ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2020-21ನೇ ಸಾಲಿನ ರಾಜ್ಯೋತ್ಸವ ಪ್ರಕಟಿಸಿದೆ. ಈ ವರ್ಷ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ 10 ಸಂಘ-ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
“ಸಾರ್ವಜನಿಕರು ಮಾಡಿದ ಶಿಫಾರಸ್ಸು ಮಾಡಿದ ಹೆಸರುಗಳನ್ನೂ ಪ್ರಶಸ್ತಿ ಸಲಹಾ ಸಮಿತಿ ಮತ್ತು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಪ್ರಶಸ್ತಿ ಆಯ್ಕೆ ಸಮಿತಿಯ ಮುಂದೆ ಇಡಲಾಯಿತು. ಇವುಗಳ ಸಮಗ್ರ ಪರಿಶೀಲನೆಯ ನಂತರ ಆಯ್ಕೆ ಸಮಿತಿಯ ಅಂತಿಮಗೊಳಿಸಿದ ಹೆಸರುಗಳನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗಿದೆ” ಎಂದು ಇಲಾಖೆಯ ಸಚಿವ ವಿ.ಸುನಿಲ್‌ಕುಮಾರ್ ತಿಳಿಸಿದ್ದಾರೆ.
“ಕನ್ನಡದ ಮೇರು ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನದಿಂದಾಗಿ ಪ್ರಶಸ್ತಿ ಘೋಷಣೆಯಲ್ಲಿ ವಿಳಂಬವಾಯಿತು. ಅವರ ಅಂತ್ಯಕ್ರಿಯೆಯ ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸ್ಮರಣೆಗಾಗಿ ರಾಜ್ಯದ 10 ಸಂಘ-ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ವರ್ಷಕ್ಕೆ ಮಾತ್ರ ಈ ಪ್ರಶಸ್ತಿ ಸೀಮಿತವಾಗಿದೆ ಎಂದು ತಿಳಿಸಿದ್ದಾರೆ.
ಅಮೃತ ಮಹೋತ್ಸವ ಪ್ರಶಸ್ತಿಗೆ ಭಾಜನವಾದ ಸಂಸ್ಥೆಗಳು
ಶ್ರೀ ವೀರೇಶ್ವರ ಪುಣ್ಯಾಶ್ರಮ ಅಂಧ ಮಕ್ಕಳ ಶಾಲೆ- ಗದಗ
ಕರ್ನಾಟಕ ಹಿಮೊಫಿಲಿಯಾ ಸೊಸೈಟಿ- ದಾವಣಗೆರೆ
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ- ಕಲಬುರಗಿ
ಶ್ರೀ ರಾಮಕೃಷ್ಣ ಆಶ್ರಮ, ಮಂಗಳೂರು- ದಕ್ಷಿಣ ಕನ್ನಡ
ಆಲ್ ಇಂಡಿಯಾ ಜೈನ್ ಯೂತ್ ಫೆಡರೇಷನ್- ಹುಬ್ಬಳ್ಳಿ
ಅನುಗ್ರಹ ಕಣ್ಣಿನ ಆಸ್ಪತ್ರೆ- ವಿಜಯಪುರ
ಉತ್ಸವ ರಾಕ್ ಗಾರ್ಡನ್- ಹಾವೇರಿ
ಅದಮ್ಯ ಚೇತನ- ಬೆಂಗಳೂರು
ಸ್ಟೆಪ್ ಒನ್- ಬೆಂಗಳೂರು
ಬನಶಂಕರಿ ಮಹಿಳಾ ಸಮಾಜ- ಬೆಂಗಳೂರು
****
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರು
ಸಾಹಿತ್ಯ ಕ್ಷೇತ್ರ: ಮಹಾದೇವ ಶಂಕನಪುರ (ಚಾಮರಾಜನಗರ), ಪ್ರೊ.ಡಿ.ಟಿ.ರಂಗಸ್ವಾಮಿ (ಚಿತ್ರದುರ್ಗ), ಜಯಲಕ್ಷ್ಮಿ ಮಂಗಳಮೂರ್ತಿ (ರಾಯಚೂರು), ಅಜ್ಜಂಪುರ ಮಂಜುನಾಥ್ (ಚಿಕ್ಕಮಗಳೂರು), ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ (ವಿಜಯಪುರ), ಸಿದ್ದಪ್ಪ ಬಿದರಿ (ಬಾಗಲಕೋಟೆ).
ರಂಗಭೂಮಿ: ಫಕೀರಪ್ಪ ರಾಮಪ್ಪ ಕೊಡಾಯಿ (ಹಾವೇರಿ), ಪ್ರಕಾಶ್ ಬೆಳವಾಡಿ (ಚಿಕ್ಕಮಗಳೂರು), ರಮೇಶ್‌ಗೌಡ ಪಾಟೀಲ (ಬಳ್ಳಾರಿ), ಮಲ್ಲೇಶಯ್ಯ ಎನ್. (ರಾಮನಗರ), ಸಾವಿತ್ರಿ ಗೌಡರ್ (ಗದಗ)
ಜಾನಪದ: ಆರ್.ಬಿ.ನಾಯಕ (ವಿಜಯಪುರ), ಗೌರಮ್ಮ ಹುಚ್ಚಪ್ಪ ಮಾಸ್ತರ್ (ಶಿವಮೊಗ್ಗ), ದುರ್ಗಪ್ಪ ಚೆನ್ನದಾಸರ (ಬಳ್ಳಾರಿ), ಬನ್ನಂಜೆ ಬಾಬು ಅಮೀನ್ (ಉಡುಪಿ), ಮಲ್ಲಿಕಾರ್ಜುನ ರಾಚಪ್ಪ ಮುದಕವಿ (ಬಾಗಲಕೋಟೆ), ವೆಂಕಪ್ಪ ಗೋವಿಂದಪ್ಪ ಭಜಂತ್ರಿ (ಧಾರಾವಾಡ), ಮಹಾರುದ್ರಪ್ಪ ವೀರಪ್ಪ ಇಟಗಿ (ಹಾವೇರಿ).
ಸಂಗೀತ: ತ್ಯಾಗರಾಜು ಸಿ (ನಾದಸ್ವರ)- ಕೋಲಾರ, ಹೆರಾಲ್ಡ್ ಸಿರಿಲ್ ಡಿಸೋಜಾ (ದಕ್ಷಿಣ ಕನ್ನಡ).
ಶಿಲ್ಪಕಲೆ: ಡಾ.ಜಿ.ಜ್ಞಾನಾನಂದ (ಚಿಕ್ಕಬಳ್ಳಾಪುರ), ವೆಂಕಣ್ಣ ಚಿತ್ರಗಾರ (ಕೊಪ್ಪಳ).
ಸಮಾಜಸೇವೆ: ಸೂಲಗಿತ್ತಿ ಯುಮುನವ್ವ (ಸಾಲಮಂಟಪಿ- ಬಾಗಲಕೋಟೆ), ಮದಲಿ ಮಾದಯ್ಯ (ಮೈಸೂರು), ಮುನಿಯಪ್ಪ ದೊಮ್ಮಲೂರು (ಬೆಂಗಳೂರು ನಗರ), ಬಿ.ಎಲ್.ಪಾಟೀಲ್, ಅಥಣಿ (ಬೆಳಗಾವಿ), ಡಾ.ಜೆ.ಎನ್.ರಾಮಕೃಷ್ಣೇಗೌಡ (ಮಂಡ್ಯ).
ವೈದ್ಯಕೀಯ: ಡಾ.ಸುಲ್ತಾನ್ ಬಿ.ಜಗಳೂರು (ದಾವಣಗೆರೆ), ಡಾ.ವ್ಯಾಸ ದೇಶಪಾಂಡೆ (ವೇದವ್ಯಾಸ- ಧಾರವಾಡ), ಡಾ.ಎ.ಆರ್.ಪ್ರದೀಪ್ (ದಂತ ವೈದ್ಯಕೀಯ- ಬೆಂಗಳೂರು ನಗರ), ಡಾ.ಸುರೇಶ್ ರಾವ್ (ದಕ್ಷಿಣ ಕನ್ನಡ), ಡಾ.ಸುದರ್ಶನ್ (ಬೆಂಗಳೂರು), ಡಾ.ಶಿವನಗೌಡ ರುದ್ರಗೌಡ ರಾಮನಗೌಡರ್ (ಧಾರವಾಡ).
ಕ್ರೀಡೆ: ರೋಹನ ಬೊಪ್ಪಣ್ಣ (ಕೊಡಗು), ಕೆ.ಗೋಪಿನಾಥ್ (ವಿಶೇಷ ಚೇತನ, ಬೆಂಗಳೂರು ನಗರ), ರೋಹಿತ್ ಕುಮಾರ್ ಕಟೀಲ್ (ಉಡುಪಿ), ಎ.ನಾಗರಾಜ್ (ಕಬ್ಬಡ್ಡಿ, ಬೆಂಗಳೂರು ನಗರ).
ಸಿನಿಮಾ: ದೇವರಾಜ್ (ಬೆಂಗಳೂರು ನಗರ)
ಶಿಕ್ಷಣ: ಸ್ವಾಮಿ ಲಿಂಗಪ್ಪ (ಮೈಸೂರು), ಶ್ರೀಧರ್ ಚಕ್ರವರ್ತಿ (ಧಾರವಾಡ), ಪ್ರೊ.ಪಿ.ವಿ.ಕೃಷ್ಣ ಭಟ್ (ಶಿವಮೊಗ್ಗ)
ಸಂಕೀರ್ಣ: ಡಾ.ಬಿ.ಅಂಬಣ್ಣ (ವಿಜಯನಗರ), ಕ್ಯಾಪ್ಟನ್ ರಾಜಾರಾಮ್ (ಬಳ್ಳಾರಿ), ಗಂಗಾವತಿ ಪ್ರಾಣೇಶ್ (ಕೊಪ್ಪಳ)
ವಿಜ್ಞಾನ, ತಂತ್ರಜ್ಞಾನ: ಡಾ.ಎಚ್.ಎಸ್.ಸಾವಿತ್ರಿ (ಬೆಂಗಳೂರು ನಗರ), ಪ್ರೊ.ಜಿ.ಯು.ಕುಲ್ಕರ್ಣಿ (ಬೆಂಗಳೂರು)
ಕೃಷಿ: ಡಾ.ಸಿ.ನಾಗರಾಜ್ (ಬೆಂಗಳೂರು ಗ್ರಾಮಾಂತರ), ಗುರುಲಿಂಗಪ್ಪ ಮೇಲ್ಡೊಡ್ಡಿ (ಬೀದರ್), ಶಂಕರಪ್ಪ ಅಮ್ಮನಘಟ್ಟ (ತುಮಕೂರು)
ಪರಿಸರ: ಡಾ.ಸಿ.ನಾಗರಾಜ್ (ಬೆಂಗಳೂರು ಗ್ರಾಮಾಂತರ), ಮಹಾದೇವ ವೇಳಿಪಾ (ಉತ್ತರ ಕನ್ನಡ), ಬೈಕಂಪಾಡಿ ರಾಮಚಂದ್ರ (ದಕ್ಷಿಣ ಕನ್ನಡ)
ಪತ್ರಿಕೋದ್ಯಮ: ಪಟ್ನಂ ಅನಂತ ಪದ್ಮನಾಭ (ಮೈಸೂರು), ಯು.ಬಿ.ರಾಜಲಕ್ಷ್ಮಿ (ಉಡುಪಿ)
ನ್ಯಾಯಾಂಗ: ಸಿ.ವಿ.ಕೇಶವಮೂರ್ತಿ – ಮೈಸೂರು
ಆಡಳಿತ: ಎಚ್.ಆರ್.ಕಸ್ತೂರಿ ರಂಗನ್ – ಹಾಸನ
ಸೈನಿಕ: ನವೀನ್ ನಾಗಪ್ಪ – ಹಾವೇರಿ
ಯಕ್ಷಗಾನ: ಗೋಪಾಲಚಾರ್ಯ (ಗೋಪಾಲ ಆಚಾರ್ಯ, ಶಿವಮೊಗ್ಗ)
ಹೊರನಾಡು ಕನ್ನಡಿಗ: ಡಾ.ಸುನೀತಾ ಶೆಟ್ಟಿ (ಮುಂಬೈ), ಚಂದ್ರಶೇರ್ ಪಾಲ್ತಾಡಿ (ಮುಂಬೈ), ಡಾ.ಸಿದ್ದರಾಮೇಶ್ವರ ಕಂಟಿಕರ್, ಪ್ರವೀಣ್ ಶೆಟ್ಟಿ (ದುಬೈ)
ಪೌರ ಕಾರ್ಮಿಕ: ರತ್ನಮ್ಮ ಶಿವಪ್ಪ ಬಬಲಾದ (ರತ್ನಮ್ಮ, ಯಾದಗಿರಿ)
ಹೈದ್ರಾಬಾದ್-ಕರ್ನಾಟಕ ಏಕೀಕರಣ ಹೋರಾಟಗಾರರು: ಮಹದೇವಪ್ಪ ಕಡೆಚೂರು – ಕಲಬುರಗಿ
ಯೋಗ: ಭ.ಮ.ಶ್ರೀಕಂಠ (ಶಿವಮೊಗ್ಗ), ಡಾ.ರಾಘವೇಂದ್ರ ಶೆಣೈ (ಬೆಂಗಳೂರು)
ಉದ್ಯಮ: ಶ್ಯಾಮರಾಜ (ಬೆಂಗಳೂರು)


