ಕಳೆದ ಎರಡು ತಿಂಗಳುಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಿಂದ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಲ್ಲಿ ಒಂದಾದ ಚುರಾಚಂದ್‌ಪುರಕ್ಕೆ ಭೇಟಿ ನೀಡಲು ಮುಂದಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪೊಲೀಸರು ತಡೆದಿದ್ದಾರೆ.
Rahul Gandhi’s convoy has been stopped by double engine Modi govt in Manipur.
Modi doesn’t want to work for people and he won’t let Rahul Gandhi Ji to listen to the people of Manipur.
Na kaam karunga, na kisi ko karne dunga.. pic.twitter.com/8NkUWliw94
— Shantanu (@shaandelhite) June 29, 2023
ರಾಹುಲ್ ಗಾಂದಿ ಇಂದು ಮುಂಜಾನೆ ಇಂಫಾಲ್‌ಗೆ ಬಂದಿಳಿದ ನಂತರ ಕಾರಿನಲ್ಲಿ ಚುರಾಚಂದ್‌ಪುರಕ್ಕೆ ತೆರಳುತ್ತಿದ್ದರು. ಅಲ್ಲಿ ಅವರು ಜನಾಂಗೀಯ ಕಲಹದಿಂದ ಸ್ಥಳಾಂತರಗೊಂಡ ಜನರನ್ನು ಪರಿಹಾರ ಶಿಬಿರಗಳಲ್ಲಿ ಭೇಟಿ ಮಾಡಲು ಉದ್ದೇಶಿಸಿದ್ದರು.
ರಾಹುಲ್ ಗಾಂಧಿಯನ್ನು ತಡೆದಿರುವುದು ಬಿಜೆಪಿ ಸರ್ಕಾರ ಎಂದು ಕಾಂಗ್ರೆಸ್ ಕಿಡಿಕಾರಿದೆ. “ರಾಹುಲ್ ಗಾಂಧಿಯವರು ಶಾಂತಿ ಸಂದೇಶದೊಂದಿಗೆ ಮಣಿಪುರಕ್ಕೆ ತೆರಳಿದ್ದಾರೆ. ಆದರೆ ಅಧಿಕಾರದಲ್ಲಿರುವ ಜನರು ಶಾಂತಿ, ಪ್ರೀತಿ ಮತ್ತು ಸಹೋದರತ್ವದ ಬಗ್ಗೆ ಬಲವಾದ ದ್ವೇಷವನ್ನು ಹೊಂದಿದ್ದಾರೆ. ಆದರೆ ಅವರು ನೆನಪಿಟ್ಟುಕೊಳ್ಳಬೇಕು… ಈ ದೇಶ ಗಾಂಧೀ ಮಾರ್ಗದಲ್ಲಿ ಸಾಗುತ್ತದೆ, ಈ ದೇಶ ಪ್ರೀತಿಯ ಹಾದಿಯಲ್ಲಿ ಸಾಗುತ್ತದೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
राहुल गांधी जी मणिपुर हिंसा के पीड़ितों से मिलने जा रहे थे।
BJP सरकार ने पुलिस लगाकर उन्हें रास्ते में रोक दिया।
राहुल जी शांति का संदेश लेकर मणिपुर गए हैं। सत्ता में बैठे लोगों को शांति, प्रेम, भाईचारे से सख्त नफरत है।
लेकिन उन्हें याद रखना चाहिए… ये देश गांधी के रास्ते पर… pic.twitter.com/KEdwCoDxvg
— Congress (@INCIndia) June 29, 2023
“ಮಣಿಪುರದ ಬಿಷ್ಣುಪುರ ಬಳಿ ರಾಹುಲ್ ಗಾಂಧಿ ಬೆಂಗಾವಲು ವಾಹನವನ್ನು ಪೊಲೀಸರು ತಡೆದಿದ್ದಾರೆ. ನಮಗೆ ಅವಕಾಶ ಕೊಡುವ ಸ್ಥಿತಿಯಲ್ಲಿಲ್ಲ ಎನ್ನುತ್ತಾರೆ ಪೊಲೀಸರು. ರಾಹುಲ್ ಗಾಂಧಿಗೆ ಕೈ ಬೀಸಲು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದಾರೆ. ನಮ್ಮನ್ನು ಏಕೆ ತಡೆದಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
I do not know why the Police are not allowing us. Rahul Gandhi's visit is to meet the affected people only. We travelled around 20-25 km but there was no road blockage anywhere. Rahul Gandhi is sitting inside the car. I do not know who has instructed the local police: Congress…
— ANI (@ANI) June 29, 2023
ಪೊಲೀಸರು ನಮಗೆ ಏಕೆ ಅವಕಾಶ ನೀಡುತ್ತಿಲ್ಲ ಎಂಬುದು ಗೊತ್ತಿಲ್ಲ. ಸಂತ್ರಸ್ತ ಜನರನ್ನು ಭೇಟಿ ಮಾಡಲು ರಾಹುಲ್ ಗಾಂಧಿ ಹೊರಟಿದ್ದಾರೆ. ಸುಮಾರು 20-25 ಕಿ.ಮೀ ಸಂಚರಿಸಿದರೂ ಎಲ್ಲಿಯೂ ರಸ್ತೆ ತಡೆ ಆಗಿಲ್ಲ. ರಾಹುಲ್ ಗಾಂಧಿ ಕಾರಿನೊಳಗೆ ಕುಳಿತಿದ್ದಾರೆ. ಸ್ಥಳೀಯ ಪೊಲೀಸರಿಗೆ ಯಾರು ಸೂಚನೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಈ ವರ್ಷದ ಮೇನಲ್ಲಿ ಮಣಿಪುರದಲ್ಲಿ ಜನಾಂಗೀಯ ಕಲಹ ಪ್ರಾರಂಭವಾದಾಗಿನಿಂದ ಸುಮಾರು 50,000 ಜನರು ಈಗ ರಾಜ್ಯದಾದ್ಯಂತ 300 ಕ್ಕೂ ಹೆಚ್ಚು ಪರಿಹಾರ ಶಿಬಿರಗಳಲ್ಲಿ ತಂಗಿದ್ದಾರೆ.
”ಮಣಿಪುರವು ಸುಮಾರು ಎರಡು ತಿಂಗಳುಗಳಿಂದ ಹೊತ್ತಿ ಉರಿಯುತ್ತಿದೆ. ಸಮಾಜವು ಸಂಘರ್ಷದಿಂದ ಶಾಂತಿಯತ್ತ ಸಾಗಬೇಕಿದೆ. ಅದಕ್ಕೆ ಸಂತೈಸುವ ಸ್ಪರ್ಶ ಬೇಕಿದೆ. ಆ ಮೂಲಕ ಗಾಯವನ್ನು ಗುಣಪಡಿಸುವ ಅಗತ್ಯವಿದೆ. ಇದು ಮಾನವೀಯ ದುರಂತವಾಗಿದೆ. ದ್ವೇಷವಲ್ಲವನ್ನಲ್ಲ, ಪ್ರೀತಿಯನ್ನು ಶಕ್ತಿಯನ್ನಾಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಣಿಪುರಕ್ಕೆ ತೆರಳಿ ಸಂತ್ರಸ್ತರನ್ನು ಸಂತೈಸಲಿದ್ದಾರೆ” ಎಂದು ಕಾಂಗ್ರೆಸ್ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ನಿನ್ನೆ ಟ್ವೀಟ್ ಮಾಡಿದ್ದರು.
ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾದಾಗಿನಿಂದ ಪ್ರಧಾನಿ ಮೋದಿ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು ಎಂಬುದು ಹಲವರ ಒತ್ತಾಯವಾಗಿದೆ. ಆದರೆ ಮೋದಿಯವರು ಕರ್ನಾಟಕದ ನಂತರ ಸದ್ಯ ಮಧ್ಯಪ್ರದೇಶ ಚುನಾವಣಾ ಪ್ರಚಾರದಲ್ಲಿ ನಿರತವಾಗಿದ್ದಾರೆಯೇ ಹೊರತು ಮಣಿಪುರಕ್ಕೆ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತವಾಗಿತ್ತು.
ಇನ್ನೊಂದೆಡೆ ಪ್ರತಿಪಕ್ಷದ ಮುಖಂಡ ರಾಹುಲ್ ಗಾಂಧಿಯವರು ಮಣಿಪುರಕ್ಕೆ ತೆರಳಲು ಮುಂದಾದರೆ ಅವರಿಗೂ ಅವಕಾಶ ನೀಡದೆ ತಡೆಯೊಡ್ಡಲಾಗಿದೆ.
ಮೇ 3 ರಂದು ಈಶಾನ್ಯ ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರದಿಂದ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಮೈತಿ ಸಮುದಾಯದ ಬೇಡಿಕೆಯ ವಿರುದ್ಧ ಪ್ರತಿಭಟಿಸಲು ಗುಡ್ಡಗಾಡು ಜಿಲ್ಲೆಗಳಲ್ಲಿ ‘ಕುಕಿ ಬುಡಕಟ್ಟು ಸಮುದಾಯದವರು ಒಗ್ಗಟ್ಟಿನ ಮೆರವಣಿಗೆ’ಯ ಸಂದರ್ಭದಲ್ಲಿ ಘರ್ಷಣೆಗಳು ಭುಗಿಲೆದ್ದವು.
ಇದನ್ನೂ ಓದಿ; ಹಿಂಸಾಚಾರ ಪೀಡಿತ ಮಣಿಪುರಕ್ಕೆ ನಾಳೆ ರಾಹುಲ್ ಭೇಟಿ; ವಿವಿಧ ಸಮುದಾಯಗಳೊಂದಿಗೆ ಸಂವಾದ


