- Advertisement -
ರಾಜಕುಮಾರನಾಗಿದ್ದ ಸಿದ್ಧಾರ್ಥ, ಬುದ್ಧನಾದ. ಬುದ್ಧನಾದ ಮೇಲೆ ಭಾರತದ ಎಲ್ಲ ಕಡೆ ಪ್ರವಾಸಕ್ಕೆ ಹೊರಟ. ಹಾಗೆ ಹೊರಟವನು ಒಮ್ಮೆ ತನ್ನ ಊರಾದ ಕಪಿಲವಸ್ತುವಿಗೂ ಭೇಟಿ ನೀಡಿದ. ಕಪಿಲವಸ್ತುವಿನಲ್ಲಿ ಮೊಕ್ಕಾಂ ಹೂಡಿದಾಗ, ಬುದ್ಧನ ಸೇವೆಯಲ್ಲಿದ್ದ ಸಿದ್ದಾರ್ಥನ ಸೋದರಳಿಯ ಆನಂದ ಬುದ್ಧನ ಪೂರ್ವಾಶ್ರಮದ ಮಡದಿ ಯಶೋಧರಾ ಅವರನ್ನು ಕಾಣಲು ಅವಳ ಅರಮನೆಗೆ ಬಂದ. ಆಕೆ ಪೂರ್ವಾಶ್ರಮದ ಗಂಡ ಸಿದ್ಧಾರ್ಥನ ಯೋಗಕ್ಷೆÃಮ ವಿಚಾರಿಸಿದಳು. ಬುದ್ಧನ ಕೀರ್ತಿ ಭಾರತದಲ್ಲಿ ಪಸರಿಸುತ್ತಿರುವುದನ್ನು ಕೇಳಿ ತಿಳಿದು ಸಂಪ್ರಿÃತಳಾದಳು. ಪೂರ್ವಾಶ್ರಮದ ಮಡದಿಯಾದ ಯಶೋಧರೆ ತನ್ನ ಮನೆಗೆ ಆತಿಥ್ಯ ಸ್ವಿÃಕರಿಸಲು ಬುದ್ಧನನ್ನು ಆನಂದನ ಮೂಲಕ ಆಹ್ವಾನಿಸಿದಳು. ಹಿಂತಿರುಗಿ ಬಂದ ಆನಂದ ಯಶೋಧರೆಯ ಆಹ್ವಾನದ ಬಗೆಗೆ ಬುದ್ದನಿಗೆ ತಿಳಿಸಿದ. ಮನೆ ತೊರೆದು ಸನ್ಯಾಸ ಸ್ವಿÃಕರಿಸಿದವರು ತನ್ನ ಪೂರ್ವಾಶ್ರಮದ ಮಡದಿ-ಮಕ್ಕಳನ್ನು ನೋಡಲು ಹೋಗುವುದು ಆ ದಿನಗಳಲ್ಲಿ ನಿಷೇಧಿಸಲ್ಪಟ್ಟಿತ್ತು. ಬುದ್ದ ಈ ನಿಯಮವನ್ನು ಮೀರಲು ತೀರ್ಮಾನಿಸಿದ. ಯಶೋಧರೆಯ ಕೋರಿಕೆಯನ್ನು ಮನ್ನಿಸಿ ಆಕೆಯ ಅರಮನೆಗೆ ಹೊರಟ.
ಯಶೋಧರೆ ಬುದ್ದನನ್ನು ಸಡಗರದಿಂದ, ಭಕ್ತಿಯಿಂದ ಸ್ವಾಗತಿಸಿದಳು. ತನಗೂ ದೀಕ್ಷೆ ನೀಡಬೇಕೆಂದು ವಿನಂತಿಸಿಕೊಂಡಳು. ಹೆಂಗಸರಿಗೆ ದೀಕ್ಷೆ ನೀಡಿದರೆ ನನ್ನ ಧರ್ಮಕ್ಕೆ ಅರ್ಧಾಯಸ್ಸು; ಆದ್ದರಿಂದ ದೀಕ್ಷೆ ಕೊಡಲೊಲ್ಲೆ ಎಂದರು ಬುದ್ದ. ಯಶೋಧರೆ ಕೆರಳಿದ ಸಿಂಹಿಣಿಯಂತಾದಳು. ಬುದ್ಧನಿಗೆ ಕಠಿಣ ಪ್ರಶ್ನೆಗಳನ್ನು ಕೇಳಿದಳು. ಪುರುಷರಿಗೆ ಮಾತ್ರ ಮನ್ನಣೆ ನೀಡುವ ಈ ನಿಮ್ಮ ಧರ್ಮದಲ್ಲಿ ಪರಿಪೂರ್ಣತೆಯಿಲ್ಲ; ಅದು ಮುಕ್ಕಾದ ಧರ್ಮ. ಈ ನಿಮ್ಮ ನಿಲುವನ್ನು ಒಪ್ಪಲಾಗುವುದಿಲ್ಲ’ ಎಂದಳು. ಬುದ್ಧ ಜಿಜ್ಞಾಸೆಗೆ ತೊಡಗಿದ. ಈ ಚರ್ಚೆಯ ಪರಿಣಾಮವಾಗಿ, ಯಶೋಧರೆಯ ಅಪೇಕ್ಷೆಯಂತೆ ಬುದ್ಧ ಆಕೆಗೆ ಧರ್ಮ ದೀಕ್ಷೆ ನೀಡಿದ.
- Advertisement -
ಬುದ್ದ ಹೆಂಗಸರಿಗೂ ಧರ್ಮ ದೀಕ್ಷೆ ನೀಡಿದ್ದರಿಂದ ಬೌದ್ಧ ಧರ್ಮಕ್ಕೆ ಅರ್ಧಾಯಸ್ಸು ಆದಂತೆ ಕಾಣುತ್ತಿಲ್ಲ. ಹಲವು ದೇಶಗಳಿಗೆ ವಿಸ್ತರಿಸಿ ಗಟ್ಟಿಯಾಗೇ ಬೇರುಬಿಟ್ಟಂತೆ ಕಾಣುತ್ತಿದೆ. ಹಾಗೆಯೇ ಮಹಿಳೆಯರಿಗೂ ಧರ್ಮ ದೀಕ್ಷೆ ಕೊಡುವ ಬುದ್ಧನ ನೀತಿ ವ್ಯಾಪಕ ಪರಿಣಾಮ ಬೀರಿದ್ದಂತೂ ನಿಜ. ಕಾಲದಿಂದ ಕಾಲಕ್ಕೆ ಈ ಸಾಮಾಜಿಕ ಜಾಗೃತಿ ವಿಸ್ತರಿಸುತ್ತಾ ಸಾಗಿದೆ. ಈಗಿನ ಕಾಲದಲ್ಲಿ ಸಿನಿಮಾ, ನಾಟಕ ಕಂಪನಿಗಳಲ್ಲಿ, ಸರ್ಕಾರದಲ್ಲಿ, ಖಾಸಗಿ ಕಂಪನಿಗಳಲ್ಲಿ, ಮಿಲ್ಲುಗಳಲ್ಲಿ, ಐಟಿ ಬಿಟಿಗಳಲ್ಲಿ, ಖಾಸಗಿ ಮತ್ತು ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಪುರುಷರು ಮತ್ತು ಸ್ತಿçÃಯರು ಒಟ್ಟಿಗೆ ಕೆಲಸ ಮಾಡುವ ಅವಕಾಶಗಳು ಹೆಚ್ಚುತ್ತಾ ಸಾಗಿವೆ. ಈ ಅವಕಾಶಗಳು ಹೆಚ್ಚಿದಂತೆಲ್ಲಾ ಸ್ತಿçÃಯರ ಮೇಲಿನ ದೌರ್ಜನ್ಯ, ಲಂಪಟತನ ಮಿತಿಮೀರಿ ಬೆಳೆದಿರುವುದಂತೂ ನಿಜ. ಇದಕ್ಕೆ ಮೊದಲು ನಮ್ಮ ದೇಶದಲ್ಲಿ ಇದೆಲ್ಲ ಇರಲಿಲ್ಲವೇ? ಇತ್ತು, ಸೀಮಿತವಾಗಿತ್ತು.
ನಮ್ಮ ಹೆಣ್ಣು ಮಕ್ಕಳು ಕಳೆದ 50 ವರ್ಷಗಳಿಂದ ಈ ಬಗೆಯ ದೌರ್ಜನ್ಯವನ್ನು ಮೌನವಾಗಿ ಅನುಭವಿಸಿಕೊಂಡು ಬಂದಿದ್ದಾರೆ. ಮುಚ್ಚುಮರೆಯಲ್ಲಿ ನಡೆಯುತ್ತಿದ್ದ ಈ ಬಗೆಯ ದೌರ್ಜನ್ಯ ಈಗ ಮಿತಿಮೀರಿದೆಯಾಗಿ, ಹೆಣ್ಣು ಮಕ್ಕಳು ಒಬ್ಬೊಬ್ಬರೇ ತಮಗಾದ ಅಪಮಾನವನ್ನು ಬಾಯ್ತೆರೆದು ಹೇಳಿಕೊಳ್ಳುತ್ತಿದ್ದಾರೆ. ಹೇಳಿಕೊಂಡರೆ ತಮ್ಮ ಭವಿಷ್ಯ ಹಾಳಾಗುವುದೆಂದು ಭಾವಿಸಿ ಬಾಯಿಯನ್ನು ಬಿಗಿಯಾಗಿ ಹಿಡಿದುಕೊಂಡು ಮೂಕವೇದನೆ ಅನುಭವಿಸುತ್ತಿರುವ ಸಹಸ್ರಾರು ಹೆಣ್ಣು ಮಕ್ಕಳು ನಮ್ಮ ನಡುವೆಯೇ ಇದ್ದಾರೆ. ಬಹಳ ಕಾಲದಿಂದ ನಡೆದು ಬಂದಿರುವ ಕಿರುಕುಳ ತಾಳಲಾದರೆ, ಆಕ್ರೊÃಶಗೊಂಡು ಕೆಂಡಾಮಂಡಲರಾದ ಅಸಹಾಯಕ ಸ್ತಿçÃಯರು ಈಗ ಒಬ್ಬೊಬ್ಬರಾಗಿ ಭುಗಿಲೆದ್ದು ತಮ್ಮ ಆಕ್ರೊÃಶ ವ್ಯಕ್ತ ಪಡಿಸುತ್ತಿದ್ದಾರೆ. ಈ ಪ್ರತಿಕ್ರಿಯೆ ಸಹಜವಾದುದು. ನೊಂದ ಹೆಣ್ಣುಮಕ್ಕಳ ಪರವಾಗಿ ದನಿಯೆತ್ತುವುದು ಸಮಾಜದ ಸ್ವಾಸ್ಥö್ಯ ಬಯಸುವ ಎಲ್ಲರ ಕರ್ತವ್ಯ.
ಈ ಸಂದರ್ಭದಲ್ಲಿ ಸರ್ಕಾರಗಳು, ನ್ಯಾಯಾಲಯಗಳು ಕಾನೂನಿನ ಮಿತಿಯಲ್ಲಿ ತಾನೇನು ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ತೆಗೆದುಕೊಂಡಿವೆ ಎಂಬುದು ನಿಜ. ಆದರೆ ಈ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ಇದಿಷ್ಟೆÃ ಸಾಕೆ? ಖಂಡಿತ ಸಾಲದು.
ಈ ಸಾಮಾಜಿಕ ಪಿಡುಗಿಗೆ ನಮ್ಮ ಸಮಾಜದ ಚಾರಿತ್ರö್ಯದ ಕೊರತೆ ಪ್ರಮುಖ ಕಾರಣ. ಚಾರಿತ್ರö್ಯವಿಲ್ಲದ ಜನ ಮತ್ತು ಚಾರಿತ್ರö್ಯವಿಲ್ಲದ ದೇಶಕ್ಕೆ ಭವಿಷ್ಯವಿಲ್ಲ. ಆದ್ದರಿಂದ ವಿದ್ಯೆ ಕಲಿಸುವಾಗ ಚಾರಿತ್ರö್ಯ ವೃದ್ಧಿಯ ಶಿಕ್ಷಣವನ್ನು ಜೊತೆಜೊತೆಗೆ ನೀಡಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಶಿಕ್ಷಣವನ್ನು ನಾವು ಕೊಡುತ್ತಿಲ್ಲ. ಹೀಗಾಗಿ ಅನೈತಿಕತೆ, ದ್ವೆÃಷ ಭಾವನೆ, ಕಾಮಾತುರತೆ, ದುರಾಸೆ, ಅಹಂಕಾರ, ಸೇಡಿನ ಮನೋಭಾವ ಇವೆಲ್ಲವೂ ಏಕಕಾಲದಲ್ಲಿ ನಮ್ಮ ಸಮಾಜವನ್ನು ಕಾಡುತ್ತಿವೆ.
* ಪ್ರಾಥಮಿಕ ಶಾಲೆಗಳಲ್ಲಿ ಕೋ-ಎಜುಕೇಷನ್ ಇರಬೇಕು, ಇಲ್ಲಿ ಶಿಕ್ಷಕರು ಎಲ್ಲರೂ ಮಹಿಳೆಯರೇ ಇದ್ದರೆ ಚೆನ್ನ. ಹಾಗೆ ಅಲ್ಲಿಂದ ಮುಂದಕ್ಕೆ ತಕ್ಷಣದ ಕ್ರಮವಾಗಿ, ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೆÃಕ ಶಾಲೆಗಳನ್ನು ಮಾಡುವುದು ಒಳ್ಳೆಯದು. ಹೆಣ್ಣುಮಕ್ಕಳ ಶಾಲೆಗಳಲ್ಲಿ ಪೂರ್ತಿ ಮಹಿಳಾ ಶಿಕ್ಷಕಿಯರೇ ಇರುವಂತೆಯೂ ಹಾಗೂ ಗಂಡುಮಕ್ಕಳ ಶಾಲೆಗಳಲ್ಲಿ ಪುರುಷ ಶಿಕ್ಷಕರು ಇರುವಂತೆಯೂ ವ್ಯವಸ್ಥೆ ಮಾಡಬೇಕು. ಇದು ಶಾಶ್ವತ ಪರಿಹಾರವಲ್ಲವಾದರೂ ಬಿಗಡಾಯಿಸಿರುವ ಇಂದಿನ ಪರಿಸ್ಥಿತಿಗೆ ಒಂದು ತಾತ್ಕಾಲಿಕ ಉಪಕ್ರಮ ಆಗಬಹುದು.
* ಹೆಂಗಸರು ಗಂಡಸರು ಕೂಡಿ ಕೆಲಸ ಮಾಡುವ ಎಲ್ಲೆಡೆಯೂ ಹೆಣ್ಣು ಮಕ್ಕಳ ವಿಜಿಲೆನ್ಸ್ ಕಮಿಟಿ ರಚಿಸಬೇಕು. ಈ ಸಲಹಾ ಸಮಿತಿ ನೀಡುವ ವರದಿಯನ್ನು ಪರಿಶೀಲಿಸಿ ನ್ಯಾಯಯುತ ತೀರ್ಮಾನ ತೆಗೆದುಕೊಳ್ಳಲು, ಜೊತೆಜೊತೆಗೇ ಒಂದು ನಿಷ್ಪಕ್ಷವಾದ ಉನ್ನತ ಸಮಿತಿಯನ್ನು ರಚಿಸಬೇಕು. ತಪ್ಪಿತಸ್ಥರು ದೊಡ್ಡ ಅಧಿಕಾರಿಯಾಗಿರಲಿ, ಸಾಮಾನ್ಯ ನೌಕರರಾಗಿರಲಿ ಎಲ್ಲರಿಗೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಅಪರಾಧ ಎಸಗಿದವರನ್ನು ಕೆಲಸದಿಂದ ಕಿತ್ತೆಸೆಯಬೇಕು. ಹೀಗೆ ಮಾಡುವುದರಿಂದ ಬಹುಮಟ್ಟಿಗೆ ಮಹಿಳೆಯರ ಮೇಲಿನ ದೌರ್ಜನ್ಯ ಇಳಿಮುಖವಾಗುವುದೆಂದು ನಾನು ಭಾವಿಸುತ್ತೆÃನೆ.
* ಮುಂದಿನ ಪೀಳಿಗೆಯಲ್ಲಾದರೂ ಈ ಪಿಡುಗು ಸಮಾಜದಿಂದ ದೂರವಾಗಲಿ ಎಂಬ ಧ್ಯೆÃಯ ನಮ್ಮದಾದರೆ, ಶಾಲೆಯ ಮಕ್ಕಳಿಗೆ ಅರಿಷಡ್ವರ್ಗಗಳನ್ನು ದೂರ ಮಾಡುವ ಶಿಕ್ಷಣ ನೀಡಬೇಕು. ಕಾಮ, ಕ್ರೊÃಧ, ಮೋಹ, ಲೋಭ, ಮದ, ಮತ್ಸರಗಳು ಅರಿಷಡ್ವರ್ಗಗಳು. ಇವು ನಮ್ಮ ಅರಿಗಳು, ಶತ್ರುಗಳು. ಈ ಅರಿಷಡ್ವರ್ಗಗಳನ್ನು ಗೆದ್ದರೆ ಮನುಷ್ಯ ಸ್ವಚ್ಛಮನಸ್ಸಿನವನಾಗುತ್ತಾನೆ.
ಈ ಅರಿಷಡ್ವರ್ಗಗಳಲ್ಲಿ ಈಗ ನಮ್ಮ ಸಮಾಜವನ್ನು ಕಾಡುತ್ತಿರುವ ಅತಿ ದೊಡ್ಡ ಶತ್ರುವೆಂದರೆ ಕಾಮ. ಕಾಮವನ್ನು ಗೆಲ್ಲಬೇಕಾದರೆ ಮನಸ್ಸಿನ ಮೇಲೆ ಹತೋಟಿ ಇಟ್ಟುಕೊಳ್ಳುವುದನ್ನು ಕಲಿಸಬೇಕು. ಕಾಮ ಎನ್ನುವ ಶತ್ರು ಕಾಡುತ್ತಾ ಬಂದಾಗ ನಮ್ಮ ಮನಸ್ಸನ್ನು ನಿಗ್ರಹಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಆಮೆ ತನ್ನ ಶತ್ರುವನ್ನು ಕಂಡೊಡನೆ ಹೇಗೆ ತನ್ನ ಶರೀರವನ್ನು ತನ್ನ ಚಿಪ್ಪಿನೊಳಕ್ಕೆ ಎಳೆದುಕೊಳ್ಳುತ್ತದೆಯೋ ಹಾಗೆ ಕೆಟ್ಟ ವಿಷಯಗಳು ಮನಸ್ಸನ್ನು ಆಕ್ರಮಿಸಿದಾಗ ನಾವು ನಮ್ಮ ಮನಸ್ಸನ್ನು ನಮ್ಮ ಹತೋಟಿಯಲ್ಲಿಟ್ಟುಕೊಂಡು, ಆ ಕೆಟ್ಟ ವಿಚಾರಗಳು ನಮ್ಮನ್ನು ಅಧೋಗತಿಗಿಳಿಸುವುದನ್ನು ತಡೆಗಟ್ಟಬಹುದು.