ ತಂತ್ರಜ್ಞಾನಕ್ಕೆ ಸಂಬಂಧಿಸಿರುತ್ತವೆಯೇ ಹೊರತು ಬೆಲೆಗಳಿಗೆ ಸಂಬಂಧಿಸುವುದೇ ಇಲ್ಲ. ಒಂದೊಮ್ಮೆ ಬೆಲೆ ಗೌಪ್ಯ ಸಂಗತಿ ಎನ್ನುವುದೇ ಆಗಿದ್ದರೆ ಈ ಹಿಂದೆ ಇದೇ ಸರ್ಕಾರದ ರಕ್ಷಣಾ ಇಲಾಖೆಯ ರಾಜ್ಯಖಾತೆ ಸಚಿವ ಭಮ್ರೆಯವರು ಸಂಸತ್ತಿನಲ್ಲಿ ಲಿಖಿತ ರೂಪದಲ್ಲೆÃಕೆ ಬಹಿರಂಗಪಡಿಸಿದ್ದರು? ಹಾಗೆ ನೋಡಿದರೆ, ಡೆಸ್ಸಾಲ್ಟ್ ಕಂಪನಿ ತನ್ನ ಆಯವ್ಯಯ ಲೆಕ್ಕಪತ್ರದಲ್ಲಿ ಇದನ್ನಾಗಲೇ ಬಹಿರಂಗಪಡಿಸಿದೆ. ಹಾಗಿರುವಾಗ ಗೌಪ್ಯತೆ ಎಲ್ಲಿಂದ ಬಂತು? ಸಾಲದ್ದಕ್ಕೆ, ಇದೇ ವರ್ಷದ ಮಾರ್ಚ್ನಲ್ಲಿ ಫ್ರಾನ್ಸ್ನ ಅಧ್ಯಕ್ಷ ಇಮ್ಯಾನುಯಲ್ ಮಾರ್ಕೋನ್ `ಭಾರತ ಸರ್ಕಾರ ತನ್ನ ಸಂಸತ್ತು ಮತ್ತು ವಿರೋಧ ಪಕ್ಷಗಳ ಮುಂದೆ ಬೆಲೆಗಳನ್ನು ಬಹಿರಂಗಪಡಿಸುವುದಾದರೆ ನಮ್ಮದೇನೂ ಅಭ್ಯಂತರವಿಲ್ಲ’ ಎಂದು ಹೇಳಿದ್ದಾರೆ. ಹಿಂದೊಮ್ಮೆ (ಹಳೆಯ ಯುಪಿಎ ಸರ್ಕಾರದ ಒಪ್ಪಂದ ರದ್ದಾಗುವುದಕ್ಕೂ ಮುನ್ನ) ಸ್ವತಃ ಅಂದಿನ ರಕ್ಷಣಾ ಸಚಿವರೇ, `ಶಸ್ತçಸಜ್ಜಿತ 126 ರಫೇಲ್ ವಿಮಾನಗಳಿಗೆ 90,000 ಕೋಟಿ ರೂಪಾಯಿ ವೆಚ್ಚವಾಗಲಿದೆ’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇವೆಲ್ಲವೂ ದರಗಳು ಗೌಪ್ಯತೆ ನಿಯಮಕ್ಕೆ ಅನ್ವಯಿಸುವುದಿಲ್ಲ ಅನ್ನೊÃದನ್ನು ಸ್ಪಷ್ಟಪಡಿಸುತ್ತಿವೆ. ಒಂದು ವಿಮಾನಕ್ಕೆ ಮೂರುಪಟ್ಟು ಹೆಚ್ಚು ದರ ತೆತ್ತಿರುವ ಲೋಪವನ್ನು ಮುಚ್ಚಿಕೊಳ್ಳುವುದಕ್ಕೆÃ ಸರ್ಕಾರ `ಗೌಪ್ಯತೆ’ ನಿಯಮವನ್ನು ಗುರಾಣಿಯಾಗಿ ಬಳಸುತ್ತಿದೆಯೇ ಎಂಬ ಅನುಮಾನ ಎಂತವರಲ್ಲೂ ಮೂಡುತ್ತದೆ.
ಮುಂದಿನ ವಿಚಾರಣೆ ನವೆಂಬರ್ 14ಕ್ಕೆ ನಿಗದಿಯಾಗಿದೆ. ನ್ಯಾಯಾಲಯದ ನಡೆ ಏನಾಗುತ್ತೊÃ ಬಲ್ಲವರಿಲ್ಲ. ಆದರೆ ಸ್ಥೂಲವಾಗಿ ನೋಡಿದಾಗ ಇಲ್ಲಿ ಎರಡೇ ಸಾಧ್ಯತೆಗಳಿರೋದು. ಒಂದು, ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆಯಾಗುವ ವಿವರಗಳಲ್ಲಿ ಹಗರಣ ನಡೆದಿರುವುದು ಕೋರ್ಟ್ನ ಗಮನಕ್ಕೆ ಬಂದರೆ ಅದು ವಿಶೇಷ ತನಿಖೆಗೆ ಆದೇಶಿಸಲಿದೆ. ಎರಡನೆಯದು, ಅಂಕಿಅಂಶಗಳು ಸರಿಯಾಗಿವೆ ಅಂತ ಘೋಷಿಸಿ ಮೋದಿ ಸರ್ಕಾರಕ್ಕೆ ಕ್ಲಿÃನ್ ಚಿಟ್ ನೀಡೋದು. ರಫೇಲ್ ಹಗರಣವನ್ನು ಹತ್ತಿರದಿಂದ ಬಲ್ಲವರ ಪ್ರಕಾರ ಎರಡನೆಯ ಸಾಧ್ಯತೆಯ ಸಂಭವ ತೀರಾ ಕಮ್ಮಿ. ಹಾಗೊಮ್ಮೆ ಅಪ್ಪಿತಪ್ಪಿ ಕ್ಲಿÃನ್‌ಚಿಟ್ ಏನಾದರು ಸಿಕ್ಕಿಬಿಟ್ಟರೆ, ಈಗಷ್ಟೆÃ ಅಲ್ಲ ಮುಂದಿನ ದಿನಗಳಲ್ಲೂ ರಫೇಲ್ ವ್ಯವಹಾರದ ಮೇಲೆ ಕೇಳಿಬರುವ ಎಲ್ಲಾ ಆಪಾದನೆಗಳಿಗೂ ಸಮಾಧಿ ಕಟ್ಟಿದಂತಾಗುತ್ತೆ.

  • – ಗಿರೀಶ್ ತಾಳಿಕಟ್ಟೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...