Homeಮುಖಪುಟಸಲಿಂಗ ದಂಪತಿ ಸಾಮಾಜಿಕ ಸೌಲಭ್ಯ ಹೇಗೆ ಪಡೆಯಬಹುದು: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ

ಸಲಿಂಗ ದಂಪತಿ ಸಾಮಾಜಿಕ ಸೌಲಭ್ಯ ಹೇಗೆ ಪಡೆಯಬಹುದು: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ

- Advertisement -
- Advertisement -

ಸಲಿಂಗ ದಂಪತಿಗಳಿಗೆ ಜಂಟಿ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಅಥವಾ ವಿಮಾ ಪಾಲಿಸಿಗಳಲ್ಲಿ ಪಾಲುದಾರರನ್ನು ನಾಮನಿರ್ದೇಶನ ಮಾಡುವುದು- ಮುಂತಾದ ಮೂಲಭೂತ ಸಾಮಾಜಿಕ ಹಕ್ಕುಗಳನ್ನು ನೀಡಲು ಸರ್ಕಾರವು ದಾರಿಗಳನ್ನು ಕಂಡುಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ತಾಳಿದೆ.

“ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವುದು ಸಂಸತ್ತಿನ ವಿಶೇಷ ಹಕ್ಕು” ಎಂದು ಕೋರ್ಟ್ ಅಭಿಪ್ರಾಯಪಟ್ಟಿರುವಂತೆ ತೋರುತ್ತಿದೆ.

ಸಲಿಂಗ ವಿವಾಹಗಳ ಮಾನ್ಯತೆ ಮತ್ತು ರಕ್ಷಣೆಗಾಗಿ ಸಲ್ಲಿಸಲಾದ ಮೇಲ್ಮನವಿಗಳನ್ನು ಕೋರ್ಟ್ ಪರಿಶೀಲಿಸುತ್ತಿದೆ. “ಮದುವೆಯಾಗುವ ಹಕ್ಕನ್ನು ನಿರಾಕರಿಸುವುದು ಸಲಿಂಗಾಸಕ್ತರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಮತ್ತು ತಾರತಮ್ಯ, ಹೊರಗಿಡುವಿಕೆಗೆ ಕಾರಣವಾಗುತ್ತದೆ” ಎಂದು ವಾದಿಸಿದ ಅರ್ಜಿದಾರರನ್ನು ನ್ಯಾಯಾಲಯವು ವಿಚಾರಣೆ ಮಾಡುತ್ತಿದೆ.

ಸಲಿಂಗ ದಂಪತಿಗಳಿಗೆ ವೈವಾಹಿಕ ಸ್ಥಾನಮಾನವನ್ನು ನೀಡದೆ ಈ ಕೆಲವು ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ನೋಡಲು ಸರ್ಕಾರವನ್ನು ನ್ಯಾಯಾಲಯ ಕೇಳಿದೆ. ಬುಧವಾರ ಪ್ರತಿಕ್ರಿಯೆಯೊಂದಿಗೆ ಹಿಂತಿರುಗುವಂತೆ ಸಾಲಿಸಿಟರ್ ಜನರಲ್‌ಗೆ ಸೂಚಿಸಿದೆ.

“ಇದು ಶಾಸಕಾಂಗದ ವಿಚಾರವಾಗಿದೆ ಎಂಬ ನಿಮ್ಮ ಅಭಿಪ್ರಾಯವನ್ನು ನಾವು ತೆಗೆದುಕೊಳ್ಳುತ್ತೇವೆ. ಹಾಗಾದರೆ, ಈಗ ಏನು ಮಾಡುವುದು? ಸರ್ಕಾರವು ಈ ರೀತಿಯ ಸಂಬಂಧಗಳೊಂದಿಗೆ ಏನು ಮಾಡಲು ಬಯಸುತ್ತದೆ? ಅಂತಹ ಸಂಬಂಧಗಳು ಬಹಿಷ್ಕಾರವಾಗದಂತೆ ನೋಡಿಕೊಳ್ಳಲು ಭದ್ರತೆ ಮತ್ತು ಸಾಮಾಜಿಕ ಕಲ್ಯಾಣದ ಭಾವನೆಯನ್ನು ಹೇಗೆ ಮೂಡಿಸಬಹುದು?” ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಪ್ರಶ್ನಿಸಿದ್ದಾರೆ.

“ಸಲಿಂಗ ವಿವಾಹದ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸಬೇಕು” ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಹೇಳಿದ ಒಂದು ದಿನದ ನಂತರ ಈ ಅಭಿಪ್ರಾಯಗಳು ಹೊರಬಂದಿವೆ. ಆದರೆ, ಈ ವಿಷಯವನ್ನು ‘ಸರ್ಕಾರ ವರ್ಸಸ್‌ ನ್ಯಾಯಾಂಗ’ದ ವಿಷಯವನ್ನಾಗಿ ಮಾಡಲು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಈ ಮನವಿಗಳನ್ನು ವಿರೋಧಿಸಿದೆ. “ಭಾರತೀಯ ಕುಟುಂಬ ಘಟಕದ ಪರಿಕಲ್ಪನೆಯೊಂದಿಗಿನ ಗಂಡ, ಹೆಂಡತಿ ಮತ್ತು ಮಕ್ಕಳು ಎನ್ನುವಂತಹ ವಿಚಾರಕ್ಕೆ ಇಂತಹ ವಿವಾಹಗಳನ್ನು ಹೋಲಿಸಲಾಗುವುದಿಲ್ಲ” ಎಂಬ ಕಾರಣವನ್ನು ನೀಡಲಾಗುತ್ತಿದೆ.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಕಳೆದ ವಾರದಿಂದ ಈ ಪ್ರಕರಣವನ್ನು ಆಲಿಸುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...