ಕೋವಾಕ್ಸಿನ್ ಲಸಿಕೆ ಪ್ರಯೋಗಕ್ಕೆ ICMR ನಿಂದ ಒತ್ತಡ: AIIMS ಆಕ್ಚೇಪ

ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಅಭಿವೃದ್ಧಿಪಡಿಸಿದ ಕೊವಾಕ್ಸಿನ್‌ ಲಸಿಕೆಯ ಮಾನವ ಪ್ರಯೋಗಗಳಿಗೆ ಆಯ್ಕೆಯಾದ 10 ರಾಜ್ಯಗಳ 12 ಆಸ್ಪತ್ರೆಗಳಲ್ಲಿ ದೆಹಲಿಯ AIIMS ಆಸ್ಪತ್ರೆಯೂ ಒಂದಾಗಿದೆ.

0
ಕೊವಾಕ್ಸಿನ್ ಪ್ರಯೋಗಕ್ಕೆ ಸ್ವಯಂ ಒಳಪಟ್ಟವರಲ್ಲಿ 1/5 ಜನರು ಪ್ರತಿಕಾಯ ಹೊಂದಿದ್ದಾರೆ!
curtesy: google

ಭಾರತದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎನ್ನಲಾಗಿರುವ ಕೊರೊನಾ ಲಸಿಕೆ ’ಕೊವಾಕ್ಸಿನ್’‌ ಅನ್ನು ವೈದ್ಯಕೀಯ ಪ್ರಯೋಗಕ್ಕೆ ದೆಹಲಿಯ AIIMS ಆಸ್ಪತ್ರೆ ಆಕ್ಷೇಪ ವ್ಯಕ್ತಪಡಿಸಿದೆ.

ಕೊರೊನಾ ರೋಗ ನಿವಾರಣೆಗಾಗಿ ಕಂಡುಹಿಡಿದಿದೆ ಎನ್ನಲಾಗಿರುವ ಲಸಿಕೆಯನ್ನು ತ್ವರಿತವಾಗಿ ಪ್ರಯೋಗಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು ತನ್ನ ಸ್ಟಡಿ ಪ್ರೊಟೊಕಾಲ್‌ನಲ್ಲಿ ಪ್ರಯೋಗಕ್ಕೆ ಸಂಬಂಧಿಸಿದಂತೆ ಹಲವಾರು ಅಂಶಗಳನ್ನು ಆಕ್ಷೇಪಿಸಿದೆ.

ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಅಭಿವೃದ್ಧಿಪಡಿಸಿದ ಕೊವಾಕ್ಸಿನ್‌ ಲಸಿಕೆಯ ಮಾನವ ಪ್ರಯೋಗಗಳಿಗೆ ಆಯ್ಕೆಯಾದ 10 ರಾಜ್ಯಗಳ 12 ಆಸ್ಪತ್ರೆಗಳಲ್ಲಿ ದೆಹಲಿಯ AIIMS ಆಸ್ಪತ್ರೆಯೂ ಒಂದಾಗಿದೆ.

ಪ್ರಯೋಗಕ್ಕಾಗಿ ಆಯ್ಕೆಯಾದ ಇತರ ಆಸ್ಪತ್ರೆಗಳು ಕೂಡ ಅಧ್ಯಯನ ವಿನ್ಯಾಸದಲ್ಲಿ ಬದಲಾವಣೆಗಳನ್ನು ಸೂಚಿಸಿರುವ ಅಧ್ಯಯನ ಪ್ರೋಟೋಕಾಲ್ ಅನ್ನು ಅನುಮೋದಿಸಿವೆ.

ಆಸ್ಪತ್ರೆಯ ಸಮಿತಿಯು ಪ್ರಸ್ತಾಪಿಸಿರುವ ಪ್ರೊಟೊಕಾಲ್‌ನಲ್ಲಿ 11 ಅಂಶಗಳಿಗೆ ಸಂಬಂಧಿಸಿದಂತೆ ಆಕ್ಷೇಪ ವ್ಯಕ್ತಪಡಿಸಿದೆ. ಅವುಗಳನ್ನು ತಿದ್ದುಪಡಿ ಮಾಡಲು ಸೂಚಿಸಿದೆ.

ಅದರಲ್ಲಿ ಪ್ರಮುಖವಾಗಿ, ಮೊದಲ ಮತ್ತು ಎರಡನೇ ಹಂತದ ಪ್ರಯೋಗಗಳಿಗಾಗಿ ಪ್ರಸ್ತಾಪಿಸಲಾಗಿರುವ 1,125 ಆರೋಗ್ಯವಂತ ಸ್ವಯಂಸೇವಕರ ಮಾದರಿ ಗಾತ್ರವನ್ನು ಅಧ್ಯಯನ ವಿನ್ಯಾಸದಲ್ಲಿ ಮಾರ್ಪಾಡು ಮಾಡಲು ನೈತಿಕ ಸಮಿತಿಯು ಒತ್ತಾಯಿಸಿದೆ. ಈ ಕುರಿತು ಮತ್ತೆ ಚರ್ಚಿಸಲಾಗುವುದು ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ AIIMS ಅಧಿಕಾರಿಯೊಬ್ಬರು “ಇದು AIIMS ಮತ್ತು ದೇಶದ ಇತರ ಸಂಸ್ಥೆಗಳ ನಡುವಿನ ವ್ಯತ್ಯಾಸ. ಪ್ರತಿಯೊಂದು ಸಂಶೋಧನಾ ಯೋಜನೆಗೂ ನಾವು ಅನುಸರಿಸುವ ಅತ್ಯುನ್ನತ ನೈತಿಕ ಮಾನದಂಡಗಳು ಮತ್ತು ಕಠಿಣತೆಯ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ” ಎಂದು ಹೇಳಿದ್ದಾರೆ.

ಐಸಿಎಂಆರ್‌ ಸಂಸ್ಥೆಯು 12 ಆಸ್ಪತ್ರೆಗಳಿಗೆ  ಜುಲೈ 2ರಂದು ಬರೆದಿದ್ದ ಪತ್ರದಲ್ಲಿ ಪ್ರಯೋಗಗಳನ್ನು ತ್ವರಿತಗತಿಯಲ್ಲಿ ನಡೆಸಬೇಕೆಂದು ಒತ್ತಾಯಿಸಿತ್ತು. ಆಗಸ್ಟ್ 15 ರೊಳಗೆ ಲಸಿಕೆಯನ್ನು ದೇಶಾದ್ಯಂತ ಬಿಡುಗಡೆ ಮಾಡುವ, ಲಸಿಕೆಯ ಮೂಲಕ ಚಿಕಿತ್ಸೆ ಪ್ರಾರಂಭಿಸಲು ಉದ್ದೇಶಿಸಿದ್ದು, ಜುಲೈ 7 ರೊಳಗೆ ಪ್ರಯೋಗದ ವರದಿಯನ್ನು ನೀಡುವಂತೆ ಕೇಳಿತ್ತು.

ಇದಕ್ಕೆ ತಜ್ಞರು ಅವಸರದ ಮತ್ತು ಅವಾಸ್ತವಿಕ ಕಾರ್ಯ ಹೇಳಿದ್ದಾರೆ. ಪ್ರಯೋಗದ ವರದಿಯ ದಾಖಲಾತಿ ಜುಲೈ 7 ರಿಂದ ಪ್ರಾರಂಭವಾಗಬಹುದು; ಅದನ್ನು ಪೂರ್ಣಗೊಳಿಸಲು ಹಲವಾರು ದಿನಗಳು ಬೇಕಾಗುತ್ತದೆ ಎಂದು ದೆಹಲಿಯ AIIMS ಮೂಲಗಳು ತಿಳಿಸಿವೆ.

ಮೂಲ ಪ್ರೋಟೋಕಾಲ್ ಪ್ರಕಾರ, ಮೊದಲ ಹಂತದಲ್ಲಿ ಲಸಿಕೆಯನ್ನು 375 ವ್ಯಕ್ತಿಗಳ ಮೇಲೆ ಪ್ರಯೋಗಿಸಿ ಅಧ್ಯಯನ ಮಾಡಬೇಕಾಗುತ್ತದೆ. ನಂತರ ಎರಡನೇ ಹಂತದಲ್ಲಿ ಅದರ ಸುರಕ್ಷತೆ, ಪ್ರತಿಕ್ರಿಯಾತ್ಮಕತೆ, ಸಹಿಷ್ಣುತೆ ಮತ್ತು ಇಮ್ಯುನೊಜೆನೆಸಿಟಿಯನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಇದಕ್ಕಾಗಿ ಸ್ವಯಂಸೇವಕರಿಗೆ ಎರಡು ಇಂಟ್ರಾಮಸ್ಕುಲರ್ ನೀಡಲಾಗುತ್ತದೆ.

ಪ್ರಯೋಗಗಳಿಗೆ ವಯಸ್ಸಿನ ಆಧಾರದಲ್ಲಿ ಗುಂಪುಗಳನ್ನು ಮಾಡಲಾಗುತ್ತದೆ. ಮೊದಲ ಹಂತಕ್ಕೆ 18-55 ವಯಸ್ಸಿನವರು ಮತ್ತು ಎರಡನೇ ಹಂತಕ್ಕೆ 12-65 ವಯಸ್ಸಿನವರನ್ನು ಆಯ್ಕೆ ಮಾಡಲಾಗುತ್ತದೆ. ಆದಾಗ್ಯೂ,ದೆಹಲಿಯ AIIMS ಸಮಿತಿಯ ಆಕ್ಷೇಪಣೆಗಳ ನಂತರ ಅಧ್ಯಯನದ ವಿನ್ಯಾಸವು ಕೆಲವು ಬದಲಾವಣೆಗಳನ್ನು ಕಾಣಬಹುದು.


ಇದನ್ನೂ ಓದಿ : ಆಗಸ್ಟ್ 15 ರೊಳಗೆ ಕೊರೊನಾ ಲಸಿಕೆ ಬಿಡುಗಡೆ ಮಾಡಲಿರುವ ಐಸಿಎಂಆರ್


 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here