ಹಿಂದಿನ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ 12 ಹೊಸ ಜಿಲ್ಲೆಗಳನ್ನು ಮತ್ತು ಮೂರು ಹೊಸ ವಿಭಾಗಗಳನ್ನು ರಾಜಸ್ಥಾನದ ಬಿಜೆಪಿ ಸರ್ಕಾರ ಶನಿವಾರ ರದ್ದುಗೊಳಿಸಿದೆ. ಅದಾಗ್ಯೂ, ಕಳೆದ ವರ್ಷ ಕಾಂಗ್ರೆಸ್ ಅವಧಿಯಲ್ಲಿ ರಚನೆಯಾಗಿದ್ದ ಎಂಟು ಜಿಲ್ಲೆಗಳನ್ನು ಸರ್ಕಾರ ಹಾಗೆ ಉಳಿಸಿಕೊಂಡಿದೆ. ಬಿಜೆಪಿ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ವಿರೋಧಿಸಿದ್ದು, ರಾಜಕೀಯವಾಗಿ ಸೇಡಿನ ನಿರ್ಧಾರ ಎಂದು ಬಣ್ಣಿಸಿದೆ. ರಾಜಸ್ಥಾನ
ಮಾರ್ಚ್ 2023 ರಲ್ಲಿ, ಕಾಂಗ್ರೆಸ್‌ನ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜ್ಯ ಸರ್ಕಾರವು 19 ಹೊಸ ಜಿಲ್ಲೆಗಳು ಮತ್ತು ಮೂರು ವಿಭಾಗೀಯ ಕೇಂದ್ರಗಳ ರಚನೆಯನ್ನು ಘೋಷಿಸಿತ್ತು. ಈ ವೇಳೆ ಜೈಪುರ ಮತ್ತು ಜೋಧಪುರ ಜಿಲ್ಲೆಗಳನ್ನು ತಲಾ ಎರಡು ಚಿಕ್ಕ ಜಿಲ್ಲೆಗಳಾಗಿ ವಿಂಗಡಿಸಲಾಗಿತ್ತು. ಹಾಗಾಗಿ ರಾಜಸ್ಥಾನದ ಒಟ್ಟು ಜಿಲ್ಲೆಗಳ ಸಂಖ್ಯೆಯು 33 ರಿಂದ 50 ಕ್ಕೆ ಏರಿಕೆಯಾಗಿತ್ತು. ಕಾಂಗ್ರೆಸ್ ಸರ್ಕಾರವು ಪಾಲಿ, ಸಿಕಾರ್ ಮತ್ತು ಬನ್ಸ್ವಾರಾ ಎಂಬ ಮೂರು ಹೊಸ ವಿಭಾಗಗಳನ್ನು ಘೋಷಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕಳೆದ ವರ್ಷ ಅಕ್ಟೋಬರ್ 6 ರಂದು, ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಒಂದು ದಿನದ ಮೊದಲು, ಕಾಂಗ್ರೆಸ್ ಸರ್ಕಾರವು ಮತ್ತೆ ಮೂರು ಜಿಲ್ಲೆಗಳಾದ ಮಾಲ್‌ಪುರ, ಸುಜನ್‌ಗಢ ಮತ್ತು ಕುಚಮನ್‌ಗಳನ್ನು ರಚಿಸಿತ್ತು, ಹಾಗಾಗಿ ರಾಜ್ಯದ ಒಟ್ಟು ಜಿಲ್ಲೆಗಳ ಸಂಖ್ಯೆ 53 ಕ್ಕೆ ತಲುಪಿಸಿತ್ತು.
ಶನಿವಾರ, ರಾಜ್ಯದ ಬಿಜೆಪಿ ಸರ್ಕಾರವು ಅನುಪಗಢ, ದುಡು, ಗಂಗಾಪುರ ನಗರ, ಜೈಪುರ ಗ್ರಾಮಾಂತರ, ಜೋಧ್‌ಪುರ ಗ್ರಾಮಾಂತರ, ಕೇಕ್ರಿ, ನೀಮ್ ಕಾ ಥಾನಾ, ಸಂಚೋರ್ ಮತ್ತು ಶಹಪುರ ಜಿಲ್ಲೆಗಳನ್ನು ರದ್ದುಗೊಳಿಸಿದೆ. ಆದಾಗ್ಯೂ, ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಘೋಷಣೆಯಾದ ಬಲೋತ್ರಾ, ಬೇವಾರ್, ದೀಗ್, ದಿದ್ವಾನಾ-ಕುಚಮನ್, ಕೊಟ್‌ಪುಟ್ಲಿ-ಬೆಹ್ರೋರ್, ಖೈರ್ತಾಲ್-ತಿಜಾರಾ, ಫಲೋಡಿ ಮತ್ತು ಸಲುಂಭರ್ ಅನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ.
ಶನಿವಾರ ರಾಜಸ್ಥಾನ ಸಂಸದೀಯ ವ್ಯವಹಾರಗಳ ಸಚಿವ ಜೋಗರಾಮ್ ಪಟೇಲ್ ಅವರು ಮಾತನಾಡಿ, ಅಕ್ಟೋಬರ್‌ನಲ್ಲಿ ಘೋಷಿಸಲಾದ ಮಾಲ್‌ಪುರ, ಸುಜನ್‌ಗಢ್ ಮತ್ತು ಕೂಚಮನ್ ರಚನೆಯ ಕುರಿತು ಹಿಂದಿನ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿಲ್ಲ ಎಂದು ಆರೋಪಿಸಿದ್ದಾರೆ. ಇದರೊಂದಿಗೆ, ರಾಜಸ್ಥಾನವು ಈಗ 41 ಜಿಲ್ಲೆಗಳು ಮತ್ತು ಏಳು ವಿಭಾಗಗಳನ್ನು ಹೊಂದಿದೆ. ರಾಜಸ್ಥಾನ
VIDEO | Here's what Rajasthan Minister Jogaram Patel (@JogarampatelMLA) said on state govt's decision to dissolve nine districts.
"Rajasthan was formed in 1956. After its formation in 1956, seven new districts were formed till 2013. The previous (Congress) government, in the… pic.twitter.com/YyIRTwM8yy
— Press Trust of India (@PTI_News) December 28, 2024
ಕಾಂಗ್ರೆಸ್ ಸರ್ಕಾರವು ರಾಜಕೀಯ ಲಾಭಕ್ಕಾಗಿ ಹೊಸ ಜಿಲ್ಲೆಗಳು ಮತ್ತು ವಿಭಾಗಗಳನ್ನು ರಚಿಸಿದೆ ಎಂದು ಪಟೇಲ್ ಆರೋಪಿಸಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರವು ಆರ್ಥಿಕ ಸಂಪನ್ಮೂಲಗಳ ಲಭ್ಯತೆ, ಆಡಳಿತಾತ್ಮಕ ಅವಶ್ಯಕತೆ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾಂಸ್ಕೃತಿಕ ಸಾಮರಸ್ಯದಂತಹ ಅಂಶಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಹೊಸ ಜಿಲ್ಲೆಗಳು ಮತ್ತು ವಿಭಾಗಗಳನ್ನು ರಚಿಸುವ ಅಗತ್ಯವಿದೆಯೇ ಎಂದು ಪರಿಶೀಲಿಸಲು ರಾಜ್ಯ ಸರ್ಕಾರವು ನಿವೃತ್ತ ಭಾರತೀಯ ಆಡಳಿತ ಸೇವಾ ಅಧಿಕಾರಿ ಲಲಿತ್ ಕೆ ಪನ್ವಾರ್ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ಮತ್ತು ತಜ್ಞರ ಸಮಿತಿಯನ್ನು ರಚಿಸಿತ್ತು.
ತಮ್ಮ ಆಡಳಿತದ ನಿರ್ಧಾರವನ್ನು ಬಿಜೆಪಿ ಸರ್ಕಾರ ಹಿಂತೆಗೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್, ಆಡಳಿತಾತ್ಮಕ ದಕ್ಷತೆಯ ದೃಷ್ಟಿಯಿಂದ ಸಣ್ಣ ಜಿಲ್ಲೆಗಳು ಉತ್ತಮವಾಗಿವೆ ಎಂದು ಹೇಳಿದ್ದಾರೆ. “ಬಿಜೆಪಿ ಸರ್ಕಾರದ ರಾಜಕೀಯವಾಗಿ ಸೇಡಿನ ನಿರ್ಧಾರವನ್ನು ನಾವು ಖಂಡಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
हमारी सरकार द्वारा बनाए गए नए जिलों में से 9 जिलों को निरस्त करने का भाजपा सरकार का निर्णय अविवेकशीलता एवं केवल राजनीतिक प्रतिशोध का उदाहरण है।
हमारी सरकार के दौरान जिलों का पुनर्गठन करने के लिए वरिष्ठ प्रशासनिक अधिकारी रामलुभाया की अध्यक्षता में 21 मार्च 2022 को समिति बनाई गई…
— Ashok Gehlot (@ashokgehlot51) December 28, 2024
ನಿವೃತ್ತ ಅಧಿಕಾರಿ ರಾಮ್ ಲುಭಾಯಾ ನೇತೃತ್ವದ ಸಮಿತಿಯ ಸಂಶೋಧನೆಗಳ ಆಧಾರದ ಮೇಲೆ ಹೊಸ ಜಿಲ್ಲೆಗಳನ್ನು ರಚಿಸಲು ತಮ್ಮ ಸರ್ಕಾರ ನಿರ್ಧರಿಸಿತ್ತು ಎಂದು ಗೆಹ್ಲೋಟ್ ಹೇಳಿದ್ದು, “ಹೊಸ ಜಿಲ್ಲೆಗಳು ರಚನೆಯಾಗುವ ಮೊದಲು ರಾಜಸ್ಥಾನದ ಪ್ರತಿ ಜಿಲ್ಲೆಯ ಸರಾಸರಿ ಜನಸಂಖ್ಯೆ 35.42 ಲಕ್ಷ ಇತ್ತು. ಹೊಸ ಜಿಲ್ಲೆಗಳ ರಚನೆಯ ನಂತರ ಈ ಸಂಖ್ಯೆ 15.35 ಲಕ್ಷಕ್ಕೆ ಇಳಿದಿದೆ. ಮಧ್ಯಪ್ರದೇಶವು ರಾಜಸ್ಥಾನಕ್ಕಿಂತ ಚಿಕ್ಕದಾದರೂ 53 ಜಿಲ್ಲೆಗಳನ್ನು ಹೊಂದಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ ನಾಗರಿಕ ಸೇವಾ ಆಕಾಂಕ್ಷಿಗಳ ಪ್ರತಿಭಟನೆ: ಪ್ರಶಾಂತ್ ಕಿಶೋರ್ ವಿರುದ್ಧ ದೂರು ದಾಖಲು
ಬಿಹಾರ ನಾಗರಿಕ ಸೇವಾ ಆಕಾಂಕ್ಷಿಗಳ ಪ್ರತಿಭಟನೆ: ಪ್ರಶಾಂತ್ ಕಿಶೋರ್ ವಿರುದ್ಧ ದೂರು ದಾಖಲು


