Homeಮುಖಪುಟರಾಜಸ್ಥಾನ: ಪೊಲೀಸ್ ರಕ್ಷಣೆಯಲ್ಲಿ ದಲಿತ ಮಧುಮಗನ ಕುದುರೆ ಸವಾರಿ - ಮೊಳಗಿದ ಜೈಭೀಮ್ ಘೋಷಣೆಗಳು

ರಾಜಸ್ಥಾನ: ಪೊಲೀಸ್ ರಕ್ಷಣೆಯಲ್ಲಿ ದಲಿತ ಮಧುಮಗನ ಕುದುರೆ ಸವಾರಿ – ಮೊಳಗಿದ ಜೈಭೀಮ್ ಘೋಷಣೆಗಳು

ಕಳೆದ 10 ವರ್ಷಗಳಲ್ಲಿ ದಲಿತರು ತಮ್ಮ ಮದುವೆ ಸಂದರ್ಭದಲ್ಲಿ ಮಧುಮಗ ಕುದುರೆ ಸವಾರಿ ಮಾಡಿದ್ದಕ್ಕಾಗಿ ಮೇಲ್ಜಾತಿಯವರಿಂದ ಹಲ್ಲೆಗೊಳಗಾದ 76 ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿವೆ.

- Advertisement -
- Advertisement -

ಭಾರತವಿನ್ನು ಜಾತಿಗ್ರಸ್ತ ದೇಶವಾಗಿಯೇ ಉಳಿದುಕೊಂಡಿದೆ. ನಾವು ಎಷ್ಟೇ ಮುಂದೆ ಸಾಗಿದರೂ, ಕೋವಿಡ್‌ನಂತಹ ಕರಾಳ ರೋಗಗಳು ಬಂದರೂ ಸಹ ಹಲವಾರು ಮೇಲ್ಜಾತಿ ಎಂದು ಕರೆಸಿಕೊಳ್ಳುವವರ ಮನಸ್ಸಿನಲ್ಲಿನ ಜಾತಿ ರೋಗ ಮಾತ್ರ ನಾಶವಾಗಿಲ್ಲ. ದಲಿತರು, ತಳಸಮುದಾಯವರು ಹೊಸ ಬಟ್ಟೆ ಧರಿಸುವಂತಿಲ್ಲ, ವಾಚ್ ಹಾಕುವಂತಿಲ್ಲ, ಅಂಬೇಡ್ಕರ್ ರಿಂಗ್ ಟೋನ್ ಹಾಕಿಕೊಳ್ಳುವಂತಿಲ್ಲ ಎಂದು ಕಟ್ಟಳೆಗಳನ್ನು ವಿಧಿಸಿ, ದೌರ್ಜನ್ಯವೆಸಗಿರುವ ಕ್ರೂರ ಘಟನೆಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಭಾರತದ ರಾಜಸ್ಥಾನದಲ್ಲಿ ಕಳೆದ 10 ವರ್ಷಗಳಲ್ಲಿ ದಲಿತರು ತಮ್ಮ ಮದುವೆ ಸಂದರ್ಭದಲ್ಲಿ ಮಧುಮಗ ಕುದುರೆ ಸವಾರಿ ಮಾಡಿದ್ದಕ್ಕಾಗಿ ಮೇಲ್ಜಾತಿಯವರಿಂದ ಹಲ್ಲೆಗೊಳಗಾದ 76 ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿವೆ. ಅಂದರೆ ‘ದಲಿತರು ಯಾವಗಾಲೂ ಕೆಳಗಿರುವವರು, ಕೆಳಗೇ ಇರಬೇಕು ಅಷ್ಟೇ. ಅವರು ಮೇಲೆ ಬಂದರೆ ನಾವು ಅದನ್ನು ಸಹಿಸುವುದಿಲ್ಲ’ ಎಂದು ಮೇಲ್ಜಾತಿ ಕ್ರೂರ ಮನಸ್ಸುಗಳು ದೌರ್ಜನ್ಯದ ಮೂಲಕ ಸಾರಿ ಹೇಳುತ್ತಿವೆ. ಇದರ ತಾತ್ಪರ್ಯವೆಂದರೆ ದಲಿತರು, ಕೆಳಜಾತಿಯವರು ನಮ್ಮ ಸೇವೆ ಮಾಡಿಕೊಂಡು ಬಿದ್ದಿರಬೇಕು ಹೊರತು ಮೇಲೆ ಬರಬಾರದು ಎಂಬ ಮನುಸ್ಮೃತಿಯ ಹೇರಿಕೆಯಾಗಿದೆ.

ಇಂತಹ ಮನುಸ್ಮೃತಿಯನ್ನು ಧಿಕ್ಕರಿಸಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಕೊಟ್ಟ ಸಂವಿಧಾನವನ್ನು ಬಳಸಿ ಅದೇ ರಾಜಸ್ಥಾನದ ದಲಿತ ಮಧುಮಗನೊಬ್ಬ ಪೊಲೀಸರ ರಕ್ಷಣೆಯೊಂದಿಗೆ ಕುದುರೆ ಸವಾರಿ ಮಾಡಿದ ಐತಿಹಾಸಿಕ, ಅಪರೂಪದ, ದಿಟ್ಟ ಪ್ರತಿರೋಧದ ಘಟನೆ ಸೋಮವಾರ ನಡೆದಿದೆ. ಬುಂಡಿ ಜಿಲ್ಲೆಯ ಛಾಡಿ ಗ್ರಾಮದ 27 ವರ್ಷದ ಶ್ರೀರಾಮ್ ಮೇಘವಾಲ್ ಎಂಬ ಯುವಕ ಶೇರ್ವಾನಿಯ ಹೊಸ ಧಿರಿಸು ಧರಿಸಿ, ಸೊಂಟಕ್ಕೆ ಕತ್ತಿ ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕುದುರೆಯೇರಿ ಊರಿನ ಸುತ್ತ ಮೆರವಣಿಗೆ ನಡೆಸಿ ಕಲ್ಯಾಣ ಮಂಟಪಕ್ಕೆ ತೆರಳಿದರು. ಸುತ್ತಲೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವರನ ಸ್ನೇಹಿತರು ಜೈಭೀಮ್ ಘೋಷಣೆ ಕೂಗಿದರು. ಡಿ.ಜೆ ಸೌಂಡ್ ಆರ್ಭಟ ನಡೆಯಿತು. ಬಾಲಿವುಡ್ ಹಾಡುಗಳನ್ನು ಹಾಕಲಾಯಿತು. ಮಕ್ಕಳು ಮತ್ತು ಮಹಿಳೆಯರು ನೃತ್ಯ ಮಾಡಿದರು.

ಊರಿನ ಸುತ್ತಲೂ ಕುದುರೆ ಸವಾರಿ ಮುಗಿಸಿದ ವರ ನೇರವಾಗಿ ವೇದಿಕೆ ಏರಿದರು. ಹಿಂದೆ ಡಾ.ಬಿ.ಆರ್ ಅಂಬೇಡ್ಕರ್‌ರವರ ಬೃಹತ್ ಪೋಟೊ ಇದ್ದ ಬ್ಯಾಕ್‌ಡ್ರಾಪ್ ಹಾಕಲಾಗಿತ್ತು. ವೇದಿಕೆ ಮುಂಭಾಗದಲ್ಲಿ ಕಾವಲಿದ್ದ ತನ್ನ ಸ್ನೇಹಿತರಿಗೆ ವರ ಕೈಕುಲುಕಿ ಧನ್ಯವಾದ ತಿಳಿಸಿದರು. ಮದುವೆ ಸಾಂಗವಾಗಿ ನಡೆಯಿತು. ಆದರೆ ಅದಕ್ಕೂ ಮೊದಲು 60 ಪೊಲೀಸರು ಇಡೀ ಗ್ರಾಮದ ಸುತ್ತ ಪರೇಡ್ ನಡೆಸಿದ್ದರು. ಮೇಲ್ಜಾತಿ ಗೂಂಡಾಗಳು ಎಲ್ಲಿ ದಾಳಿ ಮಾಡುತ್ತಾರೆ ಎಂದು ಕಣ್ಣಲ್ಲಿ ಕಣ್ಣಿಟ್ಟು ಕಾದಿದ್ದರು!

ಮದುವೆ ನಂತರ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಮಧುಮಗ “ಈ ರಸ್ತೆಗಳಲ್ಲಿ ಕುದುರೆ ಸವಾರಿ ಮಾಡಿದ ಮೊದಲ ದಲಿತ ವರ ನಾನು. ಇದರಿಂದ ದಲಿತರು ಕೆಳಗಿದ್ದಾರೆ, ಕೆಳಗೇ ಉಳಿಯಬೇಕು ಎಂಬ ಮನಸ್ಥಿತಿ ಬದಲಾಗಲಿದೆ. ಇದು ಸಮಾನತೆಯತ್ತ ಒಂದು ಹೆಜ್ಜೆಯಾಗಿದೆ. ಇನ್ನು ಮುಂದೆ ಹಲವಾರು ದಲಿತ ಯುವಕರು ತಮ್ಮ ಮದುವೆಗಳಲ್ಲಿ ಕುದುರೆ ಸವಾರಿ ಮಾಡುತ್ತಾರೆ. ನಮ್ಮ ಸಮಾಜ ಬದಲಾಗುತ್ತದೆ” ಎಂದಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ಗುತ್ತಿಗೆ ನೌಕರನಾಗಿರುವ ಶ್ರೀರಾಮ್ ಮೇಘವಾಲ್ ದ್ರೌಪದಿ ಎಂಬುವವರನ್ನು ವರಿಸಿದರು. ಜಿಲ್ಲೆಯಲ್ಲಿ ಈಗಾಗಲೇ ಈ ರೀತಿಯ ಕುದುರೆ ಸವಾರಿ ವೇಳೆ ದಲಿತರ ಮೇಲೆ ದೌರ್ಜನ್ಯಗಳು ನಡೆದಿದ್ದರಿಂದ ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬುಂಡಿ ಜಿಲ್ಲಾಡಳಿತ ಒಂದು ಸಮಿತಿ ರಚಿಸಿ ಅದರ ಮೇಲುಸ್ತುವಾರಿಯಲ್ಲಿ ಈ ಮದುವೆ ಆಯೋಜಿಸಿತ್ತು. ಅದಕ್ಕೆ ‘ಆಪರೇಷನ್ ಸಮಂತಾ (ಆಪರೇಷನ್ ಸಮಾನತೆ)’ ಎಂದು ಹೆಸರಿಡಲಾಗಿತ್ತು. ದಲಿತ ಸಮುದಾಯದ ಮದುವೆಗಳಿಗೆ ಕಾನೂನು ರೀತ್ಯಾ ರಕ್ಷಣೆ ಒದಗಿಸಿ, ಯಾವುದೇ ದೌರ್ಜನ್ಯ ನಡೆಯದಂತೆ ತಡೆಯುವುದು ಅದರ ಗುರಿಯಾಗಿದೆ. ಈ ಸಮಿತಿಯು ದಲಿತ ಸಮುದಾಯಗಳನ್ನು ಭೇಟಿ ಮಾಡಿ ಧೈರ್ಯದಿಂದ ಮದುವೆ ಮಾಡಿಕೊಳ್ಳಿ, ಏನಾದರೂ ಸಹಾಯ ಬೇಕಾದರೂ ನೀಡುತ್ತೇವೆ ಎಂದು ತಿಳಿಸುತ್ತಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮದುವೆಗೂ ಮುಂಚೆಯೇ ಎಲ್ಲಾ ಸಮುದಾಯಗಳ ಸಭೆ ಸೇರಿಸಿ ಶಾಂತಿ ಕಾಪಾಡಲು ಮನವಿ ಮಾಡಿದ್ದರು. ಎಲ್ಲಾ ಸಮುದಾಯಗಳು ಬೆಂಬಲ ನೀಡಿದರು ಎಂದು ಅವರು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ರಾಜಸ್ಥಾನದಲ್ಲಿ ವಿವಾಹದ ಸಂದರ್ಭದಲ್ಲಿ ಸಿಂಗಾರಗೊಂಡ ವರ ಊರಿನ ಸುತ್ತಾ ಕುದುರೆ ಸವಾರಿ ಮಾಡುವ ಸಂಪ್ರದಾಯವಿದೆ. ಇತ್ತೀಚೆಗೆ ದಲಿತರು ಸಹ ಕುದುರೆ ಸವಾರಿ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಕ್ರೂರ ಜಾತೀಯತೆಯ ಇತಿಹಾಸ ಹೊಂದಿರುವ ರಾಜಸ್ಥಾನದಲ್ಲಿ ಅದು ತಮ್ಮ ಪ್ರತಿಷ್ಟೆಗೆ ಧಕ್ಕೆ ಎಂದು ಭಾವಿಸಿರುವ ಮೇಲ್ಜಾತಿ ಗೂಂಡಾಗಳು ಅದನ್ನು ತಡೆಯಲು ಹಲ್ಲೆ, ದೌರ್ಜನ್ಯ ನಡೆಸಿದ್ದಾರೆ. ಇದುವರೆಗೂ 76 ಪ್ರಕರಣಗಳು ದಾಖಲಾಗಿವೆ ಎನ್ನುತ್ತಾರೆ ರಾಜಸ್ಥಾನ ಪೊಲೀಸರು. ಆದರೆ 77 ನೇ ಮದುವೆಯಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಜಿಲ್ಲಾಡಳಿತದ ನೆರವು ಪಡೆದು ದಲಿತ ವರನೊಬ್ಬ ಕುದುರೆ ಸವಾರಿ ನಡೆಸಿಯೇ ತಮ್ಮ ಮದುವೆ ಮಾಡಿಕೊಂಡಿದ್ದಾರೆ.

ವರನ ತಂದೆ ಬಾಬುಲಾಲ್ ಮೇಘಾವಾಲ್ ತನ್ನ ಮಗನ ಮದುವೆ ಸಾಂಗವಾಗಿ ನೆರವೇರಿದ್ದಕ್ಕಾಗಿ ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. “ಈ ಮೊದಲು ಹಲ್ಲೆ, ದೌರ್ಜನ್ಯದ ಭಯದಿಂದ ದಲಿತ ಮಧುಮಕ್ಕಳು ಕುದುರೆ ಸವಾರಿ ಮಾಡುತ್ತಿರಲಿಲ್ಲ. ಆದರೆ ನನ್ನ ಮಗ ಅದನ್ನು ಬದಲಿಸಿದ್ದಾನೆ” ಎಂದು ಅವರು ತಿಳಿಸಿದ್ದಾರೆ.

ರಾಜಸ್ಥಾನದ ಈ ಘಟನೆಯು ದಲಿತ ಸಮುದಾಯದೊಳಗಿನ ಪ್ರಜ್ಞೆ ಮತ್ತು ಪ್ರತಿರೋಧದ ಮನೋಭಾವವನ್ನು ತೋರುತ್ತದೆ. ಇತ್ತೀಚಿನ ದಿನಗಳಲ್ಲಿ ದಲಿತ ಮತ್ತು ತಳ ಸಮುದಾಯಗಳ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಕರ್ನಾಟಕದಲ್ಲಿಯೂ ಸಹ ದೇವಾಸ್ಥಾನ ಪ್ರವೇಶಕ್ಕಾಗಿ ಹಲವಾರು ಗ್ರಾಮಗಳಲ್ಲಿ ಹೋರಾಟ ಆರಂಭವಾಗಿದೆ. ಅದಕ್ಕೆ ಮೇಲ್ಜಾತಿಗಳಿಂದ ವಿರೋಧ, ಹಲ್ಲೆ ಎದುರಾದ ಹಲವಾರು ಪ್ರಕರಣಗಳು ವರದಿಯಾಗಿವೆ. ರಾಜಸ್ಥಾನ ಜಿಲ್ಲಾಡಳಿತದ ಆಪರೇಷನ್ ಸಮಾನತೆ ಒಳ್ಳೆಯ ನಡೆಯಾಗಿದ್ದು ಹಲವರಿಗೆ ಧೈರ್ಯ ನೀಡಲಿದೆ. ಇದು ಎಲ್ಲಾ ರಾಜ್ಯಗಳಲ್ಲಿಯೂ ಜಾರಿಗೆ ಬರಬೇಕಿದೆ.


ಇದನ್ನೂ ಓದಿ: ‘ಧೀರ ಭಗತ್ ರಾಯ್‌’ ಮೂಲಕ ಮೀಸಲು ಕ್ಷೇತ್ರದ ರಾಜಕೀಯ ಕಥೆಯನ್ನು ಹೇಳಲು ಹೊರಟಿರುವ ನಿರ್ದೇಶಕ ಕರ್ಣನ್

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. After many decades of freedom this country is not yet ready to allow the untouchable Enjoy the freedom. This country wants the untouchable to be like decades ago. It’s unfortunate!! Hats off to the bride, family and police department.

LEAVE A REPLY

Please enter your comment!
Please enter your name here

- Advertisment -

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...

ಮಾಲ್ಡಾ ನ್ಯಾಯಾಂಗ ಅಧಿಕಾರಿಗಳ ಘೇರಾವ್ ಪ್ರಕರಣದಲ್ಲಿ 17 ಜನರ ಬಂಧನ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ ಇಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಏಳು ನ್ಯಾಯಾಂಗ ಅಧಿಕಾರಿಗಳ ಘೇರಾವ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಚುನಾವಣಾ ಅಭ್ಯರ್ಥಿ ಸೇರಿದಂತೆ ಕನಿಷ್ಠ 17 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು...

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...