Homeಮುಖಪುಟಭಾರತೀಯ ಸಂವಿಧಾನವು 'ಸಂಪ್ರದಾಯ' ಮುರಿಯುವಂತಹದ್ದು: ಸಲಿಂಗ ವಿವಾಹ ವಿಚಾರಣೆ ವೇಳೆ ಸುಪ್ರೀಂ ಹೇಳಿಕೆ

ಭಾರತೀಯ ಸಂವಿಧಾನವು ‘ಸಂಪ್ರದಾಯ’ ಮುರಿಯುವಂತಹದ್ದು: ಸಲಿಂಗ ವಿವಾಹ ವಿಚಾರಣೆ ವೇಳೆ ಸುಪ್ರೀಂ ಹೇಳಿಕೆ

- Advertisement -
- Advertisement -

ಭಾರತದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ”ಭಾರತೀಯ ಸಂವಿಧಾನವು ‘ಸಂಪ್ರದಾಯ ಮುರಿಯುವಿಕೆ’ ಆಗಿದೆ ಎಂದು ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಸಂವಿಧಾನ ಪೀಠವು ಇದರ ವಿಚಾರಣೆ ನಡೆಸಿದೆ. ಈ ವೇಳೆ ಪ್ರತಿವಾದಿಗಳ ಪರ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರ ವಿಚಾರಣೆ ನಡೆಸುತ್ತಿದ್ದಾಗ, ನ್ಯಾಯಮೂರ್ತಿ ಭಟ್ ಸಂಪ್ರದಾಯ ಮುರಿಯುವಿಕೆ’ ಬಗ್ಗೆ ಪ್ರಸ್ತಾಪಿಸಿದರು.

‘ನೀವು ಸಂಪ್ರದಾಯವನ್ನು ತಂದ ಕ್ಷಣ, ಸಂವಿಧಾನವೇ ಸಂಪ್ರದಾಯವನ್ನು ಮುರಿಯುತ್ತದೆ. ಏಕೆಂದರೆ ನೀವು ಮೊದಲ ಬಾರಿಗೆ 14 ಅನ್ನು ತಂದಿದ್ದೀರಿ, ನೀವು 15 ಮತ್ತು 17 ಅನ್ನು ತಂದಿದ್ದೀರಿ, ಆ ಸಂಪ್ರದಾಯಗಳು ಮುರಿದುಹೋಗಿವೆ. ಆ ಸಂಪ್ರದಾಯಗಳನ್ನು ಮುರಿದರೆ, ನಮ್ಮ ಸಮಾಜದಲ್ಲಿ ಜಾತಿಯ ವಿಷಯದಲ್ಲಿ ಯಾವುದನ್ನು ಪವಿತ್ರವೆಂದು ಪರಿಗಣಿಸಲಾಗಿದೆ? ನಾವು ಪ್ರಜ್ಞಾಪೂರ್ವಕವಾಗಿ ಬ್ರೇಕ್ ಮಾಡಿದ್ದೇವೆ ಮತ್ತು ಅದು ನಮಗೆ ಬೇಡ ಎಂದು ಹೇಳಿದೆ. ಅಸ್ಪೃಶ್ಯತೆ ಅಸಾಂವಿಧಾನಿಕ ಎಂದು ಹೇಳಲು ನಾವು ಇಲ್ಲಿಯವರೆಗೆ ಹೋಗಿದ್ದೇವೆ. ಬೇರೆ ಯಾವುದೇ ಸಂವಿಧಾನವು ಹಾಗೆ ಹೇಳುತ್ತದೆ ಎಂದು ನಾನು ಭಾವಿಸುವುದಿಲ್ಲ. ಸಂಪ್ರದಾಯಗಳು ಇರುವ ಮಟ್ಟಿಗೆ ಇವೆ. ಆದರೆ ಅದೇ ಸಮಯದಲ್ಲಿ ಮದುವೆಯ ಪರಿಕಲ್ಪನೆಯು ವಿಕಸನಗೊಂಡಿದೆ ಎಂಬ ಅಂಶವನ್ನು ನಾವು ಜೀವಂತವಾಗಿರಿಸಬೇಕು” ಎಂದು ಪೀಠವು ಹೇಳಿದೆ.

ಈ ಸಂದರ್ಭದಲ್ಲಿ ಪ್ರತಿವಾದಿಗಳ ಪರ ಹಿರಿಯ ವಕೀಲ ರಾಕೇಶ್ ದ್ವಿವೇದಿ ಮಾತನಾಡಿ, ”ವರದಕ್ಷಿಣೆ ನಿಷೇಧದಂತಹ ಸುಧಾರಣೆಗಳನ್ನು ಶಾಸಕಾಂಗವು ತೀರ್ಮಾನಿಸಬೇಕೆಂದು ನ್ಯಾಯಾಲಯಗಳು ಅಭಿಪ್ರಾಯಪಟ್ಟಿತ್ತು. ಈಗ ಸಲಿಂಗ ವಿವಾಹದ ವಿಷಯವನ್ನು ಸಂಸತ್ತಿಗೆ ಬಿಡುವುದು ಉತ್ತಮ ಎಂದು ವಾದಿಸಿದರು.

ಇದನ್ನೂ ಓದಿ: ಸಲಿಂಗ ದಂಪತಿ ಸಾಮಾಜಿಕ ಸೌಲಭ್ಯ ಹೇಗೆ ಪಡೆಯಬಹುದು: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ

ಸಲಿಂಗ ಸಂಬಂಧ ಹೊಂದಿರುವ ವ್ಯಕ್ತಿಗಳಿಗೆ ಮದುವೆಯಾಗಲು ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕು ಇದೆಯೇ ಎಂಬುದು ಪರಿಗಣಿಸಬೇಕಾದ ಮೊದಲ ಪ್ರಶ್ನೆಯಾಗಿದೆ ಎಂದು ಅವರು ಹೇಳಿದರು. ಭಿನ್ನಲಿಂಗೀಯ ದಂಪತಿಗಳು ತಮ್ಮ ವೈಯಕ್ತಿಕ ಕಾನೂನು, ಸಂಪ್ರದಾಯ, ಧರ್ಮದ ಪ್ರಕಾರ ಮದುವೆಯಾಗುವ ಹಕ್ಕನ್ನು ಹೊಂದಿದ್ದಾರೆ ಎಂದು ದ್ವಿವೇದಿ ಹೇಳಿದರು.

ಅಂತರ್ಜಾತಿ ವಿವಾಹಕ್ಕೂ ಸಾಂಪ್ರದಾಯಿಕವಾಗಿ ಅನುಮತಿ ಇಲ್ಲ ಎಂದು ನ್ಯಾಯಮೂರ್ತಿ ರವೀಂದ್ರ ಭಟ್ ಇಲ್ಲಿ ಸೂಚಿಸಿದರು. ಆದಾಗ್ಯೂ, ಕಾಲಾನಂತರದಲ್ಲಿ, ಮದುವೆಯ ಸನ್ನಿವೇಶವು ಬದಲಾಗಿದೆ. ನ್ಯಾಯಾಧೀಶರು ಮೌಖಿಕವಾಗಿ ಹೇಳಿದರು.

”ನಾವು ಸ್ವತಂತ್ರ ನಾಗರಿಕರು ಹಾಗಾಗಿ ಯಾವುದನ್ನೂ ಮಂಜೂರು ಮಾಡಿಲ್ಲ ಇದನ್ನು ನಾವೇ ತೆಗೆದುಕೊಂಡಿದ್ದೇವೆ. ಮಾತನಾಡುವ ಹಕ್ಕು ನಮ್ಮ ಅಂತರ್ಗತ ಹಕ್ಕುಗಳ ಭಾಗವಾಗಿದೆ ಅದನ್ನು ಸಂವಿಧಾನ ನೀಡುವುದಿಲ್ಲ. ಇದನ್ನು ಶಾಸನಗಳು ಕೂಡ ಮಾನ್ಯತೆ ಪಡೆದಿವೆ. ಆದ್ದರಿಂದ ಮದುವೆಯಾಗುವ ಹಕ್ಕು ಸಹ ಅಂತರ್ಗತವಾಗಿರುತ್ತದೆ” ಎಂದು ಪೀಠ ಹೇಳಿದೆ.

ಜಸ್ಟಿಸ್ ಭಟ್ ಅವರು ಮುಂದುವರೆದು, ”ಈ ಮದುವೆಯೊಳಗೆ, ಅವರು ಯಾವ ರೀತಿ ಮದುವೆ ಆಗಬೇಕು ಎನ್ನುವುದು ಅವರಿಗೆ ಬಿಟ್ಟ ವಿಚಾರವಾಗಿದೆ. ”ಮದುವೆ ಎಂದರೇನು? ಇಬ್ಬರು ಸಂಗಾತಿಗಳು ಒಪ್ಪಿಕೊಂಡು ಸ್ವಯಂಪ್ರೇರಣೆಯಿಂದ ನಿರ್ಧರಿಸುತ್ತಾರೆ. ಮಕ್ಕಳನ್ನು ಹೊಂದುವ ಬಗ್ಗೆ ಆ ಸಂಗಾತಿಗಳು ನಿರ್ಧರಿಸುತ್ತಾರೆ. ಇದು ಸಂಪೂರ್ಣವಾಗಿ ಅವರ ಆಯ್ಕೆಯಾಗಿದೆ. ಇಬ್ಬರು ಒಟ್ಟಿಗೆ ವಾಸಿಸದಿರುವ ಮದುವೆಗಳು ಇರಬಹುದು. ಮದುವೆಯು ಮುಖ್ಯ ವಿಚಾರವಾಗಿರುವುದರಿಂದ ಸಂಗಾತಿಗಳ ನಿರ್ಧಾರದ ಮೇಲೆ ಎಲ್ಲವು ಅವಲಂಬನೆಯಾಗಿದೆ” ಎಂದು ಹೇಳಿದರು.

ಈ ವೇಳೆ ದ್ವಿವೇದಿ ಅವರು, ಮದುವೆಯನ್ನು ವೈಯಕ್ತಿಕ ಪರಿಕಲ್ಪನೆಯಾಗಿ ಪರಿಗಣಿಸಿದರೆ, ಅಲ್ಲಿ ಯಾವುದೇ ಕಾನೂನು ಇರುವುದಿಲ್ಲ ಎಂದರು.

”ಮದುವೆಯನ್ನು ನಿಯಂತ್ರಿಸುವಲ್ಲಿ ರಾಜ್ಯವು ಕಾನೂನುಬದ್ಧ ಆಸಕ್ತಿಯನ್ನು ಹೊಂದಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಹಾಗಾದರೆ ಮುಂದಿನ ವಿಷಯವೆಂದರೆ, ಭಿನ್ನಲಿಂಗೀಯತೆಯು ಮದುವೆಯ ಪ್ರಮುಖ ಅಂಶವಾಗಿದೆಯೇ?” ಎಂದು ಸಿಜೆಐ ಪ್ರಶ್ನೆ ಮಾಡಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...