ರಾಜಸ್ಥಾನದ ಜೈಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಇಲಿ ಕಡಿತಕ್ಕೊಳಗಾದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ 10 ವರ್ಷದ ಬಾಲಕರೊಬ್ಬರ ಮೃತಪಟ್ಟಿದ್ದಾರೆ ಎಂದು ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ ಎಂದು ವರದಿಯಾಗಿದೆ. ರಾಜಸ್ಥಾನ
ಕ್ಯಾನ್ಸರ್ ಪೀಡಿತ ಬಾಲಕನನ್ನು ಡಿಸೆಂಬರ್ 11 ರಂದು ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿ ಉಲ್ಲೇಖಿಸಿವೆ. ಇಲಿ ಕಡಿತದ ಆರೋಪದ ಬಗ್ಗೆ ಆಸ್ಪತ್ರೆ ನಿರಾಕರಿಸಿದ್ದು, ಬಾಲಕನ ಸಾವು “ಸೆಪ್ಟಿಸೆಮಿಯಾ ಆಘಾತ ಮತ್ತು ಹೆಚ್ಚಿನ ಸೋಂಕಿನಿಂದ” ಸಂಭವಿಸಿದೆ ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅದಾಗ್ಯೂ, ರಾಜಸ್ಥಾನ ಸರ್ಕಾರವು ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಿದೆ. ಆಸ್ಪತ್ರೆಯ ಅಧೀಕ್ಷಕ ಡಾ.ಸಂದೀಪ್ ಜಸುಜಾ ಮಾತನಾಡಿ, “ಮಗುವಿಗೆ ಜ್ವರ ಮತ್ತು ನ್ಯುಮೋನಿಯಾ ಕೂಡ ಇತ್ತು. ಶುಕ್ರವಾರ ಹೆಚ್ಚಿನ ಸೋಂಕಿನ ಸೆಪ್ಟಿಸೆಮಿಯಾ ಆಘಾತದಿಂದ ಅವರು ಸಾವನ್ನಪ್ಪಿದ್ದಾರೆ” ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿ ಅಂಬರೀಶ್ ಕುಮಾರ್ ಅವರು ರಾಜ್ಯ ಕ್ಯಾನ್ಸರ್ ಸಂಸ್ಥೆಗೆ ಸಂಬಂಧಿಸಿದ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಂದ ವರದಿ ಕೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಸ್ಥಾನ
ಸ್ಥಳೀಯ ಭಾಷೆಯ ದಿನಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ವರದಿಯ ಪ್ರಕಾರ, ಪ್ರವೇಶ ಪಡೆದ ಸ್ವಲ್ಪ ಸಮಯದ ನಂತರ ಮಗು ಅಳಲು ಪ್ರಾರಂಭಿಸಿತು. ಅವರ ಕುಟುಂಬ ಸದಸ್ಯರು ಅವರು ಮಲಗಿದ್ದ ಹೊದಿಕೆಯನ್ನು ಸರಿಸಿದಾಗ, ಇಲಿ ಕಡಿತದಿಂದ ಅವರ ಕಾಲ್ಬೆರಳುಗಳಿಂದ ರಕ್ತ ಸೋರುವುದನ್ನು ನೋಡಿದ್ದಾರೆ. ಈ ವೇಳೆ ಕುಟುಂಬಸ್ಥರು ಅಲ್ಲಿದ್ದ ನರ್ಸಿಂಗ್ ಸಿಬ್ಬಂದಿಗೆ ಅದನ್ನು ತಿಳಿಸಿದ್ದು, ಅವರು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಕಾಲಿಗೆ ಬ್ಯಾಂಡೇಜ್ ಹಾಕಿದ್ದರು.
ಇಲಿ ಕಚ್ಚಿದ ಮಾಹಿತಿ ಬಂದ ಕೂಡಲೇ ಮಗುವಿಗೆ ಚಿಕಿತ್ಸೆ ನೀಡಿದ್ದೇವೆ ಎಂದು ಸ್ಪತ್ರೆಯ ಅಧೀಕ್ಷಕ ಡಾ.ಸಂದೀಪ್ ಜಸುಜಾ ತಿಳಿಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಶುಚಿತ್ವ ಕಾಪಾಡಲು ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ದೇಶ ವಿಭಜನೆಗೆ ಕಾರಣ ವಿ.ಡಿ. ಸಾವರ್ಕರ್ ಹೊರತು ಜಿನ್ನಾ ಅಲ್ಲ – ಡಿಎಂಕೆ ಸಂಸದ ಎ. ರಾಜಾ
ದೇಶ ವಿಭಜನೆಗೆ ಕಾರಣ ವಿ.ಡಿ. ಸಾವರ್ಕರ್ ಹೊರತು ಜಿನ್ನಾ ಅಲ್ಲ – ಡಿಎಂಕೆ ಸಂಸದ ಎ. ರಾಜಾ


