ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ ಯಾತ್ರೆಯು ಮುಂಬೈನ ಧಾರವಿಯಲ್ಲಿ ಸಮಾಪ್ತಿಗೊಂಡಿದೆ, ಹಿಂಸಾಚಾರ ಪೀಡಿತ ಮಣಿಪುರದಿಂದ 6,700 ಕಿ.ಮೀ ಪಾದಯಾತ್ರೆ ಸಾಗಿ ಮುಂಬೈನಲ್ಲಿ ಯಶಸ್ವಿಯಾಗಿ ಯಾತ್ರೆ ಕೊನೆಗೊಂಡಿದೆ.
ಧಾರಾವಿ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಜಾತಿ ಗಣತಿಯ ಕಾಂಗ್ರೆಸ್ ಭರವಸೆಯನ್ನು ಪುನರುಚ್ಚರಿಸಿದರು ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರಿಗೆ ಅವರ ಬ್ಯಾಂಕ್ ಖಾತೆಗಳಿಗೆ ಪ್ರತಿ ವರ್ಷ 1 ಲಕ್ಷ ನೀಡಲಾಗುವುದು ಎಂದು ಹೇಳಿದ್ದಾರೆ.
ಧಾರವಿ ನಿಮ್ಮದು ಮತ್ತು ನಿಮ್ಮದೇ ಆಗಿರಬೇಕು. ನಿಮ್ಮ ಕೌಶಲ್ಯಗಳನ್ನು ಗೌರವಿಸಬೇಕು ಮತ್ತು ಈ ಸ್ಥಳವು ದೇಶದ ಉತ್ಪಾದನಾ ಕೇಂದ್ರವಾಗಬೇಕು. ಅದಾನಿ ಗ್ರೂಪ್‌ಗೆ ಸ್ಲಂ ಪುನರಾಭಿವೃದ್ಧಿ ಮಾಡುವ ಯೋಜನೆಯನ್ನು ನೀಡಲಾಗಿದೆ. ದೇಶದ ಸಂಪತ್ತನ್ನು ಕೆಲವು ಕಾರ್ಪೊರೇಟ್‌ಗಳಿಗೆ ನೀಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯು 2024ರ ಲೋಕಸಭಾ ಚುನಾವಣೆಯನ್ನು ಚುನಾವಣಾ ಆಯೋಗವು ಘೋಷಿಸಿದ ದಿನವೇ ಕೊನೆಗೊಂಡಿದೆ, ಆದರೂ ಯಾತ್ರೆಯ ಅಂತಿಮ ರ್ಯಾಲಿಯು ಮುಂಬೈನಲ್ಲಿ ಇಂದು ಐತಿಹಾಸಿಕ ಶಿವಾಜಿ ಪಾರ್ಕ್‌ನಲ್ಲಿ ನಡೆಯಲಿದೆ. ಇದು ಮಹಾರಾಷ್ಟ್ರದ ಇಂಡಿಯಾ ಮೈತ್ರಿಕೂಟದ ಮೊದಲ ಚುನಾವಣಾ ಸಭೆ ಎಂದು ಹೇಳಲಾಗಿದೆ. ಸೋನಿಯಾಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಶಿವಾಜಿ ಪಾರ್ಕ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಭಾರತ್ ಜೋಡೊ ನ್ಯಾಯ ಯಾತ್ರೆ ಶನಿವಾರ ಸಂಜೆ ಧಾರವಿಯಲ್ಲಿ ಸಮಾಪ್ತಿಗೊಂಡಿದೆ. ಇದಕ್ಕೂ ಮುನ್ನ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತೆರೆದ ಕಾರಿನಲ್ಲಿ ಮುಂಬೈನ ಪ್ರತಿ ರಸ್ತೆಗಳಲ್ಲಿ ಸಂಚರಿಸಿದ್ದಾರೆ. ಇಂದು ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಕೊನೆಗೊಳ್ಳುತ್ತಿದೆ. ನಾವಿಬ್ಬರೂ ಇಲ್ಲಿಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ. ರಾಹುಲ್ ಗಾಂಧಿ ಅವರು ದೇಶದ ವಾಸ್ತವವನ್ನು ಅರ್ಥಮಾಡಿಕೊಳ್ಳಲು ಈ ಪ್ರಯಾಣವನ್ನು ಮಾಡಿದ್ದಾರೆ. ಈ ಸಂಪೂರ್ಣ ಪ್ರಯಾಣವು ಸಾರ್ವಜನಿಕರಿಗೆ ಅರಿವು ಮೂಡಿಸಲು ಆಗತ್ಯವಾಗಿತ್ತು ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಜನವರಿ 14ರಂದು ಹಿಂಸಾಚಾರ ಪೀಡಿತ ಮಣಿಪುರದ ಇಂಫಾಲ್‌ನಿಂದ ಪ್ರಾರಂಭ ಮಾಡಲಾಗಿತ್ತು. ಅಸ್ಸಾಂ, ಪಶ್ಚಿಮ ಬಂಗಾಳ, ಗುಜರಾತ್, ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ ಸೇರಿದಂತೆ 15 ರಾಜ್ಯಗಳಲ್ಲಿ 100ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ದಾಟಿ ಯಾತ್ರೆ ಸಾಗಿದೆ.
राहुल गांधी ने मुंबई के धारावी में आज भारत जोड़ो न्याय यात्रा के तहत हुई 70 जनसभा की आख़िरी सभा को संबोधित किया। अपने संबोधन के दौरान राहुल गांधी ने #ShramikNYAY गारंटी को दोहराया जिसकी घोषणा @kharge जी ने आज ही की है। मुंबई की अर्थव्यवस्था में धारावी की केंद्रीय भूमिका और पूरे… pic.twitter.com/a3wtlF8VMF
— Jairam Ramesh (@Jairam_Ramesh) March 16, 2024
ಇದನ್ನು ಓದಿ: ಸಿಎಎ: ಅಧಿಸೂಚನೆಗೆ ತಡೆ ಕೋರಿ ಕೇರಳ ಸರಕಾರ ಸುಪ್ರೀಂ ಮೊರೆ


