Homeಮುಖಪುಟಸಲಿಂಗ ವಿವಾಹ ನೋಂದಣಿಗೆ ನೇಪಾಳ ಸುಪ್ರೀಂ ಕೋರ್ಟ್ ಆದೇಶ: ಭಾರತದಲ್ಲೂ ಕಾನೂನು ಮಾನ್ಯತೆಗೆ ಒತ್ತಾಯ

ಸಲಿಂಗ ವಿವಾಹ ನೋಂದಣಿಗೆ ನೇಪಾಳ ಸುಪ್ರೀಂ ಕೋರ್ಟ್ ಆದೇಶ: ಭಾರತದಲ್ಲೂ ಕಾನೂನು ಮಾನ್ಯತೆಗೆ ಒತ್ತಾಯ

- Advertisement -
- Advertisement -

ಸಲಿಂಗ ವಿವಾಹವನ್ನು ನೋಂದಣಿ ಮಾಡಿಕೊಳ್ಳಲು ಕಾರ್ಯವಿಧಾನ ರಚಿಸುವಂತೆ ನೇಪಾಳ ಸರ್ಕಾರಕ್ಕೆ ಅಲ್ಲಿಯ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಆದೇಶ ಹೊರಡಿಸಿದೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.

ನ್ಯಾಯಮೂರ್ತಿ ಟಿಲ್ ಪ್ರಸಾದ್ ಶ್ರೇಷ್ಠ ಅವರ ಏಕ ಸದಸ್ಯ ಪೀಠ, ಲೈಂಗಿಕ ಮತ್ತು ಲಿಂಗ ಅಲ್ಪಸಂಖ್ಯಾತ ದಂಪತಿಗಳ ವಿವಾಹ ನೋಂದಾಯಿಸಲು ಅವರು ಬಯಸಿದರೆ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಎಲ್‌ಜಿಬಿಟಿ ಸಮುದಾಯದ ಹಕ್ಕುಗಳಿಗಾಗಿ ಪ್ರತಿಪಾದಿಸುವ ಬ್ಲೂ ಡೈಮಂಡ್ ಸೊಸೈಟಿಯ ಸರ್ಕಾರೇತರ ಸಂಸ್ಥೆಯಾದ ಪಿಂಕಿ ಗುರುಂಗ್ ಅವರು ಸೇರಿದಂತೆ ಏಳು ಜನ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನೇಪಾಳ ಸುಪ್ರೀಂ ಕೋರ್ಟ್, ಈ ಸಂಬಂಧ 15 ದಿನಗಳಲ್ಲಿ ಲಿಖಿತ ಉತ್ತರ ನೀಡುವಂತೆ ಪ್ರತಿವಾದಿಗಳಿಗೆ ಸೂಚಿಸಿದೆ.

ಪ್ರಾಥಮಿಕ ವಿಚಾರಣೆಯ ನಂತರ, ನ್ಯಾಯಮೂರ್ತಿ ಟಿಲ್ ಪ್ರಸಾದ್ ಶ್ರೇಷ್ಠಾ ಅವರ ಏಕ ಪೀಠವು ನೇಪಾಳದ ಸಂವಿಧಾನವು ಯಾವುದೇ ವ್ಯಕ್ತಿಯನ್ನು ಮದುವೆಯಾಗುವ ಸಮಾನತೆ ಹಕ್ಕನ್ನು ಖಾತ್ರಿಪಡಿಸುವುದರಿಂದ ಸಲಿಂಗ ವಿವಾಹಗಳನ್ನು ನೋಂದಾಯಿಸಬೇಕು ಎಂದು ತೀರ್ಮಾನಿಸಿತು.

15 ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹೊರತಾಗಿಯೂ ನೇಪಾಳದ ಕಾನೂನು ಸಲಿಂಗ ವಿವಾಹಕ್ಕೆ ಅಡ್ಡಿಯಾಗಿರುವುದರಿಂದ ತಾವು ರಿಟ್ ಸಲ್ಲಿಸಿದ್ದೇವೆ ಎಂದು ಅರ್ಜಿದಾರರು ಹೇಳಿದ್ದಾರೆ.

ರಾಷ್ಟ್ರೀಯ ನಾಗರಿಕ ಸಂಹಿತೆ 2017 ರ ಷರತ್ತು 69(1) ನೇಪಾಳದ ಸಂವಿಧಾನದ 2015ರ ಕಲಂ 18(1) ರ ಪ್ರಕಾರ ಪ್ರತಿಯೊಬ್ಬ ನಾಗರಿಕನಿಗೆ ಮದುವೆಯಾಗುವ ಸ್ವಾತಂತ್ರ್ಯವಿದೆ ಎಂದು ಉಲ್ಲೇಖಿಸುತ್ತದೆ. ಅದರಂತೆ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ.

ನೇಪಾಳದ ಸಂಸತ್ತು ಇನ್ನೂ ವಿವಾಹ ಸಮಾನತೆಯ ಕುರಿತು ಕಾನೂನನ್ನು ಮಾಡಿಲ್ಲವಾದರೂ, ನ್ಯಾಯಾಲಯದ ಆದೇಶವು LGBTQ ಸಮುದಾಯದವರಿಗೆ ತಮ್ಮ ವಿವಾಹವನ್ನು ಕಾನೂನುಬದ್ಧವಾಗಿ ನೋಂದಾಯಿಸಲು ಅನುವು ಮಾಡಿಕೊಟ್ಟಿದೆ.

ನ್ಯಾಯಾಲಯವು ನೇಪಾಳ ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡಿದ್ದು, ಸಲಿಂಗ ವಿವಾಹಗಳಿಗೆ ಸಂಬಂಧಿಸಿದ ಕಾನೂನು ಆಯ್ಕೆಗಳ ಬಗ್ಗೆ ಸ್ಪಷ್ಟೀಕರಣವನ್ನು ಕೋರಿದೆ. ಸರ್ಕಾರವು ನೋಟಿಸ್‌ಗೆ ಪ್ರತಿಕ್ರಿಯಿಸಿದ ನಂತರ ಪ್ರಕರಣದ ಅಂತಿಮ ವಿಚಾರಣೆ ಪ್ರಾರಂಭವಾಗುತ್ತದೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗುರುಂಗ್, ”ಇದು ನಮ್ಮ ಸಮುದಾಯಕ್ಕೆ ಐತಿಹಾಸಿಕ ತೀರ್ಪು. ನೂರಾರು ದಂಪತಿಗಳು ಇದರಿಂದ ಪ್ರಯೋಜನ ಪಡೆಯುತ್ತಾರೆ” ಎಂದು ಹೇಳಿದರು.

2015 ರಲ್ಲಿ, ನೇಪಾಳದ ಸುಪ್ರೀಂ ಕೋರ್ಟ್ ಸಲಿಂಗ ವಿವಾಹಗಳ ಕುರಿತು ಕಾನೂನನ್ನು ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ, ನೇಪಾಳ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಹೆಜ್ಜೆ ಇಟ್ಟಿಲ್ಲ.

ಭಾರತದಲ್ಲೂ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆಗೆ ಒತ್ತಾಯ

ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ಕಳೆದ ತಿಂಗಳು ಭಾರತದ ಸುಪ್ರೀಂ ಕೋರ್ಟ್ ಕಾಯ್ದಿರಿಸಿತ್ತು. ಆದರೆ ನೇಪಾಳದಲ್ಲಿ ಮಾನ್ಯತೆ ನೀಡಲು ಮುಂದಾಗಿದೆ.

ನರೇಂದ್ರ ಮೋದಿ ಸರ್ಕಾರವು ಅರ್ಜಿಗಳನ್ನು ವಿರೋಧಿಸಿದೆ, ಸಲಿಂಗ ವಿವಾಹಗಳು ಕುಟುಂಬದ ಭಾರತೀಯ ಕಲ್ಪನೆಗೆ ಹೊಂದಿಕೆಯಾಗುವುದಿಲ್ಲ ಮತ್ತು ಅವರ ಕಾನೂನು ಮಾನ್ಯತೆಯ ಬೇಡಿಕೆಗಳು ಸಾಮಾಜಿಕ ಸ್ವೀಕಾರದ ಉದ್ದೇಶಕ್ಕಾಗಿ ನಗರ ಗಣ್ಯರ ದೃಷ್ಟಿಕೋನಗಳನ್ನು ಪ್ರತಿನಿಧಿಸುತ್ತವೆ ಎಂದು ವಾದಿಸಿದರು. ಮದುವೆಗೆ ಸಂಬಂಧಿಸಿದ ಕಾನೂನುಗಳನ್ನು ರಚಿಸುವುದು ಶಾಸಕಾಂಗದ ಹಕ್ಕು ಮತ್ತು ನ್ಯಾಯಾಂಗವು ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಅದು ಪ್ರತಿಪಾದಿಸಿದೆ.

ಇದನ್ನೂ ಓದಿ: ಭಾರತೀಯ ಸಂವಿಧಾನವು ‘ಸಂಪ್ರದಾಯ’ ಮುರಿಯುವಂತಹದ್ದು: ಸಲಿಂಗ ವಿವಾಹ ವಿಚಾರಣೆ ವೇಳೆ ಸುಪ್ರೀಂ ಹೇಳಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇರ ನಡೆ-ನುಡಿಯ, ಸದಾ ಸತ್ಯವನ್ನು ಹೇಳುವ ವಿಶೇಷ ಗುಣ ಬಂಗೇರ ಅವರದ್ದಾಗಿತ್ತು: ಸಿಎಂ ಸಿದ್ದರಾಮಯ್ಯ

0
ನಿಷ್ಠುರ, ನೇರ ನಡೆ ನುಡಿಯ ಸದಾ ಸತ್ಯವನ್ನು ಹೇಳುವ ವಿಶೇಷ ಗುಣ ಬಂಗೇರ ಅವರದ್ದಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ...