ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿದ ಲಾಕ್‌ಡೌನ್‌ನಿಂದಾಗಿ ತಮ್ಮ ಮನೆ ತಲುಪಲು ಪ್ರಯತ್ನಿಸುತ್ತಿರುವ ವಲಸಿಗರಿಗೆ ಸಹಾಯ ಮಾಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ರಾಷ್ಟ್ರವ್ಯಾಪಿ 21 ದಿನಗಳ ಕೊರೊನ ಲಾಕ್‌ಡೌನ್‌ನಿಂದಾಗಿ ನಿರುದ್ಯೋಗಿಗಳಾಗಿರುವ ಜನರು ತಮ್ಮ ಮನೆಗಳಿಗೆ ಸಾವಿರಾರು ಕಿಲೋಮೀಟರ್ ದೂರಕ್ಕೆ ಕಾಲ್ನಡಿಗೆಯಿಂದ ಹೊರಟಿರುವುದು ದೇಶದಾದ್ಯಂತ ವರದಿಯಾಗಿದೆ.
ದೇಶಾದ್ಯಂತದ ಜನರು ಕಠಿಣ ಪ್ರಯಾಣವನ್ನು ಕೈಗೊಳ್ಳುವಾಗ ಅವರಿಗೆ ಆಹಾರ ಅಥವಾ ಆಶ್ರಯ ನೀಡುವ ಮೂಲಕ ಸಹಾಯ ಮಾಡಬೇಕೆಂದು ರಾಹುಲ್ ಗಾಂಧಿ ಆಗ್ರಹಿಸಿದರು. “ಹಸಿವಿನಿಂದ ಬಳಲುತ್ತಿರುವ ನಮ್ಮ ನೂರಾರು ಸಹೋದರರು ಮತ್ತು ಸಹೋದರಿಯರು ತಮ್ಮ ಕುಟುಂಬಗಳೊಂದಿಗೆ ಕಾಲ್ನಡಿಗೆಯಲ್ಲಿ ಹಳ್ಳಿಗಳ ಮನೆಗಳಿಗೆ ತೆರಳುವಂತಹ ಪರಿಸ್ಥಿತಿ ಬಂದಿದೆ. ಅವರು ಕಠಿಣ ಪ್ರಯಾಣವನ್ನು ಕೈಗೊಳ್ಳುವಾಗ ನಿಮಗೆ ಸಾಧ್ಯವಾದರೆ ಅವರಿಗೆ ಆಹಾರ, ಆಶ್ರಯ ನೀಡುವ ಮೂಲಕ ಅವರಿಗೆ ಸಹಾಯ ಮಾಡಿ … ವಿಶೇಷ ಮನವಿ ಕಾಂಗ್ರೆಸ್ ಕಾರ್ಯಕರ್ತರಿಗೆ, ನಾಯಕರಿಗೆ ವಿಶೇಷ ಮನವಿ ಮಾಡುತ್ತಿದ್ದೇನೆ. ಜೈ ಹಿಂದ್! ” ಎಂದು ಟ್ವೀಟ್ ಮಾಡಿದ್ದಾರೆ.
आज हमारे सैकड़ों भाई-बहनों को भूखे-प्यासे परिवार सहित अपने गाँवों की ओर पैदल जाना पड़ रहा है।इस कठिन रास्ते पर आप में से जो भी उन्हें खाना-पानी-आसरा-सहारा दे सके,कृपा करके दे! कॉंग्रेस कार्यकर्ताओं-नेताओं से मदद की ख़ास अपील करता हूँ।
जय हिंद! pic.twitter.com/ni7vkhRQAZ
— Rahul Gandhi (@RahulGandhi) March 28, 2020
ಕೊರೋನ ವೈರಸ್ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಪ್ರಯಾಣಿಕರ ರೈಲುಗಳು ಮತ್ತು ಅಂತರರಾಜ್ಯ ಬಸ್ಸುಗಳು ಸೇರಿದಂತೆ ಎಲ್ಲಾ ಸಾರಿಗೆ ಸೇವೆಗಳನ್ನು ಮುಚ್ಚಲಾಗಿದೆ. ದೇಶಾದ್ಯಂತ ಗರಿಷ್ಠ ಸಂಖ್ಯೆಯ ಕಾರ್ಮಿಕರನ್ನು ಕಳುಹಿಸುವ ಬಂಗಾಳ, ಬಿಹಾರ ಮತ್ತು ಒಡಿಶಾ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಈ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಉಪಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ ‘ಬ್ರಿಯಾನ್ ಟ್ವೀಟ್ ಮಾಡಿ “ಸಾಗರದಲ್ಲಿ ಒಂದು ಹನಿ … ವಲಸೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೊಳಗಾದರು. ಚೆನ್ನೈನಲ್ಲಿ ಸಿಕ್ಕಿಬಿದ್ದ ಬಂಗಾಳದ 40 ಮಂದಿ ನಮ್ಮನ್ನು ಸಂಪರ್ಕಿಸಿದಾಗ ನಾವು ಎಂಕೆ ಸ್ಟಾಲಿನ್ ಅವರನ್ನು ತಲುಪಿದೆವು, ಅವರ ತಂಡ ವಲಸಿಗರನ್ನು ಭೇಟಿಯಾಗಿ ಕಾಳಜಿ ವಹಿಸುತ್ತಿದೆ. ಬಂಗಾಳದ ಮುಖ್ಯಮಂತ್ರಿಗಳ ಅಡಿಯಲ್ಲಿ ವಿವಿಧ ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರಿಗೆ ಆಹಾರ / ಆಶ್ರಯ ನೀಡಲಾಗುತ್ತಿದೆ.” ಎಂದಿದ್ದಾರೆ.
A drop in the ocean…
Migrant workers badly hit. 40 from Bengal stranded in Chennai contacted us.We reached out to @mkstalin
His team met & are taking care. Thx much. Under Bengal CM,migrant workers from diff States being given food/shelter. TN-Bengal teamwork #Covid19India— Citizen Derek | নাগরিক ডেরেক (@derekobrienmp) March 28, 2020
ಉತ್ತರಪ್ರದೇಶದಲ್ಲಿ ಈ ಜನರಿಗೆ ಸಾರಿಗೆ ಸೌಲಭ್ಯವನ್ನು ಖಾತ್ರಿಪಡಿಸಿಕೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜನರು ತಮ್ಮ ಸ್ವಸ್ಥಾನಗಳಿಗೆ ತಲುಪಲು 1000 ಬಸ್ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ.
ಶುಕ್ರವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು. “ಕೆಲವು ಕಾರ್ಮಿಕರು ಕಾಲ್ನಡಿಗೆಯಲ್ಲಿ ಮನೆಗೆ ಹೊರಡುತ್ತಿದ್ದಾರೆ. ಕಳೆದ ರಾತ್ರಿ ಕೆಲವು ನೋವಿನ ಚಿತ್ರಗಳು ಹೊರಬಂದಿದೆ. ಕಾರ್ಮಿಕರನ್ನು ಮನೆಗೆ ಕಳುಹಿಸಲು ಕೈಗೊಂಡ ಕ್ರಮಗಳನ್ನು ಸರಿಯಾದ ರೀತಿಯಲ್ಲಿ ಮಾಡಬೇಕು ಎಂಬ ವಿನಂತಿ. ಹೆಚ್ಚಿನ ಸಂಖ್ಯೆಯ ಜನರು ಸಿಕ್ಕಿಹಾಕಿಕೊಂಡರೆ ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳನ್ನು ತಾತ್ಕಾಲಿಕ ಆಶ್ರಯ ಮನೆಗಳಾಗಿ ಬಳಸಬೇಕು, ನಂತರ ಕಾರ್ಮಿಕರನ್ನು ಮನೆಗೆ ಕಳುಹಿಸಬಹುದು “ಎಂದಿದ್ದಾರೆ.
ಕೇರಳ ಹಣಕಾಸು ಸಚಿವರಾದ ತೋಮಸ್ ಐಸಾಕ್ ಟ್ವೀಟ್ ಮಾಡಿ “ವಲಸೆ ಕಾರ್ಮಿಕ ಕುಟುಂಬಗಳು ಮನೆಗೆ ನಡೆಯುವ ಮಾಡುವ ಚಿತ್ರಗಳು ವಿಭಜನಾ ದಿನಗಳನ್ನು ನೆನಪಿಸುತ್ತವೆ” ಎಂದಿದ್ದಾರೆ.
Pictures of exodus of migrant worker families trekking homeward is reminiscent of partition days. Compare it with the action of ULCCS, the largest construction coop , that transported them in special bus to Kolkata. Govt. to ensure total security of workers who remain in Kerala
— Thomas Isaac (@drthomasisaac) March 28, 2020
ಇಲ್ಲಿಯವರೆಗೆ, ಭಾರತವು ಕಳೆದ 24 ಗಂಟೆಗಳಲ್ಲಿ 149 ಹೊಸ ಕೊರೊನ ಪ್ರಕರಣಗಳೊಂದಿಗೆ ಅತಿ ಹೆಚ್ಚು ಏರಿಕೆಯನ್ನು ದಾಖಲಿಸಿದ ನಂತರ 873 ಕೊರೊನ ವೈರಸ್ ಪ್ರಕರಣಗಳನ್ನು ವರದಿಯಾದೆ. ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ.


