Homeಮುಖಪುಟತಮಿಳುನಾಡು: ನಾಳೆ ಪೊಂಗಲ್‌ನಲ್ಲಿ ಪಾಲ್ಗೊಂಡು, ಜಲ್ಲಿಕಟ್ಟು ವೀಕ್ಷಿಸಲಿರುವ ರಾಹುಲ್ ಗಾಂಧಿ!

ತಮಿಳುನಾಡು: ನಾಳೆ ಪೊಂಗಲ್‌ನಲ್ಲಿ ಪಾಲ್ಗೊಂಡು, ಜಲ್ಲಿಕಟ್ಟು ವೀಕ್ಷಿಸಲಿರುವ ರಾಹುಲ್ ಗಾಂಧಿ!

ಜಲ್ಲಕಟ್ಟು ಕ್ರೀಡೆ ವೀಕ್ಷಿಸುವ ಮೂಲಕ ರಾಹುಲ್ ಗಾಂಧಿ ರೈತರಿಗೆ ಬೆಂಬಲ ನೀಡಲಿದ್ದಾರೆ. ಗೂಳಿ ರೈತರ ಸಂಕೇತ ಮತ್ತು ಅವರ ಜೀವನದ ಒಂದು ಭಾಗವಾಗಿದೆ - ಕೆ.ಎಸ್ ಅಳಗಿರಿ

- Advertisement -
- Advertisement -

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ತಮಿಳುನಾಡಿಗೆ ಭೇಟಿ ನೀಡಲಿದ್ದು, ಪೊಂಗಲ್ ಹಬ್ಬದಲ್ಲಿ ಭಾಗವಹಿಸಿ, ಜಲ್ಲಿಕಟ್ಟು ವೀಕ್ಷಸಲಿದ್ದಾರೆ ಎಂದು ತಮಿಳುನಾಡು ಕಾಂಗ್ರೆಸ್ ಮುಖ್ಯಸ್ಥ ಕೆ.ಎಸ್ ಅಳಗಿರಿ ತಿಳಿಸಿದ್ದಾರೆ.

ಮಧುರೈನಲ್ಲಿ ಹಮ್ಮಿಕೊಳ್ಳಲಾಗಿರುವ ಜಲ್ಲಕಟ್ಟು ಕ್ರೀಡೆ ವೀಕ್ಷಿಸುವ ಮೂಲಕ ರಾಹುಲ್ ಗಾಂಧಿ ರೈತರಿಗೆ ಬೆಂಬಲ ನೀಡಲಿದ್ದಾರೆ. ಗೂಳಿ ರೈತರ ಸಂಕೇತ ಮತ್ತು ಅವರ ಜೀವನದ ಒಂದು ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿಯವರ ಭೇಟಿಯು “ಸುಗ್ಗಿಯ ಹಬ್ಬದ ದಿನದಂದು ರೈತರನ್ನು ಮತ್ತು ಶೌರ್ಯದ ತಮಿಳು ಸಂಸ್ಕೃತಿಯನ್ನು ಗೌರವಿಸುತ್ತದೆ. ಅಂದು ಅವರು ಯಾವುದೇ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ” ಎಂದು ಅಳಗಿರಿ ಒತ್ತಿ ಹೇಳಿದ್ದಾರೆ.

ಏಪ್ರಿಲ್-ಮೇ ತಿಂಗಳಿನಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ರಾಹುಲ್ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಘಟಕವು ಈ ಭೇಟಿಗೆ ’ರಾಹುಲ್‌ರವರ ತಮಿಳು ನಮಸ್ಕಾರಗಳು’ ಎಂದು ಕರೆದಿದೆ.

ಪ್ರಾಣಿಗಳ ಮೇಲೆ ಕ್ರೌರ್ಯ ನಡೆಸಲಾಗುತ್ತದೆ ಎಂಬ ಆರೋಪದಿಂದಾಗಿ ಜಲ್ಲಿಕಟ್ಟು ವಿವಾದಕ್ಕೆ ಕಾರಣವಾಗಿದೆ. ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ ಮತ್ತು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಸಲ್ಲಿಸಿದ ಮನವಿಗಳ ಆಧಾರದಲ್ಲಿ 2014 ರಲ್ಲಿ ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಿತ್ತು.

ಆದರೆ ತಮಿಳುನಾಡಿನ ಸಂಸ್ಕೃತಿ ಮತ್ತು ಅಸ್ಮಿತೆಗೆ ಜಲ್ಲಿಕಟ್ಟು ನಿರ್ಣಾಯಕ ಎಂದು ರಾಜ್ಯ ಸರ್ಕಾರ ವಾದಿಸಿತು. ಚೆನ್ನೈನಲ್ಲಿ ಭಾರಿ ಪ್ರತಿಭಟನೆ ನಡೆದ ನಂತರ ಕಾನೂನಿನ ತಿದ್ದುಪಡಿಯೊಂದಿಗೆ 2017 ರಲ್ಲಿ ನಿಷೇಧವನ್ನು ತೆಗೆದುಹಾಕಲಾಯಿತು.

ಕೊರೊನಾ ವೈರಸ್ ಕಾರಣ ಈ ವರ್ಷ ಸರ್ಕಾರ ನಿರ್ಬಂಧಗಳೊಂದಿಗೆ ಈ ಕಾರ್ಯಕ್ರಮಕ್ಕೆ ಅವಕಾಶ ನೀಡಿದೆ. ಯಾವುದೇ ಸ್ಪರ್ಧೆಯಲ್ಲಿ ಆಟಗಾರರ ಸಂಖ್ಯೆ 150 ಕ್ಕಿಂತ ಹೆಚ್ಚಿರಬಾರದು ಮತ್ತು ಭಾಗವಹಿಸುವವರಿಗೆ COVID-19 ನೆಗೆಟಿವ್ ಪ್ರಮಾಣಪತ್ರದ ಅಗತ್ಯವಿದೆ. ಪ್ರೇಕ್ಷಕರ ಸಂಖ್ಯೆಯನ್ನು ಸಹ ಅರ್ಧಕ್ಕೆ ಸೀಮಿತಗೊಳಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.


ಇದನ್ನೂ ಓದಿ: ಸುಪ್ರೀಂ ನೇಮಿಸಿದ ಸಮಿತಿಯಲ್ಲಿನ ಸದಸ್ಯರೆಲ್ಲರೂ ಕೃಷಿ ಕಾಯ್ದೆ ಸಮರ್ಥಕರು!: ಭುಗಿಲೆದ್ದ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....