ವೆಂಟಿಲೇಟರ್ ತಯಾರಕ ಸಂಸ್ಥೆ ಆಗ್ವಾ ಹೆಲ್ತ್‌ಕೇರ್ ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದ್ದು, ರಾಹುಲ್ ಗಾಂಧಿ ವೈದ್ಯರಲ್ಲ ಎಂದು ಹೇಳಿದೆ.
ಕೊರೊನಾ ನಿಭಾಯಿಸಲು ಖರೀದಿಸಿದ ಕೆಲವು ವೆಂಟಿಲೇಟರ್‌ಗಳನ್ನು ಪ್ರಧಾನಿ ನರೇಂದ್ರ ಮೋದಿಯವರ “ಆತ್ಮನಿರ್ಭರ ಭಾರತ” ಯೋಜನೆಯ ಅನುಗುಣವಾಗಿ ಸ್ಥಳೀಯ ಉತ್ಪಾದಕ ಆಗ್ವಾ ಅವರಿಂದ ಪಿಎಂಸಿ ಕೇರ್ಸ್ ನಿಧಿಯ ಮೂಲಕ ಖರೀದಿಸಲಾಗಿದೆ.
ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿಭಾಯಿಸದಿರುವ ಬಗ್ಗೆ ಸರ್ಕಾರದ ಮೇಲೆ ತನ್ನ ದಾಳಿಯನ್ನು ಮುಂದುವರೆಸುತ್ತಿರುವ ರಾಹುಲ್ ಗಾಂಧಿ, ಗುಣಮಟ್ಟವಿಲ್ಲದ ಉತ್ಪನ್ನಗಳನ್ನು ಖರೀದಿಸುತ್ತಿದೆ ಎಂದು ಆರೋಪಿಸಿದ್ದರು.
ಈ ವಿಷಯದ ಬಗ್ಗೆ ಜುಲೈ 5 ರಂದು ಟ್ವೀಟ್ ಮಾಡಿದ ರಾಹುಲ್ ಗಾಂಧಿ “ಪಿಎಂಕೇರ್ಸ್ ಅಪಾರದರ್ಶಕತೆ: 1. ಭಾರತೀಯ ಜೀವಗಳನ್ನು ಅಪಾಯಕ್ಕೆ ತಳ್ಳುವುದು. 2. ಸಾರ್ವಜನಿಕ ಹಣವನ್ನು ಗುಣಮಟ್ಟವಿಲ್ಲದ ಉತ್ಪನ್ನಗಳನ್ನು ಖರೀದಿಸಲು ಬಳಸಲಾಗುತ್ತಿದೆ.” ಎಂದು ಬರೆದಿದ್ದರು.
#PMCares opacity is:
1. Putting Indian lives at risk.
2. Ensuring public money is used to buy sub-standard products.#BJPfailsCoronaFighthttps://t.co/6lIAPH0SJL— Rahul Gandhi (@RahulGandhi) July 5, 2020
ಆಗ್ವಾ ಹೆಲ್ತ್‌ಕೇರ್‌ನ ಸಹ ಸಂಸ್ಥಾಪಕ ಪ್ರೊಫೆಸರ್ ದಿವಾಕರ್ ವೈಶ್, “ರಾಹುಲ್ ಗಾಂಧಿ ವೈದ್ಯರಲ್ಲ, ಅವರು ಬುದ್ಧಿವಂತ ವ್ಯಕ್ತಿ. ಇಂತಹ ಆರೋಪಗಳನ್ನು ಮಾಡುವ ಮೊದಲು ಅವರು ಶ್ರದ್ಧೆಯಿಂದ ಕೆಲಸ ಮಾಡಬೇಕಾಗಿತ್ತು. ಅವರು ವೈದ್ಯರನ್ನು ಸಂಪರ್ಕಿಸಿರಬೇಕು. ವಿವರವಾದ ಮಾಹಿತಿಯನ್ನು ನೀಡಲು ನಾನು ಸಿದ್ಧನಿದ್ದೇನೆ.” ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರು ಹಫ್‌ಪೋಸ್ಟ್‌ನ ವರದಿಯೊಂದನ್ನು ಟ್ಯಾಗ್ ಮಾಡಿ, “PMCARES ನಿಂದ ಖರೀದಿಸಲಾದ ವೆಂಟಿಲೇಟರ್ ಕಳಪೆ ಕಾರ್ಯಕ್ಷಮತೆಯವು ಎಂದು ಮಾಜಿ ಉದ್ಯೋಗಿಗಳು ಹೇಳುತ್ತಾರೆ” ಎಂದು ಹೇಳಿದ್ದರು.
ಕೊರೊನಾ ವೈರಸ್ ಚಿಕಿತ್ಸೆಗಾಗಿ ವಿನ್ಯಾಸಗೊಳಿಸಲಾದ ಈ ವೆಂಟಿಲೇಟರ್‌ಗಳು ಉನ್ನತ-ಮಟ್ಟದ ವೆಂಟಿಲೇಟರ್‌ಗಳಿಗೆ ಪರ್ಯಾಯವಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂದು ಹಫ್‌ಪೋಸ್ಟ್ ವರದಿ ಮಾಡಿದೆ.
ಈ ಆರೋಪಗಳು ಭಾರತಕ್ಕೆ ವೆಂಟಿಲೇಟರ್‌ಗಳನ್ನು ಪೂರೈಸುವ ವಿದೇಶಿ ಕಂಪೆನಿಗಳನ್ನು ಅಸಮಾಧಾನಗೊಳಿಸಿದ ಪರಿಣಾಮವಾಗಿದೆ ಎಂದು ಅಗ್ವಾ ಹೆಲ್ತ್ ಕೇರ್‌ನ ವೈಶ್ ಹೇಳಿದರು.
“ಅಂತರರಾಷ್ಟ್ರೀಯ ಮಾರಾಟಗಾರರ ನೆಕ್ಸಸ್ ತುಂಬಾ ಪ್ರಬಲವಾಗಿದೆ. ಭಾರತೀಯ ಮಿಲಿಟರಿ ಉಪಕರಣಗಳನ್ನು ದೇಶೀಕರಿಸುತ್ತಿದ್ದಂತೆಯೇ, ಸಾಕಷ್ಟು ನಕಾರಾತ್ಮಕ ವಿಮರ್ಶೆಗಳು ಬಂದವು. ಇಲ್ಲಿಯೂ ಅದೇ ನಡೆಯುತ್ತಿದೆ. 10 ಲಕ್ಷ ರೂ ವೆಂಟಿಲೇಟರ್ ಮಾಡುವ ಕೆಲಸವನ್ನು, ನಮ್ಮದು 1.5 ಲಕ್ಷ ರೂ.ಗಳಲ್ಲಿ ಮಾಡುತ್ತಿದೆ. ಅಂತರರಾಷ್ಟ್ರೀಯ ಸಂಘಗಳು, ಅಂತರರಾಷ್ಟ್ರೀಯ ಮಾರಾಟಗಾರರು ಇದನ್ನು ಸ್ವೀಕರಿಸುತ್ತಾರೆಯೇ? ಅದಕ್ಕಾಗಿಯೇ ಅವರು ವಿಧ್ವಂಸಕ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ದೆಹಲಿಯ LNGP ಆಸ್ಪತ್ರೆ ಆಗ್ವಾ ವೆಂಟಿಲೇಟರ್ ಅನ್ನು ತಿರಸ್ಕರಿಸಲಿಲ್ಲ ಎಂದು ವೈಶ್ ಹೇಳಿದರು.
“ಮುಂಬೈಗೆ ಸಂಬಂಧಿಸಿದಂತೆ, JJ ಆಸ್ಪತ್ರೆ ಮತ್ತು ಸೇಂಟ್ ಜಾರ್ಜ್ ಆಸ್ಪತ್ರೆ ಮೂರನೇ ವ್ಯಕ್ತಿಯ ಮೂಲಕ ಸ್ಥಾಪನೆಯಾಗಿದೆ. ಅವರು ಅದನ್ನು ಸರಿಯಾಗಿ ಸ್ಥಾಪಿಸಲಿಲ್ಲ. ಆದ್ದರಿಂದ, ಅವರ ವೈದ್ಯರು ಅದನ್ನು ಬಳಸಲಾಗಲಿಲ್ಲ. ನೀವು ಪೆಟ್ರೋಲ್ ಬದಲಿಗೆ ಡೀಸೆಲ್ ಹಾಕಿದರೆ ಏನು ಸಂಭವಿಸುತ್ತದೆ? ಎಂದು ANI ವೈಶ್ ಅವರ ಮಾತನ್ನು ಉಲ್ಲೇಖಿಸಿ ವರದಿ ಮಾಡಿದೆ.
ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಭಾರತದ ಸಿದ್ಧತೆಗಳ ಭಾಗವಾಗಿ ಕೇಂದ್ರ ಸರ್ಕಾರವು ಆಗ್ವಾ ಹೆಲ್ತ್‌ಕೇರ್‌ನಿಂದ 10,000 ಕೊರೊನಾ ಮಾದರಿ ವೆಂಟಿಲೇಟರ್‌ಗಳಿಗೆ ಆದೇಶ ನೀಡಿತು. ಈ ಹಣವು PMCARESನಿಂದ ಬಂದಿದೆ.
ಈ ನಿಧಿಯೂ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಬರುವುದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಪಿಎಂ ಕೇರ್ಸ್ ನಿಧಿಯಡಿ ಖರೀದಿಸಿರುವ ವೆಂಟಿಲೇಟರ್ ಬಳಸಬೇಕಾದರೆ ‘ಬ್ಯಾಕಪ್’ ವೆಂಟಿಲೇಟರ್ ಅಗತ್ಯ..!


