Homeನ್ಯಾಯ ಪಥಅಜಿತ್ ಪವಾರ್ ಮೇಲಿನ ಕುಖ್ಯಾತ ವಿದರ್ಭ ನೀರಾವರಿ ಹಗರಣದ ಕೇಸ್‌ ವಾಪಸ್!

ಅಜಿತ್ ಪವಾರ್ ಮೇಲಿನ ಕುಖ್ಯಾತ ವಿದರ್ಭ ನೀರಾವರಿ ಹಗರಣದ ಕೇಸ್‌ ವಾಪಸ್!

70 ಸಾವಿರ ಕೋಟಿ ರೂಪಾಯಿ ಕುಖ್ಯಾತ ನೀರಾವರಿ ಹಗರಣವೆಂದೇ ಕರೆಯುವ ಈ ಪ್ರಕರಣವನ್ನು ಕಾನ್ಫಿಡೆನ್ಸಿಯಲ್ ಎಂದು ಹೇಳಿ ವಾಪಸ್ ಪಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

- Advertisement -
- Advertisement -

ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡು ದಿನಗಳಲ್ಲೇ ಅವರ ಮೇಲಿದ್ದ ವಿದರ್ಭ ನೀರಾವರಿ ಹಗರಣ ಪ್ರಕರಣವನ್ನು ಮಹಾರಾಷ್ಟ್ರ ಭ್ರಷ್ಟಾಚಾರ ವಿರೋಧಿ ದಳ ಮುಕ್ತಾಯಗೊಳಿಸಿದೆ.

70 ಸಾವಿರ ಕೋಟಿ ರೂಪಾಯಿ ಕುಖ್ಯಾತ ನೀರಾವರಿ ಹಗರಣವೆಂದೇ ಕರೆಯುವ ಈ ಪ್ರಕರಣವನ್ನು ಕಾನ್ಫಿಡೆನ್ಸಿಯಲ್ ಎಂದು ಹೇಳಿ ವಾಪಸ್ ಪಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದಲ್ಲಿ ಎಸಿಬಿ ಮಹಾನಿರ್ದೇಶಕ ಬಿಪಿನ್ ಕುಮಾರ್ ಸಿಂಗ್ ನೀರಾವರಿ ಸಂಬಂಧಿ 9 ಹಗರಣಗಳನ್ನು ಮುಕ್ತಾಯ ಮಾಡಿದ್ದಾರೆ. ಆ ಪತ್ರದಲ್ಲಿ ಎಲ್ಲಿಯೂ ಅಜಿತ್ ಪವಾರ್ ಹೆಸರಿಲ್ಲದಿರುವುದು ಪ್ರಶ್ನಾರ್ಹವಾಗಿದೆ.

ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಹಲವು ಪ್ರಕರಣಗಳನ್ನು ಅಜಿತ್ ಪವಾರ್ ವಿರುದ್ಧ ದಾಖಲಿಸಲಾಗಿತ್ತು. ವಿದರ್ಭ ವಲಯದ ವಾಪಿಮ್, ಯಾವತ್ಮಾಲ್, ಅಮ್ರಾವತಿ, ಬುಲ್ದಾನ ಪ್ರದೇಶದಲ್ಲಿ ಹಗರಣ ನಡೆದಿದ್ದು 2018ರಲ್ಲಿ ಅಜಿತ್ ವಿರುದ್ದ ಎಸಿಬಿ ಪ್ರಕರಣ ದಾಖಲಿಸಿತ್ತು.

ಎಸಿಬಿ ಪ್ರಸ್ತುತ 3000 ವಿವಿಧ ಟೆಂಡರ್ ಗಳ ಕುರಿತು ತನಿಖೆ ನಡೆಸುತ್ತಿರುವುದನ್ನು ಕೈಬಿಡಲಾಗಿದೆ. ಇದು ವಾಡಿಕೆಯ ಕೆಲಸ. ಆದರೆ ಪ್ರಮುಖ ತನಿಖೆಗೆ ಮುಂದುವರೆದಿದೆ ಎಂದು ಎಸಿಬಿ ಹೇಳಿದೆ

ಇದರಲ್ಲಿ ಆಶ್ಚರ್ಯವೇನಿಲ್ಲ, ಇದು “ಸಾರ್ವಜನಿಕ ಹಿತಾಸಕ್ತಿ”ಗಾಗಿ ಬಿಜೆಪಿ ತೆಗೆದುಕೊಂಡ ಏಕೈಕ ನಿರ್ಧಾರವಾಗಿದೆ. ಅಜಿತ್‌ ಪವಾರ್‌ರವರ ಭ್ರಷ್ಟಾಚಾರ ಮತ್ತು ದುಷ್ಕೃತ್ಯದ ಎಲ್ಲಾ ಪ್ರಕರಣಗಳನ್ನು ಮುಚ್ಚುವುದು ಸಾರ್ವಜನಿಕ ಜೀವನದಲ್ಲಿ ಬಿಜೆಪಿ ಸಂಭವನೀಯತೆಯ ಮಾರ್ಗವಾಗಿದೆ ”ಎಂದು ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.

ಎಂದಿಗೂ, ಎಂದಿಗೂ, ಎಂದಿಗೂ ಶಾಶ್ವತವಾಗಿ, ಶಾಶ್ವತವಾಗಿ, ಶಾಶ್ವತವಾಗಿ. ತಾತ್ಕಾಲಿಕ ಸಿಎಂ ತನ್ನ ತಾತ್ಕಾಲಿಕ ಉಪಮುಖ್ಯಮಂತ್ರಿಗೆ ಕ್ಲೀನ್ ಚಿಟ್ ನೀಡುವ ಮೊದಲ ಆದೇಶಕ್ಕೆ ಸಹಿ ಹಾಕಿದ್ದೀರಾ? ”ಎಂದು ಶಿವಸೇನೆಯ ಪ್ರಿಯಾಂಕ ಚರ್ತುವೇದಿ ಟ್ವೀಟ್ ಮಾಡಿದ್ದಾರೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರ್, ಅಜಿತ್ ಪವಾರ್ ವಿರುದ್ದ ಇದ್ದ ನೀರಾವರಿ ಹಗಣವನ್ನುಎಸಿಬಿ ಕೈಬಿಟ್ಟಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹಗಳು ಎದ್ದಿದ್ದವು ಅದು ಈಗ ನಿಜವಾಗಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಹೇಳುತ್ತಿದ್ದರು. ಮೋದಿ ಇದ್ದಲ್ಲಿ ಎಲ್ಲವೂ ಸಾಧ್ಯವಾಗುತ್ತದೆ ಎಂದು. ಆ ಘೋಷಣೆ ಏನು? ಯಾರಿಗಾಗಿ ಎಲ್ಲವೂ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಅಜಿತ್‌ ಪವಾರ್ ಅವರು 1999 ರಿಂದ ಸುಮಾರು ಒಂದು ದಶಕಗಳ ಕಾಲ ಜಲಸಂಪನ್ಮೂಲ ಸಚಿವರಾಗಿದ್ದರು. ಆಗ 32 ನೀರಾವರಿ ಯೋಜನೆಗಳ ವೆಚ್ಚ ಹೆಚ್ಚಳವನ್ನು 17,000 ಕೋಟಿ ರೂ.ಗಳಿಗಿಂತ ಹೆಚ್ಚು ತೆರವುಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪದ ನಂತರ, ಪವಾರ್ ಅವರು ಮೂರು ತಿಂಗಳು ಸಂಪುಟದಿಂದ ಹೊರಬಂದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...