Homeಕರ್ನಾಟಕರಾಯಚೂರು ಪಿ.ಜಿ ಸೆಂಟರ್‌ನಲ್ಲಿ ಬೋರ್ಡ್‌, ಊಟದ ತಟ್ಟೆ, ಕುಡಿಯುವ ನೀರು ಸಹ ಇಲ್ಲ! : ಸಿಟ್ಟಿಗೆದ್ದ...

ರಾಯಚೂರು ಪಿ.ಜಿ ಸೆಂಟರ್‌ನಲ್ಲಿ ಬೋರ್ಡ್‌, ಊಟದ ತಟ್ಟೆ, ಕುಡಿಯುವ ನೀರು ಸಹ ಇಲ್ಲ! : ಸಿಟ್ಟಿಗೆದ್ದ ವಿದ್ಯಾರ್ಥಿಗಳಿಂದ ಧಿಡೀರ್‌ ಪ್ರತಿಭಟನೆ

600 ಜನಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಇಲ್ಲ ಕೇವಲ 6 ಜನ ಮಾತ್ರ ಕಾಯಂ ಉಪನ್ಯಾಸಕರಿದ್ದಾರೆ. ಉಳಿದವರೆಲ್ಲಾ ಅಥಿತಿ ಉಪನ್ಯಾಸಕರಾಗಿರುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ

- Advertisement -
- Advertisement -

ಹೈದರಾಬಾದ್‌ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ರಾಯಚೂರಿನಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳಿಲ್ಲ ಎನ್ನುವುದು ಹಲವಾರು ದಶಕಗಳ ಕೂಗು. ಹಲವು ವರ್ಷಗಳ ಹಿಂದೆ ಇಲ್ಲಿಗೊಂದು ಐಐಟಿ ಬರುತ್ತದೆ ಎಂದು ಆಸೆ ಹುಟ್ಟಿಸಿ ಕೊನೆಗೆ ಕೈಕೊಡಲಾಯ್ತು, ಐಐಟಿ ಧಾರವಾಡದ ಪಾಲಾಯ್ತು. ಹೋಗಲಿ ಈ ಜಿಲ್ಲೆಗೆ ಒಂದು ವಿವಿಯಾದರೂ ಇದೆಯೇ ಎಂದು ನೋಡಿದರೆ ರಾಯಚೂರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂದು ಮೂರ್‍ನಾಲ್ಕು ವರ್ಷಗಳಿಂದ ಚರ್ಚೆಗಳು ನಡೆದಿವೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಇಷ್ಟೆಲ್ಲದರ ನಡುವೆ ಅಲ್ಲಿನ ವಿದ್ಯಾರ್ಥಿಗಳು ಸಮರ್ಪಕ ಶಿಕ್ಷಣ ಸಿಗದೇ ನರಳುತ್ತಿದ್ದಾರೆ. ಅಲ್ಲಿಯ ವಿದ್ಯಾರ್ಥಿಗಳ ಧಾರುಣ ಸ್ಥಿತಿ ಇಲ್ಲಿದೆ ನೋಡಿ.

ಬೋರ್ಡೇ ಇಲ್ಲದ ಕಗ್ಗಾಡಿನಲ್ಲೊಂದು ಪಿ.ಜಿ ಸೆಂಟರ್‌

ದೊಡ್ಡ ಜಿಲ್ಲೆ ರಾಯಚೂರಿನಲ್ಲಿ ಯರಗೇರಾ ಪಿ.ಜಿ ಸೆಂಟರ್‌ ಇದೆ. ಸದ್ಯಕ್ಕೆ ಪದವಿ ನಂತರ ಉನ್ನತ ಶಿಕ್ಷಣ ಪಡೆಯಲು ರಾಯಚೂರು ಸುತ್ತ ಇರುವ ವಿದ್ಯಾರ್ಥಿಗಳೆಲ್ಲಾ ಇಲ್ಲಿಗೆ ಬರಬೇಕು. ದುರಂತವೆಂದರೆ ಇಲ್ಲಿ ಪಿ.ಜಿ ಸೆಂಟರ್‌ ಇದೆ ಎಂದು ಗೊತ್ತಾಗಲು ಇರಬೇಕಾದ ಒಂದು ಬೋರ್ಡ್‌ ಕೂಡ ಇಲ್ಲ. ಸುತ್ತಲೂ ಜಾಲಿಗಿಡಗಳು ಬೆಳೆದುಕೊಂಡಿದ್ದು ದೊಡ್ಡ ಕೊಂಪೆಯಾಗಿ ಕಾಣಿಸುತ್ತದೆಯೇ ವಿನಾಃ ವಿಶ್ವವಿದ್ಯಾನಿಲಯವಿರಲಿ ಒಂದು ಕಾಲೇಜು ಕಂಡಂತೆ ಸಹ ಕಾಣುವುದಿಲ್ಲ.

ಈ ಪಿ.ಜಿ ಸೆಂಟರ್‌ನಲ್ಲಿ ಇಂದು ವಿದ್ಯಾರ್ಥಿಗಳ ಆಕ್ರೋಶದ ಕಟ್ಟೆಯೊಡದಿದೆ. ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೈಬರಹದಲ್ಲಿ ಕೊಟ್ಟಿರುವ ಮನವಿ ಪತ್ರ ನೋಡಿದರೆ ಎಂತವರಿಗೂ ಕನಿಕರ ಹುಟ್ಟುತ್ತದೆ. ಪಿ.ಜಿ ಹಾಸ್ಟೆಲ್‌ನಲ್ಲಿ ಗಂಗಳದ ಸಮಸ್ಯೆ( ಊಟದ ತಟ್ಟೆ), ಶುದ್ದ ಕುಡಿಯುವ ನೀರು ಇಲ್ಲ. ಸಮರ್ಪಕ ಬಸ್‌ ಸೌಲಭ್ಯವಿಲ್ಲ. ಬರುವ ಬಸ್‌ಗಳು ಸಹ ಸರಿಯಾಗಿ ನಿಲ್ಲಿಸುವುದಿಲ್ಲ. ಬಸ್‌ ಸ್ಟ್ಯಾಂಡ್‌ನಿಂದ ಪಿ.ಜಿ ಯೊಳಗೆ ಹೋಗಬೇಕಾದರೆ ವಿದ್ಯುತ್‌ ದೀಪ ಇಲ್ಲ. ಕ್ರೀಡಾಂಗಣ, ಕ್ರೀಡಾ ಸಾಮಾಗ್ರಿಗಳು, ಜಿಮ್‌ ಯಾವುದೂ ಇಲ್ಲ. ಗ್ರಂಥಾಲಯದ ಪುಸ್ತಕಗಳಿಲ್ಲ, ದಿನಪತ್ರಿಕೆಗಳಿಲ್ಲ… ಹೇಳುತ್ತಾ ಹೋದರೆ ಸಮಸ್ಯೆಗಳು ಮುಗಿಯುವುದೇ ಇಲ್ಲ.

ಒಂದು ರೀತಿ ಕಾಡಿನಂತಿರುವ ಅಲ್ಲಿ ಹೆಣ್ಣು ಮಕ್ಕಳ ಹಾಸ್ಟೆಲ್‌ಗೂ ಕೂಡ ಯಾವುದೇ ಭದ್ರತೆಯಿಲ್ಲ. ಹಾಸ್ಟೆಲ್‌ ರೂಂಗಳಿಗೆ ಕಿಟಕಿ ಬಾಗಿಲುಗಳಿಲ್ಲ, ಸಮರ್ಪಕ ಚಿಲಕಗಳಿಲ್ಲ. ಹಾಸ್ಟೆಲ್‌ ಊಟ ನೀಡುವ ಜವಾಬ್ದಾರಿಯನ್ನು ಗುತ್ತಿಗೆ ನೀಡಲಾಗಿದ್ದು ಅವರು ಅದನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ.. ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಇದೆ.

 

ವಿದ್ಯಾರ್ಥಿಗಳು ಇಷ್ಟೆಲ್ಲಾ ಕಷ್ಟದ ನಡುವೆ ಹೇಗೆ ಓದುತ್ತಿದ್ದಾರೆ ಎಂದು ನೆನೆಸಿಕೊಂಡರೇ ಕಷ್ಟವಾಗುತ್ತದೆ. ಹಾಗಾಗಿ ಆ ವಿದ್ಯಾರ್ಥಿಗಳು ತಮ್ಮ ಹಕ್ಕೊತ್ತಾಯಗಳನ್ನು ಮುಂದಿಟ್ಟಿದ್ದಾರೆ. ಸಮರ್ಪಕವಾಗಿ ಸ್ಕಾಲರ್‌ಶಿಪ್‌ ನೀಡಬೇಕು. ಎಲ್ಲಾ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಬೇಕು, ಇಂಟರ್‌ನೆಟ್‌ ಸಂಪರ್ಕ ಒದಗಿಸಬೇಕು. ವಿದ್ಯುತ್‌ ಕಡಿತದ ಸಮಸ್ಯೆಯಿರುವುದರಿಂದ ಜನರೇಟರ್‌ ಬೇಕು ಮತ್ತು ಮುಖ್ಯವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೂ ಸಹ ಹಾಸ್ಟೆಲ್‌ ಸೌಲಭ್ಯ ಸಿಗಬೇಕು.

ನಮಗೇನಾದರೂ ಅನಾಹುತವಾದರೆ ನಾವೇ ಹೊಣೆ!

ಈ ಪಿ.ಜಿ ಸೆಂಟರ್‌ನ ಹಾಸ್ಟೆಲ್‌ನಲ್ಲಿ ಒಂದಷ್ಟು ವಿದ್ಯಾರ್ಥಿನಿಯರು ಇದ್ದಾರೆ. ಯಾರಾದರೂ ಇಲ್ಲಿಗೆ ಸೇರಬೇಕಾದರೆ ಅವರೊಂದು ಮುಚ್ಚಳಿಕೆ ಪತ್ರವನ್ನು ಕಡ್ಡಾಯವಾಗಿ ಬರೆದುಕೊಡಬೇಕು. ಅದರಲ್ಲಿ  ನಮಗೇನಾದರೂ ಅನಾಹುತವಾದರೆ ನಾವೇ ಹೊಣೆ ಹೊರತು ಇಲ್ಲಿಯ ಆಡಳಿಯ ಮಂಡಳಿಯಲ್ಲ ಎಂದು! ರಾಜ್ಯದ, ದೇಶದ ಯಾವ ವಿ.ವಿಯಲ್ಲಿಯೂ ಇಂತಹ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುವುದಿಲ್ಲವೇನೋ? ಇಲ್ಲಿಯ ಅನ್ಯಾಯ ಅಕ್ರಮಗಳನ್ನು ವಿದ್ಯಾರ್ಥಿಗಳು ಪ್ರಶ್ನೆ ಮಾಡಬಾರದೆಂದು ಈ ರೀತಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ವಿದ್ಯಾರ್ಥಿಗಳನ್ನು ಹೆದರಿಸಲಾಗುತ್ತಿದೆ. ಅವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಪಿ.ಜಿ ಸೆಂಟರ್‌ನ ಆವರಣ

ಈ ವಿಚಾರದ ಕುರಿತು ನಾನುಗೌರಿ.ಕಾಂ ವತಿಯಿಂದ ರಾಯಚೂರು ವಿ.ವಿಯ ವಿಶೇಷಾಧಿಕಾರಿಗಳಾದ ಪ್ರೊ.ಮುಝಾಫರ್‌ ಅಸ್ಸಾದಿಯವರನ್ನು ಮಾತಾಡಿಸಲಾಯಿತು. “ಇಲ್ಲಿ ರಾಯಚೂರು ವಿಶ್ವವಿದ್ಯಾನಿಲಯವಾದರೆ ಮಾತ್ರ ಆ ಪಿ.ಜಿ ಸೆಂಟರ್‌ ನಮ್ಮ ವ್ಯಾಪ್ತಿಗೆ ಬರುತ್ತದೆ. ಸದ್ಯಕ್ಕೆ ಅದು ಗುಲಬರ್ಗಾ ವಿ.ವಿಯ ವ್ಯಾಪ್ತಿಯಲ್ಲಿದ್ದು ಅಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ನಮಗೆ ಅಧಿಕಾರವಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

ಆ ಪಿ.ಜಿ ಸೆಂಟರ್‌ನ ಕಾರ್ಯಾಧಿಕಾರಿಗಳಾದ ನುಶ್ರತ್‌ ರವರನ್ನು ಸಂಪರ್ಕಿಸಲು ಪ್ರಯತ್ನಿಸಿದರು ಕೂಡ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.

ಇನ್ನು ವಿದ್ಯಾರ್ಥಿಗಳು ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆಸಿದರೂ ಯಾವೊಬ್ಬ ಅಧಿಕಾರಿಯೂ ಅತ್ತ ಸುಳಿದಿಲ್ಲ. ವಿಷಯ ತಿಳಿದ ನಂತರ ರವಿ ಪಾಟೀಲ್‌ ಫೌಂಡೇಶನ್‌ನ ರವಿ ಪಾಟೀಲ್‌ರವರು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದಾರೆ. ನಂತರವಷ್ಟೇ ತಹಶೀಲ್ದಾರ್‌ ಪಿ.ಜಿ ಸೆಂಟರ್‌ಗೆ ಭೇಟಿಕೊಟ್ಟು ಮನವಿ ಪತ್ರ ಸ್ವೀಕರಿಸಿದ್ದಾರೆ. ಮತ್ತೆ ಯಥಾಪ್ರಕಾರ ಇದನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಹೇಳಿ ಹೊರಟಿದ್ದಾರೆ.

ರಾಯಚೂರು ವಿಶ್ವವಿದ್ಯಾಲಯವಾಗುವುದೇ ಪರಿಹಾರದ ದಾರಿ: ರವಿ ಪಾಟೀಲ್‌

ಈ ಕುರಿತು ರವಿ ಪಾಟೀಲ್‌ರವರು ಮಾತನಾಡಿ, ಈ ಪಿ.ಜಿ ಸೆಂಟರ್‌ ಬಗ್ಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಹಲವಾರು ವಿದ್ಯಾರ್ಥಿಗಳು ಇಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ಬಂದರೂ ಸಹ ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಅನುದಾನ ಬಿಡುಗಡೆ ಆಗಿಲ್ಲ. ಇಲ್ಲಿಗೆ ಬರುವ ಇನ್‌ಚಾರ್ಜ್‌‌ಗಲು ಪ್ರತಿ ಮೂರು ತಿಂಗಳಿಗೊಮ್ಮೆ ಬದಲಾಗುತ್ತಿದ್ದಾರೆ. ಈಗ ಇರುವವರು ಸಹ ಡಿಸೆಂಬರ್‌ನಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಈಗಾದರೆ ಈ ಪಿ.ಜಿ ಸೆಂಟರ್‌ ಉದ್ದಾರ ಆಗುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

600 ಜನಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಇಲ್ಲ ಕೇವಲ 6 ಜನ ಮಾತ್ರ ಕಾಯಂ ಉಪನ್ಯಾಸಕರಿದ್ದಾರೆ. ಉಳಿದವರೆಲ್ಲಾ ಅಥಿತಿ ಉಪನ್ಯಾಸಕರಾಗಿರುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಹಾಗಾಗಿ ಈ ತಿಂಗಳ 28 ರಂದು ಅಂತಿಮ ಮಾತುಕತೆ ನಡೆಸುತ್ತೇವೆ. ಆನಂತರ ಇದಕ್ಕಾಗಿ ಬೆಂಗಳೂರಿನಲ್ಲಿ ಒತ್ತಡ ತರುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಹೋರಾಟ ತೀವ್ರಗೊಳಿಸುತ್ತೇವೆ

ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಲಕ್ಷ್ಮಣ್‌ ಮಂಡಲಗೇರಾ ಮಾತನಾಡಿ, ಪಿ.ಜಿ ಸೆಂಟರ್‌ ಸಣ್ಣ ಪುಟ್ಟ ಸಮಸ್ಯೆಗಳೇ ಇದ್ದರೂ ಸಹ ಬಗೆಹರಿಯುತ್ತಿಲ್ಲ. ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲ. ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಎಲ್ಲಾ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

ಆವರಣದ ತುಂಬಾ ಜಾಲಿ ಮರಗಳು

ರಾಯಚೂರು ವಿ.ವಿ ಆಗಬೇಕು ಎಂಬುದು ನಮ್ಮ ಬಹುದಿನದ ಬೇಡಿಕೆ. ಆದರೆ ಆ ಕಡತವನ್ನು ರಾಜ್ಯಪಾಲರು ಎರಡು ಬಾರಿ ಕಾರಣವಿಲ್ಲದೆ ತಿರಸ್ಕರಿದ್ದಾರೆ. ಈ ಪಿ.ಜಿ ಸೆಂಟರ್‌ ಗುಲಬರ್ಗಾ ವಿ.ವಿ ವ್ಯಾಪ್ತಿಗೆ ಬರಲಿದ್ದು, ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ರಾಯಚೂರು ನಗರದಿಂದ 15 ಕಿ.ಮಿ ದೂರದಲ್ಲಿದೆ. ಸಮರ್ಪಕ ಬಸ್‌ ವ್ಯವಸ್ಥೆ ಕೂಡ ಇಲ್ಲ. ಕಷ್ಟಪಟ್ಟು ಬಂದರೂ ಸಹ ನಿಗಧಿತವಾಗಿ ಕ್ಲಾಸ್‌ ನಡೆಯುವುದಿಲ್ಲ. ಇಲ್ಲಿ ಒಂದು ಝೆರಾಕ್ಸ್ ಅಂಗಡಿ ಸಹ ಇಲ್ಲ. ಇಲ್ಲಿನ ವಿಶೇಷ ಅಧಿಕಾರಿಗಳು ರಬ್ಬರ್‌ ಸ್ಟ್ಯಾಂಪ್‌ ರೀತಿ ವರ್ತಿಸುತ್ತಾರೆ. ನಾವು ಕಟ್ಟಿದ ಶುಲ್ಕಕ್ಕೆ ರಶೀದಿ ಸಹ ನೀಡದೆ ವಂಚನೆ ನಡೆಯುತ್ತಿದೆ. ಹಾಗಾಗಿ ಪ್ರತಿಭಟನೆ ನಮಗೆ ಅನಿವಾರ್ಯವಾಗಿದೆ

-ಮಲ್ಲನಗೌಡ, ಪ್ರಥಮ ಎಂ.ಎ, ರಾಜ್ಯಶಾಸ್ತ್ರ ವಿಭಾಗ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...