Homeಮುಖಪುಟಸಿಎಎ: ಅಧಿಸೂಚನೆಗೆ ತಡೆ ಕೋರಿ ಕೇರಳ ಸರಕಾರ ಸುಪ್ರೀಂ ಮೊರೆ

ಸಿಎಎ: ಅಧಿಸೂಚನೆಗೆ ತಡೆ ಕೋರಿ ಕೇರಳ ಸರಕಾರ ಸುಪ್ರೀಂ ಮೊರೆ

- Advertisement -
- Advertisement -

ಧರ್ಮಾಧಾರಿತವಾಗಿ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ ಬಂದ ಮುಸ್ಲಿಮೇತರರಿಗೆ ಪೌರತ್ವವನ್ನು ಒದಗಿಸುವ 2019ರ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ತನ್ನ ಮೂಲ ದಾವೆಯು ಬಾಕಿ ಇರುವಾಗ ಪೌರತ್ವ ತಿದ್ದುಪಡಿ ನಿಯಮಗಳು 2024ಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಕೇರಳ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ.

ಸಿಎಎ ನಿಯಮಗಳು ಜಾರಿಗೆ ಬರುವುದರೊಂದಿಗೆ, ಅಸಂವಿಧಾನಿಕ ಕಾನೂನು ಜಾರಿಗೆ ರಾಜ್ಯಗಳಿಗೆ ಬಲವಂತ ಮಾಡಲಾಗುತ್ತಿದೆ ಎಂದು ಕೇರಳದ ಎಡರಂಗದ ಸರಕಾರ ಕೋರ್ಟ್‌ ಗಮನಕ್ಕೆ ತಂದಿದೆ. ಧರ್ಮ ಮತ್ತು ದೇಶವನ್ನು ಆಧರಿಸಿದ ವರ್ಗೀಕರಣಗಳು ತಾರತಮ್ಯ, ಅಸಮಂಜಸ ಮತ್ತು ಜಾತ್ಯತೀತತೆಯ ತತ್ವಗಳಿಗೆ ವಿರುದ್ಧವಾಗಿವೆ. ಸಿಎಎಯ ನಿಬಂಧನೆಗಳನ್ನು ಜಾರಿಗೆ ತರುವಲ್ಲಿ ಯಾವುದೇ ತುರ್ತು ಇಲ್ಲ ಎಂದು ಕೇರಳ ವಾದಿಸಿದ್ದು,  ಕಾಯ್ದೆ ಅಂಗೀಕಾರವಾದ ನಾಲ್ಕು ವರ್ಷಗಳ ನಂತರ ನಿಯಮಗಳನ್ನು ಜಾರಿ ಗೊಳಿಸಲಾಗಿದೆ ಎಂದು ಕೋರ್ಟ್‌ ಗಮನಕ್ಕೆ ತಂದಿದೆ.

ಸಂವಿಧಾನದ 131ನೇ ವಿಧಿಯ ಅಡಿಯಲ್ಲಿ ಈ ಮೊದಲು ಮೂಲ ಮೊಕದ್ದಮೆಯನ್ನು ಸಲ್ಲಿಸಿದ್ದ ಕೇರಳ ರಾಜ್ಯವು, ಧಾರ್ಮಿಕ ವರ್ಗೀಕರಣವು ಆರ್ಟಿಕಲ್ 14ರ ಅಡಿಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ.

ತಿದ್ದುಪಡಿ ಕಾಯಿದೆ ಮತ್ತು ನಿಯಮಗಳು ಮತ್ತು ಆದೇಶಗಳು ಭಾರತದೊಂದಿಗೆ ಅಂತರಾಷ್ಟ್ರೀಯ ಗಡಿಗಳನ್ನು ಹಂಚಿಕೊಳ್ಳುತ್ತಿರುವ ಶ್ರೀಲಂಕಾ, ಮ್ಯಾನ್ಮಾರ್ ಮತ್ತು ಭೂತಾನ್‌ನಂತಹ ಇತರ ದೇಶಗಳ ವಲಸಿಗರ ವಿಚಾರದಲ್ಲಿ ತಾರತಮ್ಯ ಮಾಡುತ್ತದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಲ್ಪಸಂಖ್ಯಾತರ ವರ್ಗಕ್ಕೆ ನೀಡಿರುವ ಹಕ್ಕುಗಳನ್ನು ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ ಮತ್ತು ಭೂತಾನ್‌ಗೆ ಸೇರಿದ ಧಾರ್ಮಿಕ ಅಲ್ಪಸಂಖ್ಯಾತರಿಗೆ ವಿಸ್ತರಿಸದಿರಲು ಯಾವುದೇ ತರ್ಕವಿಲ್ಲ ಎಂದು ರಾಜ್ಯವು ವಾದಿಸಿದೆ.

ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳು ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತಾರೆ,  ಮುಖ್ಯವಾಗಿ ತಮಿಳು ವಂಶಸ್ಥರು, ಶ್ರೀಲಂಕಾ ಮತ್ತು ನೇಪಾಳದ ತೇರಾಯ್‌ನಲ್ಲಿರುವ ಹಿಂದೂ ಮಾಧೇಸಿಗಳನ್ನು ವ್ಯಾಪ್ತಿಗೆ ಒಳಪಡಿಸಿಲ್ಲ, ಇವರ ಪೂರ್ವಜರು ಹದಿನೆಂಟನೇ ಶತಮಾನದಲ್ಲಿ ಆಗಿನ ಬ್ರಿಟಿಷ್ ಇಂಡಿಯಾದಿಂದ ಶ್ರೀಲಂಕಾ ಮತ್ತು ನೇಪಾಳಕ್ಕೆ ವಲಸೆ ಹೋದವರು. ಈ ಕಾಯಿದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಕ್ರಿಶ್ಚಿಯನ್ನರನ್ನು ಒಳಗೊಂಡಿದೆ, ಆದರೆ ಭೂತಾನ್ ಮತ್ತು ಶ್ರೀಲಂಕಾದಲ್ಲಿನ ಕ್ರಿಶ್ಚಿಯನ್ನರ ಸಮಸ್ಯೆಗಳನ್ನು ಪರಿಗಣಿಸಲಿಲ್ಲ. ಅಲ್ಲದೆ ಈ ಕಾಯಿದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಬೌದ್ಧರನ್ನು ಒಳಗೊಳ್ಳುತ್ತದೆ. ಆದರೆ  ನೇಪಾಳದಲ್ಲಿರುವ ಬೌದ್ಧರ ಬಗ್ಗೆ ಕಾಳಜಿ ತೋರಿಸಿಲ್ಲ ಎಂದು ಹೇಳಿದೆ.

ಅಧಿಸೂಚನೆಗಳು ಕಿರುಕುಳಕ್ಕೊಳಗಾದ ಇತರ ಧಾರ್ಮಿಕ ಅಲ್ಪಸಂಖ್ಯಾತ ಪಂಗಡಗಳಾದ ಅಹ್ಮದ್ದೀಯರು, ಶಿಯಾಗಳು ಮತ್ತು ಹಜಾರಗಳನ್ನು ಕಡೆಗಣಿಸಲಾಗಿದೆ ಎಂದು ಕೋರ್ಟ್‌ ಗಮನಕ್ಕೆ ತರಲಾಗಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅಹಮದಿಯಾಗಳು ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಕೇರಳವು ಮ್ಯಾನ್ಮಾರ್‌ನಲ್ಲಿರುವ ರೋಹಿಂಗ್ಯಾಗಳು ಮತ್ತು ಶ್ರೀಲಂಕಾದಲ್ಲಿ ಮುಸ್ಲಿಮರ ಸಮಸ್ಯೆಗಳನ್ನು ಎತ್ತಿ ತೋರಿಸಿದೆ, ಅವರು ಈ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ ಮತ್ತು ಭಾರತದೊಂದಿಗೆ ಅಂತರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿದ್ದಾರೆ. ಈ ಕಾಯಿದೆಯು ಪೌರತ್ವವನ್ನು ಪಡೆಯುವ ಪ್ರಯೋಜನದಿಂದ ಮುಸ್ಲಿಮರನ್ನು ಧರ್ಮದ ಆಧಾರದಲ್ಲಿ ಹೊರಗಿಟ್ಟಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದೆ.

ಮೋದಿ ಸರ್ಕಾರವು ಅಂಗೀಕರಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ಕಾಯ್ದೆಯು ಡಿಸೆಂಬರ್ 31, 2014ರೊಳಗೆ ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುತ್ತದೆ. CAA ಡಿಸೆಂಬರ್ 2019ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿದ್ದು, ಆ ಬಳಿಕ  ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದಿದೆ. ಡಿಸೆಂಬರ್ 31, 2019ರಂದು ‘ಕೇರಳ ವಿಧಾನಸಭೆ’ಯು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವಂತೆ  ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತ್ತು.

ಇದನ್ನು ಓದಿ: ಲೋಕಸಭೆ ಚುನಾವಣೆ-2024: ‘ಪ್ರಜಾಪ್ರಭುತ್ವ ಉಳಿಸಲು ಕೊನೆಯ ಅವಕಾಶ..’ ಎಂದ ಕಾಂಗ್ರೆಸ್

 

 

 

 

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರು,...