Homeಕರ್ನಾಟಕ‘ಸ್ಕ್ರಾಲ್‌’ ಜಾಲತಾಣ, ಪಿ.ಸಾಯಿನಾಥ್‌ ಅವರ ‘ಪರಿ’ ತಂಡಕ್ಕೆ ರಾಮನಾಥ್ ಗೋಯೆಂಕಾ ಪ್ರಶಸ್ತಿ

‘ಸ್ಕ್ರಾಲ್‌’ ಜಾಲತಾಣ, ಪಿ.ಸಾಯಿನಾಥ್‌ ಅವರ ‘ಪರಿ’ ತಂಡಕ್ಕೆ ರಾಮನಾಥ್ ಗೋಯೆಂಕಾ ಪ್ರಶಸ್ತಿ

- Advertisement -
- Advertisement -

ಜಾಗತಿಕ ತಾಪಮಾನ, ವಿಜ್ಞಾನ, ತಂತ್ರಜ್ಞಾನ ಮತ್ತು ಗ್ರಾಮೀಣ ಭಾರತದ ವಾಸ್ತವಗಳ ವರದಿಗಾಗಿ ಈ ಭಾರಿಯ ಪ್ರತಿಷ್ಟಿತ ರಾಮನಾಥ್ ಗೋಯಂಕಾ ಪ್ರಶಸ್ತಿ ನೀಡಲಾಗಿದೆ.

ಪರಿ (ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ) ತಂಡಕ್ಕೆ ಮುದ್ರಣ ವಿಭಾಗದಲ್ಲಿ ರಮಾನಾಥ್‌ ಗೋಯಾಂಕಾ ಪ್ರಶಸ್ತಿ ದೊರೆತರೆ, ಬ್ರಾಡ್‌ಕಾಸ್ಟ್‌ ಮೀಡಿಯಾ ವಿಭಾಗದಲ್ಲಿ ‘ಸ್ಕ್ರಾಲ್‌.ಕಾಂ’ ಜಾಲತಾಣಕ್ಕೆ ಪ್ರಶಸ್ತಿ ನೀಡಲಾಗಿದೆ.

ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ನೇತೃತ್ವದ ‘ಪರಿ’ ತಂಡವು 14 ಮಂದಿ ವರದಿಗಾರರನ್ನು ಒಳಗೊಂಡಿದೆ. ಶಾಲಿನಿ ಸಿಂಗ್, ಸಂಕೇತ್ ಜೈನ್, ರಿತಯನ್ ಮುಖರ್ಜಿ, ವಿಶಾಕಾ ಜಾರ್ಜ್, ಕವಿತಾ ಮುರಳೀಧರನ್, ಮೇಧಾ ಕಾಳೆ, ಪಾರ್ಥ್ ಎಂ.ಎನ್., ಊರ್ವಶಿ ಸರ್ಕಾರ್, ನಮಿತಾ ವೈಕರ್, ಚಿತ್ರಾಂಗದಾ ಚೌಧರಿ, ಅನಿಕೇಟ್ ಎಂ.ಪಳನಿ ಕುಮಾರ್ ಮತ್ತು ಸುಬುಹಿ ಜಿವಾನಿ ಅವರು ಪರಿ ತಂಡದಲ್ಲಿದಲ್ಲಿದ್ದಾರೆ. ‘ಟೀಮ್ ಸ್ಕ್ರಾಲ್’ನಲ್ಲಿ ನೂಶಿನ್ ಮೌಲಾ, ಸುಜಿತ್ ಲಾಡ್, ಓಂಕಾರ್ ಫಾಟಕ್, ಸ್ವಾತಿ ಅಲಿ, ದೇವಾಂಗ್ ತ್ರಿವೇದಿ, ಶಿಬಿಕಾ ಸುರೇಶ್ ಮತ್ತು ಸನ್ನುತಾ ರಘು ಇದ್ದಾರೆ.

ಪರಿಯ ಪತ್ರಕರ್ತರು ಭಾರತದ ಉದ್ದಗಲಕ್ಕೂ ಅಲೆದಾಡಿ 20ಕ್ಕೂ ಹೆಚ್ಚು ವರದಿಗಳ ಮೂಲಕ ಹವಾಮಾನ ಬದಲಾವಣೆಯ ಕುರಿತು ಸಮಗ್ರ ವರದಿಯನ್ನು ಸಂಗ್ರಹಿಸಿದ್ದಾರೆ. ರೈತರು, ಕಾರ್ಮಿಕರು, ಮೀನುಗಾರರು, ಅರಣ್ಯವಾಸಿಗಳು, ಕಡಲಕಳೆ ಕೊಯ್ಲು ಮಾಡುವವರು, ಅಲೆಮಾರಿ ಪಶುಪಾಲಕರು ಮತ್ತು ಜೇನು ಕೃಷಿಕರ ಜೀವನ ಅನುಭವಗಳ ಮೂಲಕ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಈ ವರದಿಗಳು ಬಿಚ್ಚಿಡುತ್ತವೆ. ಕಾಡುಗಳು, ಸಮುದ್ರಗಳು, ನದಿ ಜಲಾನಯನ ಪ್ರದೇಶಗಳು, ಹವಳದ ದ್ವೀಪಗಳು, ಮರುಭೂಮಿಗಳು, ಶುಷ್ಕ ಮತ್ತು ಅರೆ-ಶುಷ್ಕ ವಲಯಗಳು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕ್ಷೇತ್ರ ಕಾರ್ಯ ಮಾಡಲಾಗಿದೆ.

“ಸಮುದ್ರ ಮಟ್ಟದಿಂದ 14,000 ಅಡಿ ಎತ್ತರದ ಲಡಾಖ್‌ನಲ್ಲಿರುವ ಅಲೆಮಾರಿ ಪಶುಪಾಲಕರನ್ನು, ತಮಿಳುನಾಡಿನಲ್ಲಿ ಕಡಲಕಳೆ ಕೊಯ್ಲು ಮಾಡುವ ಮಹಿಳೆಯರನ್ನು ಭೇಟಿಯಾಗುವುದಾಗಲಿ ಒಂದು ಸವಾಲಾಗಿತ್ತು. ವರದಿಗಾರರು ಎದುರಿಸಿದ ಮತ್ತೊಂದು ಸವಾಲು ಎಂದರೆ ಹವಾಮಾನ ವರದಿಗಳ ಅಮೂರ್ತ ಭಾಷೆಯನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ಪದಗಳಲ್ಲಿ ಅರ್ಥೈಸುವುದು” ಎಂದು ಸಿಂಗ್ ತಿಳಿಸಿದ್ದಾರೆ.

ಪರಿ ತಂಡದ ಐದು ವರದಿಗಳನ್ನು ಜಾರ್ಖಂಡ್ ಮತ್ತು ಒಡಿಶಾದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯವಾಗಿ ಬೋಧಿಸಲಾಗುತ್ತಿದೆ.

ಸ್ಕ್ರಾಲ್‌ ಸಾಧನೆ: ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಮಹಿಳಾ ರೈತರ ವರದಿಯನ್ನು ಸ್ಕ್ರಾಲ್ ಮಾಡಿದೆ. ಈ ಮಹಿಳೆಯರು ಭೂಮಿಯ ಮಾಲೀಕತ್ವವನ್ನು ಹೊಂದಿದ ಬಳಿಕ ಬರಗಾಲದ ಭೀತಿಯನ್ನು ನಿವಾರಿಸಿದರು. ಬೀಜಗಳನ್ನು ಸಂರಕ್ಷಿಸಿದರು. ಸಾವಯವ ಕೃಷಿಯನ್ನು ಅನುಸರಿಸಿ ವೈವಿಧ್ಯಮಯ ಪೋಷಕಾಂಶ-ಭರಿತ ಬೆಳೆಗಳನ್ನು ಬೆಳೆಯಲು ಕಲಿತರು. ಸ್ವಯಂ ಶಿಕ್ಷಣ ಪ್ರಯೋಗ್ (ಲಾಭರಹಿತ ಸಂಸ್ಥೆ) ನಿಂದ ತರಬೇತಿ ಪಡೆದು ಹಲವು ಪ್ರಯೋಗಗಳನ್ನು ಮಾಡಿದರು ಎಂಬುದನ್ನು ಸ್ಕ್ರಾಲ್‌ ವರದಿ ಮಾಡಿದೆ.

“ಮಹಿಳೆಯರು ತಮ್ಮ ಜೀವನದ ಬಗ್ಗೆ ಕ್ಯಾಮರಾ ಮುಂದೆ ತೆರೆದುಕೊಳ್ಳುವಂತೆ ಮಾಡುವುದು ನಾವು ಎದುರಿಸಿದ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ತಮ್ಮ ಸಮಸ್ಯೆಗಳು ಮತ್ತು ಸಾಧನೆಗಳ ಬಗ್ಗೆ ಮಾತನಾಡುವುದು ಅವರಿಗೆ ಕಷ್ಟಕರವಾಗಿತ್ತು” ಎಂದು ಟೀಮ್ ಸ್ಕ್ರಾಲ್‌ನ ಸನ್ನುತಾ ರಘು ಹೇಳಿದ್ದಾರೆ.


ಇದನ್ನೂ ಓದಿರಿ: ನಾವು ಅಧಿಕಾರಕ್ಕೆ ಬಂದ ಒಂದೇ ವಾರದೊಳಗೆ ಮತಾಂತರ ನಿಷೇಧ ಕಾಯ್ದೆ ರದ್ದು: ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಎಪಿ ನಾಯಕರಿಂದ ಪ್ರತಿಭಟನೆ; ದೆಹಲಿ ಬಿಜೆಪಿ ಕೇಂದ್ರ ಕಚೇರಿಗೆ ಬಿಗಿ ಭದ್ರತೆ

0
ಎಎಪಿಯ ರಾಷ್ಟ್ರೀಯ ಸಂಚಾಲಕ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಘೋಷಿಸಿದ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಪೊಲೀಸರು ಇಲ್ಲಿನ ಬಿಜೆಪಿ ಪ್ರಧಾನ ಕಚೇರಿ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೀನ್ ದಯಾಳ್...