Homeಮುಖಪುಟಬಿಜೆಪಿಯಿಂದ ಟಿಎಂಸಿಗೆ ಮರಳಿದ ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ

ಬಿಜೆಪಿಯಿಂದ ಟಿಎಂಸಿಗೆ ಮರಳಿದ ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ

- Advertisement -
- Advertisement -

ಬಿಜೆಪಿಯಿಂದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ವಾಪಸ್ ಆಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ರಾಜೀಬ್ ಬ್ಯಾನರ್ಜಿ ಟಿಎಂಸಿಗೆ ಮರಳಿದ್ದಾರೆ.

ತ್ರಿಪುರಾದ ಅಗರ್ತಲಾದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ರ್‍ಯಾಲಿಯಲ್ಲಿ ರಾಜೀಬ್ ಬ್ಯಾನರ್ಜಿ ವಾಪಸ್‌ ಟಿಎಂಸಿಗೆ ಬಂದಿದ್ದು, ಜೆಪಿಗೆ ಸೇರಿದ್ದಕ್ಕಾಗಿ ಪಶ್ಚಾತ್ತಾಪವಿದೆ ಎಂದಿದ್ದಾರೆ.

ಟಿಎಂಸಿಯನ್ನು ತೊರೆಯದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದ ಮಾಜಿ ಸಚಿವರಾಗಿದ್ದ ರಾಜೀಬ್ ಬ್ಯಾನರ್ಜಿ ಅವರನ್ನು ಕೇಳಿಕೊಂಡಿದ್ದರು. ಆದರೂ ವಿಧಾನಸಭೆ ಚುನಾವಣೆಗೆ ಕೆಲ ದಿನಗಳು ಇರುವಾಗ ರಾಜೀಬ್ ಬಿಜೆಪಿಗೆ ಸೇರಿದ್ದರು.

ಇದನ್ನೂ ಓದಿ: ಗೋವಾ: ಟಿಎಂಸಿ ಸೇರಿದ ಮಾಜಿ ಟೆನಿಸ್ ತಾರೆ ‘ಲಿಯಾಂಡರ್‌ ಪೇಸ್’

ವಾರಗಳ ಹಿಂದೆ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಅವರು ಹೌರಾ ಜಿಲ್ಲೆಯ ದೊಮ್ಜೂರ್‌ನಿಂದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.
“ಬಿಜೆಪಿ ಪ್ರಚಾರ ಮಾಡುವ ದ್ವೇಷದ ರಾಜಕಾರಣ ಮತ್ತು ವಿಭಜನೆ ಮಾಡುವ ಸಿದ್ಧಾಂತವನ್ನು, ಬಿಜೆಪಿಯ ಜನವಿರೋಧಿ ನೀತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದರು.

“ನಾನು ಆಗಾಗ್ಗೆ ಬಿಜೆಪಿ ನಾಯಕತ್ವಕ್ಕೆ ನನ್ನ ಅಭಿಪ್ರಾಯಗಳನ್ನು ತಿಳಿಸಿದ್ದೇನೆ. ಜೊತೆಗೆ ಮಮತಾ ಬ್ಯಾನರ್ಜಿ ಮೇಲಿನ ವೈಯಕ್ತಿಕ ದಾಳಿ ಮತ್ತು ನಿಂದೆಯನ್ನು ಟೀಕಿಸಿದ್ದೇನೆ. ಆದರೆ ಯಾರೂ ನನ್ನ ಮಾತು ಕೇಳಲಿಲ್ಲ” ಎಂದು ಅವರು ಹೇಳಿದ್ದಾರೆ.

ತಪ್ಪು ತಿಳುವಳಿಕೆಯಿಂದಾಗಿ ತಾನು ಟಿಎಂಸಿ ತೊರೆದಿದ್ದೇನೆ. ನನ್ನನ್ನು ಕ್ಷಮಿಸಿ ಎಂದಿರುವ ಅವರು ಈಗ ಪಶ್ಚಾತ್ತಾಪ ಪಡುತ್ತಿದ್ದೇನೆ ಇನ್ಮುಂದೆ ನಾನು ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ನೇತೃತ್ವದಲ್ಲಿ ಕೆಲಸ ಮಾಡುತ್ತೇನೆ ಎಂದು ರಾಜೀಬ್ ಬ್ಯಾನರ್ಜಿ ಹೇಳಿದ್ದಾರೆ.

ಅ.29 ರಂದು ದೇಶದ ಮಾಜಿ ಟೆನಿಸ್ ತಾರೆ ‘ಲಿಯಾಂಡರ್‌ ಆಡ್ರಿಯನ್ ಪೇಸ್’ ಅವರು ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.

“ಲಿಯಾಂಡರ್‌ ಪೇಸ್ ಟಿಎಂಸಿಗೆ ಸೇರುತ್ತಾರೆ ಎಂದು ತಿಳಿಸಲು ಸಂತೋಷವಾಗಿದೆ. ನನಗೆ ತುಂಬಾ ಖುಷಿಯಾಗಿದೆ. ಅವನು ನನ್ನ ಕಿರಿಯ ಸಹೋದರ. ನಾನು ಸಚಿವನಾಗಿದ್ದಾಗಿನಿಂದಲೂ ಅವರನ್ನು ಬಲ್ಲೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇನ್ನು ಪಶ್ಚಿಮ ಬಂಗಾಳದ ರಾಯ್‌ಗಂಜ್‌ನ ಬಿಜೆಪಿ ಶಾಸಕ ಕೃಷ್ಣ ಕಲ್ಯಾಣಿ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಬಿಟ್ಟು ಟಿಎಂಸಿ ಸೇರಿದ ಪಶ್ಚಿಮ ಬಂಗಾಳದ ಐದನೇ ಬಿಜೆಪಿ ಶಾಸಕರಾಗಿದ್ದಾರೆ ಕೃಷ್ಣ ಕಲ್ಯಾಣಿ.


ಇದನ್ನೂ ಓದಿ: ಬಂಗಾಳದಲ್ಲಿ ಮುಂದುವರೆದ ವಲಸೆ: ಟಿಎಂಸಿಗೆ ಮತ್ತೊಬ್ಬ ಬಿಜೆಪಿ ಶಾಸಕ ಸೇರ್ಪಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ

0
ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ...